-->
ಮಕ್ಕಳ ಕವನಗಳು

ಮಕ್ಕಳ ಕವನಗಳು

ಜಗಲಿಯ ಮಕ್ಕಳು 
ಬರೆದ ಕವನಗಳು
ಸಂಚಿಕೆ - 4
           ಮನದೊಳಗಿನ ಭಾವನೆಗಳನ್ನು ಪದಗಳಲ್ಲಿ ಸಂಯೋಜಿಸಿ ಕವನಗಳ ರೂಪದಲ್ಲಿ ಪ್ರಕಟಪಡಿಸಿರುವ ಮಕ್ಕಳ ಬರಹಗಳನ್ನು ಇಲ್ಲಿ ಪ್ರಕಟ ಮಾಡಿದ್ದೇವೆ......

         

              ಪರಿಸರ - ಕವನ 
              ---------------------
ನೋಡು, ನೋಡು ನಮ್ಮಯ ಪರಿಸರ 
ನೋಡಲು ಇದು ಬಹಳ ಸುಂದರ 
ಪ್ರಾಣಿ--ಪಕ್ಷಿಗಳ ವಾಸಸ್ಥಾನ 
ಗಿಡ--ಮರಗಳು ತುಂಬಿದ ನಂದನವನ
     ಶುದ್ಧ ನೀರಿನ, ಗಾಳಿಯ ಪ್ರಕೃತಿಯು 
     ಬೆಟ್ಟದಿಂದ ಹರಿಯುವ ಸುಂದರ ನದಿಯು 
     ನೋಡಲು ಸಾಲದು ಎರಡು ಕಣ್ಣು
     ಜೀವಜಾಲಗಳಿಗೆ ಆರೋಗ್ಯದ ಮಣ್ಣು 
ಇಲ್ಲಿ ಕೇಳುವುದು ಹಕ್ಕಿಗಳ ಇಂಪಾದ ಧ್ವನಿ 
ಮುಂಜಾವಿನಲಿ ಸುರಿಯುವುದು ಮಂಜಿನ ಹನಿ 
ಮಾಡುವರಿಲ್ಲಿ ಭತ್ತದ ಕೃಷಿ
ನೋಡಿದಾಗ ಮನಸ್ಸಿಗಾಗುವುದು ಖುಷಿ
................................................ ಆದ್ಯಂತ್ 
8ನೇ ತರಗತಿ 
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಅಡೂರು 
ಕಾಸರಗೋಡು ಜಿಲ್ಲೆ.
ಕೇರಳ ರಾಜ್ಯ
****************************************


                 ಚುಟುಕುಗಳು

                     ಆಹಾರ 
               ------------------
ಪರಿಸರದಿ ದೊರೆಯುವುದು ಆಹಾರವು
ಉತ್ತಮ ಗಾಳಿಯು ಶುದ್ಧವಾದ ಜಲವು
ಪ್ರಾಣಿ-ಪಕ್ಷಿಗಳು ಜೀವನ ನಡೆಸುವುವು
ದೊರೆಯುವುದು ಸಂಸ್ಕಾರ, ಸಂಪ್ರದಾಯವು

                  ನೆಲ್ಲಿಕಾಯಿ 
              -------------------
ಹುಳಿಮಿಶ್ರಿತ ಒಗರಿನ ನೆಲ್ಲಿಕಾಯಿ 
ವಸಡನು ಗಟ್ಟಿ ಮಾಡುವ ಕಾಯಿ 
ಚಳಿಗಾಲದ ಆಪ್ತಮಿತ್ರನಿದು
ರೋಗಬರುವುದನ್ನು ತಡೆಯುವುದು

                    ಗೋವು
                 ---------------
ಗೋವುಗಳೆಲ್ಲವು ದೇವರ ಸಮಾನ
ದೇವಾನು ದೇವತೆಗಳು ವಾಸಿಸುವ ಸ್ಥಾನ 
ಗೋಮಾತೆಯ ಹಾಲು ಅಮೃತ ಸಮಾನ
ನಿನಗಿದೋ ನೀಡುವೆನು ಗೋಪೂಜೆಯ ನಮನ

