-->
ಪ್ರೀತಿಯ ಪುಸ್ತಕ : ಸಂಚಿಕೆ - 217

ಪ್ರೀತಿಯ ಪುಸ್ತಕ : ಸಂಚಿಕೆ - 217

ಪ್ರೀತಿಯ ಪುಸ್ತಕ
ಸಂಚಿಕೆ - 217
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                  
                              ಕುಕ್ಕರ್ ಕುಮಾರ 
ಪ್ರೀತಿಯ ಮಕ್ಕಳೇ... ಕುಕ್ಕರ್ ಕುಮಾರ ಹೆಸರು ಹೇಗಿದೆ? ಈ ಹೆಸರು ಕೇಳುವಾಗ ನಿಮಗೆ ಇದರಲ್ಲಿ ಏನಿರಬಹುದು ಅನಿಸುತ್ತದೆ? ಇದು ಶಿವಾಂಶು ಎಂಬ ಪುಟ್ಟ ಹುಡುಗನ ಕತೆ. ಅವನಿಗೆ ಕುಕ್ಕರ್ ಅಂದರೆ ತುಂಬಾ ತುಂಬಾ ಇಷ್ಟ. ಅದೇ ಅವನ ಆಟಿಕೆ. ಕುಕ್ಕರ್ ಅಂದರೆ ಆಟದ ಕುಕ್ಕರ್ ಅಲ್ಲ, ಮನೆಯಲ್ಲಿ ಅಡುಗೆ ಮಾಡುತ್ತಾರಲ್ಲಾ ಅದೇ ದೊಡ್ಡ ದೊಡ್ಡ ಕುಕ್ಕರ್. ಅವನಿಗೆ ಅದು ಹೇಗೆ ಇಷ್ಟ ಆಯಿತು? ಏನೇನು ಮಾಡುತ್ತಿದ್ದ? ಅವನು ಕುಕ್ಕರ್ ಜೊತೆ ಆಡುವಾಗ ಬೇರೆಯವರು ಏನು ಹೇಳುತ್ತಿದ್ದರು? – ಎಲ್ಲದಕ್ಕೂ ಉತ್ತರ ಪುಸ್ತಕದಲ್ಲಿ ಇದೆ. ಈ ಪುಸ್ತಕ ದ್ವಿಭಾಷೆಯಲ್ಲಿ ಇದೆ – ಕನ್ನಡ ಮತ್ತು ಇಂಗ್ಲಿಷ್. ನಿಮಗೂ ನಿಮ್ಮದೇ ಮೆಚ್ಚಿನ ಆಟಿಕೆ ಇರಬಹುದಲ್ಲವೇ? ಅದರ ಬಗ್ಗೆ ಒಂದು ಕತೆ ಬರೆಯಿರಿ.

ನಿರೂಪಕರು : ವಾಣಿ ಪೆರಿಯೋಡಿ 
ಚಿತ್ರಗಳು: ಗುಜ್ಜಾರ್ 
ಪ್ರಕಾಶಕರು: ಹಿತಾ ರಿಸೋರ್ಸ್ ಯುನಿಟ್ 

ಇದು ಮೂರನೇ ತರಗತಿಯ ಮಕ್ಕಳು ಓದಬಹುದಾದ ಪುಸ್ತಕ. ಚಿಕ್ಕ ಮಕ್ಕಳೂ ದೊಡ್ಡವರ ಸಹಾಯದಲ್ಲಿ ಓದಬಹುದು. 
ಬೆಲೆ: ರೂ.100/- 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 7090801340
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************


Ads on article

Advertise in articles 1

advertising articles 2

Advertise under the article