-->
ಮಕ್ಕಳ ಕವನಗಳು : ಸಂಚಿಕೆ - 64 : ಕವನ ರಚನೆ : ಭಾಗ್ಯಲಕ್ಷ್ಮಿ, ಪ್ರಥಮ ಪಿ. ಯು. ಸಿ.

ಮಕ್ಕಳ ಕವನಗಳು : ಸಂಚಿಕೆ - 64 : ಕವನ ರಚನೆ : ಭಾಗ್ಯಲಕ್ಷ್ಮಿ, ಪ್ರಥಮ ಪಿ. ಯು. ಸಿ.

ಮಕ್ಕಳ ಕವನಗಳು : ಸಂಚಿಕೆ - 64
ಕವನ ರಚನೆ : ಭಾಗ್ಯಲಕ್ಷ್ಮಿ 
ಪ್ರಥಮ ಪಿ. ಯು. ಸಿ.
ಪದವಿಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

ಎಲ್ಲಾ ತಿಳಿದಿದ್ದರೂ 
ಸುಮ್ಮನಿರುವುದೇ ಉತ್ತಮ..
ಕರ್ಮ ಕಲಿಸುವ ಪಾಠದ ಮುಂದೆ 
ನಾವೆಲ್ಲರೂ ಸಮ..!
ಗೆದ್ದಾಗ ಋಣಿಯಾಗಿರು......
ಸೋತಾಗ ಮೌನಿಯಾಗಿರು....
ನಿಶ್ಶಬ್ದತೆಯ ಭಾವವೇ  
ಯಶಸ್ಸಿನ ಕೀಲಿ ಕೈ..
ಮೌನದ ಪರಿತ್ಯಾಗವೇ 
ಎಲ್ಲದಕ್ಕೂ ಜೈ....
............................................. ಭಾಗ್ಯಲಕ್ಷ್ಮಿ 
ಪ್ರಥಮ ಪಿ. ಯು. ಸಿ.
ಪದವಿಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಕಾನನದಿ ಹರಿಯುವ ಹೊಳೆಯಲ್ಲಿ 
ಮೂಡುತಿದೆ ರವಿಯ ಬಿಂಬ 
ಹಕ್ಕಿಗಳ ಚಿಲಿಪಿಲಿ ಕಲರವವೇ, 
ಮನುಜನ ನೈಜ ದಿನಚರಿಯ ಆರಂಭ.
ಗುಪ್ತವಾಗಿ ಕಾಣಸಿಗುವ ಕಮಲದಂತೆ, 
ಪ್ರಕೃತಿಯ ಸೊಬಗು 
ತಾಜಾ ಗಾಳಿಯ ಆಹ್ಲಾದಕರ ಭಾವನೆಯನ್ನು
ವರ್ಣಿಸಲಾಗದು ಯಾರಿಗೂ.
ಹಸಿರೆಲೆಗಳು ಸಂತೈಸುತ್ತಿವೆ 
ಮನುಜರ ಬೇಸರಕ್ಕಾಗಿ,
ನರ ಬೆಳೆಸುವನು ಕೈಗಾರಿಕೆಗಳನ್ನು 
ಹಣವೆಂಬ ಸರೋವರಕ್ಕಾಗಿ.
ಪ್ರಕೃತಿ ಮಾತೆ ಕಾಪಾಡುವಳು 
ಈ ಧರೆಯ ಸೊಗಡನ್ನು
ನಿಸರ್ಗವೇ ಮನುಕುಲದ 
ಸ್ವರ್ಗವೆಂದು ತಿಳಿದು 
ನಡೆಸೋಣ ಬಾಳನ್ನು..
............................................. ಭಾಗ್ಯಲಕ್ಷ್ಮಿ 
ಪ್ರಥಮ ಪಿ. ಯು. ಸಿ.
ಪದವಿಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಲೇಖನಿಯು ಬರೆಯಬಲ್ಲ ಸಾಧನ 
ಅಂತೆಯೇ, ಅಳಿಸಲಾಗದ ಅಕ್ಷರಗಳ ಬಂಧನ 