     ಸರ್ದಾರ್ ವಲ್ಲಭಬಾಯ್ ಪಟೇಲ್
     ------------------------------------------
ಭಾರತರತ್ನ ಪುರಸ್ಕೃತರಿವರು
ಸರ್ದಾರ್ ವಲ್ಲಭಬಾಯ್ ಪಟೇಲರು
ಪ್ರಸಿದ್ಧ ವಕೀಲರು, ಸ್ವಾತಂತ್ರ್ಯವ ಕೊಟ್ಟರು 
ಭಾರತದ ಪ್ರಪ್ರಥಮ ಗೃಹಸಚಿವರು

                 ದಸರಾ ಹಬ್ಬ
              ---------------------
ದಸರಾ ಕನ್ನಡಿಗರ ನಾಡ ಹಬ್ಬವು
ಜಂಬೂ ಸವಾರಿ ಇದರಲಿ ಮುಖ್ಯವು
ರಾಜರ ದರ್ಬಾರು, ಪಂಜಿನ ಕವಾಯತು
ನೋಡಲು ಮನಸ್ಸಿಗೆ ಆನಂದವಾಯಿತು
****************************************
...................................... ಆದ್ಯಂತ್ ಅಡೂರು 
8ನೇ ತರಗತಿ 
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಅಡೂರು 
ಕಾಸರಗೋಡು ಜಿಲ್ಲೆ.
ಕೇರಳ ರಾಜ್ಯ
****************************************
****************************************


        ದೇಶದ ನಾಯಕರು
          ---------------------
    ಈ ದೇಶದ ಯೋಧರೆ. . . . 
    ದೇಶವನ್ನು ಕಾಪಾಡುವ ವೀರರೆ 
    ದೇಶವ ಕಾಯುತಾ ಇರುವರು 
    ಶತ್ರುಗಳನ್ನು ನಾಶಮಾಡುವರು 
    ದೇಶದ ಬಾವುಟ          
    ಗೌರವಿಸುವರು 
    ಜನಗಣಮನ ಹಾಡುವರು
    ಈ ವೀರ ಸೈನಿಕರು. . 
    ಈ ವೀರ ಸೈನಿಕರು. . .
    ದೇಶ ಸೈನ್ಯವ ಉಳಿಸಿ 
    ದೇಶದ ಗೌರವ ಬೆಳೆಸಿ
    ದೇಶದ ರಕ್ಷಣೆ ಮಾಡುವರು 
    ದೇಶದ ಗಡಿಯ ಕಾಯುವರು
    ಇವರೇ ವೀರ ಸೈನಿಕರು
    ಭಾರತಮಾತೆಯ ಪುತ್ರರು
    ಭಾರತ ಮಾತೆಯ      
    ಗೌರವಿಸುವರು
    ಶ್ರದ್ದೆಯಿಂದ ತಮ್ಮ 
    ಕೆಲಸವಗೈವರು
    ತಂದೆ-ತಾಯಿ ಮರೆತು
    ದೇಶವ ರಕ್ಷಿಸುವರು
    ಈ ಸೈನಿಕರು
    ನಮ್ಮ ನಾಡಿನ ನಾಯಕರು
............................................ ರಿಧಾ ಡೋರಳ್ಳಿ
3ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ. ಹುಬ್ಬಳ್ಳಿ. 
ಧಾರವಾಡ ಜಿಲ್ಲೆ
****************************************
****************************************

ಮಳೆ
-------
ಮಳೆ ಬಂತು ಮಳೆ
ಮುತ್ತಿನಂತ ಮಳೆ
ಹನಿ ಹನಿ ಸುರಿಯುವ ಮಳೆ
ಮುಂಗಾರು ಮಳೆ
ಮಳೆ ಬಂತು ಮಳೆ
ತಂಪಾಯಿತು ಇಳೆ
ರೈತನ ಮುಖದಲ್ಲಿ ಕಳೆ
ಅವನು ಬೆಳೆದ ಬೆಳೆ
.......................................................ಶ್ರದ್ಧಾ 
7 ನೇ ತರಗತಿ
ಶಾರದಾ ಗಣಪತಿ ವಿದ್ಯಾಕೇಂದ್ರ
ಬಂಟ್ವಾಳ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
****************************************
****************************************

