-->
ಮಕ್ಕಳ ಕವನಗಳು : ಸಂಚಿಕೆ - 65 : ಕವನ ರಚನೆ : ತ್ರಿಶಾ ವಿ. ಜಿ, 8ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 65 : ಕವನ ರಚನೆ : ತ್ರಿಶಾ ವಿ. ಜಿ, 8ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 65
ಕವನ ರಚನೆ : ತ್ರಿಶಾ ವಿ. ಜಿ 
8ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು 
ನೂಜಿಬಾಳ್ತಿಲ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ



ಬಲು ಚೆಲುವಿದೆ ನನ್ನಿ ಬಾಲ್ಯ
ಮರೆಯಲಾಗದ ನನ್ನಿ ಬಾಲ್ಯ
ಜೊತೆ ಸೇರಿ ತಿಂದ ಬೀಟ್ರೂಟ್ ಪಲ್ಯ 
ರಜೆಗೆ ಹೋಗುತ್ತಿದ್ದೆ ಅಜ್ಜಿ ಮನೆ ಸುಳ್ಯ

ಬಾಲ್ಯದಲ್ಲಿ ಅಪ್ಪ ಕೊಟ್ಟ ಪೆಟ್ಟು 
ಮರೆಯಲಾಗದ ಎರಡು ಜುಟ್ಟು
ಅಮ್ಮ ಕೊಟ್ಟ ಕೈ ತುತ್ತು 
ಮರೆಯಲಾಗದು ಶಿಕ್ಷಕರು ಕಲಿಸಿದ ಶಿಸ್ತು 

ಇಷ್ಟ ಪಡುತ್ತಿದ್ದ ಬೆಲ್ಲ ಕ್ಯಾಂಡಿ 
ಆಡುತ್ತಿದ್ದ ಚುಕು ಬುಕು ರೈಲು ಬಂಡಿ 
ಮೊದಲಿಗೆ‌ ಆಡಿದ ತೊದಲು ನುಡಿ
ಮೊದಲಿಗೆ ಕಲಿತ ಎ ಬಿ ಸಿ ಡಿ 

ಕೇಳುತ್ತಿದ್ದೆವು ಅಜ್ಜಿ ಪುರಾಣ 
ಇದೇ ನಮ್ಮ ಬಾಳಿಗೆ ಆಶಾ ಕಿರಣ 
ಮತ್ತೇ ಸಿಗದು ಈ ಕ್ಷಣ 
ಆದರೂ ಮತ್ತೆ ಮತ್ತೆ ನೆನೆಯೋಣ....
............................................. ತ್ರಿಶಾ ವಿ. ಜಿ 
8ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************




ಬಾನಿನಲ್ಲಿ ಮೂಡಿ ಬಂದ 
ಹುಣ್ಣಿಮೆ ಚಂದ್ರ 
ಅದನ್ನು ನೋಡಿ ಖುಷಿಯಾದನು 
ನಮ್ಮ ಮನೆಯ ಕಂದ 

ಕತ್ತಲೆಯನ್ನು ಓಡಿಸಿದ ಚಂದಿರ 
ನೋಡಲು ಬಲು ಸುಂದರ 
ಮನೆಯಲ್ಲಿ ಹಚ್ಚಲು ದೀಪ 
ಬೆರಗು ಮೂಡಿಸುವಂತೆ ಇತ್ತು 
ಚಂದಿರನ ರೂಪ 

ನೋಡಿದೆ ಅಮ್ಮ ಮಾಡಿದ ದೋಸೆ 
ಹೆಚ್ಚಾಯಿತು ಚಂದಿರನನ್ನು ಮುಟ್ಟುವ ಆಸೆ 
ಅಲ್ಲಿಗೆ ಯಾವಾಗಲಾದರು 
ಹೋಗುತ್ತೇನೆಂಬ ಭರವಸೆ 

