-->
ಜೀವನ ಸಂಭ್ರಮ : ಸಂಚಿಕೆ - 259

ಜೀವನ ಸಂಭ್ರಮ : ಸಂಚಿಕೆ - 259

ಜೀವನ ಸಂಭ್ರಮ : ಸಂಚಿಕೆ - 259
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
                

ಮಕ್ಕಳೇ, ಇಂದು ಡಿಸ್ರೇಲಿ ನೀತಿ ಅಂದರೇನು? ನೋಡೊಣ. ಇಂಗ್ಲೆಂಡ್ ದೇಶದಲ್ಲಿ ಡಿಸ್ರೇಲಿ ಅನ್ನುವ ಪ್ರಧಾನಮಂತ್ರಿ ಇದ್ದನು. ಆತ ದೊಡ್ಡ ಮನುಷ್ಯ. ಆತ 12 ವರ್ಷಗಳ ಕಾಲ ಆ ದೇಶವನ್ನು ಆಳಿದನು. ಸುಮಾರು 1968 ರಿಂದ 1980 ರವರೆಗೆ ಆತ ಪ್ರಧಾನಮಂತ್ರಿಯಾಗಿ ಆಳ್ವಿಕೆ ಮಾಡಿದನು. ಆತನನ್ನು ಇಂಗ್ಲೆಂಡ್ ದೇಶದ ಪ್ರಜೆಗಳು ಎರಡು ಬಾರಿ ಆಯ್ಕೆ ಮಾಡಿದ್ದರು. ಥಾಮಸ್ ಕಾರ್ಲೈಲರ್ ಮತ್ತು ಲೀಚ್ ಎನ್ನುವ ಇಬ್ಬರು ಪಂಚ್ ಪತ್ರಿಕೆ ನಡೆಸುತ್ತಿದ್ದರು. ಅವರು ಯಾವಾಗಲೂ ಡಿಸ್ರೇಲಿಯನ್ನು ವ್ಯಂಗ ಚಿತ್ರದಿಂದ ವ್ಯಂಗ್ಯ ಮಾಡುತ್ತಿದ್ದರು. ಏನೇ ಒಳ್ಳೆಯದು ಮಾಡಿದರೂ ಅದಕ್ಕೆ ವಿರೋಧ ವ್ಯಕ್ತ ಮಾಡುತ್ತಿದ್ದರು. ಇಷ್ಟೆಲ್ಲಾ ಆದರೂ ಇಂಗ್ಲೆಂಡ್ ದೇಶದ ಜನರು ಡಿಸ್ರೇಲೀಯನ್ನು ಆರಿಸುತ್ತಿದ್ದರು. ಇದ್ದರೆ ಡಿಸ್ರೇಲಿ ತರ ಇರಬೇಕು ಅಂತ ಸಾಮಾನ್ಯ ಜನ ಹೇಳುತ್ತಿದ್ದರು. 

