-->
ಮಳೆಯ ವಿಶೇಷ ಅನುಭವ : ಸಂಚಿಕೆ - 01

ಮಳೆಯ ವಿಶೇಷ ಅನುಭವ : ಸಂಚಿಕೆ - 01

ಮಳೆಯ ವಿಶೇಷ ಅನುಭವ : ಸಂಚಿಕೆ - 01
ಈ ಬಾರಿಯ ಮಳೆಯ ಕುರಿತು ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಮಕ್ಕಳ ಜಗಲಿಯಲ್ಲಿ ಹಂಚಿಕೊಂಡಿದ್ದಾರೆ.. 

ಜಗಲಿಯ ಮಕ್ಕಳ ಅನುಭವ ಬರಹಗಳು

◾ ಜಯಶ್ರೀ, 10ನೇ ತರಗತಿ
◾ ದಿಯಾ ಉದಯ್ ಡಿ ಯು, 8ನೇ ತರಗತಿ
◾ ಚಿರಂತನ್ ಜೆ. ವಿ, 5ನೇ ತರಗತಿ
◾ ಚೈತನ್ಯ ಮಣಿಕಂಠ ಸಿದ್ದಿ, 8ನೇತರಗತಿ
◾ ಅಭಿನವ್ ಎನ್ ಸಂಪೆಕಟ್ಟೆ, 8ನೇ ತರಗತಿ
◾ ಚರಿಷ್ಮ ವಿ, 7ನೇ ತರಗತಿ
◾ ಮನ್ವಿತ್, 10ನೇ ತರಗತಿ
◾ ಅನಿಶಾ, 9ನೇ ತರಗತಿ
◾ ಪೂರ್ವಿಕ್ ಜೆ ಕೆ , 8ನೇ ತರಗತಿ 
◾ ಫಾತಿಮಾ ತನ್ವೀರ, 5ನೇ ತರಗತಿ




ನನ್ನ ಮಳೆಯ ದಿನಗಳಂತು ಬಹಳ ಸುಂದರವಾಗಿತ್ತು. ಚಿಟಿ ಚಿಟಿ ಮಳೆಯ ಹನಿ, ಜುಳು ಜುಳು ಹರಿವ ನೀರು, ಅದರ ಸೌಂದರ್ಯವನ್ನು ಅಳೆಯಲು ಯಾರಿಂದಲೂ ಸಾಧ್ಯವಿಲ್ಲ. ಬಾನಿನಿಂದ ಭೂಮಿಗೆ ಬಿದ್ದ ನೀರ ಹನಿಯ ಕಂಡಾಗ ನನಗಾದ ಆನಂದ ಹೇಳಲು ಸಾಧ್ಯವಿಲ್ಲ. ಚಳಿಯ ಕೊರೆವ ಮಳೆಯಲ್ಲಿ ಬಿಸಿ ಬಿಸಿ ಚಹಾ ತಿಂಡಿಗಳ ಸ್ವಾದ ತುಂಬಾ ಚೆನ್ನಾಗಿತ್ತು. ಮಳೆ ಬರುವ ಸಮಯದಲ್ಲಿ ಮನೆಯೊಳಗೆ ಕುಳಿತು ಬೇಸರವಾದ ನನಗೆ ಅರೆ ಕ್ಷಣ ಮಳೆ ಬಿಟ್ಟರು ಅಂಗಳಕ್ಕೆ ಧಾವಿಸುತ್ತಿದೆ. ನಾನು ತಂಗಿ ಮತ್ತು ಅಕ್ಕನವರ ಜೊತೆ ಕಳೆದ ಕ್ಷಣಗಳು ಆನಂದದಾಯಕವಾಗಿತ್ತು. ಜೋರುಗಾಳಿ ಮಳೆಗೆ ನನ್ನ ನೋಟ ಬೇರೆ ಯಾವ ಕಡೆಗೂ ಹೋಗದೆಯೆ ಇತ್ತು. ಮಳೆಯ ಸೌಂದರ್ಯ ಸವಿಯತ್ತಾ ನಾನು ಗಣಿತದ ಲೆಕ್ಕ ಕಲಿತೆ.

