-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 143

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 143

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 143
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ.... ಹಸಿರುಮನೆ ಅನಿಲಗಳು ಹೆಚ್ಚು ಕಡಿಮೆ ಮಾನವ ನಿರ್ಮಿತವೇ... ಆದರೆ ಅವುಗಳ ಉತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ ಅಂದುಕೊಳ್ಳಬಹುದು. ಆದರೂ ಯಾಕೆ ಮಾಡುತ್ತಿಲ್ಲ ಎಂಬುದು ಪ್ರಶ್ನೆ. ಈ ಹಸಿರುಮನೆಯ ಅನಿಲಗಳಲ್ಲಿ ಹೆಚ್ಚಿನವು ಅಂದರೆ ಇಂಗಾಲದ ಡೈಆಕ್ಸೈಡ್, ಮತ್ತು ಮಿಥೇನ್, ಇಂಗಾಲದ ಸಂಯಕ್ತಗಳು. ಆದ್ದರಿಂದ ಹಸಿರುಮನೆ ಅನಿಲಗಳ ಹೊರಹಾಕುವುದನ್ನು ನಾವು ಇಂಗಾಲ ಉತ್ಸರ್ಜನೆ (carbon emission) ಎನ್ನುವುದು. ಈ ರೀತಿ ಒಬ್ಬ ವ್ಯಕ್ತಿ, ಒಂದು ಸಂಸ್ಥೆ, ಒಂದು ಉತ್ಪನ್ನ ಅಥವಾ ಒಂದು ಚಟುವಟಿಕೆ ಬಿಡುಗಡೆ ಮಾಡುವ ಒಟ್ಟು ಹಸಿರುಮನೆಯ ಅನಿಲಗಳನ್ನು ಇಂಗಾಲದ ಹೆಜ್ಜೆ ಗುರುತು (carbon footprint) ಎನ್ನುವುದು. ನಾವು ಈ ಇಂಗಾಲದ ಉತ್ಸರ್ಜನ ಅಥವಾ ಇಂಗಾಲದ ಹೆಜ್ಜೆ ಗುರುತನ್ನು ಶೂನ್ಯಕ್ಕಿಳಿಸುವುದು ನಮ್ಮ ಮುಂದಿನ ಗುರಿ. ಭಾರತ ಇದನ್ನು 2070 ರಲ್ಲಿ ಇದನ್ನು ಸಾಧಿಸುತ್ತೇವೆ ಎಂದು ನಿರ್ಧರಿಸಿದೆ. ಇದು ಸಾಧ್ಯವೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ.

