-->
ಜಗಲಿ ಕಟ್ಟೆ : ಸಂಚಿಕೆ - 79

ಜಗಲಿ ಕಟ್ಟೆ : ಸಂಚಿಕೆ - 79

ಜಗಲಿ ಕಟ್ಟೆ : ಸಂಚಿಕೆ - 79
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಮಕ್ಕಳ ಜಗಲಿಯ ಎಲ್ಲರಿಗೂ ನಮಸ್ಕಾರ... ನಾನು ಚಿತ್ರಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಮಕ್ಕಳ ಜೊತೆ ಹೆಚ್ಚು ಆಪ್ತವಾಗಿರುವುದಕ್ಕೆ ಸಾಧ್ಯವಾಯಿತು ಎಂದರೆ ತಪ್ಪಾಗದು. ನನ್ನ ಎರಡು ದಶಕಗಳ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳ ಚಿತ್ರಕಲಾಸಕ್ತಿಯ ಬೆಳವಣಿಗೆಯನ್ನು ಕಂಡಿದ್ದೇನೆ. ಶಾಲೆಯಲ್ಲಿ ಚಿತ್ರಕಲೆಯನ್ನು ಕಲಿತ ಮಾತ್ರಕ್ಕೆ ಅವರು ಚಿತ್ರ ಕಲಾವಿದರೇ ಆಗಬೇಕೆನ್ನುವ ಯಾವುದೇ ಒತ್ತಡವನ್ನು ಹೇರದೆ ಸ್ವತಂತ್ರವಾಗಿ ಅವರು ತನ್ನ ಮಾರ್ಗವನ್ನು ಆಯ್ದುಕೊಳ್ಳಬೇಕೆನ್ನುವುದು ನನ್ನ ನಿಲುವು. ಯಾವುದೇ ಕ್ಷೇತ್ರವನ್ನು ಆಯ್ದುಕೊಳ್ಳಲಿ ಚಿತ್ರಕಲಾಸಕ್ತಿಯನ್ನು ಬೆಳೆಸಿಕೊಂಡ ವಿದ್ಯಾರ್ಥಿ ಆಯಾ ಕ್ಷೇತ್ರದಲ್ಲಿ ತನ್ನ ಸೃಜನಶೀಲ ವ್ಯಕ್ತಿತ್ವದಿಂದ ಗುರುತಿಸಿಕೊಳ್ಳುವ ಹಾಗೆ ಬೆಳೆಯುತ್ತಾನೆ ಅನ್ನೋದು ನನ್ನ ಅನುಭವದ ಮಾತು. ಹಾಗಾಗಿ ಭಿನ್ನ-ಭಿನ್ನ ಸ್ವಭಾವದ ಮಕ್ಕಳು ಅವರವರ ವಿಶೇಷ ಆಸಕ್ತಿಯ ಕ್ಷೇತ್ರವನ್ನು ಅರಸಿ ನೆಲೆಯಾಗಿರುವುದರ ಜೊತೆಗೆ ಚಿತ್ರಕಲಾ ಕ್ಷೇತ್ರದಲ್ಲೂ ನೆಲೆಯನ್ನು ಕಂಡುಕೊಂಡಿರುವ ನನ್ನ ಅನೇಕ ವಿದ್ಯಾರ್ಥಿಗಳಿದ್ದಾರೆ. 

ಸರಕಾರಿ ಶಾಲೆಗೆ ನಿಯೋಜನೆಯಾಗುವ ಮುನ್ನ 3 ವರ್ಷಗಳ ಕಾಲ ಖಾಸಗಿ ಶಾಲೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಕೇವಲ ಬೆರಳೆಣಿಕೆಯಷ್ಟು 3 ವರ್ಷ ಮಾತ್ರ ಇದ್ದರೂ ಅಲ್ಲಿನ ವಿದ್ಯಾರ್ಥಿಗಳು ಚಿತ್ರಕಲೆಯಲ್ಲಿ ತೊಡಗಿಸಿಕೊಂಡ ರೀತಿ ಮಾತ್ರ ಅದ್ಭುತವಾಗಿತ್ತು. ಕೆಲವು ತಿಂಗಳುಗಳ ಹಿಂದೆ ಅದೇ ಖಾಸಗಿ ಶಾಲೆಯ ನನ್ನ ವಿದ್ಯಾರ್ಥಿನಿಯೊಬ್ಬಳು ಕರೆ ಮಾಡಿ "ಸರ್ ನನ್ನದು ಇಂಜಿನಿಯರಿಂಗ್ ಮುಗಿಯಿತು, ಆದರೆ ಈ ಕ್ಷೇತ್ರದಲ್ಲಿ ಉದ್ಯೋಗ ಮಾಡುವ ಯಾವುದೇ ಆಸಕ್ತಿ ಇಲ್ಲ. ಚಿತ್ರಕಲಾವಿದೆ ಆಗಬೇಕೆನ್ನುವ ಬಯಕೆ ಇದೆ" ಅಂದಾಗ ಒಮ್ಮೆ ರೋಮಾಂಚನ ಆಯ್ತು. ಹೈಸ್ಕೂಲ್ ದಿನದಲ್ಲಿ ಬಹಳ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದವಳು. ಅದ್ಭುತ ಕಲಾಕೃತಿಗಳನ್ನು ರಚಿಸಿ ಅಂದಿನ ದಿನದಲ್ಲಿ ಗ್ಯಾಲರಿಯಲ್ಲಿ ನಡೆಸಿದ ಮಕ್ಕಳ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿ ಜನ ಮೆಚ್ಚುಗೆಯನ್ನು ಪಡ್ಕೊಂಡವಳು. ಅವಳ ಆಸಕ್ತಿಯನ್ನು ಕಂಡು, "ಖಂಡಿತಾ ನೀನು ದೊಡ್ಡ ಕಲಾವಿದೆ ಆಗುತ್ತೀಯಾ" ಎಂದು ಪ್ರೀತಿಯಿಂದ ಹಾರೈಸಿದೆ. ಹಾರೈಕೆ ಮತ್ತು ಅವಳ ಶ್ರಮದ ಫಲವಾಗಿ ಮನೆಯಲ್ಲೇ ಪ್ರಸ್ತುತ ಆರ್ಟ್ ಸ್ಟುಡಿಯೋ ಒಂದನ್ನು ಸ್ಥಾಪಿಸಿ ಕಲಾಕೃತಿಗಳನ್ನು ರಚಿಸುತ್ತಿರುವುದನ್ನು ಕಂಡಾಗ.. ನಿಜವಾಗ್ಲೂ ಸಾಧನೆ ಅಂದ್ರೆ ಇದುವೇ ಅನ್ನಿಸಿತು..