ಆದರೆ ದುಃಖದ ವಿಷಯ ಎಂದರೆ ಈ ಸೌಂದರ್ಯ ಸವಿಯಲು ಶಾಲಾ ಸ್ನೇಹಿತರು ಜೊತೆಯಿರದ್ದು. ಅವರ ಜೊತೆ ಕಳೆವ ಕ್ಷಣಗಳ ಖುಷಿಯೇ ಬೇರೆ. ಅವರ ಜೊತೆ ಇದ್ದರೆ ಸಮಯ ಕಳೆಯುವುದು ತಿಳಿಯದು. ಅವರು ನನ್ನ ಮಳೆಯ ಸವಿಯ ಸಮಯದಲ್ಲಿ ಜೊತೆಯಿದ್ದರೆ ಬಹಳ ಖುಷಿಯಾಗಿತ್ತು. ಇನ್ನೊಂದು ದುಃಖ ಏನೆಂದರೆ ಶಾಲೆಗೆ ರಜೆ ಕೊಡುತ್ತಿದ್ದದ್ದು ಬೇಸರವು ಹೌದು. ಶಾಲೆಯ ಆಟದ ಸಮಯ ಹೋಯಿತಲ್ಲಾ ಎಂದು ಬೇಸರವಾಗುತ್ತದೆ. ಶಾಲೆಯಲ್ಲಿ ನಾನು ಮಾಡುತ್ತಿದ್ದ ಮೋಜು ಮಸ್ತಿ ಕೂಡ ಮಳೆಯ ರಜೆಯಿಂದ ಕಳೆದುಕೊಳ್ಳಬೇಕಾಯಿತು. ಇದು ಬೇಸರದ ಸಂಗತಿ..

ಮಳೆಯ ದಿನದಲ್ಲಾದ ಹಾಸ್ಯವೆಂದರೆ ನಾವು ಮೀನು ಹಿಡಿಯಲು ಹೋದಾಗ ಕಲ್ಲುಜಾರಿ ನೀರಿಗೆ ಬಿದ್ದದ್ದು ಅಕ್ಕ. ನಾವು ಅವಳ ನೋಡಿ ನಕ್ಕೆವು. ಬಿದ್ದ ಅವಳು ಕೂಡ ನಕ್ಕಳು. ಇನ್ನೊಂದು ವಿಷಯ ನನ್ನ ತಮ್ಮ ಮಳೆ ಬಿಟ್ಟಿದೆ ಎಂದು ಅಂಗಳಕ್ಕೆ ಓಡಿ ಕೊಂಡು ಹೋಗಿ ಪಾಚಿಗೆ ಕಾಲು ಜಾರಿ ಬಿದ್ದನು. ಇದು ಬಹಳ ನಮಗೆ ಹಾಸ್ಯಮಯವಾದ ವಿಷಯವಾಗಿದೆ.

ಕೊನೆಯದಾಗಿ ಒಂದು ಖುಷಿಯ ವಿಷಯ ಹೇಳ ಬಯುಸುವೆ. ಅದೇನೆಂದರೆ ಈ ಮಳೆಯ ದಿನದಲ್ಲಿ ನಾವು ಬಹಳ ಅಣಬೆಗಳನ್ನು ಪಡೆದು ಬಹಳ ಖುಷಿ ಪಟೈವು. ನನ್ನ ಮಳೆಯ ದಿನಗಳಂತು ಬಹಳ ಎಂದರೆ ಬಹಳ ಸುಂದರ, ಆನಂದದಾಯಕವು ಮತ್ತು ಕೊಂಚ ದುಃಖ ಭರಿತವೂ ಆಗಿತ್ತು. 
................................................ ಜಯಶ್ರೀ 
10ನೇ ತರಗತಿ
ಸರಕಾರಿ ಪ್ರೌಢಶಾಲೆ ಸರ್ವೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
           

    


ಮಳೆ ಎಂದರೆ ಸಾಧಾರಣವಾಗಿ ನನಗೆ ತುಂಬಾ ಬೇಸರ. ಮಳೆ ಬಂದರೆ ಸಾಕು, ಅತಿ ಹೆಚ್ಚು ಮಲಗಲು ಇಷ್ಟಪಡುವುದು ನಾನು. ಜೋರು ಮಳೆ ಬಂದು ರಜೆ ಸಿಗದಿದ್ದರೆ ನನಗೆ ತುಂಬಾ ಬೇಸರವಾಗುತ್ತದೆ. ಮಳೆ ನಮಗೆ ಬೇಕು, ಮಳೆ ಇದ್ದರೆ ಬೆಳೆ. ಮಳೆ ಇದ್ದರೆ ಊಟ. ಆದರೂ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಬರುವಾಗ ಮಳೆ ಬಂದರೆ ಬೇಸರ. 

