-->
ಕವನ ರಚನೆ : ಗ್ರೀಷ್ಮಾ 9ನೇ ತರಗತಿ

ಕವನ ರಚನೆ : ಗ್ರೀಷ್ಮಾ 9ನೇ ತರಗತಿ

ಕವನ ರಚನೆ : ಗ್ರೀಷ್ಮಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ



                    ಪ್ಲಾಸ್ಟಿಕ್
                  ---------------
ಮಾನವ ಸೃಷ್ಟಿಸಿದ ಪ್ಲಾಸ್ಟಿಕ್ ಮಹಮಾರಿಯನು 
ತಂದನು ಪ್ರಕೃತಿಗೆ ಅಪಾಯವನು
ಪ್ಲಾಸ್ಟಿಕ್ ಅನ್ನು ಅಲ್ಲಲ್ಲಿ ಬಿಸಾಡಿದನು 
ಹತ್ತಿರ ತಂದನು ಭೂಮಿಯ ವಿನಾಶವನು
   ಪ್ಲಾಸ್ಟಿಕ್ ಅನ್ನು ಭೂಮಿಗೆ ಬಿಸಾಡಿದನು 
   ಮಣ್ಣಿನ ಫಲವತ್ತತೆ ಮಲಿನ ಮಾಡಿದನು 
   ಉತ್ತಮ ಬೆಳೆಗಳನ್ನು ಅಲ್ಲೇ ಬೆಳೆದನು
   ರಾಸಾಯನಿಕಯುಕ್ತ ಆಹಾರ ಸೇವಿಸಿದನು 
ಪ್ಲಾಸ್ಟಿಕ್ ಚೀಲಗಳನ್ನು ಸುಟ್ಟನು 
ವಿಷಕಾರಿ ಅನಿಲ ಹೊರ ತಂದನು 
ಅನಿಲ ಮಾನವನ ದೇಹದೊಳಗೆ ಸೇರಿತು 
ಭಯಾನಕ ರೋಗಗಳು ಹುಟ್ಟಿತು 
    ನಂತರ ಮಾನವ ಹೊಸ ಮಾರ್ಗ ಹುಡುಕಿದನು 
    ನೀರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆದನು 
    ಅದರಿಂದ ರಾಸಾಯನಿಕಗಳು ಹೊರಬಂತು 
    ಶುದ್ಧ ನೀರೆಲ್ಲ ಮಲಿನವಾಯಿತು 
ಪ್ಲಾಸ್ಟಿಕ್ ಅನ್ನು ಭೂಮಿಗೆ ಬಿಸಾಡದಿರಿ 
ಪ್ಲಾಸ್ಟಿಕ್ ವಸ್ತುಗಳನ್ನು ಸುಡದಿರಿ 
ಪ್ಲಾಸ್ಟಿಕ್ ಅನ್ನು ನೀರಿಗೆ ಎಸೆಯದಿರಿ 
ಭೂಮಿಯ ನಾಶ ಮಾಡದಿರಿ
.................................................... ಗ್ರೀಷ್ಮಾ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**********************************************




                ಕತ್ತಲು
             --------------
ಹಾಗೆ ಕುಳಿತಿರಲು ಸುಮ್ಮನೆ 
ಬೀಸಿತು ತಂಗಾಳಿಯು ಮೆಲ್ಲನೆ 
ಮೋಡಗಳು ಓಡುತಿದೆ ಬೇಗನೆ 
ಸೂರ್ಯನು ಮುಳುಗುತ್ತಿದ್ದಾನೆ
      ಹಕ್ಕಿಗಳ ಚಿಲಿಪಿಲಿ ಕೇಳುತಲಿದೆ 
      ಮೆಲ್ಲನೆ ಶಬ್ದಗಳು ಮರೆಮಾಚುತಿದೆ 
      ಅಲೆಗಳು ದಡಕೆ ಬಡಿಯುತಲಿದೆ 
      ಸುತ್ತಲು ಕತ್ತಲು ಆವರಿಸುತಿದೆ 
ಕತ್ತಲು ಬೆಳಕನ್ನು ತಡೆಯುತಿದೆ
ಮನಸೊಳಗೇನೋ ನಡೆಯುತಿದೆ 
ಮೌನವು ಭಯವನು ಹೆಚ್ಚಿಸುತಿದೆ 
ಕಣ್ಣುಗಳು ನಿದ್ರೆಗೆ ಜಾರುತಿದೆ
     ಕತ್ತಲು ಕಳೆದು ಬೆಳಕು ಬರುವುದು 
     ದುಃಖ ಹೋಗಿ ಸುಖವು ತರುವುದು 
     ಕಡಲಲಿ ಮತ್ತೆ ಅಲೆಗಳು ಏಳುವುದು 
     ಮನದಲಿ ಸಂತೋಷ ಮೂಡುವುದು
.................................................... ಗ್ರೀಷ್ಮಾ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**********************************************