ಎಲ್ಲರೂ ಬಯಸೋದು ಒತ್ತಡರಹಿತ ಜೀವನ. ಆಸಕ್ತಿ ಇಲ್ಲದ ಕ್ಷೇತ್ರದಲ್ಲಿ , ನೆಮ್ಮದಿ ಇಲ್ಲದ ಜಾಗದಲ್ಲಿ ಲಕ್ಷ ದುಡಿದರೂ ಜೀವನ ಸಾರ್ಥಕವಾಗದು. ಯುವ ಜನತೆ ಸರಿಯಾದ ದಿಕ್ಕಿನಲ್ಲಿ ಸಾಗಿದರೆ ತಂದೆ ತಾಯಿಗಿಂತಲೂ ಮೊದಲು ಖುಷಿ ಪಡುವುದು ಶಿಕ್ಷಕರು.
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



ಕಳೆದ ಸಂಚಿಕೆಯ ಜಗಲಿಕಟ್ಟೆ - 78 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಕೆಲವು ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಮಕ್ಕಳ ಜಗಲಿಯ ಈ ವಾರದ ಸಂಚಿಕೆ ಓದಿದ್ದು ತುಂಬಾ ಸಂತೋಷವಾಯಿತು. ಬಹಳ ದಿನಗಳ ನಂತರ ಮಕ್ಕಳ ಸ್ವರಚಿತ ಕಥೆಗಳು, ಕವನಗಳು ಹಾಗೂ ಚಿತ್ರ ಸಂಚಿಕೆ ಪ್ರಕಟಗೊಂಡಿದ್ದು ಮನಸ್ಸಿಗೆ ಸಂತೋಷವನ್ನು ನೀಡಿತು. ಜೊತೆಗೆ ಅನೇಕ ಸಿಹಿ ನೆನಪುಗಳು ಮರುಕಳಿಸಿದವು. 'ಅಕ್ಕನ ಪತ್ರ', 'ಹಸಿರು ಯೋಧರು' ಅಂಕಣಗಳು ಮಕ್ಕಳ ಸೃಜನಶೀಲತೆಗೆ ಎಷ್ಟೊಂದು ಪ್ರೋತ್ಸಾಹ ನೀಡುತ್ತಿದ್ದವು ಎಂಬುದು ಮತ್ತೆ ನೆನಪಾಯಿತು. ಏನು ಬರೆಯುವುದು? ಹೇಗೆ ಬರೆಯುವುದು...? ಎಂಬ ಕುತೂಹಲದೊಂದಿಗೆ ಹೊಸ ವಿಷಯಗಳ ಹುಡುಕಾಟ ನಡೆಸುತ್ತಿದ್ದ ಆ ದಿನಗಳು, ಶಾಲೆಯ ಚಟುವಟಿಕೆಗಳ ನಡುವೆಯೂ ನಮ್ಮ ಶಿಶಿರ ಮಕ್ಕಳ ಜಗಲಿಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದ ಸುಂದರ ಕ್ಷಣಗಳು ಮನಸ್ಸಿನಲ್ಲಿ ಮತ್ತೆ ಹಸಿರಾದವು. ಎಷ್ಟೋ ಮಕ್ಕಳ ಪ್ರತಿಭೆಗೆ ವೇದಿಕೆಯಾಗಿರುವುದು ಮಕ್ಕಳ ಜಗಲಿಯ ಸಾರ್ಥಕತೆ. 

