-->
ಗೆಳೆತನ - ಕವನ

ಗೆಳೆತನ - ಕವನ

    ಶ್ರಾವ್ಯ 10 ನೇ ತರಗತಿ
     ಸರಕಾರಿ ಪ್ರೌಢಶಾಲೆ ಮಂಚಿ , ಕೊಳ್ನಾಡು
     ಬಂಟ್ವಾಳ ತಾಲೂಕು


 ಗೆಳೆತನ - ಕವನ

ಸ್ನೇಹ ಎಂಬ ಬಂಧ 
ಮರೆಯಲಾಗದ ಸಂಬಂಧ...! 

ಎಲ್ಲೋ ಪರಿಚಯವಾಗಿ
ಪರಿಚಯ ಸ್ನೇಹವಾಗಿ 
ಸ್ನೇಹ ಎಲ್ಲೆ ಮೀರದ ಬಂಧವಾಗಿ
ಸಂಬಂಧವಾಗಿ ಆರಂಭವಾಯಿತು ಗೆಳೆತನ...! 

ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ರಕ್ತಸಂಬಂಧಿಗಳಾಗಿ ಬೆಳೆಯುವ ಈ ಸಂಬಂಧ ಎಂದಿಗೂ ಎಂದೆಂದಿಗೂ ಅಮರ...!

 ಸುಖ ಸಮಯದಿ ನಗು ಹಂಚುವ
 ಕಷ್ಟದ ಸಮಯದಿ ಜೊತೆಯಾಗಿ ನಿಲ್ಲುವ
 ಸುಖ-ದುಃಖವನ್ನು ಸಮನಾಗಿ ಸಂಭ್ರಮಿಸುವ
 ಈ ಗೆಳೆತನ ಎಲ್ಲವನ್ನೂ ಮೀರಿದ ಬಂಧ...!! 

ಪ್ರೀತಿ ಪಾತ್ರರ ಯಶಸ್ಸಿಗೆ ಒಟ್ಟಾಗಿ ಸಹಕರಿಸುವ ಯಾವ ಕಾಲಕ್ಕೂ ಕೈಬಿಡದೆ ನಿಲ್ಲುವ
ಸದಾ ಜೊತೆಗಿರುವ ಪ್ರೀತಿಯ ತಂತ್ರ
ಈ ಗೆಳೆತನದ ಸಂಬಂಧ ಸದಾ ಪವಿತ್ರ...! 

ಮಿತ್ರರೊಂದಿಗೆ ಆಡಿದ ಆಟ 
ಓದಿದ ಪಾಠ ಮಾಡಿದ ಊಟ 
ಎಂದೂ ಮರೆಯದ ನೆನಪುಗಳ ಕಿರೀಟ...! 

ಚಿಕ್ಕ ಚಿಕ್ಕ ವಿಷಯಕ್ಕೂ ಉಂಟಾಗುವ ಜಗಳ ತರುವುದು ಕಣ್ಣೀರ ಹೊಳೆಯ...!!
ಮಾತನಾಡದೆ ಹೋದರೆ ಕೆಲ ಸಮಯ 
ಆಗುವುದು ಮನದಲ್ಲಿ ಪ್ರಳಯ...!!

ಎಂಥಹ ಮನಸ್ತಾಪವೂ ಉಳಿಯದು ಬಹುದಿನ ಕೂಡಿಬಾಳುವ ಸ್ನೇಹದ ನಡುವೆ... 
ಗೆಳೆತನ - ಪ್ರೀತಿಯೇ ಅನುದಿನ
ಜಗಳ ಮನಸ್ತಾಪವೆಲ್ಲ ಬಿಡುವೆ...!! 

ಯಾವಾಗ ಶುರುವಾಯಿತು ಗೆಳೆತನ.. 
ಲೆಕ್ಕವಿಲ್ಲ ಇನ್ನು ಸಂಭ್ರಮವೇ ನನ್ನ ಜೀವನ..!ಕಷ್ಟ-ಸುಖಗಳನ್ನು ಹಂಚಿ ಸಾಗುವ ಸಖ್ಯ.....
ಜೀವನವನ್ನು ಸಂತೋಷವಾಗಿಸಿದ ನನಗೆ 
ಗೆಳೆತನವೇ ಮುಖ್ಯ..!!!

                      ಶ್ರಾವ್ಯ  10 ನೇ ತರಗತಿ
              ಸರಕಾರಿ ಪ್ರೌಢ ಶಾಲೆ , ಮಂಚಿ 
            ಕೊಳ್ನಾಡು ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article