ಹಲವು ತೆರನಾಗಿ ಉಪಯೋಗಿಸುವ ಮಾನವ 
ಕ್ಷೀಣವಾಗುತ್ತಿರುವ ಲೇಖನಿಗಳ ಪ್ರಮಾಣ ನಿಜವಾ!? 
ಲೇಖನಿ ಹೇಳುವುದು..
ಖಡ್ಗಕ್ಕಿಂತ ಹರಿತವಾದ ವಸ್ತುವೆಂದು 
ವಿದ್ಯಾರ್ಥಿಗಳ ಪಾಲಿನ ಜ್ಞಾನದ, 
ಚಿಂತನೆಯ ಧಾತುವೆಂದು 
ನಕ್ಷತ್ರಗಳೇ ಇಲ್ಲದ ಆಕಾಶದಂತೆ!
ಪಕ್ಷಿಗಳ ಇಂಚರವಿಲ್ಲದ ಕಾನನದಂತೆ! 
ಲೇಖನಿ ಇಲ್ಲದ ಮಾನವ ಜೀವನ ನಶ್ವರ
ಪ್ರತಿ ಸಾಧನೆಯಲ್ಲೂ 
ಲೇಖನಿಯ ಪಾತ್ರ ಅಪಾರ..
............................................. ಭಾಗ್ಯಲಕ್ಷ್ಮಿ 
ಪ್ರಥಮ ಪಿ. ಯು. ಸಿ.
ಪದವಿಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಬಾಲ್ಯದ ನೆನಪು ಅವಿಸ್ಮರಣೀಯ, 
ಆದರಣೀಯ 
ಏನು ತಿಳಿಯದ ಮುಗ್ದತೆಯ ಪ್ರಾಯ.
ಗುರು ಹಿರಿಯರನ್ನು ಗೌರವಿಸಲು ತಿಳಿಸಿದ 
ಆ ಸಂಸ್ಕಾರ 
ಗೆಳೆಯರೊಂದಿಗೆ ಜಗಳವಾಡಿ 
ಅಳಿದ ತಿರಸ್ಕಾರ 
ಖುಷಿಯನ್ನೇ ಮೆರೆದ ಆ ಸುಂದರ ಕ್ಷಣ 
ಹಣ ಕೊಟ್ಟರು ಸಿಗದು ಬಾಲ್ಯದ ಪಯಣ.
............................................. ಭಾಗ್ಯಲಕ್ಷ್ಮಿ 
ಪ್ರಥಮ ಪಿ. ಯು. ಸಿ.
ಪದವಿಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ವೈಶಾಖದ ಬೇಸಿಗೆಯಲ್ಲಿ 
ನೆರಳ ನೀಡುವ ಮೋಡ 
ಇವು ಮಳೆ, ಹಿಮ, ಮಂಜನ್ನು  
ಹೊತ್ತು ತಂದಿವೆ ಸುಮಧುರತೆಯ ಹಾಡ
ಕೃಷಿಗೆ ಮಳೆ ಬೇಕಿರುವಾಗ, 
ಮೋಡಗಳು ಅವಶ್ಯಕ 
ಗುಡುಗು ಮಿಂಚಿನ ಜೊತೆ ಸೇರಿ 
ಆಡುವುದು ತಮಾಷೆಯ ನಾಟಕ 
ಮೋಡಗಳು ಬರೀ ಪ್ರಾಕೃತಿಕ ಘಟನೆಯಲ್ಲ,
ಮೇಘಗಳಿಲ್ಲದ ಆಕಾಶ ಒಂದು ಕಲ್ಪನೆಯಲ್ಲ,
ಮನಸ್ಸಿನ ಪ್ರತಿಬಿಂಬವಾಗಿ,
ವೀಕ್ಷಕರ ಪಾಲಿನ ಪ್ರಾರಂಭವಾಗಿ
ಹರ್ಷವಿದ್ದಾಗ ಬಿಳಿ ಮೋಡಗಳ ಚಲನವಲನ 
ರೈತನಿಗೆ ಆಸರೆಯೇ ಮಳೆ ನೀರಿನ ಆವರ್ತನ
ಕವಿಗೆ ವಿವೇಕದ ಸಂಕಲ್ಪದಂತೆ,
ಮಗುವಿಗೆ ಆಟಿಕೆಯ ಗೊಂಬೆಯಂತೆ,
