ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 119
Wednesday, March 11, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 119
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಎಲ್ಲರಿಗೆ ಪ್ರಿಯವಾದ ನಿದ್ದೆ ಮತ್ತು ಕನಸಿನ ಬಗ್ಗೆ ಮಾತನಾಡುತ್ತಾ ಕೆಲವು ದಿನಗಳನ್ನು ಕಳೆದುಬಿಟ್ಟೆವು. ಹಿಂದೆ ಇದ್ದ ಪುರಾಣ ಪುರುಷ ಮುಚುಕುಂದ ರಾಕ್ಷಸರೊಂದಿಗೆ ಯುದ್ದ ಮಾಡಿ ದೇವತೆಗಳನ್ನು ರಕ್ಷಿಸಿ ಸಾವಿರ ವರ್ಷಗಳ ನಿದ್ದೆ ಬೇಡಿದ್ದನಂತೆ. ಕುಂಭಕರ್ಣನ ನಿದ್ದೆ ಅವನನ್ನು ಎಬ್ಬಿಸಿದ ರಾಮಾಯಣದ ಕಥೆಯೇ ಅಷ್ಟು ರೋಚಕವಾಗಿರಬೇಕಿದ್ದರೆ ಕುಂಭಕರ್ಣನಿಗೆ ನಿದ್ದೆ ಅದೆಷ್ಟು ರೋಚಕವಾಗಿರಬೇಡ ನೀವೇ ಹೇಳಿ. ನಿದ್ದೆ ಎಲ್ಲರಿಗೂ ಪ್ರಿಯವೇ.
ಕೆಲವರಿಗೆ ನಿದ್ದೆಯಲ್ಲಿ ನಡೆದಾಡುವ (sleep walking) ಮತ್ತು ಮಾತನಾಡುವ (sleep talking) ಅಭ್ಯಾಸವಿರಬಹುದು. ಕಳೆದ ವಾರವೇ ನಮಗೆ ಗೊತ್ತಾಗಿದೆ. ಈ ನಿದ್ದೆಯಲ್ಲಿ ನಡೆದಾಡುವುದು NREM ನಿದ್ದೆಯಲ್ಲಿಯೇ ಹೊರತು REM ನಲ್ಲಿ ಅಲ್ಲ ಅಂತ. ಏಕೆಂದರೆ REM ಹಂತದಲ್ಲಿ ನಮ್ಮ ಮಾಂಸ ಖಂಡಗಳು ತಾತ್ಕಾಲಿಕವಾಗಿ ನಿಶ್ಚೇಷ್ಟಗೊಂಡಿರುವುದರಿಂದ (paralysed) ನಡೆದಾಡುವುದು ಸಾಧ್ಯವಾಗುವುದಿಲ್ಲ. ಆದರೆ ಇದು NREM ನಿದ್ದೆಯಲ್ಲಿ ಮಾತ್ರ ಸಾಧ್ಯ. ಈ ನಿದ್ದೆಯ ನಡಿಗೆ ಮಲಗಿದ ಒಂದರಿಂದ ಮೂರು ಗಂಟೆಗಳ ಒಳಗೆ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ದೇಹ ಚಟುವಟಿಕೆಯಿಂದಿರುತ್ತದೆ. ಆದರೆ ಮೆದುಳು ಗಾಢ ನಿದ್ದೆ (deep sleep) ಮತ್ತು ಅರೆ ಎಚ್ಚರದಲ್ಲಿರುತ್ತದೆ (partial arousal). ಅಂದರೆ ಇದು ಅರೆ ಎಚ್ಚರದ ಸ್ಥಿತಿ. ಆದ್ದರಿಂದ ಮಾರನೆಯ ದಿನ ಎದ್ದಾಗ ಆತನಿಗೆ ರಾತ್ರಿ ನಡೆದ ಘಟನೆಯ ನೆನಪೇ ಇರುವುದಿಲ್ಲ. ನಿದ್ದೆಯ ಕೊರತೆ, ಜ್ವರ, ಒತ್ತಡ (stress), ಉದ್ವೇಗ (anxiety), ಔಷಧಗಳ ಗಾಢತೆ ಮತ್ತು ಆಲ್ಕೋಹಾಲ್ ಸೇವನೆ ಪ್ರಚೋದನೆ ಈ ರೀತಿಯ ನಿದ್ದೆಯ ನಡಿಗೆಗೆ ಕಾರಣವಾಗಬಹುದು. ಈ ರೀತಿಯ ನಿದ್ದೆಯ ನಡಿಗೆ ಮಕ್ಕಳಲ್ಲಿ ಸಾಮಾನ್ಯ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ವಿಶೇಷ ಕಾಳಜಿ ವಹಿಸಿ.
ಇನ್ನು ನಿದ್ದೆಯ ಮಾತು (sleep talking) REM ಮತ್ತು NREM ಎರಡೂ ಹಂತದಲ್ಲಿ ಕಂಡು ಬರುತ್ತದೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************