-->
ಮಕ್ಕಳ ಕವನಗಳು : ಸಂಚಿಕೆ - 66 : ಕವನ ರಚನೆ : ದಿವ್ಯ ಜ್ಯೋತಿ ಶೆಟ್ಟಿ, 10 ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 66 : ಕವನ ರಚನೆ : ದಿವ್ಯ ಜ್ಯೋತಿ ಶೆಟ್ಟಿ, 10 ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 66
ಕವನ ರಚನೆ : ದಿವ್ಯ ಜ್ಯೋತಿ ಶೆಟ್ಟಿ
10 ನೇ ತರಗತಿ
ಕ್ರೈಸ್ಟ್ ಸ್ಕೂಲ್ ಮಣಿಪಾಲ 
ಉಡುಪಿ ಜಿಲ್ಲೆ



ಪ್ರತಿ ವರ್ಷ ಬೇಸಿಗೆ ಬಂದಾಗ ಆಗುವ ಚಿಂತೆ
ಈ ವರ್ಷ ಯೋಚನೆಗಿಂತ ಮಿಗಿಲಾಗಿದೆ !

ಆಚೆ ಹೋಗಲು ಭಯಪಟ್ಟು
ಫ್ಯಾನ್ ಅಡಿಯಲ್ಲಿ ಕುಳಿತು 
ಯೋಚಿಸುವಂತೆ ಆಗಿದೆ !

ಸಂಜೆ ಹೊತ್ತಿಗೆ ಬರುವ ಒಂದು ಕ್ಷಣ ಮೋಡವು  
ಮನದಲ್ಲಿ ಮಳೆ ಸುರಿಯಲಿ ಎಂಬ ನಿರೀಕ್ಷೆ ಮೂಡುತ್ತದೆ !

ಗಿಡಮರಗಳು ಬಿಸಿಲಿಗೆ ಬರಡಾಗಿ ಎಲೆ ಉದುರಿವೆ 
ಆದರೂ ಬೇರುಗಳು ಮಳೆಯ ಹಂಬಲದಲ್ಲಿದೆ !

"ಯಾವಾಗ ಮುಗಿಯುತ್ತದೆ ಈ ಬೇಸಿಗೆ ?" 
ಎಂದು ಹೇಳುವ ಮುನ್ನ ,
ಬೇಸಿಗೆ ಶಿಕ್ಷೆಯಲ್ಲ ಪ್ರಕೃತಿಯ ನಿಯಮ
ಇದನ್ನು ಸಹಿಸಲೇಬೇಕು ಪ್ರತಿ ವರ್ಷ !!
....................................... ದಿವ್ಯ ಜ್ಯೋತಿ ಶೆಟ್ಟಿ
10 ನೇ ತರಗತಿ
ಕ್ರೈಸ್ಟ್ ಸ್ಕೂಲ್ ಮಣಿಪಾಲ 
ಉಡುಪಿ ಜಿಲ್ಲೆ
*****************************************



ಜೀವನ ಇರುವುದು ಜೀವಿಸುವುದಕ್ಕೆ
ಅದನ್ನು ಜೀವಿಸಲು ಧೈರ್ಯ ಬೇಕಷ್ಟೆ!

ಜೀವನವೇ ತುಂಬಿದೆ ಸುಖ ದುಃಖದಿಂದ
ಅದನ್ನು ಕಲಿಯಬೇಕು ನಾವು ಆಟ ಪಾಠದಿಂದ !

ಜೀವನದಲ್ಲಿ ನಿರ್ಲಕ್ಷ್ಯ ಮಾಡುವವರ 
ಸ್ನೇಹ ಮಾಡದಿರಿ
ಕಾಳಜಿ ಮಾಡುವವರ ಸ್ನೇಹ ಮರೆಯದಿರಿ !

ಜೀವನವೇ ಒಂದು ಪ್ರಶ್ನೆ 
ಬದುಕಿ ತೋರಿಸುವುದೇ ಉತ್ತರ !

ಇದೇ ಜೀವನ 
ಇದೇ ನನ್ನ ಪುಟ್ಟ ಕವನ !!
....................................... ದಿವ್ಯ ಜ್ಯೋತಿ ಶೆಟ್ಟಿ
10 ನೇ ತರಗತಿ
ಕ್ರೈಸ್ಟ್ ಸ್ಕೂಲ್ ಮಣಿಪಾಲ 
ಉಡುಪಿ ಜಿಲ್ಲೆ
*****************************************


Ads on article

Advertise in articles 1

advertising articles 2

Advertise under the article