ಡಿಸ್ರೇಲಿಯಲ್ಲಿ ಯಾವ ಒಳ್ಳೆಯ ಗುಣಗಳು ಇಲ್ಲ ಅಂತ ಲೀಚ್ ಹೇಳುತ್ತಿದ್ದನು. ಥಾಮಸ್ ಕಾರ್ಲೈಲರ್ ಜೊತೆ ಸೇರಿ ಇಂತಹ ಮೂರ್ಖನನ್ನು ಆರಿಸಿದ ನೀವು ಮೂರ್ಖರೇ ಎನ್ನುತ್ತಿದ್ದರು. ಆದರೆ ಡಿಸ್ರೇಲಿ ಒಮ್ಮೆಯೂ ಇವರ ಬಗ್ಗೆ ತಲೆಗೆ ಹಾಕಿಕೊಳ್ಳಲಿಲ್ಲ. ಇದೇ ಡಿಸ್ರೇಲಿ ಕಾರ್ಲೈಲರ್ ಗೆ "the Great historian" ಅಂತ ಬಿರುದು ನೀಡಿದನು. ಆಗ ಜನ ಡಿಸ್ರೇಲಿಯನ್ನು ಕೇಳಿದರು, ಆತ ಹತ್ತು ವರ್ಷದಿಂದ ನಿಮ್ಮನ್ನೇ ಬೈಯುತ್ತಿದ್ದಾನೆ. ಆತನಿಗೆ ಬಿರುದು ನೀಡಿದ್ದೀರಲ್ಲ ಸರಿಯಾ ಎಂದರು. ಆತ ಇತಿಹಾಸಕಾರನಿದ್ದಾನೆ ಅದಕ್ಕೆ ಕೊಟ್ಟೆ ಅಂದನು. ನೀವು ಪ್ರಧಾನ ಮಂತ್ರಿಗಳು ನೀವು ಮನಸ್ಸು ಮಾಡಿದರೆ ಅವರಿಗೆ ಏನು ಬೇಕಾದರೂ ಮಾಡಬಹುದಾಗಿತ್ತು. ನಿಮ್ಮನ್ನು ಬೈದರು ನಿಮಗೆ ಏನು ಆಗಲಿಲ್ಲವೇ? ಎಂದರು. ಯಾವಾಗಲೂ ಸಂತೋಷವಾಗಿರುತ್ತಿರಲ್ಲ ಹೇಗೆ ನಿಮ್ಮ ಭಾವ? ಎಂದರು. ಆಗ ಡಿಸ್ರೇಲಿ ಹೇಳಿದರು, ನಾನು ಡಿಸ್ರೇಲಿ ಅಷ್ಟೇ. ನಾನು ಪ್ರಧಾನಮಂತ್ರಿ. ಬರೀ ದೋಷ ಹುಡುಕುವ ಮಂತ್ರಿಯಲ್ಲ. ಕೋಟ್ಯಾಂತರ ಜನ ನನ್ನನ್ನು ಪ್ರೀತಿಸುತಿದ್ದಾರೆ ಅನ್ನೋದು ಮಹತ್ವದ ವಿಷಯ. ಎಲ್ಲೋ ಇಬ್ಬರು ಬಯ್ಯುತ್ತಾರೆ ಅನ್ನುವುದು ಏಕೆ ತಲೆಗೆ ಹಾಕಿಕೊಳ್ಳಬೇಕು. ಅದಕ್ಕೆ ನಾನು ಏನು ಮಾಡುತ್ತೀನಿ ಎಂದರೆ ಒಂದು ಚೀಟಿಯಲ್ಲಿ ಟೀಕಿಸುವವರ ಹೆಸರು ಬರೆಯುತ್ತೀನಿ. ನನ್ನಲ್ಲಿ ಒಂದು ಡಬ್ಬಿಯಿದೆ. ಆ ಡಬ್ಬಿಯಲ್ಲಿ ಹಾಕಿ ಮುಚ್ಚಿಬಿಡುತ್ತೇನೆ. ಮತ್ತೆ ನೆನಪೇ ಮಾಡುವುದಿಲ್ಲ. ನೀವು ಹಾಗೆ ಮಾಡಿ. ನಿಮಗೆ ಆಗದವರ ಹೆಸರನ್ನು ಕೆಂಪು ಶಾಯಿಯಲ್ಲಿ ಒಂದು ಚೀಟಿಗೆ ಬರೆದು, ಇವರು ನಮ್ಮನ್ನು ಟೀಕಿಸುತ್ತಾರೆ ಅಂತ ಗೆರೆ ಹಾಕಿ ಕಸದ ಬುಟ್ಟಿಗೆ ಎಸೆದು ಬಿಡಿ. ತಲೆಗೆ ಹಾಕಿಕೊಳ್ಳಬಾರದು ಕಸದ ಬುಟ್ಟಿಗೆ ಹಾಕಬೇಕು. ನಮಗೆ ಸಣ್ಣ ಪುಟ್ಟ ಅಧಿಕಾರ ಸಿಕ್ಕಿದರೆ ನೋಡಿಕೊಳ್ಳುತ್ತೇನೆ ಅಂತೀವಿ. ಆರಿಸಿದ್ದು ನೋಡುವುದಕ್ಕಲ್ಲ ಮಾಡುವುದಕ್ಕೆ ಅಂತ ಹೇಳಿದ ಡಿಸ್ರೇಲಿ. ಇದಕ್ಕೆ ಇಂಗ್ಲೆಂಡ್ ದೇಶದಲ್ಲಿ "ಡಿಸ್ರೇಲಿ ನೀತಿ" ಎನ್ನುವರು. 

