ಬೀಳ್ಕೊಡುಗೆ ದಿನ - ಕವನ : ರಚನೆ - ಕೌಶೀಲ
Monday, March 13, 2023
Edit
ಕವನ ರಚನೆ : ಕೌಶೀಲ
10ನೇ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಶಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪದಗಳಿಗೆ ನಿಲುಕಲಾಗದ ಪಯಣವಿದು.
ಅಪರಿಚಿತ ಮುಖಗಳು ಪರಿಚಿತಗೊಂಡು ಆತ್ಮೀಯತೆಯ ರೂಪವನ್ನು ಪಡೆದು
ಇಂದು ಬಿಟ್ಟಿರಲಾಗದಷ್ಟು
ಒಡನಾಟದ ಬೆಸುಗೆಯಲ್ಲಿ
ಬಂಧಿಯಾದ ಅನುಭವಗಳು!
ವಿದ್ಯಾರ್ಥಿಗಳೊಂದಿಗೆ ಅಧ್ಯಾಪಕರ ಆ ಸಂಬಂಧ, ಅವರು ತೋರಿದ ಪ್ರೀತಿ,
ಕಾಳಜಿ ಅದೆಲ್ಲವೂ ವರ್ಣನಾತೀತ!
ಕಳೆದು ಹೋದ ನಿಮಿಷಗಳೆಲ್ಲವೂ ಮನೋಹರವಾಗಿತ್ತು.....!
ಬಹುಷಃ ಈ ಮೂರು ವರ್ಷಗಳು ಅನ್ನುವುದು
ನನ್ನಂತವಳ ಪಾಲಿಗಂತೂ
ಸ್ವರ್ಣ ಲಿಪಿಗಳಲ್ಲಿ ಬರೆದಿಡಲೇಬೇಕಾದಂತಹ
ಅತ್ಯಮೂಲ್ಯವಾದ ಅನುಭವಗಳು, ಅನುಭೂತಿಗಳಾಗಿದೆ....!
ಸಹಪಾಠಿಗಳ ಸಂತೋಷದ
ಜೊತೆಗಿನ ಆ ಸಂಭ್ರಮ,
ನೋವಿನಲ್ಲಿ ಜೊತೆಯಾಗುವ ಹೃದಯವಂತಿಕೆ ಅದೆಲ್ಲವೂ ಇಲ್ಲಿತ್ತು.....!
ಅರ್ಥಾತ್ ಶೈಕ್ಷಣಿಕ ವರ್ಷದ
ಈ ಮೂರು ವರ್ಷಗಳು
ಎಲ್ಲವೂ ಕಲಿಸಿಕೊಟ್ಟ , ಪ್ರೇರಣೆ ನೀಡಿದ
ಅನುಭವ ಮಂಟಪಗಳೇ ಆಗಿತ್ತು......!
ಜೊತೆಗೂಡಿ ಸಂಭ್ರಮಿಸಿ,
ನೋವಿನಲ್ಲಿ ಸಮಾಧಾನಿಸಿ
ಹರಸಿದ ಸರ್ವರಿಗೂ,
ಪಾಠದೊಂದಿಗೆ, ಮಮತೆಯನ್ನೂ ಧಾರೆಯೆರೆದು
ಕಲಿಸಿದ ಅಧ್ಯಾಪಕ ವೃಂದದವರಿಗೂ ಅಭಾರಿಗಳಾಗುತ್ತಾ.....
ಮುಂದಿನ ಶೈಕ್ಷಣಿಕ ಬದುಕಿಗೂ
ನಿಮ್ಮೆಲ್ಲರ ಹಾರೈಕೆ ಸದಾ ಇರಲಿ....
10ನೇ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಶಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************