ಬಾಲಕೃಷ್ಣ ಬಿ ಅವರ ಸ್ವರಚಿತ ಕವನಗಳು, ಅನನ್ಯ ತಲೆಂಗಳ ಅವರ ಚಿತ್ರ ಸಂಚಿಕೆ, ವೇದಾಂತ್, ಲೇಖನಿ ಮತ್ತು ರಚಿತಾ ಅವರ ಸ್ವರಚಿತ ಕಥೆಗಳು ಓದುವ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದವು. ವಿಶೇಷವಾಗಿ ರಮೇಶ ಎಂ ಬಾಯಾರು ಇವರು ಬರೆದ 'ಲೇಖನಿಯ ಇತಿಹಾಸ' ಮಾಹಿತಿ ಪೂರ್ಣ ಲೇಖನ ಸರಣಿಯ ಮೂರು ಭಾಗಗಳು ಬಹಳ ಮನಸೆಳೆದವು. ಫೌಂಟೇನ್ ಪೆನ್ನಿಂದ ಹಿಡಿದು ಇಂದಿನ ಬಾಲ್ ಪಾಯಿಂಟ್ ಪೆನ್ನಿನವರೆಗಿನ ಪಯಣವನ್ನು ವಿಸ್ತಾರವಾಗಿ ವಿವರಿಸಿರುವ ಸುಂದರ ಲೇಖನ. ಲೇಖನ ಓದುತ್ತಿದ್ದಂತೆ ಮರೆತೇ ಹೋಗಿದ್ದ ಹೀರೋ ಪೆನ್, ನಿಬ್, ಥ್ರೆಡ್, ಇಂಕ್ ಫಿಲ್ಲರ್ ಎಲ್ಲವೂ ಕಣ್ಣ ಮುಂದೆ ಹಾದು ಹೋದವು. ಹೀರೋ ಪೆನ್ನಿನಲ್ಲಿ ಶಾಯಿ ತುಂಬುತ್ತಿದ್ದ ಆ ದಿನಗಳು ನೆಲದ ಮೇಲೆ ಶಾಲಾ ಬ್ಯಾಗಿನ ಮೇಲೆ ಮೂಡಿಸುತ್ತಿದ್ದ ನೀಲಿ ಶಾಯಿಯ ಕಲೆಗಳು, ಶಾಹಿಯ ಸುವಾಸನೆ ಎಲ್ಲವೂ ಬಾಲ್ಯದ ಮಧುರ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದವು. ಈ ಲೇಖನ ನನಗೆ ಎಷ್ಟೊಂದು ಇಷ್ಟವಾಯಿತೆಂದರೆ ಬಹಳ ದಿನಗಳ ನಂತರ ಮತ್ತೆ ಕೈಯಲ್ಲಿ ಪೆನ್ನು ಹಿಡಿದು ಜಗಲಿಕಟ್ಟೆಗೆ ಅನಿಸಿಕೆಗಳನ್ನು ಬರೆಯಬೇಕೆಂಬ ಆಸೆ ಚಿಗುರಿತು. ಓದಿನ ಸಂತೋಷವನ್ನು ಹೆಚ್ಚಿಸಿ ಮಕ್ಕಳ ಸೃಜನಶೀಲತೆಗೆ ನಿರಂತರ ವೇದಿಕೆಯಾಗಿರುವ ಮಕ್ಕಳ ಜಗಲಿಗೆ ಹೃತ್ಪೂರ್ವಕ ಧನ್ಯವಾದಗಳು. ನಿರಂತರವಾಗಿ ಮಕ್ಕಳ ಬರವಣಿಗೆಯನ್ನು ಓದುವ ಖುಷಿ ನಮ್ಮದಾಗಲಿ ಎಂಬುದೇ ಹಾರೈಕೆ.
................................ ಕವಿತಾ ಶ್ರೀನಿವಾಸ ದೈಪಲ   
W/o ಶ್ರೀನಿವಾಸ ದೈಪಲ, 
'ಚೈತನ್ಯ' ನೆಲ್ಯಡ್ಕ, ಅಂತರ ನರಿಕೊಂಬು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*****************************************



      ಎಲ್ಲರಿಗೂ ನಮಸ್ಕಾರಗಳು... ಸಾಧಿಸುವ ಛಲ, ಜೊತೆಗೆ ಮನೋಬಲವಿದ್ದಾಗ ಅಂಗ ವೈಕಲ್ಯ ಅಡ್ಡಿಯಾಗದೆ ಏನನ್ನು ಬೇಕಾದರೂ ಸಾಧಿಸ ಬಹುದೆನ್ನುವುದನ್ನು ಪಾಯಲ್ ಹುಡುಗಿಯ ಉದಾಹರಣೆಯೊಂದಿಗೆ ಸೊಗಸಾಗಿ ವಿವರಿಸಿದ್ದಾರೆ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರು.
        ವಿಶ್ವ ತಾಯಂದಿರ ದಿನಾಚರಣೆ ಪ್ರಯುಕ್ತ ಅಮ್ಮನ ಕುರಿತಾದ ಮನಮಿಡಿಯುವ ಉತ್ತಮ ಲೇಖನ. ಧನ್ಯವಾದಗಳು ರಮೇಶ್ ಸರ್ ....
    ಹಲವು ದಿನಗಳ ನಂತರ ಮತ್ತೆ ಜಗಲಿಯಲ್ಲಿ ಮಕ್ಕಳ ಕಲರವ. ದಿವ್ಯಜ್ಯೋತಿ ರಚಿಸಿರುವ ಕವನಗಳು ಚೆನ್ನಾಗಿ ಮೂಡಿ ಬಂದಿವೆ. ಅಭಿನಂದನೆಗಳು ದಿವ್ಯಜೋತಿಯವರಿಗೆ.
     ಬಹಳ ದಿನಗಳ ನಂತರ ಅಶ್ವಿನ್ ಸರ್ ರವರ ರಜೆಯ ಓದು ಸಂಚಿಕೆ. ವಿನ್ನಿ ದಿ ಪೂಹ್ ಎನ್ನುವ ಆಂಗ್ಲ ಪುಸ್ತಕದ ವಿಶ್ಲೇಷಣೆ ಉತ್ತಮಾಗಿತ್ತು.
      ಡುರಾಂಟಾ ಎರೆಕ್ಟಾ ಎನ್ನುವ ಹೊಸಗಿಡದ ಪರಿಚಯವನ್ನು ಸಸ್ಯದ ಭಾಷೆಯಲ್ಲಿ ಸಸ್ಯದ ಜೊತೆ ಸಂದರ್ಶನ ನೀಡಿದಂತೆ ಬಹಳ ಸೊಗಸಾಗಿ ವಿವರಿಸಿದ್ದೀರಿ. ಧನ್ಯವಾದಗಳು ಮೇಡಂ.
      ಬೈಂದೂರಿನ ಸೋಮೇಶ್ವರ ದೇವಸ್ಥಾನ ಮತ್ತು ಬೀಚ್ ನ ಕುರಿತಾದ ಸುಂದರ ವರ್ಣನೆ ಪಯಣ ಸಂಚಿಕೆಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ.
      'ಅಡಿ ಎಂದರೆ ಎಷ್ಟು ಉದ್ದ?' ಪುಸ್ತಕದ ಪರಿಚಯ ಸೊಗಸಾಗಿತ್ತು ವಾಣಿಯಕ್ಕ.
     ರಮೇಶ್ ಉಪ್ಪುಂದರವರ ಪದಗಳನ್ನು ಹುಡುಕಿ ಜೋಡಿಸುವ ಪದದಂಗಳ ಸಂಚಿಕೆಯು ಉತ್ತಮವಾಗಿ ಮೂಡಿ ಬಂದಿದೆ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



