-->
ಕವನಗಳು : ಸಂಚಿಕೆ - 30 : ಶಿಕ್ಷಕರ ದಿನಾಚರಣೆಯ ವಿಶೇಷ ಸಂಚಿಕೆ

ಕವನಗಳು : ಸಂಚಿಕೆ - 30 : ಶಿಕ್ಷಕರ ದಿನಾಚರಣೆಯ ವಿಶೇಷ ಸಂಚಿಕೆ

ಕವನಗಳು : ಸಂಚಿಕೆ - 30
ಶಿಕ್ಷಕರ ದಿನಾಚರಣೆ ಯ ವಿಶೇಷ ಸಂಚಿಕೆ 
ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ಕವಿ ಮನಸ್ಸುಗಳು :
◾ ಆತ್ಮಿಕ ರೈ, ದ್ವಿತೀಯ ಪಿಯುಸಿ (ವಿಜ್ಞಾನ)
◾ ಮೇಘನಾ ಚಿಕ್ಕಪ್ಪ, ಕೂನಬೇವು 
◾ ಮಣಿಕಂಠ,ಕೋಗೋಡು ಸಾಗರ
◾ ದಿವ್ಯಶ್ರೀ, 10ನೇ ತರಗತಿ


ಶಿಕ್ಷಕರ ದಿನಾಚರಣೆ - 2024 ವಿಶೇಷತೆಯಾಗಿ 'ನಾ ಮೆಚ್ಚಿದ ಶಿಕ್ಷಕರು' ವಿಷಯದಲ್ಲಿ ತಮ್ಮ ತಮ್ಮ ನೆಚ್ಚಿನ ಶಿಕ್ಷಕರ ಕುರಿತಾಗಿ.... ಕವನಗಳನ್ನು ಕಳುಹಿಸಿಕೊಟ್ಟಿದ್ದೀರಿ... ನಿಮಗೆಲ್ಲ ಪ್ರೀತಿಪೂರ್ವಕ ಧನ್ಯವಾದಗಳು... ತಾರಾನಾಥ್ ಕೈರಂಗಳ


ಎಂದಿಗೂ ನೀವು ನಗುತಿರುವಿರಿ
ಎಲ್ಲರಿಗೂ ಬೆಳಕಾಗುವಿರಿ
ಅಜ್ಞಾನವ ಓಡಿಸುವಿರಿ
ಎಲ್ಲರ ಮನಸ್ಸಲ್ಲೂ ಸದಾ ನೆಲೆಸಿರುವಿರಿ

ನಮ್ಮೆಲ್ಲರಿಗೂ ನೀವೇ ಮಾರ್ಗದರ್ಶನ
ನೀಡಿದಿರಿ ಹೊಸ ಹೊಸ ವಿಷಯಗಳ ಶಿಕ್ಷಣ
ನೀವೇ ನಮಗೆಲ್ಲರಿಗೂ ಸ್ಪೂರ್ತಿ
ತುಂಬಿದಿರಿ ಶಾಲೆಗೆ ಕೀರ್ತಿ

ಜ್ಞಾನ ದೇವತೆಯ ಸ್ವರೂಪವಾಗಿರುವಿರಿ
ಸರಸ್ವತಿಯ ಪ್ರತಿರೂಪ ನೀವಾಗಿರುವಿರಿ
ನಮ್ಮೆಲ್ಲರ ಮನೆಮಗಳಾಗಿರುವಿರಿ
ಮುಗ್ಧ ಮನಸ್ಸಿನ ಹಸನ್ಮುಖಿ ನೀವಾಗಿರುವಿರಿ

ನಿಮ್ಮ ಒಡಲೊಳಗಿನ ಅತಿಯಾದ ಪ್ರೀತಿ
ಅದಕ್ಕೆ ನಾವಾದೆವು ಸ್ಪೂರ್ತಿ
ನೀವು ನಮಗೆ ಕರುಣಿಸಿದ ವಿದ್ಯಾ ದಾನ
ಅದುವೇ ನಮ್ಮ ಬಾಳಿಗೆ ಮಹಾದಾನ