ಡ್ರಮ್ನಲ್ಲಿತ್ತು ನೀರು ತುಂಬ 
ಇಣುಕಿ ನೋಡಿದರೆ ಚಂದಿರನ ಪ್ರತಿಬಿಂಬ 
ಊಟ ಮಾಡಿದೆವು ಜೊತೆ ಸೇರಿ 
ಕನಸಿನಲ್ಲಿ ಬಂದು ದೊಡ್ಡ ಹೋರಿ 

ಎದ್ದೆವು ಬೇಗ ಬೆಳಿಗ್ಗೆ 
ತಿಂಡಿ ತಿಂದು ಹೊರಟೆನು ಶಾಲೆಗೆ 
ತಲೆಗೆ ಮುಡಿಸಿಕೊಂಡೆ‌ ಪರಿಮಳದ ಸಂಪಿಗೆ 
ತಲುಪಿದೆ ಬೇಗನೇ ಶಾಲೆಗೆ..
............................................. ತ್ರಿಶಾ ವಿ. ಜಿ 
8ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************




ಸೂರ್ಯ ಚಂದ್ರರಂತೆ ನೀವಿಬ್ಬರೂ 
ನನ್ನ ಪಾಲಿಗೆ ನೀವೇ ದೇವರು

ಅಪ್ಪನಿಂದ ಪಡೆದ ಗತ್ತು
ಅಮ್ಮ ಕೊಟ್ಟ ಕೈ ತುತ್ತು 
ನೀವಿಬ್ಬರೂ ನನ್ನ ಸಂಪತ್ತು

ತೀರಿಸಲಾಗದು ನಿಮ್ಮ ಋಣ
ನೀವಿಬ್ಬರು ನನ್ನ ಮನ 

ಹಗಲು ರಾತ್ರಿ ಕಷ್ಟ ಪಟ್ಟು 
ತಮ್ಮ ಕಷ್ಟಗಳನ್ನು ಬಚ್ಚಿಟ್ಟು
ನಮ್ಮ ಕನಸಿಗೆ ಕೊಟ್ಟು 

ನೀವು ದೊಡ್ಡ ತ್ಯಾಗಿ 
ನಿಲ್ಲುವೆ ನಾನು ತಲೆಬಾಗಿ
............................................. ತ್ರಿಶಾ ವಿ. ಜಿ 
8ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

 


ನನ್ನ‌ ನೆಚ್ಚಿನ ನಮ್ಮ ಮನೆ
ನಾನು ಆಡಿ ಬೆಳೆದ ಪುಟ್ಟ ಮನೆ

ಪೂರ್ವಭಾಗದಲ್ಲಿ ಉದಯಿಸುತ್ತಿರುವ ಸೂರ್ಯ 
ಶುರು ಮಾಡುವೆವು ಈಗ ಎಲ್ಲಾ ಕಾರ್ಯ 

ಅಟ್ಟದಲ್ಲಿ ಕೂಗಿ ಮನ ಸೆಳೆಯುತ್ತಿರುವ ಪಾರಿವಾಳ
ಮುಂಜಾನೆ ಅರಳಿ ಆಕರ್ಷಿಸುತ್ತಿರುವ ದಾಸವಾಳ

ಮನೆಯ ಮುಂಭಾಗದಲ್ಲಿ ದೇವಿ ತುಳಸಿ 
ಸದಾ ಕಾಪಾಡುವಳು ನಮ್ಮನ್ನು ಹರಸಿ

ಮನೆಯ ಸುತ್ತಮುತ್ತ ಅಡಿಕೆ ತೋಟ 
ಆದರೆ ಬಹಳ ಸೊಳ್ಳೆಗಳ ಕಾಟ 

ಬಲು ಚೆಲುವಿದೆ ನಮ್ಮ ಮನೆ ಕುಟುಂಬ 
ಪ್ರೀತಿಸುವೆನು ನಾನು ಹೃದಯ ತುಂಬಾ
............................................. ತ್ರಿಶಾ ವಿ. ಜಿ 
8ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************



Ads on article

Advertise in articles 1

advertising articles 2

Advertise under the article