    ನಮಸ್ತೆ, ದೇವರು ಎಲ್ಲದರಲ್ಲೂ ಒಳ್ಳೆಯದನ್ನೇ ತುಂಬಿದ್ದಾನೆ. ನೋಡುವ ದೃಷ್ಟಿ ಚೆನ್ನಾಗಿದ್ದಾಗ ಜಗತ್ತು ಸುಂದರವಾಗಿಯೇ ಕಾಣುವುದು ಕೆಟ್ಟದಾಗಿದ್ದರೆ ಕೆಟ್ಟದಾಗಿ ಕಾಣುವುದು. ಸುಂದರ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ.
     ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸೇವಾ ತತ್ಪರರು. ಸೇವೆಯ ಹಲವು ಆಯಾಮದ ಜೊತೆಗೆ ಭಗವದನುಗ್ರಹದ ಕುರಿತು ಹಾಗೂ ತನ್ನ ಜೊತೆಯಲ್ಲಿರುವ ಹುಡುಗಿ ಮಗಳಾಗಿ ಪ್ರಾಣ ಉಳಿಸಿದ ಲೇಖನ ಚೆನ್ನಾಗಿತ್ತು ಸರ್.
     ರಜೆಯ ಓದು ಸಂಚಿಕೆಯಲ್ಲಿ Little owls night ಮತ್ತು The young Scientist ಆಂಗ್ಲ ಪುಸ್ತಕಗಳ ಕುರಿತಾದ ವಿಶ್ಲೇಷಣೆ ಸೊಗಸಾಗಿತ್ತು ಸರ್.
     ನಿಷ್ಪಾಪಿ ಸಸ್ಯಗಳ ಮುಂದುವರಿದ ಸರಣಿಯಲ್ಲಿ ಈ ವಾರ ಚೈನೀಸ್ ಫ್ರಿಂಜ್ ಪ್ಲವರ್ ಗಿಡದ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ.
      ಆದಿ ಶಂಕರಾಚಾರ್ಯರು ತಪಸ್ಸು ಗೈದ ಕೂಡಚಾದ್ರಿ ಬೆಟ್ಟದ ಕುರಿತಾದ ಮಾಹಿತಿ ಈ ಸಲದ ಪಯಣ ಸಂಚಿಕೆಯಲ್ಲಿ ಸೊಗಸಾಗಿತ್ತು ಸರ್.
     ವಾಣಿಯಕ್ಕನವರಿಂದ ವೆಂಕಟೇಶ ಮೂರ್ತಿಯವರ ಕವನ ಸಂಕಲನಗಳ ಪರಿಚಯ ಉತ್ತಮವಾಗಿತ್ತು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



    ಎಲ್ಲರಿಗೂ ನಮಸ್ಕಾರಗಳು... ದೇಹದಲ್ಲಿರುವ ಪಂಚೇಂದ್ರಿಯಗಳನ್ನು ಉಪಯೋಗಿಸಿ ಎಲ್ಲವನ್ನೂ ಕೂಡಿಡುವ ಬದಲು ಅನುಭವಿಸುವ ಗುಣ ನಮ್ಮಲ್ಲಿರಬೇಕು ಎನ್ನುವುದನ್ನು ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರು ಬಹಳ ಸೊಗಸಾಗಿ ವಿವರವಾಗಿ ತಿಳಿಸಿದ್ದಾರೆ.
     ದೇವರನ್ನು ಹುಡುಕುವ ಸುಲಭದ ಮಾರ್ಗಗಳನ್ನು ತಮ್ಮ ಸಂಚಿಕೆಯಲ್ಲಿ ಬಹಳ ಸುಂದರವಾಗಿ ವಿವರಿಸಿದ್ದೀರಿ ಸರ್....
      ಹಲವು ದಿನಗಳಿಂದ ವೈಜ್ಞಾನಿಕ ಸಂಚಿಕೆಗಾಗಿ ಕಾಯುತ್ತಿದ್ದ ನನಗೆ ಈ ವಾರದಲ್ಲಿ ಆಶೆ ಈಡೇರಿತು. ತಮ್ಮ ಸಂಚಿಕೆಯಲ್ಲಿ ದಿವಾಕರ ಸರ್ ರವರು ಮನುಷ್ಯನ ಮೆದುಳು ಹಲವು ಬಗೆಯ ಕೆಲಸವನ್ನು ಹೇಗೆ ಗ್ರಹಿಸಿ ಕೆಲಸ ನಿರ್ವಹಿಸುವುದೆಂಬುದನ್ನು ತಮ್ಮ ಅಮ್ಮನ ಉದಾಹರಣೆಯ ಮೂಲಕ ವಿವರಿಸಿದ್ದಾರೆ. ಧನ್ಯವಾದಗಳು ಸರ್....
     ನೆಲಬಸಳೆ ಎನ್ನುವ ಉಪಯುಕ್ತ ಸಸ್ಯದ ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಮೇಡಂ.
     ಈ ವಾರದ ಪಯಣ ಸಂಚಿಕೆಯಲ್ಲಿ ಸುಬ್ರಹ್ಮಣ್ಯದ ಕುಮಾರ ಪರ್ವತದ ಕುರಿತಾದ ಮಾಹಿತಿ ಸೊಗಸಾಗಿತ್ತು.
     ವಾಣಿಯಕ್ಕನವರ ಪರಿಸರದ ಕುರಿತಾದ 'ಪಯಣಿಸುವ ಬೀಜಗಳು' ಪುಸ್ತಕದ ಪರಿಚಯ ಉತ್ತಮವಾಗಿ ಮೂಡಿ ಬಂದಿದೆ.
     ರಮೇಶ್ ಉಪ್ಪುಂದ ರವರ ಪದದಂಗಳ ಆಟದ ಸಂಚಿಕೆ ಉತ್ತಮವಾಗಿತ್ತು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
***************************************