ಇಂತಹ ಜೋರು ಗಾಳಿ ಮಳೆ ಒಂದು ದಿನ ನಾನು ಶಾಲೆಗೆ ಹೋಗುವಾಗ ಬಂತು. ಆ ಜೋರು ಗಾಳಿ ಮಳೆಗೆ ನಾನು ಸಿಕ್ಕಿಹಾಕಿಕೊಂಡ ಕಾರಣ ನನ್ನ ಯೂನಿಫಾರ್ಮ್ ಪ್ಯಾಂಟ್ ಟಾಪ್ ಎಲ್ಲವೂ ಒದ್ದೆಯಾಯಿತು. ಆ ಒದ್ದೆಯಲ್ಲೇ ಬೆಳಗ್ಗಿನಿಂದ ಸಂಜೆ ತನಕ ತರಗತಿಯಲ್ಲಿ ಕುಳಿತುಕೊಳ್ಳಬೇಕಾಯಿತು. ತರಗತಿಯಲ್ಲಿ ನನಗೆ ಚಳಿ ಹಿಡಿಯಿತು. ಆದರೂ ಅನಿವಾರ್ಯ ಕಾರಣಗಳಿಂದ ಮುದುಡಿ ಕುಳಿತಿದ್ದೆ. ಸಂಜೆ ಮನೆಗೆ ಬರುವಾಗ ಶೀತ ಶುರುವಾಯಿತು. ಮೂಗಿನಿಂದ ಶೀತ ಇಳಿಯಲು ಪ್ರಾರಂಭವಾಯಿತು. 

ರಾತ್ರಿ ಎಲ್ಲಾ ತುಂಬಾ ಜ್ವರ ಬಂತು. ಅಮ್ಮ ನನಗೆ ಕಷಾಯ, ಮಾತ್ರೆ ಎಲ್ಲಾ ಕೊಟ್ಟರು. ಮರುದಿನ ಶಾಲೆಗೆ ಹೋಗಬೇಕಲ್ಲ ಎಂದು ನಾನು ಬೇಸರಗೊಂಡಿದ್ದೆ. ಆದರೆ ಪುಣ್ಯಕ್ಕೆ ಜಿಲ್ಲಾಧಿಕಾರಿಯವರು ಒಂದು ರಜೆ ಘೋಷಣೆ ಮಾಡಿದ್ದರು. ಹಾಗಾಗಿ ನನ್ನ ಜ್ವರಕ್ಕೂ ಮತ್ತು ಸುಸ್ತಾಗಿದ್ದಕ್ಕೂ ನನಗೆ ಸ್ವಲ್ಪ ಆರಾಮ ಸಿಕ್ಕಿತು. 
............................. ದಿಯಾ ಉದಯ್ ಡಿ ಯು 
8ನೇ ತರಗತಿ 
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ 
ಮುಲ್ಕಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************
           