 
           ನನ್ನ ಹೊಸ ಕೊಡೆ
        ---------------------------
ನನ್ನ ಕೊಡೆ ಹೊಸತಾಗಿದೆ 
ಅದರ ಬಣ್ಣ ಬಿಳುಪಾಗಿದೆ 
ಶಾಲೆಯಿಂದ ಮನೆಗೆ ನಡೆದೆ 
ಮಳೆ ಬಂದಾಗ ಕೊಡೆ ಹಿಡಿದೆ 
     ಮನೆಗೆ ಹೋಗುವ ದಾರಿಯಲಿ 
     ಸುರಿವ ಮಳೆಯು ಹೆಚ್ಚುತಲಿ 
     ಗುಡುಗು ಸಿಡಿಲು ಬರುತಲಿ 
     ನನಗೆ ಭಯ ಶುರುವಾಗುತಲಿ 
ಮಳೆಯಿಂದ ಬಟ್ಟೆಯಲ್ಲ ಒದ್ದೆಯಾಗಿದೆ 
ಮಳೆಯ ರಭಸ ಜೋರಾಗಿದೆ 
ಹೊಸ ಕೊಡೆಯ ಚಿಂತೆ ಮೂಡಿದೆ 
ಕೊಡೆಯನು ಹುಷಾರಾಗಿ ಹಿಡಿದು ನಡೆದೆ 
     ದೂರದಲ್ಲಿ ಮನೆಯ ನೋಡಿದೆನು 
     ಮನೆಯನು ನಾನು ತಲುಪಿದೆನು 
     ಕೊಡೆ ನೋಡಿ ಹರುಷಗೊಂಡೆನು 
     ಆ ದಿನವನು ನಾ ಮರೆಯಲಾರೆನು
.................................................... ಗ್ರೀಷ್ಮಾ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**********************************************

 
                   ಇರುವೆ 
                --------------
ಮಳೆಗಾಲದಲಿ ಚಿಂತೆಯು ಇಲ್ಲದೆ 
ಸಂಗ್ರಹಿಸಿಟ್ಟ ಆಹಾರ ತಿನ್ನುತದೆ 
ಸ್ವಲ್ಪಕಾಲ ಸುಖವಾಗಿರುತದೆ 
ತಮ್ಮ ಗೂಡಿನಲಿ ಹಾಯಾಗಿರುತದೆ 
       ಬೇಸಿಗೆಯಲಿ ಕಷ್ಟಪಡುವುದು 
       ಅಲ್ಲಲ್ಲಿ ಗೂಡುಗಳ ನಿರ್ಮಿಸುವುದು 
       ಬಿದ್ದ ಆಹಾರವ ಸಂಗ್ರಹಿಸುವುದು 
       ಒಗ್ಗಟ್ಟಾಗಿ ಕೆಲಸ ಮಾಡುವುದು 
ಹಗಲು ರಾತ್ರಿಯೆನ್ನದೆ ದುಡಿವವು 
ಶಿಸ್ತಿನಿಂದ ಕೆಲಸವ ಮಾಡುವವು 
ಸಾಲಾಗಿ ಆಹಾರವನ್ನು ತರುವವು
ತಂದ ಆಹಾರವನು ರಕ್ಷಿಸುವವು 
      ಸಿಹಿ ತಿನಿಸುಗಳು ಪ್ರಿಯವಾಗಿರುವುದು 
      ಸಿಹಿಯ ಕಂಡ ಕೂಡಲೇ ಆಕ್ರಮಿಸುವುದು 
      ಅದನ್ನೆಲ್ಲ ಗೂಡಿಗೆ ಸಾಗಿಸುವುದು 
      ಶಿಸ್ತು ಮತ್ತು ಒಗ್ಗಟ್ಟನ್ನು ಇರುವೆ ಕಲಿಸುವುದು
.................................................... ಗ್ರೀಷ್ಮಾ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**********************************************