     ನಮಸ್ತೇ.. ಕೈ, ಕಾಲುಗಳು, ಪಂಚೇಂದ್ರಿಯಗಳನ್ನು ಒಳ್ಳೆಯ ಕೆಲಸಕ್ಕಾಗಿ ಬಳಸಬೇಕು. ಅಭ್ಯುದಯ ಚಂದದ ಲೇಖನ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರಿಂದ.
     ಮಕ್ಕಳು ಚಕ್ಕಳ ಬಕ್ಕಳ ಕುಳಿತು ಅಂಗಾತವಾಗಿ ಕೈಯನ್ನು ಇಟ್ಟು ಆಡುವ ಜಾನಪದ ಹಾಡಿನ ಅರ್ಥಗರ್ಭಿತ ವಿಶ್ಲೇಷಣೆ ತುಂಬಾ ಉತ್ತಮವಾಗಿತ್ತು. ಧನ್ಯವಾದಗಳು ರಮೇಶ್ ಸರ್....
    ಮಳೆಗಾಲದಲ್ಲಿ ಬಟ್ಟೆ ಒಣಗದಿರಲು ಕಾರಣವನ್ನು ಸರಳವಾಗಿ ತಿಳಿಸಿದ್ದಾರೆ ದಿವಾಕರ ಸರ್ ತಮ್ಮ ವಿಜ್ಞಾನ ಸಂಚಿಕೆಯಲ್ಲಿ.
     ಅಶ್ವಿನ್ ರಾವ್ ರವರ ರಜೆಯ ಓದು ಸಂಚಿಕೆಯಲ್ಲಿ invisible Boy ಅದೃಶ್ಯ ಹುಡುಗ ಕಾದಂಬರಿಯ ಕುರಿತಾದ ವಿಶ್ಲೇಷಣೆ ಸೊಗಸಾಗಿ ಮೂಡಿ ಬಂದಿದೆ.
     ಜಮೈಕಾ ಚೆರ್ರಿ ಎನ್ನುವ ಸಸ್ಯದ ಕುರಿತಾದ ವಿವರವಾದ ಮಾಹಿತಿ ಈ ವಾರದ ಸಂಚಿಕೆಯಲ್ಲಿ ಚೆನ್ನಾಗಿತ್ತು ಮೇಡಂ.
     ವಿಜಾಪುರ ಜಿಲ್ಲೆಯ ಗೋಲ್ ಗುಂಬಜ್ ಸ್ಮಾರಕದ ವಿವರವಾದ ಮಾಹಿತಿಗಾಗಿ ಧನ್ಯವಾದಗಳು ರಮೇಶ್ ಸರ್...
    ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ ಗೋಲ್ ಹೊಡೆಯುವ ಮನಸಿನ ಹುಡುಗಿಯ ಕತೆ ಇರುವ ಪುಸ್ತಕದ ಪರಿಚಯ ಉತ್ತಮವಾಗಿ ಮೂಡಿ ಬಂದಿದೆ.
     ಪದಗಳ ಕೂಡಿಸಿ ಜೋಡಿಸಿ ಬರೆಯುವ ಪದದಂಗಳ ಸಂಚಿಕೆ ಚೆನ್ನಾಗಿತ್ತು ಸರ್...
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