ಮಳೆ ಬಂದಾಗ ನನ್ನಶಾಲೆಗೆ ರಜೆ ಸಿಗಬಹುದು ಎಂದು ಅನಿಸಿತು. ಬೆಳಗ್ಗೆ ಎದ್ದು ಅಮ್ಮನ ಮೊಬೈಲ್ ನೋಡಿದಾಗ ರಜೆ ಸಿಕ್ಕಿದೆ ಎಂದು ತಿಳಿಯುತು. ಆಗ ನನಗೆ ತುಂಬಾ ಖುಷಿಯಾಯಿತು. ನಾನು ಮಳೆ ಬರುವುದನ್ನು ನೋಡಿಕೊಂಡು ತಿಂಡಿ ತಿಂದೆನು. ಹೊರಗಡೆ ನೀರಿನಲ್ಲಿ ಆಟವಾಡಲು ಹೋದೆನು. ಆಗ ನನ್ನ ಅಮ್ಮ ಬೈದು, "ನಿನಗೆ ಏಕೆ ಶಾಲೆಗೆ ರಜೆ ಕೊಟ್ಟರು. ಆಟ ಆಡಲು ರಜೆ ಕೊಟ್ಟದ್ದಲ್ಲ ನಿನ್ನ ಹೋಂವರ್ಕ್ ಮಾಡು." ಎಂದು ಅಮ್ಮ ಬೈದರು. ಅವಾಗ ನಾನು ಟ್ಯೂಷನ್ ನಲ್ಲಿ ಹೋಮ್ ವರ್ಕ್ ಮಾಡಿದ್ದೇನೆ ಎಂದು ಹೇಳಿದೆ. ಅವಾಗ ಪುಸ್ತಕ ತೆಗೆದು ಓದು ಎಂದು ಅಮ್ಮ ಬೈದರು. ಆಗ ಸ್ವಲ್ಪ ಹೊತ್ತು ಟಿವಿ ನೋಡಿ ಮತ್ತೆ ಪುಸ್ತಕ ತೆಗೆದು ಓದುತ್ತೇನೆ ಎಂದೆನು. ಅದಕ್ಕೆ ಅಮ್ಮ ಮೊದಲು ಬರೆ ಎಂದರು. ಬರೆದಾದ ಮೇಲೆ ಟಿವಿ ನೋಡಬಹುದು ಎಂದು ಟಿವಿ ನೋಡಲು ಹೋದಾಗ ಕರೆಂಟೇ ಇರಲಿಲ್ಲ. ಮತ್ತೆ ಜೋರಾಗಿ ಮಳೆ ಸುರಿಯಿತು. ಮತ್ತೆ ಅದೇ ಪುಸ್ತಕ ತೆಗೆದು ನೋಡಿದೆ. ಅವಾಗ ನನಗೆ ಅನಿಸಿತು ಶಾಲೆಗೆ ಹೋಗಿದ್ದರೆ ಎಲ್ಲರ ಜೊತೆ ಕುಳಿತು ಪಾಠ ಕೇಳಬಹುದಿತ್ತು. ಮತ್ತೆ ಮಳೆ ಜೋರಾಗಿ ಬಂತು ಆವಾಗ ಅಮ್ಮನ ಮೊಬೈಲ್ ನೋಡಿದಾಗ ಅಮ್ಮ ನನಗೆ ಎರಡು ಪೆಟ್ಟು ಕೊಟ್ಟರು. ಮತ್ತೆ ನಾನು ಸ್ವಲ್ಪ ಹೊತ್ತು ಮಲಗಿದೆ. 
..................................... ಚಿರಂತನ್ ಜೆ. ವಿ 
5ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


                