                 ಓ ಮಾನವ 
                 --------------
ತನ್ನನ್ನು ತಾನು ಸುಟ್ಟುಕೊಳ್ಳುವ 
ಮನೆಗೆ ಬೆಳಕನ್ನು ನೀಡುವ 
ಮನೆ-ಮನಗಳನ್ನು ಬೆಳಗುವ 
ದೀಪದಂತಾಗು ಓ ಮಾನವ 
     ತನಗೆ ಮೊದಲಾಗಿ ಕಂಡ ಆಹಾರವ 
     ತಿನ್ನದೆ ಬಳಗದವರ ಕರೆಯುವ 
     ಒಟ್ಟಿಗೆ ಆಹಾರವನು ಹಂಚಿ ತಿನ್ನುವ 
     ಕಾಗೆಯಂತಾಗು ಓ ಮಾನವ 
ವಲಸೆ ಬಂದ ಹಕ್ಕಿಗಳಿಗೆ ಆಶ್ರಯ ನೀಡುವ 
ತನ್ನಲ್ಲಿ ಗೂಡು ಕಟ್ಟಲು ಸಹಾಯ ಮಾಡುವ 
ಹಸಿವಾದವರಿಗೆ ಹಣ್ಣು-ಹಂಪಲನ್ನು ಕೊಡುವ 
ಮರದಂತಾಗು ಓ ಮಾನವ 
     ಮಾನವ ನೀಡುವ ಕಷ್ಟವನು ಸಹಿಸುವ 
     ತನ್ನೊಳಗಿನ ನೋವುಗಳನು ಬಚ್ಚಿಡುವ 
     ಜೀವಿಗಳಿಗೆ ಬದುಕಲು ಆಸರೆ ನೀಡುವ 
     ಭೂಮಿಯಂತಾಗು ಓ ಮಾನವ
.................................................... ಗ್ರೀಷ್ಮಾ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**********************************************



                   ಮರ 
                 ----------
ಬೀಜದಿಂದ ಮೊಳಕೆಯೊಡೆಯುವುದು 
ಕಾಲ್ತುಳಿತಗಳಿಂದ ತಪ್ಪಿಸಿಕೊಳ್ಳುವುದು 
ಎಲೆಗಳೆಲ್ಲ ಚಿಗುರುವುದು 
ಗಿಡವಾಗಿ ಬೆಳೆಯುವುದು 
      ಗಾಳಿಯ ರಭಸವನು ತಡೆಯುವುದು 
      ಮಳೆ ಬಂದಾಗ ನೀರನು ಹೀರಿಕೊಳ್ಳುವುದು 
      ಮಣ್ಣನು ಗಟ್ಟಿಯಾಗಿ ಹಿಡಿಯುವುದು 
      ಪೋಷಕಾಂಶಯುಕ್ತವಾಗಿ ಬೆಳೆಯುವುದು 
ಹಣ್ಣು-ಹಂಪಲನು ಕೊಡುವುದು
ಹೂವುಗಳನು ನೀಡುವುದು 
ಗಾಳಿ ಮತ್ತು ತಂಪಾದ ನೆರಳು ಸಿಗುವುದು 
ಮರವಾಗಿ ಬೆಳೆಯುವುದು 
      ಹಕ್ಕಿಗಳಿಗೆ ಆಸರೆಯಾಗುವುದು 
      ಮಾನವರಿಗೆ ಕಟ್ಟಿಗೆಯಾಗುವುದು
      ಎಲ್ಲರಿಗೂ ಉಪಯೋಗವಾಗುವುದು 
      ಹೆಮ್ಮರವಾಗಿ ಬೆಳೆಯುವುದು
.................................................... ಗ್ರೀಷ್ಮಾ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**********************************************



Ads on article

Advertise in articles 1

advertising articles 2

Advertise under the article