ಒಮ್ಮೆ ಲಾರ್ಡ್ ಮೌಂಟ್ ಬ್ಯಾಟನ್ ರವರು ಭಾರತದ ಮೊದಲ ವೈಸರಾಯರವರು ಲಾಲ್ ಬಹುದ್ದೂರ್ ಶಾಸ್ತ್ರಿ ಅವರನ್ನು ತಮ್ಮ ದೇಶ ಇಂಗ್ಲೆಂಡಿಗೆ ಅತಿಥಿಯಾಗಿ ಕರೆದರು. ಶಾಸ್ತ್ರಿಯವರು ತೆಳುವಾದ ದೇಹ, 5 ಅಡಿ ಎತ್ತರ ಇದ್ದರು. ಶಾಸ್ತ್ರಿ ಹೇಳಿದರು ನಾನು ಸಣ್ಣ ಮನುಷ್ಯ ನಿಮ್ಮ ದೇಶ ಮಹಾನ್ ದೇಶ ಹೇಗೆ ಈ ಸಣ್ಣ ಮನುಷ್ಯ ನಿಮ್ಮ ದೇಶಕ್ಕೆ ಒಗ್ಗುತ್ತಾನೆ ಅಂದರು. ಅದಕ್ಕೆ ಮೌಂಟ್ ಬ್ಯಾಟನ್ ಹೇಳಿದ್ದು ನಾವು ಇಂಗ್ಲಿಷರು. ನಾವು ವ್ಯಕ್ತಿಯನ್ನು ಇಂಚುಗಳಿಂದ ಅಳೆಯುವುದಿಲ್ಲ. ಗುಣಗಳಿಂದ ಅಳೆಯುತ್ತೇವೆ. ಆದ್ದರಿಂದ ನಾವು ನಿಮ್ಮನ್ನು ಗೌರವಿಸುತ್ತೇವೆ ಅಂದರು. ಇದು ಅವರು ನೋಡುವ ದೃಷ್ಟಿ. ಇವನೇನು ಇಷ್ಟು ಎತ್ತರ ಇದ್ದಾನೆ ಅಂತ ನೋಡುವುದಕ್ಕೂ ಬರುತ್ತದೆ. ಅಷ್ಟೇ ಇದ್ದಾನೆ ಆದರೆ ಅದ್ಭುತ ಇದ್ದಾನೆ ಅಂತ ನೋಡುವುದಕ್ಕೂ ಬರುತ್ತದೆ. ಆದ್ದರಿಂದ ನಾವು ನೋಡುವುದಕ್ಕೆ ಕಲಿಯಬೇಕು. ಒಳ್ಳೆಯದು ಈ ಜಗತ್ತಿನಲ್ಲಿ ಸಾಕಷ್ಟು ಇದೆ. ಆತನ ಬಣ್ಣ ಗಾತ್ರ ನೋಡುವುದಲ್ಲ. ಆತನ ಗುಣ ಅದ್ಭುತ ಅಂತ ನೋಡಬೇಕು. ತಾಪ ಆಗುವುದನ್ನು ತಲೆಗೆ ಹಾಕಿಕೊಳ್ಳಬಾರದು. ಇದು ಸರಿ ಇಲ್ಲ ಅದು ಸರಿಯಲ್ಲ ಅನ್ನೋದಕ್ಕಿಂತ. ಇದು ಚಂದ ಇದೆ ಇದು ಚಂದ ಇದೆ ಅಂತ ಚೆನ್ನಾಗಿರುವುದನ್ನು ನೋಡಬೇಕು. ಬಲ್ಲವರು ಹೇಳುತ್ತಾರೆ ಕೆಟ್ಟದ್ದರಲ್ಲಿ ಒಳ್ಳೆಯದನ್ನು ನೋಡಬೇಕು ಅಂತ. ಪ್ರತಿಯೊಬ್ಬ ವ್ಯಕ್ತಿಗೆ ಹತ್ತು ಹಲವು ಮುಖಗಳು ಇರುತ್ತವೆ. ಆತನ ಹತ್ತು ಮುಖಗಳಲ್ಲಿ ಚೆಂದಾಗಿರುವ ಒಂದು ಮುಖ ನೋಡಿ ಚಂದಾಗಿದ್ದಾನೆ ಅಂತ ಹೇಳಿದರೆ ನಮ್ಮ ಜೀವನ ಅದ್ಭುತ ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************



Ads on article

Advertise in articles 1

advertising articles 2

Advertise under the article