ನಮಸ್ತೇ,
     ಭಗವದ್ಗೀತೆಯ 14 ಮತ್ತು 15ನೇ ಅಧ್ಯಾಯ ಶ್ಲೋಕಗಳ ಉದಾಹರಹಣೆಯೊಂದಿಗೆ ಸುಖ ದುಃಖಗಳ ವಿಶ್ಲೇಷಣೆ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರಿಂದ ಸೊಗಸಾಗಿ ಮೂಡಿ ಬಂದಿದೆ.
     ಮಂಚಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಮಳೆ ಹಬ್ಬದ ಕುರಿತಾದ ವರದಿ ಜೊತೆಗೆ ವಿಶ್ಲೇಷಣೆ ಚೆನ್ನಾಗಿತ್ತು ಸರ್.
     ಮಾರುಕಟ್ಟೆಯಲ್ಲಿ ಅತಿಯಾಗಿ ಸಿಗುವ ನೇರಳೆ ಹಣ್ಣು ಬರಗಾಲದ ಮುನ್ಸೂಚನೆಯೇ ಎಂಬುದರ ಕುರಿತಾದ ಲೇಖನ ಚೆನ್ನಾಗಿತ್ತು. ಪೂರ್ಣ ಮಾಹಿತಿಗಾಗಿ ಮುಂದಿನ ವಾರ ಕಾಯಬೇಕು.
     ರಜೆಯ ಓದು ಸಂಚಿಕೆಯಲ್ಲಿ ಮೌರಿಸ್ ಸಂಡಾಕರವರು ಬರೆದ ವೇರ್ ದ ಲಿಟಲ್ ಕಿಂಗ್ಸ್ ಆರ್ ಪುಸ್ತಕದ ಕುರಿತಾದ ವಿಶ್ಲೇಷಣೆ ಉತ್ತಮವಾಗಿತ್ತು ಸರ್.
     ಪಯಣ ಸಂಚಿಕೆಯಲ್ಲಿ ಪ್ರಕೃತಿ ರಮಣೀಯ ಸ್ಥಳ ಆಗುಂಬೆಯ ಕುರಿತಾದ ಮಾಹಿತಿ ಸೊಗಸಾಗಿ ಮೂಡಿ ಬಂದಿದೆ.
     ತಾವೇ ಬರೆದಿರುವ ಕುಕ್ಕರ್ ಕುಮಾರ ಪುಸ್ತಕದ ಪರಿಚಯ ತುಂಬಾ ಚೆನ್ನಾಗಿತ್ತು ವಾಣಿಯಕ್ಕ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************




     ನಮಸ್ತೇ... ಮನಸ್ಸನ್ನು ಗಟ್ಟಿಗೊಳಿಸಲು ಸಾಧನೆ ಅಗತ್ಯ. ಸಾಧನೆಯ ಹಂತಗಳನ್ನು ಪತಂಜಲಿ ಮಹರ್ಷಿಯ ಸೂತ್ರಗಳ ಮೂಲಕ ವಿವರಿಸಿದ ರೀತಿ ಸೊಗಸಾಗಿತ್ತು ಸರ್.....
      ಯಾವುದಾದರೂ ಉತ್ತಮ ಕೆಲಸದ ಕಡೆಗೆ ಮನಸ್ಸನ್ನು ಕೇಂದ್ರೀಕೃತಗೊಳಿಸುವುದೇ ತಪಸ್ಸು. ಉತ್ತಮ ಲೇಖನ ಸರ್....
     ನೀರು ಮತ್ತಿತರ ವಸ್ತುಗಳು ಸಿಕ್ಕರೆ ಗಿಡಗಳು ಸೋಮಾರಿಯಂತೆ ಹಾಗೆ ಬೆಳೆದು ಸುಮ್ಮನಿದ್ದು ಬಿಡುತ್ತವೆ. ಸೋಮಾರಿತನ ಗಿಡಗಳಿಗೂ ... ಉಂಟೇ? ಸೊಗಸಾಗಿತ್ತು ಸರ್ ವೈಜ್ಞಾನಿಕ ಲೇಖನ....
     ಸಿಹಿ ಗೆಣಸು ಸಸ್ಯದ ಕುರಿತಾದ ವಿವರವಾದ ಮಾಹಿತಿ ಈ ವಾರದ ಸಂಚಿಕೆಯಲ್ಲಿ ಉತ್ತಮವಾಗಿತ್ತು ಮೇಡಂ.
     ಸಕಲೇಶಪುರದ ಸುಂದರ ಪ್ರವಾಸಿ ತಾಣಗಳ ಕುರಿತಾದ ಮಾಹಿತಿ ಈ ವಾರದ ಪಯಣ ಸಂಚಿಕೆಯಲ್ಲಿ ಚೆನ್ನಾಗಿತ್ತು ಸರ್.....
      ಬಾಹ್ಯಾಕಾಶಕ್ಕೆ ಹೋಗಿ ಹೊಸ ವಿಷಯಗಳನ್ನು ಕಂಡುಕೊಳ್ಳುವ ಕುರಿತಾದ ಹೊಸ ಗ್ರಹದ ಕತೆ ಎನ್ನುವ ಪುಸ್ತಕದ ಪರಿಚಯ ಸೊಗಸಾಗಿತ್ತು ವಾಣಿಯಕ್ಕ.
     ಪದಗಳನ್ನು ಹುಡುಕಾಡಿ ಜೋಡಿಸಿ ಆಡುವ ಪದದಂಗಳ ಸಂಚಿಕೆ ಚೆನ್ನಾಗಿ ಮುಂದುವರಿಯುತ್ತಿದೆ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************




