ಪ್ರೀತಿಯ ಪುಸ್ತಕ : ಸಂಚಿಕೆ - 209
Saturday, April 11, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 209
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಎಳೆಯರಿಗಾಗಿ ಬಾಳ್ವೆಯ ಕಥೆಗಳನ್ನು ಈ ಪುಸ್ತಕದಲ್ಲಿ ನೀವು ಕಾಣಬಹುದು. 52 ಕಥೆಗಳು ಇವೆ. ಪುಸ್ತಕದ ಹೆಸರು ವಿಶೇಷವಾಗಿ ಇದೆಯಲ್ಲವೇ? ಇದೊಂದು ಗಾದೆ ಮಾತು. ಲೇಖಕರಾದ ಜಯದೇವ್ ಅವರ ಅಮ್ಮ ಈ ಗಾದೆಯನ್ನು ಆಗಾಗ ಹೇಳುತ್ತಿದ್ದರಂತೆ. ಕತೆಗಳಲ್ಲಿ ಕಲ್ಲಿನಂತಹ ಒಂದು ಗಟ್ಟಿಯಾದ ಅಂಶವೊಂದು ಇರುತ್ತದಂತೆ. ಅದು ನಮ್ಮ ಬುದ್ಧಿಯನ್ನು ಬಡಿದೆಚ್ಚರಿಸಿ ಬಂಗಾರವಾಗಿಸಬೇಕಂತೆ. ಅದಕ್ಕಾಗಿ ಈ ಕತೆಗಳ ಗುಚ್ಛಕ್ಕೆ ಈ ಹೆಸರು. ಕಥೆಯ ಹೆಸರುಗಳೇ ಕುತೂಹಲ ಹುಟ್ಟಿಸುವಂತೆ ಇವೆ. ‘ಒಳ್ಳೆಯ ಮಾತಿನಿಂದ ಏನು ಪ್ರಯೋಜನ?’ ದಿಂದ ಹಿಡಿದು ಕ್ಷಮೆಯ ಮಹತ್ವದವರೆಗೆ ಒಂದೊಂದು ಕಥೆಗಳು ಹೊಸ ಹೊಸ ಚಿಂತನೆ, ಸಾಧ್ಯತೆಗಳನ್ನು ತೆರೆದಿಡುತ್ತದೆ. ಇಂತಹ ಅದೆಷ್ಟೋ ಕತೆಗಳು ನಿಮ್ಮ ಸುತ್ತು ಮುತ್ತಲೂ ನಡೆದಿರಬಹುದು, ನೀವು ಕೇಳಿಸಿಕೊಂಡಿರಬಹುದು. ನಿಮಗೆ ತುಂಬಾ ಇಷ್ಟವಾದ ಕತೆಗಳ ಬಗ್ಗೆ ಸ್ವಲ್ಪ ಯೋಚಿಸಿ.. ಅದು ನಿಮಗೆ ಏನು ಕೊಟ್ಟಿತು, ಅಂತ ಟಿಪ್ಪಣಿ ಮಾಡಿಕೊಳ್ಳಿ. ನಿಮ್ಮ ಚಿಂತನಾ ಶಕ್ತಿ ಬೆಳೆಯುತ್ತಾ ಹೋಗುತ್ತದೆ.
ಲೇಖಕರು : ಜಿ.ಎಸ್ ಜಯದೇವ್
ಚಿತ್ರಗಳು: ಗುಜ್ಜಾರ್, ಸಂತೋಷ್ ಸಸಿಹಿತ್ಲು
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ: ರೂ.195/-
6,7 ನೇ ತರಗತಿಯ ಮಕ್ಕಳು ಓದಿಕೊಳ್ಳಬಹುದು. ಚಿಕ್ಕವರಿಗೂ ಓದಿ ಹೇಳಬಹುದು. ಇನ್ನೂ ಸ್ವಲ್ಪ ದೊಡ್ಡವರಿಗೂ ಇಷ್ಟವಾಗಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪಬ್ಲಿಕೇಶನ್ಸ್, navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************