-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 211

ಸ್ಫೂರ್ತಿಯ ಮಾತುಗಳು : ಸಂಚಿಕೆ - 211

ಸ್ಫೂರ್ತಿಯ ಮಾತುಗಳು : ಸಂಚಿಕೆ - 211
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    
      
ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಇಲಾಖೆಯು ಫೆಬ್ರವರಿ 28 ರಿಂದ ಮಾರ್ಚ್‌ 17, 2026ರ ತನಕ ನಡೆಸಿದ ಪದವಿ ಪೂರ್ವ ವಿಭಾಗದ ದ್ವಿತೀಯ ವರ್ಷದ ಸಾರ್ವತ್ರಿಕ ಪರೀಕ್ಷಾ ಫಲಿತಾಂಶವನ್ನು ಇತ್ತೀಚೆಗೆ ಪ್ರಕಟಿಸಿದೆ. ಉತ್ತೀರ್ಣತೆಗೆ ಅಂಕಗಳ ಅರ್ಹತಾ ಪ್ರಮಾಣವನ್ನು 35% ರಿಂದ 33%ಗೆ ಇಳಿಸಿರುವುದರಿಂದ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ, ಪರೀಕ್ಷೆಗೆ ಬರೆದ ಸಾಧಾರಣ 10% ಗೂ ಅಧಿಕ ಮಕ್ಕಳಿಗೆ ಉತ್ತೀರ್ಣತೆಯ ಗಡಿಯನ್ನು ದಾಟಿ ಬಿಡಲು ಈ ಸಡಿಲಿಕೆಯಿಂದ ಸಾಧ್ಯವಾಗಿದೆ. 2025ರ ಫಲಿತಾಂಶವವು 73.45% ಇತ್ತು. 2026ಕ್ಕೆ ಇದು 86.48% ಜಿಗಿದಿರುವುದು ಬೆನ್ನು ತಟ್ಟಬಹುದಾದ ಅಥವಾ ದಾಖಲೆಯೆಂದು ಹೇಳಬಹುದಾದ ಫಲಿತಾಂಶ. ಗರಿಷ್ಟ ಅಂಕಗಳ ಗಳಿಕೆಯಲ್ಲೂ ಸಣ್ಣ ಪ್ರಮಾಣದ ಏರಿಕೆಯಿದೆಯಾದರೂ ಎಲ್ಲರೂ ಉತ್ತಮ ಅಂಕ ಪಡೆದ ಕಾರಣದಿಂದ ಫಲಿತಾಂಶ ಏರಿಕೆಯಾಗಿದೆಯೆಂದು ಬೀಗುವಂತಿಲ್ಲ. ಉತ್ತೀರ್ಣತೆಯ ಗಡಿರೇಖೆಯನ್ನು 25%ಗೆ ಇಳಿಸಿದರೆ ಶೇಕಡಾ 95% ಫಲಿತಾಂಶ ದಾಖಲಾಗಬಹುದಿತ್ತೇನೋ! ಉತ್ತೀರ್ಣತೆಯ ಅಂಕಗಳ ಅರ್ಹತಾ ಮಿತಿಯನ್ನು ಇಳಿಸುತ್ತಾ ಹೋದರೆ ಶಿಕ್ಷಣವು ಕುಸಿಯುವುದು ಸಹಜ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳ ನಡುವೆ ಪಿ.ಯೂ ಫಲಿತಾಂಶದಲ್ಲಿ ಪ್ರಥಮ ಸ್ಥಾನದ ಹೋರಾಟ ಬಹಳ ನಿಕಟವಾಗಿದೆ. ಉಡುಪಿ ಜಿಲ್ಲೆಯು 96.39% ಫಲಿತಾಂಶದೊಂದಿಗೆ ಪ್ರಥಮಸ್ಥಾನಿಯಾಗಿ ನಗೆ ಬೀರಿದರೆ, ದಕ್ಷಿಣ ಕನ್ನಡ ಜಿಲ್ಲಯೂ 96.35% ಫಲಿತಾಂಶ ದಾಖಲಿಸಿ 0.04% ನೊಂದಿಗೆ ದ್ವಿತೀಯ ಸ್ಥಾನಿಯಾಯಿತು. ಈ ಬಾರಿ ನಗರ ಪ್ರದೇಶವನ್ನು ಮೀರಿ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಯಿದೆಯೆಂಬ ವರದಿಯಿದೆ. ಎಲ್ಲರ ಸಾಧನೆಗಳೂ ಗೌರವಾರ್ಹ. 