ಮೋಡದ ಪ್ರಾಮುಖ್ಯತೆ ಅಪಾರ..
ಅರ್ಥೈಸಿ ನಡೆದರೆ ಜೀವನ ಸುಂದರ..
............................................. ಭಾಗ್ಯಲಕ್ಷ್ಮಿ 
ಪ್ರಥಮ ಪಿ. ಯು. ಸಿ.
ಪದವಿಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಹೊಸವರ್ಷ ಕ್ಯಾಲೆಂಡರ್ ನ 
ಬದಲಾವಣೆಯ ಕ್ಷಣವಲ್ಲ 
ಪ್ರೀತಿ, ಕನಸು, ಯಶಸ್ಸಿನತ್ತ  
ಮನಸ್ಸಿನ ಹಂಬಲ.
ಮರುಭೂಮಿಗೆ ಮಳೆಯ ಹನಿಯೇ 
ಹಸಿರಿನ ಆಸರೆ 
ಸಿಹಿ ಅನುಭವಗಳಿಗೆ 
ಕವಿತೆಯಾಗಲಿ ಈ ಧರೆ.
ಮನೋಲಯವೇ ಎಲ್ಲಾ ಕನಸುಗಳಿಗೆ
ಭವಿಷ್ಯ ಪಥ
ಅಂತರಾಳದ ಸ್ಥೈರ್ಯವೇ 
ಜೀವನ ಕಥಾ..
ಆಲಯದೀ ಹೊಸ ಬೆಳಕಿನ ರವಿಯಂತೆ,
ವರ್ಷದೀ ಮೂಡುವ ನಗುವಿನಂತೆ..
ಹೊಸ ಕನಸಿನ ಕೇಂದ್ರೀಕೃತ ದರ್ಪಣ 
ಜಯಘೋಷ ಆವರಿಸಲಿ ಕಣ ಕಣ 
ಮೌನದಿ ಕರಗಿದೆ 
ಅನುಭವಿಸಿದ ವಿಫಲತೆ 
ತಪ್ಪುಗಳನ್ನು ತಿದ್ದಿನಡೆದರೆ 
ತೆರೆಯುವುದು ಸುಖದ ಖಾತೆ 
ಒಳ್ಳೆಯತನ ಯಾವಾಗಲೂ 
ಮನದ ಬಾಗಿಲಿನ ದಾರಿ 
ಸ್ವಯಂ ಪ್ರೀತಿಯೇ ಇಲ್ಲ 
ಸಮಸ್ಯೆಗಳಿಗೆ ರುವಾರಿ 
ಮನದೀ ನಿರ್ಮಿಸಬೇಕಿದೆ 
ನಗುವಿನ ಗುಡಿಯನ್ನು 
ತನ್ನತನದೀ ಏರಬೇಕಿದೆ 
ಸ್ಫೂರ್ತಿಯ ಮಹಡಿಯನ್ನು 
ಸೋಲಿಗೆ ಅಂಜದೆ ಸಾಧನೆಯತ್ತ 
ನಮ್ಮ ಸವಾರಿ 
ಗೆಲುವಿನ ಹಾದಿಗೆ, ಜಪಿಸಬೇಕಿದೆ 
ಪರಿಶ್ರಮವೆಂಬ ಪರಿ
............................................. ಭಾಗ್ಯಲಕ್ಷ್ಮಿ 
ಪ್ರಥಮ ಪಿ. ಯು. ಸಿ.
ಪದವಿಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಭಗವಂತನ ಸೃಷ್ಟಿಯಲ್ಲಿ 
ಅದ್ಭುತ ವಿನ್ಯಾಸವೇ ಪತಂಗ
ಪ್ರಕೃತಿಯ ಹಸಿರಸಿರಲಿ  
ನೀನೇ ಸಿಂಗಾರದ ತರಂಗ 
ಆರಂಭದಲ್ಲೇ ಮೊಟ್ಟೆಯಿಂದ ಹುಟ್ಟಿ,... 
ಹುಳವೆಂಬ ರೂಪಾಂತರವ ದಾಟಿ...
ಹೂವಿನ ಜೊತೆಗಿದೆ ನಿನ್ನ ಪೈಪೋಟಿ...
ದಿನದಿ ಸೂರ್ಯನ ಕಿರಣದ ಜೊತೆಗೆ, 
ಬಣ್ಣದ ರೆಕ್ಕೆಗಳಿಂದ ಸೆಳೆವೆ ಜೀವಿತರ ನಗೆ