       ಎಲ್ಲರಿಗೂ ನಮಸ್ಕಾರಗಳು... ಯಾವುದೇ ಒಂದು ವಿಷಯದ ಮೇಲೆ ಮನಸ್ಸು ಕೇಂದ್ರೀಕೃತಗೊಂಡಾಗ ಅಥವಾ ತನ್ಮಯವಾದಾಗ ಶಾಂತಿ ಲಭಿಸುವ ವಿಧಾನವನ್ನು ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಬಹಳ ಸೊಗಸಾಗಿ ವಿವರಿಸಿದ್ದಾರೆ.
      ಸುಂದರವಾದ ಘಟನೆಯೊಂದರ ಮೂಲಕ ಮೊಬೈಲ್ ಫೋನ್ ನ ಅವಾಂತರದ ಬಗ್ಗೆ ಸುಂದರವಾಗಿ ತಿಳಿಸಿದ್ದೀರಿ ಸರ್. 
      ಎಲ್ ನಿ ನೋ ಬರಗಾಲದ ಮುನ್ಸೂಚನೆಯಾದರೂ ನೇರಳೆ ಮರ ಹೆಚ್ಚು ಫಸಲು ಕೊಡಲು ಬರಗಾಲವೇ ಕಾರಣವಾಗಬೇಕಿಲ್ಲ. ಸುಂದರ ಲೇಖನ ಸರ್....
     ಓದುತ್ತಾ ಓದುತ್ತಾ ಕುತೂಹಲ ಮೂಡಿಸಿದ ಲೇಖನ ಈ ವಾರದ ವೈಜಯಂತಿ ಕಾಯಿಯ ಪರಿಚಯ.... ಉತ್ತಮವಾಗಿತ್ತು ಮೇಡಂ.
     ರಮೇಶ್ ಸರ್ ರವರ ಪಯಣ ಸಂಚಿಕೆಗೆ ನೂರರ ಸಂಭ್ರಮ. ನೂರನೇ ಸಂಚಿಕೆ ಪವಿತ್ರ ಕ್ಷೇತ್ರವಾದ ಶೃಂಗೇರಿ ಯ ಕುರಿತಾದ್ದು ಎನ್ನುವುದು ಮತ್ತೊಂದು ವಿಶೇಷ. ಶೃಂಗೇರಿಯ ಪರಿಚಯ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು ಸರ್..
    ವಾಣಿಯಕ್ಕ ನವರಿಂದ ಪೈಸಾ ಪೈಸಾ ಲೆಕ್ಕ ಎನ್ನುವ ಚಂದದ ಪುಸ್ತಕದ ಪರಿಚಯ ಚೆನ್ನಾಗಿತ್ತು.
    ಈ ವಾರದ ಪದದಂಗಳ ತುಂಬಾ ವಿಶಿಷ್ಟವಾಗಿತ್ತು. ಧನ್ಯವಾದಗಳು ಸರ್..
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************




     ನಮಸ್ತೇ... ಶ್ರೀಮಂತನಾದರೂ ಬಡವನಾದರೂ ಸೇವಿಸುವ ಆಹಾರ ಒಂದೇ... ಸಿದ್ದೇಶ್ವರ ಸ್ವಾಮಿಯವರ ಸುಂದರ ಲೇಖನ ಶಿಕ್ಷಣಾಧಿಕಾರಿಯವರಿಂದ. ಧನ್ಯವಾದಗಳು ಸರ್...
      ಸನಾತನ ಕಾಲಮಾನಗಳ ವಿವರವಾದ ಮಾಹಿತಿಯನ್ನು ನೀಡಿದ್ದೀರಿ ಸರ್.... ಧನ್ಯವಾದಗಳು ಸರ್.
     ಮೆಕಾಲೆ ಶಿಕ್ಷಣ ಪದ್ಧತಿಯನ್ನು ಹೇರಿರುವುದರ ಅನನುಕೂಲತೆಯನ್ನು ಸುಂದರವಾಗಿ ವಿವರಿಸಿದ್ದೀರಿ ಸರ್...
    ಭಾರತ ಭಾರತಿ ಪುಸ್ತಕಗಳ ಕುರಿತಾದ ವಿಶ್ಲೇಷಣೆ ಹಾಗೂ ಪುಸ್ತಕ ಓದುವ ಕಳಕಳಿಯ ಕುರಿತಾದ ತಮ್ಮ ನಿಷ್ಠೆ ಇಷ್ಟವಾಯಿತು ಸರ್....
     ಕಲ್ಲು ಅಶ್ವತ್ಥ ಗಿಡದ ಕುರಿತಾಗಿ ಸುಂದರವಾದ ಮಾಹಿತಿಯನ್ನು ಈ ವಾರದ ಸಂಚಿಕೆಯಲ್ಲಿ ನೀಡಿದ್ದೀರಿ ಮೇಡಂ. ಧನ್ಯವಾದಗಳು.
     ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಸುಂದರವಾದ ಪರಿಚಯ ಈ ವಾರದ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
     ಮಗುವಿಗೆ ಶಿಕ್ಷಕಿಯ ಮೇಲೆ ತುಂಬಾ ಪ್ರೀತಿಯಿದ್ದರೂ ಅದೇ ತರಗತಿಯಲ್ಲಿ ಇರಲು ಇಷ್ಟಪಡದೆ ಮುಂದಿನ ತರಗತಿ ಹೋಗಬೇಕೆನ್ನುವ ದೃಢ ನಿರ್ಧಾರದ ಕುರಿತಾದ ರಮ್ಯಾ ಮೇಡಂರವರ ಅನುಭವದ ಮಾತು ಚೆನ್ನಾಗಿ ಮೂಡಿ ಬಂದಿದೆ.
     ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
     ತ್ರಿಷಾ ರವರ ಎಲ್ಲಾ ಕವನಗಳು ಸುಂದರವಾಗಿ ಮೂಡಿ ಬಂದಿದೆ. ಅಭಿನಂದನೆಗಳು ತ್ರಿಷಾರವರಿಗೆ.
     ರಮೇಶ್ ರವರ ಪದದಂಗಳ ಸಂಚಿಕೆ ಚೆನ್ನಾಗಿ ಮುಂದುವರಿಯುತ್ತಿದೆ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



