-->
ಪ್ರೀತಿಯ ಪುಸ್ತಕ : ಸಂಚಿಕೆ - 210

ಪ್ರೀತಿಯ ಪುಸ್ತಕ : ಸಂಚಿಕೆ - 210

ಪ್ರೀತಿಯ ಪುಸ್ತಕ
ಸಂಚಿಕೆ - 210
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


       ಆಗುಂಬೆಯ ಅಜಯ್ ಮತ್ತು ಸಿಗ್ನಲ್ ಸರ್ಪ
ಪ್ರೀತಿಯ ಮಕ್ಕಳೇ.. ಈ ಪುಸ್ತಕದ ಪುಟ ತಿರುವುತ್ತಾ ಹೋಗಿ.. ಮಡಿಚಿದ ಪುಟ ತೆರೆಯಿರಿ.. ನಾಲ್ಕು ಪುಟಗಳಲ್ಲಿ ಉದ್ದಕ್ಕೂ ಚಾಚಿಕೊಂಡಿರುವ ಹಾವು ಕಾಣುತ್ತೀರಿ. ಚಿತ್ರಗಳನ್ನೇ ನೋಡುತ್ತಾ ಕೂರಬಹುದು. ಈ ಹಾವುಗಳು ಬಿದ್ದಿರುವುದು ಅಜಯ್ ಕಣ್ಣಿಗೆ. ಕಾಳಿಂಗ ಸರ್ಪವನ್ನು ಕಂಡುಹಿಡಿಯೋದೇ ಅಜಯ್ ಕೆಲಸ. ಅವನ ಕೈಯಲ್ಲಿ ಆಂಟೆನಾ ಇದೆ.. ಹಾವು ಹುಡುಕುವ ಸಾಧನ. ಅಪಾಯದ ಸೂಚನೆಗಳನ್ನೂ ಗುರುತಿಸಿಕೊಳ್ಳಬೇಕು, ಎಚ್ಚರವಹಿಸಬೇಕು. ನಡೆವ ದಾರಿಯಲ್ಲಿ ಓತಿ.. ಹಕ್ಕಿಗಳು.. ಸಿಗುತ್ತವೆ. ಅಷ್ಟರಲ್ಲಿ ಕಾಣುತ್ತದೆ ನಿದ್ರಿಸುತ್ತಿರುವ ಸಿಗ್ನಲ್ ಸರ್ಪ. ನಿದ್ರಿಸಿದ್ದರೂ ಅಗಲವಾಗಿ ಕಣ್ಣುಗಳು ತೆರೆದಿರುತ್ತವೆ. ಎಚ್ಚರವಾದಾಗ ತಿನ್ನಲು ಪ್ರಿಯವಾದ ಕೇರೆ ಹಾವು ಸಿಗುತ್ತದೆ.. ಅದರ ಎಲ್ಲಾ ಚಲನವಲನಗಳನ್ನು, ಪ್ರತಿ ಹೊರಳು, ಪ್ರತಿ ನೋಟವನ್ನು ತನ್ನ ಟಿಪ್ಪಣಿ ಪುಸ್ತಕದಲ್ಲಿ ದಾಖಲಿಸುತ್ತಾನೆ ಅಜಯ್.. ಹೀಗೇ ಸಾಗುತ್ತದೆ ಈ ಪುಸ್ತಕದ ಓದು. 

ಲೇಖಕರು : ಝೈ ವ್ಹಿಟೇಕರ್ 
ಚಿತ್ರಗಳು: ರಾಜೀವ್ ಐಪ್ 
ಅನುವಾದ: ಡಾ.ಕೆ ಪುಟ್ಟಸ್ವಾಮಿ
ಪ್ರಕಾಶಕರು: ಪ್ರಥಮ್ ಬುಕ್ಸ್ 

ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ ಇದೆ. ಚಿಕ್ಕವರೂ ದೊಡ್ಡವರೂ ಓದಬಹುದು. 
ಬೆಲೆ: ರೂ.95/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಪ್ರಥಮ್ ಬುಕ್ಸ್ 080 – 42052574/41159009; www.prathambooks.org; www.storyweaver.org.in. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 

Ads on article

Advertise in articles 1

advertising articles 2

Advertise under the article