ಬಣ್ಣದ ಚಿಟ್ಟೆ
--------------
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಅಲ್ಲಿಂದಿಲ್ಲಿಗೆ ಹಾರುವ ಚಿಟ್ಟೆ
ಹೂವಿನ ಜೊತೆಗೆ ಆಡುವ ಚಿಟ್ಟೆ
ಮಕರಂದವನು ಹೀರುವ ಚಿಟ್ಟೆ
     ಪುಟ್ಟ ಚಿಟ್ಟೆ ರೆಕ್ಕೆ ಬಿಚ್ಚಿ ಎಲ್ಲಿ ಹಾರುವೆ
     ನಿನ್ನ ರೆಕ್ಕೆ ನನಗೂ ಕೊಡು ನಾನು ಹಾರುವೆ
     ಹೂವಿನಿಂದ ಹೂವಿಗೆ ಹಾರಿ ನೋಡುವೆ
     ಬಣ್ಣ ಬಣ್ಣದ ರೆಕ್ಕೆಯನ್ನು ಬೀಸಿ ಹಾರುವೆ
ಹಲವು ಬಣ್ಣದ ದೇಹದ ತುಂಬ
ಬಣ್ಣ ಬಣ್ಣದ ಚುಕ್ಕಿಯನು ತೊಟ್ಟ ಚಿಟ್ಟೆ
ಹೂವಿನಿಂದ ಹೂವಿಗೆ ಹಾರುವ ಚಿಟ್ಟೆ
ನೋಡುಗರ ಕಣ್ಣಿಗೆ ನೀ ಕನಸಾಗಿ ಬಿಟ್ಟೆ
     ತಳಿರು - ತೋರಣದಲಿ
     ಹೊಮ್ಮಿಸುವ ಓಂಕಾರದ ಚಿಟ್ಟೆ 
     ಕೇಳುವ ಕಿವಿಗಳಿಗೆ ಸಂಗೀತದ 
     ಅಲೆಯಾಗಿ ಬಿಟ್ಟೆ
     ಕ್ಷಣ - ಕ್ಷಣವು ಕಣ್ಮುಂದೆ
     ಮಾಯವಾಗುವ ಚಿಟ್ಟೆ
     ಹುಡುಕುವ ಮನಸಿಗೆ
     ನೀ ಆಟವಾಗಿ ಬಿಟ್ಟೆ
ನಿನ್ನನು ಹಿಡಿಯಲು ನಾ ಆಸೆ ಪಟ್ಟೆ
ಆದರೆ ನೀನು ಹಾರಿಯೇ ಬಿಟ್ಟೆ
ನಿನ್ನನು ನಾನು ನೋಡೇ ಬಿಟ್ಟೆ
ಕೈಯಲ್ಲಿ ನಿನ್ನ ಹಿಡಿದೇ ಬಿಟ್ಟೆ
ಆದರೆ ಕೊನೆಗೆ ಹಾರಲು ಬಿಟ್ಟೆ
     ನಲಿ ನಲಿದಾಡುತ ಸವಿಯನು 
     ಸವಿಯುವ ಚಿಟ್ಟೆ 
     ಬರೆಯುವ ಕೈಗಳಿಗೆ 
     ಕವಿತೆಯಾಗಿ ಬಿಟ್ಟೆ
......................................ರಕ್ಷಾ 9ನೇ ತರಗತಿ

   
             ದೀಪಾವಳಿ ಹಬ್ಬ
            ------------------------
ಹಬ್ಬ ಹಬ್ಬ ದೀಪಾವಳಿ ಹಬ್ಬ
ಉರಿಸೋಣ ಹಲವು ರೀತಿಯ ಪಟಾಕಿಯ 
ಮಾಡುವೆವು ವಿವಿಧ ತಿಂಡಿಯ
ಸಂತೋಷ , ಸಡಗರ ತುಂಬಿದ ದಿನವು
ಧರಿಸೋಣ ಹೊಸ ಹೊಸ ಬಟ್ಟೆಯ
ಮನೆಯ ಸುತ್ತಲೂ ದೀಪವನ್ನು ಹಚ್ಚುವ
ಕತ್ತಲನ್ನು ಬೆಳಗಾಗಿಸುವ ಹಚ್ಚಿ ದೀಪವ 
ಹಬ್ಬ ಹಬ್ಬ ದೀಪಾವಳಿ ಹಬ್ಬ 
......................................ರಕ್ಷಾ 9ನೇ ತರಗತಿ