ನಿಮ್ಮ ಅಮೂಲ್ಯವಾದ ನುಡಿಮುತ್ತುಗಳು
ಇವುಗಳೇ ನಮ್ಮ ಬಾಳಿಗೆ ಸುಭಾಷಿತಗಳು
ಮಾತಲ್ಲೇ ನಗಿಸುವ ನಿಮ್ಮ ಸಹಾನುಭೂತಿ
ದುಃಖವನ್ನೇ ಮರೆಯುವ ಆ ಅನುಭೂತಿ

ನಿಮ್ಮೊಂದಿಗೆ ಕಳೆದ ಪ್ರತಿಯೊಂದು ದಿನಗಳು
ಶಾಲಾ ಜೀವನದ ಸುಂದರ ಕ್ಷಣಗಳು
ಮರೆಯಲಾರೆವು ನಿಮ್ಮ ಮುಖವನು
ಕಳೆಯಲಾರೆವು ನಿಮ್ಮೊಂದಿಗಿನ ಸಂಬಂಧವನು
.............................................. ಆತ್ಮಿಕ ರೈ
ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ)
ಸರಕಾರಿ ಹಿರಿಯ ಪ್ರೌಢಶಾಲೆ ಬೇಕೂರು
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
******************************************  
               

ಗುರುಗಳು ಪ್ರೀತಿ ವಿಶ್ವಾಸ ಮೂಡಿಸಿದವರು 
ಮಕ್ಕಳು ಗುರುಗಳ ಮೇಲೆ ನಂಬಿಕೆ ಇಟ್ಟರು 

ಹೊಡೆದು ಬುದ್ದಿಗೇನಾ ಹೇಳುವರು ಗುರುಗಳು 
ಹೊಡೆದಿದಾಗ ತಿಳಿದುಕೊಳ್ಳುವರು ಹೂಗಳು
 
 ಶಿಕ್ಷಕರಲ್ಲಿ ಪಡೆಯಲಿ ಸಹ ಭಾಗಿತ್ವ  
ಮಕ್ಕಳು ಅರಿಯಲಿ ಗುರುಗಳು ಮಹತ್ವ 

ಗುರುಗಳು ನೀವು ತಂದಿರಿ ಸ್ಪೂರ್ತಿ 
ಮಕ್ಕಳು ತಂದುಕೋಡುವರು ಕೀರ್ತಿ

ಕಲಿ ಶಿಸ್ತು ಸ್ವಯಂ ಸ್ವಚ್ಛತೆ 
ಅರಿಯಲಿ ಗುರುಗಳು ಯೋಗ್ಯತೆ                 
...................... ಮೇಘನಾ ಚಿಕ್ಕಪ್ಪ, 
ಕೂನಬೇವು
ವಿಲಾಸ್ ಮೆಡ್ಲೇರಿ
ರಾಣೆಬೆನ್ನೂರು ತಾಲೂಕು
ಹಾವೇರಿ ಜಿಲ್ಲೆ
******************************************   


       
ನನ್ನೊಳಗಿನ ಕತ್ತಲೆಗೆ 
ಬೆಳಕು ನೀಡಿದ ದೀಪವು ನೀವು
ಅಜ್ಞಾನದ ದೇಹಕ್ಕೆ ಜ್ಞಾನವೆಂಬ 
ಜ್ಯೋತಿ ಬೆಳಗಿಸಿದ ಬೆಳಕು ನೀವು

ಅರಹೊಟ್ಟೆಯಲ್ಲಿದ್ದಾಗ 
ಹಸಿವು ನೀಗಿಸಿದ ದೇವತೆ ನೀವು
ನಿಮ್ಮಿಂದಾಗಿಯೇ ದಾನ
ಧರ್ಮವನ್ನ ಕಲಿತಂತ ಶಿಷ್ಯ ನಾನು

ನಿಮ್ಮ ದಾರಿಯಲ್ಲೆ ಹೋಗುತ್ತಿರುವೆ 
ನನ್ನುಸಿರು ಇರುವವರೆಗೆ 
ನಾ ಹೇಗೆ ಮರೆಯಲಿ 
ಈ ನಿಮ್ಮ ಪ್ರೀತಿಯ ಅಪ್ಪುಗೆ ಇರುವವರೆಗು