ನನಗೆ ಬಂದಿರುವ ಬ್ರಹ್ಮಾವರದ ಗ್ರಾಮೀಣ ಪ್ರತಿಭೆಯ ಸಾಧನೆ ಬಹಳ ಖುಷಿ ನೀಡಿತು. ಆಕೆಯ ತಂದೆ ರವಿಶಂಕರ್‌ ಸಿ. ಎಂ ಮತ್ತು ತಾಯಿ ವಿದ್ಯಾ ಬಿ.ಎಸ್.‌ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿರುವ ಆಕೆಯ ಹೆಸರು ಪ್ರಜ್ಞಾ ಆರ್‌ ಭಟ್.‌ ಆಕೆ ಆಂಗ್ಲ ಭಾಷೆಯಲ್ಲಿ 96% ಅಂಕ ಪಡದರೆ ಉಳಿದ ಎಲ್ಲ ವಿಷಯಗಳಲ್ಲೂ ಪಡೆದ ಅಂಕ 100% . ಸಂಸ್ಕೃತ, ವ್ಯವಹಾರ ಅಧ್ಯಯನ, ಅಂಕಿ ಅಂಶ ಶಾಸ್ತ್ರ ಮತ್ತು ಮೂಲ ಗಣಿತಗಳಲ್ಲಿ ತಲಾ 100% ದಾಖಲಿಸಿ ಒಟ್ಟು 596 ಅಂಕ ಪಡೆದು ರಾಜ್ಯಕ್ಕೆ ಐದನೇ ಸ್ಥಾನದ ಕಿರೀಟ.

ಈಕೆ ಯಾವುದೇ ಕೋಚಿಂಗ್‌ ಕೇಂದ್ರಕ್ಕೆ ಹೋಗಿಲ್ಲ. ಟ್ಯೂಷನ್‌ ನೀಡುವವರನ್ನು ಸಂರ್ಕಿಸಿಲ್ಲ. ತರಗತಿ ಪಾಠಗಳೇ ಅವಳ ಮೂಲ ಭಂಡವಾಳವೆಂಬುದು ವಿಶೇಷವಾಗಿ ಗಮನಸೆಳೆಯುವ ಅಂಶ. ಒಂದೊಮ್ಮೆ ಕೋಚಿಂಗ್‌ ಇರುತ್ತಿದ್ದರೆ ಕಳೆದು ಹೋದ ನಾಲ್ಕು ಅಂಕ ಜೇಬೊಳಗೇ ಬರುತ್ತಿತ್ತೇನೋ! ಪಠ್ಯದೊಂದಿಗೆ ಭರತನಾಟ್ಯ, ಸಂಗೀತ ಮತ್ತು ಭಗವದ್ಗೀತೆಯ ಅಧ್ಯಯನವನ್ನೂ ದ್ವಿತೀಯ ಪಿ.ಯೂ ತರಗತಿಯ ಅವಧಿಯಲ್ಲಿ ನಡೆಸಿರುತ್ತಾಳೆಂಬುದು ಇನ್ನೂ ವಿಶೇಷವಾಗಿದೆ. ಈ ಸಹಪಠ್ಯಗಳು ತನ್ನ ಕಲಿಕೆಗೆ ಪೂರಕವೇ ಆಯಿತೆಂದು ಆಕೆ ಅಭಿಮಾನದಿಂದ ಹೇಳುತ್ತಾಳೆ. ಏಕಾಗ್ರತೆಯನ್ನು ಹೆಚ್ಚಿಸಲು ಸಹಫಠ್ಯವಿಷಯಗಳು ಸಹಕರಿಸಿವೆ ಎಂಬ ಆಕೆಯ ಮಾತು ನಮ್ಮ ಹುಬ್ಬನ್ನೇರಿಸುತ್ತದೆ.
ವಿದ್ಯಾರ್ಥಿಗಳಲ್ಲಿ ಕಲಿಕೆಯ ತುಮುಲ. ಹೆತ್ತವರ ಮತ್ತು ಬೋಧಕರ ಬೆಂಬಲವಿದ್ದಾಗ ಎಲ್ಲವೂ ಸಾಧ್ಯವಾಗುತ್ತದೆ ಎಂಬುದನ್ನು ಪ್ರಜ್ಞಾ ಆರ್.‌ ಭಟ್‌ ಸಾಧಿಸಿ ತೋರಿಸಿದ್ದಾಳೆ. ಅವಳಿಗೆ ಮತ್ತು ಎಲ್ಲಾ ಸಾಧಕರಿಗೆ ಮಕ್ಕಳ ಜಗಲಿಯ ಅಭಿನಂದನೆಗಳು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************


Ads on article

Advertise in articles 1

advertising articles 2

Advertise under the article