-->
ಮಕ್ಕಳ ಕವನಗಳು : ಸಂಚಿಕೆ - 70, ಕವನ ರಚನೆ : ಪ್ರಾಕ್ಷಿ ಶೆಟ್ಟಿ , ದ್ವಿತೀಯ ಪಿಯುಸಿ

ಮಕ್ಕಳ ಕವನಗಳು : ಸಂಚಿಕೆ - 70, ಕವನ ರಚನೆ : ಪ್ರಾಕ್ಷಿ ಶೆಟ್ಟಿ , ದ್ವಿತೀಯ ಪಿಯುಸಿ

ಮಕ್ಕಳ ಕವನಗಳು : ಸಂಚಿಕೆ - 70
ಕವನ ರಚನೆ : ಪ್ರಾಕ್ಷಿ ಶೆಟ್ಟಿ 
ದ್ವಿತೀಯ ಪಿಯುಸಿ 
ಸುಜ್ಞಾನ ಪಿಯು ಕಾಲೇಜು ಯಡಾಡಿ - ಮತ್ಯಾಡಿ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ

                

ಮುಗಿಲ ಎತ್ತರದಲ್ಲಿ ಹಾರುತಿಹುದು
ನಮ್ಮ ಹೆಮ್ಮೆಯ ಬಾವುಟವಿದು 
ತ್ರಿವರ್ಣ ಧ್ವಜವು ಧೈರ್ಯ,
ಶಾಂತಿ, ಸಮೃದ್ಧಿ ಸಂಕೇತ
ಸಂತ ಶ್ರೇಷ್ಠರು ಜನಿಸಿದ 
ಪುಣ್ಯ ಕ್ಷೇತ್ರದ ಬೀಡು
ಪುಣ್ಯ ನದಿಗಳು ಹರಿಯುವ ನಾಡು 
ಸಾಹಿತ್ಯ ಸಂಗೀತದ ತವರಿನ ಬೀಡು 
ಇತಿಹಾಸವೇ ಮೆಚ್ಚುವ ನಮ್ಮ ಪರಂಪರೆ.
ಭಾರತ ದೇಶದ ಭವ್ಯ ಪರಂಪರೆ 
ಸ್ವಾತಂತ್ರ ಹೋರಾಟಗಾರರ ನೆನೆಯುವ ದಿನ
ಅದೇ ನಮ್ಮ ಸ್ವಾತಂತ್ರ್ಯೋತ್ಸವ ದಿನ
ಶ್ರೇಷ್ಠ ವ್ಯಕ್ತಿಗಳ ತ್ಯಾಗ ಬಲಿದಾನ
ಅಂತಹ ವ್ಯಕ್ತಿಗಳಿಗೆ ಮೆಚ್ಚುಗೆ ಸಲ್ಲಿಸೋಣ
ನನ್ನ ಭಾರತ ನನಗೆ ಇಷ್ಟ 
ತೀರಿಸುವೆ ಋಣ ಬಂದರೂ ಕಷ್ಟ 
ನಾವೆಲ್ಲರೂ ಭಾರತೀಯರು
ಒಂದಾಗಿರೋಣ ಎಂದೆಂದು
ಧ್ವನಿ ಎತ್ತಿ ಹೇಳು ಭಾರತೀಯರೆಂದು
ದೇಶ ಕಾಯುವ ಸೈನಿಕರೇ
ದೇಶಕ್ಕೆ ನೀವೆ ನಾಯಕರು.
................................................ ಪ್ರಾಕ್ಷಿ ಶೆಟ್ಟಿ 
ದ್ವಿತೀಯ ಪಿಯುಸಿ 
ಸುಜ್ಞಾನ ಪಿಯು ಕಾಲೇಜು ಯಡಾಡಿ - ಮತ್ಯಾಡಿ 
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
*****************************************

     


ಅಮ್ಮ ಎನ್ನುವ ಎರಡಕ್ಷರ 
ತೋರುವುದು ಪ್ರೀತಿ ಗಗನದೆತ್ತರ
ಬಾಲ್ಯದಲ್ಲಿ ನೀಡಿದ ಕೈ ತುತ್ತು 
ಮರೆಯಲಾಗದು ಕೊನೇ ತನಕ 
ಮರೆಯಲಾಗದು ಅಮ್ಮನು ತೋರುವ ಪ್ರೀತಿ 
ಕೊನೇ ತನಕ ಇರಲ್ಲಿ ಪ್ರೀತಿ ಬೆಟ್ಟದಷ್ಟು .
ಅಮ್ಮನು ಹೇಳಿ ಕೊಟ್ಟ ಪುಟ್ಟ ಪುಟ್ಟ ಹೆಜ್ಜೆ.
ನನ್ನ ಜೀವನದಲ್ಲಿ ಮಾಡಲಿ ಸಾಹಸದ ಹೆಜ್ಜೆ.
................................................ ಪ್ರಾಕ್ಷಿ ಶೆಟ್ಟಿ 
ದ್ವಿತೀಯ ಪಿಯುಸಿ 
ಸುಜ್ಞಾನ ಪಿಯು ಕಾಲೇಜು ಯಡಾಡಿ - ಮತ್ಯಾಡಿ 
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
*****************************************



