-->
ನನ್ನ ಶಾಲೆ - ಕವನ

ನನ್ನ ಶಾಲೆ - ಕವನ


ನಿಭಾ 8ನೇ ತರಗತಿ
ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆ ನೇರಳಕಟ್ಟೆ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

ನನ್ನ ಶಾಲೆ - ಕವನ

ನಮ್ಮೂರ ನೇರಳಕಟ್ಟೆ ಶಾಲೆ
ನಾಲ್ಕು ಕಟ್ಟಡದ ಮುದ್ದಿನ ಶಾಲೆ
ನಾವು ಕಲಿಯುವ ಚಂದದ ಶಾಲೆ
ಆಡಿನಲಿಯುವ ಸಂತಸ ಶಾಲೆ

ಚಿತ್ರದ ಗೋಡೆ ತುಂಬಿದೆ ಶಾಲೆ
ತರ-ತರದ ಹೂ - ಗಿಡಗಳಿರುವ ಶಾಲೆ
ತರಕಾರಿ ಬೆಳೆಯುವ ಪರಿಸರ ಶಾಲೆ
ನೂರು ವರ್ಷಗಳನ್ನು ಪೂರೈಸಿದ ಶಾಲೆ
ಚಂದದ ನಮ್ಮಯ ಶಾಲೆ....!

ಎಲ್ಲರ ಪ್ರೀತಿಯ ಸ್ನೇಹಿತ ಶಾಲೆ
ಪ್ರೀತಿಯ ಶಿಕ್ಷಕರ ಹೊಂದಿದೆ ಶಾಲೆ
ಸುತ್ತಲು ಹಸಿರು ಹರಡಿದ ಶಾಲೆ
ಸುಂದರ ಶಾಲೆ - ನಮ್ಮಯ ಶಾಲೆ
ಮಿನುಗುತಿದೆ ನಮ್ಮ ನೇರಳಕಟ್ಟೆ ಶಾಲೆ.

...................................ನಿಭಾ 8ನೇ ತರಗತಿ
ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆ ನೇರಳಕಟ್ಟೆ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

Ads on article

Advertise in articles 1

advertising articles 2

Advertise under the article