ನಾನು ಮಳೆಗಾಲವನ್ನು ತುಂಬಾ ಸಂತೋಷದಿಂದ ಕಳೆದೆನು. ಆದರೆ ನನಗೆ ಶಾಲೆ ರಜೆ ಕೊಟ್ಟಾಗ ತುಂಬಾ ಬೇಸರವಾಯಿತು. ಏಕೆಂದರೆ ನನ್ನ ಸ್ನೇಹಿತರೊಂದಿಗೆ ಆಡಲು ಆಗಲಿಲ್ಲ ಮತ್ತು ನನ್ನ ಶಿಕ್ಷಕರೊಂದಿಗೆ ಕಾಲ ಕಳೆಯಲು ಆಗಲಿಲ್ಲ ಎಂದು. ಜೋರು ಮಳೆಗಾಗಿ ರಜೆಯನ್ನು ಕೊಟ್ಟಿದ್ದಾಗ ನಾನು ಡ್ಯಾನ್ಸ್ ಇನ್ನಿತರ ಚಟುವಟಿಕೆಗಳನ್ನು ಮಾಡಿದ್ದೇನೆ. ನಾನು ತುಂಬಾ ಕಥೆಯ ಪುಸ್ತಕಗಳನ್ನು ಓದಿದ್ದೇನೆ. ಎಸ್ ಎ ಒನ್ ಪರೀಕ್ಷೆಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ ನಾನು ದೊಡ್ಡವಳಾದ ಮೇಲೆ ವೈದ್ಯಕೀಯ ಹುದ್ದೆಯನ್ನು ಮಾಡಬೇಕೆಂಬುದು ನನ್ನ ಆಸೆ. ಆದರೆ ತುಂಬಾ ಮಳೆ ಇದ್ದಾಗ ನಾನು ಹೊರಗೆ ಹೋಗಲೇ ಇಲ್ಲ. ಒಳಾಂಗಣ ಆಟಗಳನ್ನು ಆಡಿದ್ದೇನೆ. ನನ್ನ ತಮ್ಮ ಹೊರಗೆ ಹೋಗಿ ಜಾರಿ ಬಿದ್ದುಬಿಟ್ಟ. ನಾನು ಮಾತ್ರ ಹೊರಗೆ ಆಡಲು ಹೋಗಲೇ ಇಲ್ಲ. ನಾನು ರಜೆಯನ್ನು ಮತ್ತು ಮಳೆಗಾಲವನ್ನು ತುಂಬಾ ಸಂತೋಷದಿಂದ ಕಳೆದೆನು. ಆದರೆ ನನಗೆ ರಜೆ ಕೊಟ್ಟಿದ್ದಕ್ಕೆ ಒಂದು ಸ್ವಲ್ಪ ಬೇಜಾರಾಯಿತು. ಪರವಾಗಿಲ್ಲ ನಾನು ರಜೆ ಸಿಕ್ಕಿದಾಗ ಬೇರೆ ಬೇರೆ ವಿಷಯಗಳನ್ನು ತಿಳಿದಿದ್ದೇನೆ... ಧನ್ಯವಾದಗಳು 
.................................... ಚೈತನ್ಯ ಮಣಿಕಂಠ ಸಿದ್ದಿ
8ನೇ ತರಗತಿ
ಮಾರಿಕಾಂಬಾ ಫ್ರೌಢ ಶಾಲೆ
ಶಿರಸಿ, ಉತ್ತರ ಕನ್ನಡ ಜಿಲ್ಲೆ
******************************************
          


ಮಳೆಗಾಲದ ಪಜೀತಿ

ಮಳೆಗಾಲ ಪ್ರಭಾವದಿಂದಾಗಿ ನಮ್ಮ ಮನೆ ಟಿವಿ ಹಾಳಾಗಿತ್ತು. ಬೇಸರವನ್ನು ಕಳೆಯಲು ನಮ್ಮ ಅಂಗಡಿಗೆ ಹೋಗಲು ಹೊರಟೆ, ತಂದೆಯ ಸ್ಕೂಟಿಯಲ್ಲಿ ಹೋಗುತ್ತಿರುವಾಗ ಜೋರಾಗಿ ಮಳೆ ಸುರಿಯುತ್ತಿತ್ತು. ಸ್ಲಿಪ್ಪರ್ ಒದ್ದೆ ಆಗಿತ್ತು. ಅಂಗಡಿಯ ಬಳಿ ಸ್ಕೂಟಿ ಇಂದ ಇಳಿಯುವಾಗ, ಸ್ಲಿಪ್ಪರ್ ಜಾರಿ ಜರ್ರನೆ ಜಾರಿ ಬಿದ್ದೆ. ಪಕ್ಕದ ಅಂಗಡಿಯವರು ನನ್ನನ್ನು ನೋಡಿ ನಕ್ಕರು. ನಾನು ನಾಚಿಕೆಯಿಂದ ಒಳಗೆ ಓಡಿದೆ. ಮಳೆ ತಂದ ಪಜೀತಿ ಇದು.
.......................... ಅಭಿನವ್ ಎನ್ ಸಂಪೆಕಟ್ಟೆ
8ನೇ ತರಗತಿ
ಪ್ರಜ್ಞಾ ಭಾರತಿ ವಿದ್ಯಾ ಕೇಂದ್ರ ನಿಟ್ಟೂರು
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
******************************************
      



ನನ್ನ ಹೆಸರು ಚರಿಷ್ಮಾ ನಾನು 7ನೇ ತರಗತಿ ವಿಭಾಗದಲ್ಲಿ ಓದುತ್ತಿದ್ದೇನೆ... 

