-->
ಪ್ರೀತಿಯ ಪುಸ್ತಕ : ಸಂಚಿಕೆ - 212

ಪ್ರೀತಿಯ ಪುಸ್ತಕ : ಸಂಚಿಕೆ - 212

ಪ್ರೀತಿಯ ಪುಸ್ತಕ
ಸಂಚಿಕೆ - 212
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                         ಹಾರು-ಬೀಳು ಕವನಗಳು
ಪ್ರೀತಿಯ ಮಕ್ಕಳೇ... ಇದೊಂದು ಹಳೇ ಮಕ್ಕಳ ಪದ್ಯ. ತಿರುಮಲಮ್ಮ ನವರು ಮಕ್ಕಳಿಗೆ ಸುಲಭವಾಗಿ ಕಲಿಯಲು ಆಗುವಂತೆ ಅನೇಕ ಸರಳ ಪದ್ಯಗಳನ್ನು ಬರೆದಿದ್ದಾರೆ. ಆ ಕಾಲದ ಪದ್ಯ ಈ ಕಾಲಕ್ಕೂ ಖುಶಿ ಕೊಡುವ ಹಾಗೆ ಇದೆ. ಸರಳ ಗಣಿತ ಕಲಿಯುವ ಪದ್ಯ. ಅದಕ್ಕೆ ಪೂರಕವಾದ ಚಿತ್ರಗಳೂ ಇವೆ. ಪದ್ಯದ ರೀತಿಯಲ್ಲಿ ಹಕ್ಕಿಗಳನ್ನು ಒಂದರಿಂದ ಹತ್ತರವರೆಗೆ ಎಣಿಸುತ್ತಾ ಹೋಗುವುದು ಮತ್ತು ಹತ್ತರಿಂದ ಒಂದರವರೆಗೆ ಕಳೆಯುತ್ತಾ ಹೋಗುವುದು. ಚಿತ್ರ ನೋಡುತ್ತಾ ಕೂಡಾ ಕೂಡಿಸುವುದು ಕಳೆಯುವುದು ಮಾಡಬಹುದು. ಖುಶಿಯಿಂದ ಲೆಕ್ಕ ಕಲಿಯಲು ಇದು ಒಂದು ಚಂದದ ಅವಕಾಶ. 

“ಒಂದು ಪುಟ್ಟ ಗುಬ್ಬಿ ಬಾಗಿಲ ಮೇಲೆ ಕುಳಿತಿತು,
ಮತ್ತೆ ಒಂದು ಗುಬ್ಬಿ ಅದರ ಕೂಡ ಸೇರಿತು..
ಒಂದು ಒಂದು ಸೇರಿ ಎರಡು ಗುಬ್ಬಿ ಆಯಿತು..”

ಲೇಖಕರು : ಬಿ.ಕೆ ತಿರುಮಲಮ್ಮ
ಚಿತ್ರಗಳು: ಆದ್ರಿಜ ಘೋಷ್ 
ಪ್ರಕಾಶಕರು: ಪ್ರಥಮ್ ಬುಕ್ಸ್ 
ಬೆಲೆ: ರೂ.75/- 

ಇದು 4-5 ತರಗತಿಯ ಮಕ್ಕಳು ಓದುವಂತಿದೆ. ಇತರ ಚಿಕ್ಕ ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು. 

ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಪ್ರಥಮ್ ಬುಕ್ಸ್ 080 – 42052574/41159009; www.prathambooks.org; www.storyweaver.org.in. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 



Ads on article

Advertise in articles 1

advertising articles 2

Advertise under the article