ಒಂದೊಮ್ಮೆ ಅನಿಸುವುದು ಯಾಕಿಷ್ಟು 
ಬೇಗ ಮುಗಿಯಿತು ನನ್ನ ಶಿಕ್ಷಣ
ಇನ್ನು ಇರಬಾರದಿತ್ತೆ 
ನನ್ನ ಶಿಕ್ಷಕರ ಜೊತೆ ಪಯಣ

ಏನೆ ಆದರೂ ಮಂಕಾದ ಈ ಕಲ್ಲುಬಂಡೆಗೆ 
ಜೀವ ತುಂಬಿದ ನನ್ನೆಲ್ಲ ಶಿಕ್ಷಕರಿಗೆ 
ಶಿಕ್ಷಕರ ದಿನಾಚರಣೆಯ ಶುಭಾಷಯಗಳು
.............................................. ಮಣಿಕಂಠ 
ಕೋಗೋಡು ಸಸರವಳ್ಳಿ (ಪೋ)
ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ
******************************************   

        

ಅಕ್ಷರವೆಂಬ ಬೀಜವನ್ನು ಬಿತ್ತಿ 
ಭವಿಷ್ಯದ ಹಾದಿಗೆ ಅಡಿಪಾಯ ಕಟ್ಟಿ 
ಜ್ಞಾನವೆಂಬ ಅರಿವನ್ನು ಮೂಡಿಸಿ
ಕಂದಮ್ಮಗಳ ಮನಸಾರೆ ಹರಸಿ 

ಪ್ರತೀ ಮಗುವು ತನ್ನದೆಂಬ ಭಾವನೆ 
ಎಲ್ಲರೊಳು ಸಮಾನತೆಯ ಕರುಣೆ 

ಬಾಳು ಬೆಳಗುವ ಪ್ರಜ್ವಲಿಪ ದೀಪ 
ಅದುವೇ ಗುರುವೆಂಬ ಆತ್ಮೀಯ ರೂಪ 

ತನ್ನೆಲ್ಲ ವಿದ್ಯೆಗಳ ಧಾರೆಯೆರೆಯುವ ವ್ಯಕ್ತಿ 
ಅರಿತು ಅಳವಡಿಸಿಕೊಂಡರದುವೇ ಶಕ್ತಿ 

ಪ್ರತೀ ಹೆಜ್ಜೆಗೂ ಮಾರ್ಗದರ್ಶನದ ಸ್ಫೂರ್ತಿ 
ಅದೆಷ್ಟೋ ಮನಗಳಿಗೆ ನೀಡುವುದದು ತೃಪ್ತಿ 

ಹೊತ್ತಗೆಯ ಭಂಡಾರ ಮಸ್ತಕದಿ ಭರಿಸುತ 
ಹೆಮ್ಮರವಾಯಿತೆಂದೊಡನೆ ನಿಟ್ಟುಸಿರು ಬಿಡುತ 

ಶಿಕ್ಷಕರ ಪ್ರೇರಣೆಯೇ ಭಗವಂತನ ರೀತಿ 
ಇವರ ಭೋದನೆಗಳೇ ಬಾಳು ಬೆಳಗುವ ಜ್ಯೋತಿ 

ಆಡಿಸುತಾ ಹಾಡಿಸುತಾ 
ಮತ್ಸರವ ತೊಲಗಿಸುತ 
ಎಲ್ಲರೊಳು ಜೊತೆಗೂಡಿ ಒಗ್ಗೂಡಿ ಬೆರೆಯಿಸುತ 

ಹೊತ್ತಗೆಯ ಅಕ್ಷರವ ಬುದ್ದಿಗದು ಪ್ರೇರೇಪಿಸುತಾ 
ಉದ್ಧರಿಸುತ ಪ್ರಬುದ್ಧನಾಗೆಂದು ಹರಸುತ 

ಇನ್ನಷ್ಟು ಎತ್ತರಕೆ ಬೆಳಗೆಂದು ಆಶೀರ್ವದಿಸುತ 
ಏಳಿಗೆಯ ಬಯಸುವರು ಉತ್ತಮ ಶಿಕ್ಷಕರು 
.............................................. ದಿವ್ಯಶ್ರೀ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
******************************************   


Ads on article

Advertise in articles 1

advertising articles 2

Advertise under the article