ರಾತ್ರಿ ತುಂಬಾ ಮಳೆ ಇತ್ತು. ಆವಾಗ ನಾನು ಮನಸ್ಸಿನಲ್ಲಿ ಎನಿಸಿದೆ ನಾಳೆ ಶಾಲೆಗೆ ರಜೆ ಇರಬಹುದು ಎಂದು. ರಜೆ ಇದ್ದಾಗ ನನಗೆ ನನ್ನ ಶಾಲೆಯ ನೆನಪಾಗುತ್ತಿತ್ತು. ನಮ್ಮ ಮನೆಯಲ್ಲಿ ಟಿವಿ ನೋಡಲು ಅಪ್ಪ ಅಮ್ಮ ಬಿಡುತ್ತಿರಲಿಲ್ಲ. ಶಾಲೆ ಇರುತ್ತಿದ್ದರೆ ಎಲ್ಲರ ಜೊತೆ ಇರುತ್ತಿದ್ದೆ ಎಂದು ಎನಿಸಿತು. ಕ್ಲಾಸ್ ಟೀಚರ್ ಅನ್ನು ನೆನಪಾಯಿತು. ಇನ್ನು ನನ್ನ ಪಾಠ ತುಂಬಾ ಬಾಕಿ ಇದೆ. ಇನ್ನು ಶನಿವಾರ ಕೂಡಾ ಫುಲ್ ಡೇ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಮಳೆಯ ರಜೆಯ ಖುಷಿಯ ಜೊತೆ ಬೇಸರವೂ ಆಗುತ್ತದೆ.
........................................... ಚರಿಷ್ಮ ವಿ 
7ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
       


         
       
ನನ್ನ ನೆಚ್ಚಿನ ಋತು ಮಳೆಗಾಲ. ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿದಾಗ ಮಳೆ ಬರುತ್ತದೆ ಎಂದು ತಿಳಿದು ನಾನು ತುಂಬಾ ಖುಷಿಪಡುತ್ತೇನೆ.

ಮಳೆಗಾಲದಲ್ಲಿ ನನಗೆ ಅತ್ಯಂತ ಇಷ್ಟವಾಗುವ ವಿಷಯವೆಂದರೆ, ಕಿಟಕಿಯ ಮೇಲೆ ಬೀಳುವ ‘ಟಪ್-ಟಪ್’ ಮಳೆ ಹನಿಗಳ ಶಬ್ದ. ಮಳೆಬಂದಾಗ ಹೊರಗಿನ ಪ್ರಕೃತಿಯು ಹಸಿರಿನಿಂದ ರಂಗೇರುತ್ತದೆ. ಮೊದಲ ಮಳೆಯು ನೆಲದ ಮೇಲೆ ಬಿದ್ದಾಗ ಆ ಮಣ್ಣಿನ ಸುವಾಸನೆ ನನಗೆ ತುಂಬಾ ಇಷ್ಟ.

ಶಾಲೆಯಿಂದ ಮನೆಗೆ ಹಿಂತಿರುಗುವಾಗ ಸ್ನೇಹಿತರೊಂದಿಗೆ ಮಳೆಯಲ್ಲಿ ನೆನೆಯುತ್ತಾ ಬಂದ ಮೇಲೆ, ನಾನು ಮತ್ತು ನನ್ನ ಗೆಳೆಯರು ಬಣ್ಣ ಬಣ್ಣದ ಕಾಗದದ ದೋಣಿಗಳನ್ನು ಮಾಡಿ, ನೀರಿನಲ್ಲಿ ದೋಣಿಯಂತೆ ತೇಲಿ ಬಿಡುತ್ತೇವೆ. ಆ ದೋಣಿಗಳು ನೀರಿನಲ್ಲಿ ತೇಲುತ್ತಾ ಹೋಗುವುದನ್ನು ನೋಡುವುದೇ ಒಂದು ಆನಂದ. 

ಕೆಲವೊಮ್ಮೆ ಅಧಿಕವಾಗಿ ಮಳೆ ಬಂದಾಗ ಶಾಲೆಗೆ ರಜೆ ಸಿಗುತ್ತದೆ. ಆ ಸಮಯದಲ್ಲಿ ಮನೆಯಲ್ಲಿದ್ದು ಕಥೆ ಪುಸ್ತಕ ಓದಲು ಮತ್ತು ಚಿತ್ರ ಬಿಡಿಸಲು ನನಗೆ ಸಮಯ ಸಿಗುತ್ತದೆ. ಅದು ನನಗೆ ತುಂಬಾ ಸಂತೋಷ ನೀಡುತ್ತದೆ.
................................................. ಮನ್ವಿತ್
10ನೇ ತರಗತಿ
ಸಿ ಎಸ್ ಐ ಇಂಗ್ಲಿಷ್ ಮೀಡಿಯಂ ಸ್ಕೂಲ್
ಕಾರ್ನಾಡ್, ಮುಲ್ಕಿ, ದಕ್ಷಿಣ ಕನ್ನಡ ಜಿಲ್ಲೆ
******************************************
        