                 ಗಣೇಶ ಹಬ್ಬ
               --------------------
ಹಬ್ಬ ಹಬ್ಬ ಗಣೇಶ ಹಬ್ಬ
ಸಂತೋಷ,ಸಡಗರ ತುಂಬಿದ ಹಬ್ಬ
ಸಿಹಿ ತಿಂಡಿಗಳನ್ನು ಮಾಡುವ ಹಬ್ಬ
ತಳಿರು ತೋರಣ ಕಟ್ಟಿ 
ಹೂವಿನಿಂದ ಸಿಂಗಾರ ಮಾಡುವ ಹಬ್ಬ
ಎಲ್ಲರ ಮನೆಯಲ್ಲೂ ಸಂಭ್ರಮದಿಂದ 
ಆಚರಿಸಿ ಕುಣಿದಾಡುವ ಹಬ್ಬ
ಎಲ್ಲರ ಬಾಳಿನ ಆನಂದದ ಹಬ್ಬ
ಹಬ್ಬ ಹಬ್ಬ ಗಣೇಶ ಹಬ್ಬ
.......................................................ರಕ್ಷಾ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
****************************************


          ಜೀವನ
        ----------------
ಬರೆಯುವೆ ನಾನೊಂದು 
ಪುಟ್ಟ ಕವನ
ಅದರಲ್ಲಿ ಅಡಗಿದೆ 
ನನ್ನ ಜೀವನ !
       ಹುಟ್ಟಿ ಬೆಳೆದೆ ನಾ 
       ಬಡವರ ಮನೆಯಲ್ಲಿ
       ಪ್ರೀತಿ ವಾತ್ಸಲ್ಯವ
       ತುಂಬಿದರು ನನ್ನಲ್ಲಿ !
ತಂದೆ- ತಾಯಿ ಮಾತು 
ಸಾಯುವ ತನಕ
ಮಿತಿಮೀರಿ ನಡೆದರೆ
ಸೇರುತ್ತೇವೆ ನರಕ!
        ಜೀವನ ಹಾದಿಗೆ
        ಬಹಳಷ್ಟು ಅಡೆತಡೆ
        ಎಲ್ಲವನ್ನು ಎದುರಿಸಿ
        ಸಾಗಬೇಕು ಗುರಿಯೆಡೆ
ಬೆಂದವರ ಕಂಡು
ಹೀಯಾಳಿಸ ಬೇಡ
ಜೀವನದಿ ಅನುಭವಿಸಿದ
ಪರಿಸ್ಥಿತಿಯ ಮರೆಯಬೇಡ !
.................................................... ಚೈತನ್ಯ 
8ನೇ ತರಗತಿ
ಸ.ಉ.ಪ್ರಾ.ಶಾಲೆ.ಕುವೆಟ್ಟು 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
****************************************

                   ಪ್ರಕೃತಿ
              -----------------
ಪ್ರಕೃತಿಯೇ! ಪ್ರಕೃತಿಯೇ!
ನೀನು ಎಷ್ಟು ಸುಂದರವಾಗಿರುವೆ ?
ಹಣ್ಣುಗಳ ಕೊಡುವೆ
ಹೂವು ತರಕಾರಿ ನೀಡುವೆ
ಧನ್ಯವಾದಗಳು ನಿನಗೆ ,
         ರೈತರಿಗೆ ನೀನೇ ಬಹಳ ಮುಖ್ಯ .
         ಮನುಷ್ಯರು ಕಾಟ ಕೊಡುವರು ನಿತ್ಯ 
         ಈ ಸುಂದರತೆಯ ಹಾಳು ಮಾಡುವರು,
         ವಾಹನಗಳಿಂದ ಮಾಲಿನ್ಯ ಮಾಡುವರು
ಕಾಲುಗಳು ಇರುವುದು ನಡೆಯುವುದಕ್ಕೆ ,
ಕಾರು-ಬೈಕುಗಳನ್ನು ಬಳಸುವುದು ಯಾಕೆ? ವಾಹನಗಳನ್ನು ಕಡಿಮೆ ಉಪಯೋಗಿಸಿ
ಈ ಪ್ರಕೃತಿಯನ್ನು ಉಳಿಸಿ ....!!
......................................... ಪುನರ್ವಿ ಎನ್ ಜೆ 
4ನೇ ತರಗತಿ 
ಬಿ ಜಿ ಎಸ್ ಬಾಳೆಹೊನ್ನೂರು
ಚಿಕ್ಕಮಗಳೂರು ಜಿಲ್ಲೆ
****************************************
****************************************


   

Ads on article

Advertise in articles 1

advertising articles 2

Advertise under the article