ನಮ್ಮ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ದೊಡ್ಡ ದೊಡ್ಡ ಕಟ್ಟಡ, ಮಹಲು, ರಸ್ತೆ ಮತ್ತು ಸೇತುವೆಗಳ ನಿರ್ಮಾಣ. ಇದಕ್ಕೆ ಬಳಸುವ ಪ್ರಮುಖ ವಸ್ತು ಎಂದರೆ ಅದು ಸಿಮೆಂಟ್. ಈ ಸಿಮೆಂಟ್ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪತ್ತಿ ಮಾಡುತ್ತದೆ. ಸಿಮೆಂಟ್ ಉತ್ಪಾದನೆಯಲ್ಲಿ ಬಳಸುವ ಪ್ರಮುಖ ಕಚ್ಚಾ ವಸ್ತು ಎಂದರೆ ಅದು ಸುಣ್ಣದ ಕಲ್ಲು (limestone). ರಾಸಾಯನಿಕವಾಗಿ ಇದು ಕ್ಯಾಲ್ಸಿಯಂ ಕಾರ್ಬೊನೇಟ್. ಇದನ್ನು ಬಲವಾಗಿ ಕಾಯಿಸಿ ಸುಟ್ಟ ಸುಣ್ಣ (calcium oxide) ಅನ್ನು ಪಡೆಯುತ್ತೇವೆ. ಈ ಕ್ರಿಯೆಯಲ್ಲಿ ಅಪಾರ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಸಿಮೆಂಟ್ ಉತ್ಪಾದನೆಯಲ್ಲಿ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್ ನ 60% ದಷ್ಟು. ನಾವು ಇದಕ್ಕಾಗಿ ಸುಣ್ಣದ ಕಲ್ಲನ್ನು 1450°C ವರೆಗೆ ಕಾಯಿಸಬೇಕು. ಇದಕ್ಕೆ ನಾವು ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳನ್ನು ಸುಡುತ್ತೇವೆ. ಇದೂ ಇಂಗಾಲದ ಡೈಆಕ್ಸೈಡ್ ಅನ್ನು ಹೊರ ಹಾಕುತ್ತದೆ. ಇಲ್ಲಿನ ಯಂತ್ರಗಳನ್ನು ತಿರುಗಿಸಲು, ಕ್ಲಿಂಕರ್ ಗಳನ್ನು ಪುಡಿ ಮಾಡುವ ಯಂತ್ರಗಳಿಗೆ ವಿದ್ಯುತ್ ಬೇಕು. ಇದಕ್ಕೆ ಮತ್ತೆ ಉಷ್ಣ ವಿದ್ಯುತ್ ಸ್ಥಾವರಗಳು. ಅವುಗಳ ಹೊಗೆ ಕೊಳವೆಗಳು. ಇವುಗಳ ಸಾಗಾಟಕ್ಕೆ ಲಾರಿಗಳು, ರೈಲುಗಳು ಇವುಗಳಲ್ಲಿ ಸುಡುವ ಡೀಸೆಲ್‌. ಅವು ಮತ್ತೆ ಕಾರುವ ಹೊಗೆ. ಇದು ಹೊರಸೂಸುವ ಇಂಗಾಲದ ಡೈಆಕ್ಸೈಡ್ ನ 40% ದಷ್ಟಾಗುತ್ತದೆ. ಅಂದರೆ ನೂರಕ್ಕೆ ನೂರು. ಆದರೆ ಈಗ ಭಾರತೀಯ ರೈಲುಗಳು ವಿದ್ಯುದೀಕರಣಗೊಂಡಿವೆ. ಇದಕ್ಕಾಗಿ ವಿದ್ಯುತ್ ಉತ್ಪಾದಿಸಲು ಸೌರ ಪಾರ್ಕ್ ಗಳು, ಪ್ರಧಾನ ಮಂತ್ರಿ ಸೂರ್ಯ ಘರ್ ಹೆಚ್ಚು ಹೆಚ್ಚು ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರಗಳ ಸ್ಥಾಪನೆ. ಇದು ಇಂಗಾಲದ ಹೆಜ್ಜೆ ಗುರುತುಗಳನ್ನು ಕಡಿಮೆ ಮಾಡಲು ತೆಗೆದುಕೊಳ್ಳುತ್ತಿರುವ ಪ್ರಯತ್ನ.

ನೋಡಿದಿರಾ ನಿಮ್ಮ ಮನೆ ಕಟ್ಟಲು ಬಳಸುವ ಪ್ರತಿಯೊಂದು ಚೀಲ ಸಿಮೆಂಟ್ ಕೂಡಾ ಜಾಗತಿಕ ತಾಪಮಾನ ಏರಿಕೆಯ ಹೇತು. ಆದರೆ ವರ್ಷ ವರ್ಷ ಮನೆಗಳ ಸಂಖ್ಯೆ ಹೆಚ್ಚುತ್ತಾ ಹೋದರೆ, ರಸ್ತೆಗಳು ಅಗಲವಾಗುತ್ತಾ ಹೋದರೆ 2070 ರ ನಮ್ಮ ಗುರಿ ತಲುಪುವುದಾದರೂ ಹೇಗೆ?
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************


Ads on article

Advertise in articles 1

advertising articles 2

Advertise under the article