           

ಮೊನ್ನೆ FA -1 ಪರೀಕ್ಷೆ ಇತ್ತು. ಮರು ದಿನಾನು ಪರೀಕ್ಷೆ ಇತ್ತು. ಅಂದು ಜೋರು ಮಳೆ ಇದ್ದಾಗ ಮೊಬೈಲ್ ಅಲ್ಲಿ "ಭಾರಿ ಮಳೆಯಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ" ಎಂಬ ಸುದ್ದಿ ಬಂದ ತಕ್ಷಣ ನನಗೆ ತುಂಬಾ ಸಂತೋಷ. ಆದಿನ ಬೆಳಿಗ್ಗೆ ಏಳುವಾಗ ತುಂಬಾ ತಡ ಆಯಿತು. ಮತ್ತೆ ಪುನಃ ಎರಡು ದಿನ ರಜೆ ಸಿಕ್ಕಿತು. ಪರೀಕ್ಷೆಗೆ ಓದಲು ತುಂಬಾ ಸಮಯ ಸಿಕ್ಕಿದ ಹಾಗಾಯಿತು. ಆ ಮಳೆ ರಜೆ ನನಗೆ ತುಂಬಾ ಅನುಕೂಲ ಆಯ್ತು.
.................................................. ಅನಿಶಾ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
     

              

ಮಳೆಗಾಗಿ ಸತತ ರಜೆಗಳು ಸಿಕ್ಕಾಗ ನಾವು ತುಂಬಾ ಖುಷಿಪಟ್ಟೆವು. ಆದರೆ ರಜೆ ಸಿಕ್ಕಾಗ ಮಳೆ ಬರಲಿಲ್ಲ, ರಜೆ ಇಲ್ಲದಾಗ ಮಾತ್ರ ಮಳೆ ಜೋರಾಗಿ ಬಂತು. ಮಳೆ ಬರುವುದರಿಂದ ನಮ್ಮ ಕೃಷಿಗೆ ತುಂಬಾ ಅನುಕೂಲ. ಆದರೆ ಈ ಸಲದ ಜೋರಾದ ಮಳೆ ಮತ್ತು ಪ್ರವಾಹದಿಂದ ಕೆಲವರ ಕುಟುಂಬದವರು, ಮನೆಗಳು ಮತ್ತು ಬೆಳೆಗಳು ನಷ್ಟವಾದದ್ದು ತುಂಬಾ ಬೇಸರವಾಯಿತು.
........................................... ಪೂರ್ವಿಕ್ ಜೆ ಕೆ 
8ನೇ ತರಗತಿ
ಪಿ.ಎಂ. ಶ್ರೀ ಪ್ರೌಢಶಾಲೆ (ಆರ್.ಎಂ.ಎಸ್.ಎ) ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
      


              
ನಿರಂತರವಾಗಿ ಸುರಿಯುವ ಭಾರೀ ಮಳೆಯಿಂದಾಗಿ ಉಂಟಾಗುವ ನೆರೆ, ಗುಡ್ಡಕುಸಿತ , ರಸ್ತೆಹಾನಿ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಸುದ್ದಿ ತಿಳಿದಾಗ ತುಂಬಾ ಬೇಸರ ಆಯ್ತು. ಪ್ರಕೃತಿಯ ಈ ಸೌಂದರ್ಯವನ್ನು ಆಸ್ವಾದಿಸಲು ಮಳೆಗಾಲಕ್ಕಿಂತ ಅತ್ಯುತ್ತಮ ಸಮಯ ಬೇರೊಂದಿಲ್ಲ. 
........................................... ಫಾತಿಮಾ ತನ್ವೀರ
5ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಕ್ಕಿಲಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


     

Ads on article

Advertise in articles 1

advertising articles 2

Advertise under the article