ಸಪ್ತ ಸಾಗರದಷ್ಟು ಮಕ್ಕಳಿಗೆ ವಿದ್ಯಾಮಂದಿರ .
ಶಿಸ್ತು ಬದ್ಧವಾಗಿದೆಂದೆನಿಸಿಕೊಂಡ ಶಾಲೆ 
ಅದೇ ನಮ್ಮ ವಿದ್ಯಾದೇಗುಲ ಸುಜ್ಞಾನ ಶಾಲೆ.
ವರ್ಷದಲ್ಲಿ ಸಹಸ್ರಾರು 
ಕಾರ್ಯಕ್ರಮ ಕೊಡುವ ಶಾಲೆ
ಮಕ್ಕಳ ಪೋಷಕರ ಮನ ಗೆದ್ದ ಶಾಲೆ 
ಮಕ್ಕಳಿಗೆ ಶಿಸ್ತಿನಿಂದ ಮುದ್ದು ಮಾಡುವ 
ರಮೇಶ್ ಸರ್ ಹಾಗು ಪ್ರತಾಪ್ ಚಂದ್ರ ಸರ್ 
ಮಕ್ಕಳಿಗೆ ತಪ್ಪು ಮಾಡಿದಲ್ಲಿ 
ಪ್ರೀತಿಯಿಂದಲೇ ಗದರುವ ಭರತ್ ಸರ್
ನನ್ನ ಕಾಲೇಜ್ ನನಗೆ ಇಷ್ಟ 
ತೀರಿಸುವೆ ಋಣ ಆದರೂ ಕಷ್ಟ 
ನೋಡು ನಮ್ಮ ಸುಜ್ಞಾನ ಸ್ಥಾನ.
ಅದು ಆಗಿದೆ ವಿವಿಧ ವಿದ್ಯಾ ತಾಣ.
ಈ ಜೇನಿನ ಗೂಡಿನ ಶಾಲೆಗೆ 
ನನ್ನ ಪ್ರೀತಿಯ ನಮನಗಳು.
ಈ ಶಾಲೆ ಸ್ಥಾಪಿಸಿದ 
ತ್ರಿಮೂರ್ತಿಗಳಿಗೆ ನನ್ನ ನಮಸ್ಕಾರಗಳು 
................................................ ಪ್ರಾಕ್ಷಿ ಶೆಟ್ಟಿ 
ದ್ವಿತೀಯ ಪಿಯುಸಿ 
ಸುಜ್ಞಾನ ಪಿಯು ಕಾಲೇಜು ಯಡಾಡಿ - ಮತ್ಯಾಡಿ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
****************************************

   

ನನ್ನ ಬೆಕ್ಕು ಅದರ ಹೆಸರು ಮಿಂಚು
ಬೇಟೆ ಆಡುವಾಗ ಹಾಕುತ್ತದೆ ದೊಡ್ಡ ಸಂಚು 
ಬಿಳಿ ಮತ್ತು ಕಪ್ಪು ಬಣ್ಣದ ಬೆಕ್ಕು
ನಾಯಿ ಕಂಡಾಗ ಅದಕಾಗುತ್ತದೆ ಪುಕ್ಕು
ದೊಡ್ಡ ಮನಸಿನ ಮುದ್ದಾದ ಬೆಕ್ಕು
ಅದೇ ನಮ್ಮ ಮನೆಯ ಬೆಕ್ಕು
ರಾತ್ರಿ ನನ್ನೊಂದಿಗೆ ಮಲಗುತ್ತದೆ
ಬೆಳಿಗ್ಗೆ ನನ್ನೊಂದಿಗೆ ಏಳುತ್ತದೆ
ಗುಲಾಬಿ ಬಣ್ಣದ ಮೂಗು
ವರ್ಣಿಸಲಾಗದಷ್ಟು ದೊಡ್ಡ ಗುಣ 
ಅದೇ ನಮ್ಮ ಮನೆಯ ಬೆಕ್ಕು 
ಅದರ ಹೆಸರು ಮಿಂಚು                  
................................................ ಪ್ರಾಕ್ಷಿ ಶೆಟ್ಟಿ 
ದ್ವಿತೀಯ ಪಿಯುಸಿ 
ಸುಜ್ಞಾನ ಪಿಯು ಕಾಲೇಜು ಯಡಾಡಿ - ಮತ್ಯಾಡಿ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
*****************************************




Ads on article

Advertise in articles 1

advertising articles 2

Advertise under the article