ಹೂವಿನ ಸಿಹಿಯನ್ನು ಹೀರುವ ಜೀವಿ
ಸರಳವಾದರೂ, ಸ್ಫೂರ್ತಿದಾಯಕ ದಿನವಹಿ
ಪ್ರಕೃತಿ ಮಾತೆಯ ಮಡಿಲೇ 
ನಿನ್ನ ಸುಂದರ ತಾಣ 
ಪದಗಳಿಗೆ ನಿಲುಕದ ವರ್ಣನೆ 
ನಿನ್ನೀ ಗುಣಗಾನ 
ಕಾಲವು ಸೀಮಿತ
ತಾಳ್ಮೆ ಹಾಗೂ ಸಮಯವೇ ಮುಖ್ಯ 
ಚಿಟ್ಟೆಯ ಪಯಣದಿಂದ  
ತಿಳಿಯಲಿ ಬದುಕಿನ ಸೌಖ್ಯ.
............................................. ಭಾಗ್ಯಲಕ್ಷ್ಮಿ 
ಪ್ರಥಮ ಪಿ. ಯು. ಸಿ.
ಪದವಿಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಜೀವನದ ಕಾರ್ಮುಗಿಲು 
ಕಣ್ಣಂಚಲ್ಲಿ ನೀರನ್ನು ಅರ್ಪಿಸಿದರೆ.. 
ದಿನಂಪ್ರತಿ ನಶಿಸುವುದು 
ಶರೀರದಲ್ಲಿರುವ ಆತ್ಮದ ಸೆರೆ....
ನೋವು, ಕಷ್ಟಗಳಿಗೆ ಸಿಲುಕದೆ 
ಮುನ್ನಡೆಯುವುದೇ ಜೀವನ.
ಪ್ರಣಯದ ನಿರ್ಬಂಧನೆಗಳಿಗೆ ಸಿಲುಕಿ 
ಕೊರಗುವುದು ಈ ಮನ..
ಜೀವನವೆಂಬ ಶಬ್ದ, ಏಳು - ಬೀಳಿನ ಯುದ್ಧ 
ಪರಿಶ್ರಮವೇ ಸತತ ಯಶಸ್ಸಿನ ಆಯುಧ..
............................................. ಭಾಗ್ಯಲಕ್ಷ್ಮಿ 
ಪ್ರಥಮ ಪಿ. ಯು. ಸಿ.
ಪದವಿಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ನನ್ನ 
ಉಸಿರಿನ 
ಸ್ವರವೇ
ನವಮಾಸ ಗರ್ಭದಲ್ಲಿರಿಸಿ ರಕ್ಷಿಸುವ ವನಿತೆ
ಬಾಳ ಪಯಣದೀ, ಆತ್ಮ ವಿಶ್ವಾಸದ ದೇವತೆ
ಜೀವದಮೂಲವೇ 
ಹೋಲಿಕೆಗೆ ನಿಲುಕದವಳೂ
ಈ ಅಪೂರ್ವತೆ 
ಚಿನ್ನದ ಖನಿಗಳಂತೆ! 
ಗುಣವಂತೆ, ನನ್ನೀ ಮಾತೆ 
ಮಾತೃ 
ಶಕ್ತಿಗೆ 
ನಾ ಸೋತೆ.
............................................. ಭಾಗ್ಯಲಕ್ಷ್ಮಿ 
ಪ್ರಥಮ ಪಿ. ಯು. ಸಿ.
ಪದವಿಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

Ads on article

Advertise in articles 1

advertising articles 2

Advertise under the article