-->
ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 11

ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 11

ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 11
ಲೇಖನ : ಆತ್ಮವಿಶ್ವಾಸ ಯಶಸ್ಸಿನ ಮೆಟ್ಟಿಲು
ಬರಹ : ಶ್ರೀಮತಿ ಜ್ಯೋತಿ ಲೋಕೇಶ್ 
ಕನ್ನಡ ಭಾಷಾ ಶಿಕ್ಷಕಿ 
ಸರ್ಕಾರಿ ಪ್ರೌಢಶಾಲೆ ಪೆರ್ಮನ್ನೂರು
ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99005 71851


ಎಸ್ ಎಸ್ ಎಲ್ ಸಿ ಎಂಬ ಕಾಲಘಟ್ಟದಲ್ಲಿರುವ ನನ್ನ ಪ್ರೀತಿಯ ವಿದ್ಯಾರ್ಥಿಗಳೇ.. 9 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದರೂ ಯಾವುದೇ. ಅಧಿಕೃತ ಸರ್ಟಿಫಿಕೇಟ್ ತಮಗೆ ದೊರೆತಿಲ್ಲ ತಾನೇ..? ಎಸ್ ಎಸ್ ಎಲ್ ಸಿ ಬೋರ್ಡಿನಿಂದ ಸಿಗುವ ಆ ಒಂದು ಸರ್ಟಿಫಿಕೇಟ್ ಗಾಗಿ ನೀವು ಕಾಯುವ ಸಮಯವಿದು. ನಿಮ್ಮ ನಿರಂತರ ಪ್ರಯತ್ನ ಗುರಿ ಮುಟ್ಟಬೇಕೆನ್ನುವ ತವಕದಿಂದ ಓದುತ್ತಿರುವ ನಿಮಗೆ ಶುಭಾಶಯಗಳು.

ಪ್ರಥಮ ಭಾಷೆ ಕನ್ನಡ ಅಭ್ಯಾಸ ಮಾಡುವ ನೀವು ಪ್ರತಿ ಶತ ಅಂಕ ಪಡೆಯಲು ಕೆಲವು ಸಲಹೆಗಳನ್ನು ಗಮನಿಸಿ. ಪ್ರತಿನಿತ್ಯ ಕನಿಷ್ಠ 10 ರಿಂದ 15 ಅಂಕಗಳ ಪ್ರಶ್ನೆಗಳಿಗೆ ಉತ್ತರವನ್ನು ಕಲಿಯಿರಿ. ನೀಲ ನಕಾಶೆಯ ಪ್ರಕಾರವೇ ಪಾಠ ಪದ್ಯ ಹಾಗೂ ಪಠ್ಯಪೂರಕಗಳನ್ನು ಓದಿಕೊಳ್ಳಿ. ಯಾವ ಪಾಠಗಳಿಂದ ಪ್ರಶ್ನೆ ಕೇಳುತ್ತಾರೋ ಆ ಪಾಠವನ್ನು ಒಮ್ಮೆ ಓದಿಕೊಳ್ಳಿ. ಸಂದರ್ಭದ ಪ್ರಶ್ನೆಗಳನ್ನು ಪಾಠದ ಮಧ್ಯದಿಂದ ಕೇಳುವ ಸಂಭವ ಹೆಚ್ಚಿರುತ್ತದೆ. ನಂತರ ಪ್ರಬಂಧದಲ್ಲಿ ಉತ್ತಮ ಪದ ಬಳಕೆಯ ಮೂಲಕ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

45 ಪ್ರಶ್ನೆಗಳಿಗೂ ಉತ್ತರ ಬರೆಯುವ ದೃಢಸಂಕಲ್ಪ ಬೆಳೆಸಿಕೊಳ್ಳಿ. ಕನ್ನಡದಲ್ಲಿ ಪೂರ್ಣ ಅಂಕಗಳು ಪಡೆದರೆ ನಿಮಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗುವುದು ಕಷ್ಟವೇ ಅಲ್ಲ. ಪ್ರಯತ್ನ ಮಾತ್ರ ನಿಮ್ಮದಾಗಿರಲಿ. 