      
      ನಮಸ್ತೇ.. ಶ್ರೀಮಂತಿಕೆಯು ಹಣದಿಂದಲ್ಲ ಬದಲಾಗಿ ಮನಸ್ಸಿನ ಭಾವನೆಯಿಂದ ಎಂಬುದನ್ನು ಸುಂದರವಾದ ಕಥೆಯ ಮೂಲಕ ಶಿಕ್ಷಣಾಧಿಕಾರಿಗಳಾದ ಶ್ರೀ ಜ್ಞಾನೇಶ್ ಸರ್ ರವರು ಸೊಗಸಾಗಿ ತಿಳಿಸಿದ್ದಾರೆ.
    ಲೇಖನಿ ಇತಿಹಾಸ - ಶಾಯಿ ಪೆನ್ನಿನ ಕುರಿತಾಗಿ ವಿನೋದವಾಗಿ ಬರೆದ ಲೇಖನದ ಮೊದಲ ಭಾಗ ಚೆನ್ನಾಗಿತ್ತು ಸರ್....
     ಜೋಳದಿಂದ ಪಾಪ್ಕಾರ್ನ್ ಹೊರಬರುವ ವಿಧಾನವನ್ನು ಸೊಗಸಾಗಿ ವಿವರಿಸಿದ್ದೀರಿ ಸರ್..
     ಹಿಂದಿನ ಕಾಲದಲ್ಲಿ ಬಹಳ ಪ್ರಸಿದ್ಧವಾದ ಚಂದಮಾಮ ಕಥೆಗಳ ಕುರಿತಾದ ವಿವರವಾದ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ಸರ್.
     ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ ಚಿತ್ರದುರ್ಗದ ಕೋಟೆಗಳ ಕುರಿತಾಗಿ ವಿವರವಾದ ಮಾಹಿತಿ ವಿವರದ ಈ ವಾರದ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
     ಆನೆಯ ಹಿಂದೆ ಯಾರಲ್ಲಿ ಎನ್ನುವ ಪುಸ್ತಕದ ಪರಿಚಯ ಉತ್ತಮವಾಗಿತ್ತು ವಾಣಿಯಕ್ಕ.
     ಈ ವಾರದ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************




       ನಮಸ್ತೇ.. ಉತ್ತಮ ಸಂಸ್ಕಾರ ದೊರೆತಾಗ ನಾವು ಉತ್ತಮರಾಗುತ್ತೇವೆ ಕೆಟ್ಟ ಸಂಸ್ಕಾರ ಪಡೆ ದಾಗ ನಾವು ಕೆಟ್ಟವರಾಗುತ್ತೇವೆ. ಕೆಟ್ಟ ಸಂಸ್ಕಾರವನ್ನು ರೂಢಿಸಿಕೊಂಡ ದುಷ್ಟನೊಬ್ಬ ನಾರದರಿಂದಾಗಿ ಉತ್ತಮ ಸಂಸ್ಕಾರವನ್ನು ಪಡೆದು ಹೇಗೆ ಮಹಾಕವಿಯಾದ ಎಂಬುದನ್ನು ಶಿಕ್ಷಣಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಸೊಗಸಾಗಿ ವಿವರಿಸಿದ್ದಾರೆ.
     ಪೆನ್ನಿನ (ಲೇಖನಿ ) ಕುರಿತಾದ ಮುಂದುವರಿದ ಲೇಖನ ಚೆನ್ನಾಗಿ ಮೂಡಿ ಬಂದಿದೆ ಸರ್.
    ಸುಮಾರು ಎರಡು ದಶಕಗಳ ಹಿಂದಿನ ಕಪಾಲ ಬರದ ಭೀಕರತೆಯ ಕುರಿತಾದ ವಿವರವಾದ ಲೇಖನ ಈ ವಾರದ ವಿಜ್ಞಾನ ಸಂಚಿಕೆಯಲ್ಲಿ ಸೊಗಸಾಗಿತ್ತು ಸರ್.
     ಓದಲೇ ಬೇಕಾದ ಪುಸ್ತಕ ಆಲಿಬಾಬಾ ಮತ್ತು ನಲುವತ್ತು ಮಂದಿ ಕಳ್ಳರು ಪುಸ್ತಕದ ವಿಶ್ಲೇಷಣೆ ಚೆನ್ನಾಗಿತ್ತು ಸರ್.... 
     ಅನೇಕ ವನ್ಯ ಪ್ರಾಣಿಗಳು ಹಾಗೂ ಸಸ್ಯಗಳು ಇರುವ ಧಾಂಡೇಲಿ ಅಭಯಾರಣ್ಯದ ಕುರಿತಾದ ಮಾಹಿತಿ ಈ ವಾರದ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
    ವಿಶೇಷವಾಗಿ ಮಕ್ಕಳಿಗಾಗಿಯೇ ಇರುವ ಹಲವಾರು ಪುಸ್ತಕಗಳನ್ನು ಪರಿಚಯಿಸುತ್ತಿರುವ ಮಕ್ಕಳ ಓದಿಗೆ ಪೇರಣೆಯಾಗುವ ವಾಣಿಯಕ್ಕನವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು. ಈ ವಾರ ನೀನು ಮರಕುಟಿಕವೇ ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿತ್ತು.
      ಪದದಂಗಳ ಸಂಚಿಕೆಯನ್ನು ನಿರಂತರವಾಗಿ ನೀಡುತ್ತಿರುವ ರಮೇಶ್ ಸರ್ ರವರಿಗೆ ಧನ್ಯವಾದಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ,.. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
*****************************************



Ads on article

Advertise in articles 1

advertising articles 2

Advertise under the article