-->
ಮಕ್ಕಳ ಕವನಗಳು : ಸಂಚಿಕೆ - 66, ಕವನ ರಚನೆ : ದಿವ್ಯ ಜ್ಯೋತಿ ಶೆಟ್ಟಿ, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 66, ಕವನ ರಚನೆ : ದಿವ್ಯ ಜ್ಯೋತಿ ಶೆಟ್ಟಿ, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 66
ಕವನ ರಚನೆ : ದಿವ್ಯ ಜ್ಯೋತಿ ಶೆಟ್ಟಿ
10ನೇ ತರಗತಿ
ಕ್ರೈಸ್ಟ್ ಸ್ಕೂಲ್ ಮಣಿಪಾಲ 
ಉಡುಪಿ ಜಿಲ್ಲೆ

       

ಧೈರ್ಯವೇ ನಮ್ಮ ಆಯುಧ,
ಸತ್ಯವೇ ನಮ್ಮ ದಾರಿ,
ನಾಡಿಗಾಗಿ ಹೋರಾಡುವ
ವೀರರೇ ನಮ್ಮ ಹೆಮ್ಮೆ.

ಭಾರತದ ಬಾವುಟ ಹಾರಾಡುತ್ತಿರುವುದು ಗಾಳಿಯಿಂದಲ್ಲ...!! 
ನಮ್ಮ ವೀರರ ಉಸಿರಿನ ಬಲದಿಂದ 

ರೈತ ಕೈ ಬಿಟ್ಟರೆ ಮಣ್ಣು ತಿನ್ನಬೇಕು
ಸೈನಿಕ ಕೈ ಬಿಟ್ಟರೆ ಮಣ್ಣು ಸೇರಬೇಕು 

ಬಾವುಟದಲ್ಲಿ ಕಾಣುವುದು ತ್ರಿವರ್ಣ 
ಅದರೊಳಗೆ ಬೆರೆತಿದೆ ತ್ಯಾಗದ ರಕ್ತದ ವರ್ಣ 

ದೇಶಕ್ಕಾಗಿ ತನ್ನವರನ್ನೆಲ್ಲ ಬಿಟ್ಟು 
ತನ್ನ ಪ್ರಾಣವನ್ನು ಲೆಕ್ಕಿಸದೆ
ದುಡಿಯುವ ವೀರರ ಸಾಹಸಗಳು ಅತ್ಯಮೂಲ್ಯ 

ಪ್ರೀತಿಸಿ ದೇಶವನ್ನು
ಅಳಿಸಿರಿ ದ್ವೇಷವನ್ನು
ಶಿಸ್ತು ಸೈನ್ಯದ ಆತ್ಮ 
......................................... ದಿವ್ಯ ಜ್ಯೋತಿ ಶೆಟ್ಟಿ
10ನೇ ತರಗತಿ
ಕ್ರೈಸ್ಟ್ ಸ್ಕೂಲ್ ಮಣಿಪಾಲ 
ಉಡುಪಿ ಜಿಲ್ಲೆ
*****************************************



Ads on article

Advertise in articles 1

advertising articles 2

Advertise under the article