ಇನ್ನು ಕನಿಷ್ಠ ಅಂಕ ಪಡೆಯಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳೇ ಹತಾಶರಾಗದಿರಿ. ನಿಮ್ಮಿಂದ ಬಿ ಪ್ಲಸ್ ಅಂಕ ಪಡೆಯಲು ಖಂಡಿತಾ ಸಾಧ್ಯ. ಪ್ರಯತ್ನ ನಿಮ್ಮದಾಗಿರಲಿ. ಪ್ರತಿನಿತ್ಯ ಪದ್ಯಗಳನ್ನು ಬರೆದು ಕಲಿಯಿರಿ. ಅದರಲ್ಲಿ ನಾಲ್ಕು ಅಂಕಗಳು ಖಂಡಿತ ಸಿಗುವುದು. ಅನಂತರ ಛಂದಸ್ಸು, ಅಲಂಕಾರ, ಗಾದೆ ಮಾತು, ನಾಲ್ಕು ಅಂಕದ ಪ್ರಶ್ನೆಗಳು, ಅಪಠಿತ ಗದ್ಯ, ಪತ್ರಲೇಖನ, ಒಂದು ಅಂಕದ ಪ್ರಶ್ನೆಗಳು, ಎರಡು ಅಂಕದ ಪಠ್ಯಪೂರಕದ ಪ್ರಶ್ನೆಗಳನ್ನು ಅಭ್ಯಾಸ ಮಾಡಿದ್ದಲ್ಲಿ ಬಹಳ ಸುಲಭವಾಗಿ 60 ರಿಂದ 70 ಅಂಕಗಳನ್ನು ಪಡೆಯಲು ಸಾಧ್ಯವಾಗುವುದು. ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಬರೆದು ಕಲಿಯಿರಿ.

ಪ್ರತಿನಿತ್ಯ ಒಟ್ಟು ಕನಿಷ್ಠ ಏಳರಿಂದ ಎಂಟು ಅಂಕದ ಪ್ರಶ್ನೆಗಳನ್ನು ಓದಿಕೊಳ್ಳಿ. ಸಾಧ್ಯವಾದಷ್ಟು ಎಲ್ಲಾ ಪ್ರಶ್ನೆಗಳಿಗೂ ಒಂದು ವಾಕ್ಯದ ಉತ್ತರವನ್ನಾದರೂ ಬರೆಯಲು ಪ್ರಯತ್ನಿಸಿ. ಲೇಖಕರ ಅಥವಾ ಕವಿ ಪರಿಚಯ ಅದನ್ನು ಸ್ಪಷ್ಟವಾಗಿ ಬರೆಯಿರಿ. ಸಂದರ್ಭದಲ್ಲಿ ಆಯ್ಕೆ ಯಾವ ಪಾಠದಿಂದ ಬಂದಿದೆ ಎಂದು ಬರೆದಲ್ಲಿ ಒಂದು ಅಂಕ ಸಿಗುತ್ತದೆ. ಸಂದರ್ಭ ಯಾರು ಯಾರಿಗೆ ಈ ಮಾತನ್ನು ಹೇಳಿದರು ಎಂದು ವಾಕ್ಯ ರೂಪದಲ್ಲಿ ಬರೆದು ಅಭ್ಯಾಸ ಮಾಡಿಕೊಳ್ಳಿ. 

ನಂತರ ಶಬರಿ ಪಾಠದಿಂದಲೇ ನಾಲ್ಕು ಅಂಕದ ಪ್ರಶ್ನೆಗಳನ್ನು ಕೇಳುವುದರಿಂದ ಅದನ್ನು ಮತ್ತೆ ಮತ್ತೆ ಅಭ್ಯಾಸ ಮಾಡಿಕೊಳ್ಳಿ. ಕಥೆಯನ್ನು ಅರ್ಥ ಮಾಡಿಕೊಂಡು ಬರೆಯಲು ಪ್ರಯತ್ನಿಸಿ. ಉತ್ತಿ ಬಿತ್ತಿದ ಬೀಜ ಫಲ ಕೊಡುವ ಕಾಲವಿದು. ಕಾಲಹರಣ ಮಾಡದೆ ಪ್ರಯತ್ನಿಸಿ. ನಿಮ್ಮ ಪ್ರಯತ್ನ ಸದಾ ಗರಿಕೆಯಂತಿರಲಿ. ಯಾವ ವಿಘ್ನ ಗಳು ಬಂದರೂ ಕೂಡ ಚಿಗುರಿ ಮತ್ತೆ ನಿಲ್ಲುತ್ತೇವೆ ಎಂಬ ಛಲವಿರಲಿ. ಯಶಸ್ಸು ನಿಮ್ಮದಾಗಿರಲಿ...
........................ ಶ್ರೀಮತಿ ಜ್ಯೋತಿ ಲೋಕೇಶ್ 
ಕನ್ನಡ ಭಾಷಾ ಶಿಕ್ಷಕಿ 
ಸರ್ಕಾರಿ ಪ್ರೌಢಶಾಲೆ ಪೆರ್ಮನ್ನೂರು
ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99005 71851
*****************************************


Ads on article

Advertise in articles 1

advertising articles 2

Advertise under the article