-->
ಪಯಣ : ಸಂಚಿಕೆ - 82 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 82 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 82 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.

ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ 'ಬಿಳಿಗಿರಿ ರಂಗನ ಬೆಟ್ಟ' ಕ್ಕೆ ಪಯಣ ಮಾಡೋಣ ಬನ್ನಿ....
             
ದಟ್ಟವಾದ ಕಾಡಿನಿಂದ ಆವೃತವಾದ ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗರ ಆರಾಧ್ಯ ದೈವವೇ ಬಿಳಿಗಿರಿ ರಂಗನಾಥ. ಸೋಲಿಗರು ಬಿಳಿಗಿರಿ ರಂಗವನ್ನು ಭಾವ ಎಂದು ಕರೆಯುತ್ತಾರೆ. ಹಚ್ಚ ಹಸಿರಿನ ವನರಾಶಿಯ ನಡುವೆ ಹಲವಾರು ವನ್ಯ ಪ್ರಾಣಿಗಳು ವಾಸವಾಗಿರುವ ಈ ಅರಣ್ಯದಲ್ಲಿ ಗುಡ್ಡದ ಮೇಲಿರುವ ರಂಗನಾಥನನ್ನು ಬೀಳಿಕಲ್ಲು ತಿರುವೆಂಗಡ ನಾಥ ಎಂದೂ ಕರೆಯುತ್ತಾರೆ.

ಪ್ರತಿ ವರ್ಷ ವೈಶಾಖದಲ್ಲಿ ಜರುಗುವ ರಥೋತ್ಸವಕ್ಕೆ ಸೋಲಿಗರ ಒಕ್ಕಲುಗಳಲ್ಲದೆ ಬೇರೆಯವರೂ ಆಗಮಿಸುವರು. ಶ್ರೀರಂಗನ ಆಲಯದಲ್ಲಿ ರಾಮಾನುಜಾಚಾರ್ಯ, ನಮ್ಮಾಳ್ವಾರ್, ವೇದಾಂತಾಚಾರ್ಯ, ಮಂಗಾಯಿ ಮೊದಲಾದವರ ವಿಗ್ರಹಗಳಿವೆ.

ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟ ಸದಾ ಕಾಲ ಹಸಿರಿನಿಂದ ಕಂಗೊಳಿಸುವ ಬಿಳಿಬಣ್ಣದ ಬೆಟ್ಟದಟ್ಟವಾದ ಕಾಡಿನಿಂದ ಆವೃತವಾದ ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗರ ಆರಾಧ್ಯ ದೈವವೇ ಬಿಳಿಗಿರಿ ರಂಗನಾಥ.

ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟ ಸದಾ ಕಾಲ ಹಸಿರಿನಿಂದ ಕಂಗೊಳಿಸುವ ಬಿಳಿಬಣ್ಣದ ಬೆಟ್ಟ. ಒಂದರಾಚೆ ಇನ್ನೊಂದು, ಅದರಾಚೆಗೆ ಮತ್ತೊಂದು, ಸಾಲು ಸಾಲು ಬೆಟ್ಟಗಳ ಶ್ರೇಣಿ. ಯಾವ ದಿಕ್ಕಿಗೆ ನೋಡಿದರೂ ಪರ್ವತ. ಭಯ ಹುಟ್ಟಿಸುವ ಕಾಡು ಮತ್ತು ಕಣಿವೆಗಳು. ಬಿಳಿಗಿರಿರಂಗನ ಬೆಟ್ಟವೆಂಬ 540 ಚ.ಕಿ.ಮೀ. ವಿಸ್ತಾರವುಳ್ಳ ವನ್ಯಜೀವಿ ಸಂರಕ್ಷಿತ ಪ್ರದೇಶ ನಿಜಕ್ಕೂ ಸಾವಿರ ಅಚ್ಚರಿಗಳ ತವರು. ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ನಡುವಿನ ಕೊಂಡಿಯಂತಿರುವ ಇದು ಮುಂದೆ ಸತ್ಯಮಂಗಲ ರಕ್ಷಿತಾರಣ್ಯದೊಂದಿಗೆ ಬೆಸೆಯುತ್ತದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಹರಡಿಕೊಂಡಿರುವ ಈ ವನ ಪ್ರದೇಶದ ಮುಕುಟ ಮಣಿಯೇ ಬಿ.ಆರ್. ಹಿಲ್ಸ್ ಎಂಬ ಊರು. ಅದರ ಕಾವಲಿಗಿದ್ದಾನೆ ಬಿಳಿಗಿರಿ ರಂಗನಾಥ ದೇವರು.

ಕೇವಲ ಏಳೆಂಟು ಎಕರೆಯಷ್ಟು ವಿಸ್ತಾರದ ನೆಲ. ಸಮುದ್ರಮಟ್ಟದಿಂದ 5091 ಅಡಿ ಎತ್ತರ. ಆ ನೆಲದ ಯಾವ ದಿಕ್ಕಿಗೆ ಹೋಗಿ ನೋಡಿದರೂ ಪ್ರಪಾತ. ಇಳಿಜಾರಿನ ತುಂಬಾ ದೊಡ್ಡ ಕಾನನ. ಅದನ್ನು ದಾಟಿ ಕಣ್ಣು ಹಾಯಿಸಿದರೆ ನೋಡಿದಷ್ಟೂ ಮುಗಿಯದ ಕಾಡು. ಬೆಟ್ಟ ಮತ್ತು ನೀಲಿ ನೀಲಿ ಅಂಬರ.

ವೇಗವಾಗಿ ಬೀಸೋ ಗಾಳಿ, ಮುತ್ತಿಕೊಳ್ಳುವ ಹಿಮ, ಅಲ್ಲಲ್ಲಿ ಹೆಪ್ಪುಗಟ್ಟಿ ತೇಲುತ್ತಿರುವ ಮಂಜುಗಡ್ಡೆ, ನೀಲಾಕಾಶದ ಹಿನ್ನಲೆಯಲ್ಲಿ ಕಣ್ಣಿಗೆ ಹಬ್ಬ ಮಾಡುವ ಮೋಹಕ ಮಾಯಾಜಾಲ ಎಲ್ಲರ ಮನಸಳೆಯುತ್ತದೆ.

ಹಾಗಾಗಿಯೇ ಇದು ವರ್ಷದ ಬಹುಕಾಲ ಹಿಮಚ್ಛಾದಿತ ಶಿಖರದ ಮೇಲೆ ಕುಳಿತವನು ಬಿಳಿಗಿರಿ ರಂಗ. ಕೆಳಗಿನಿಂದ ನಿಂತು ನೋಡಿದರೆ ಎತ್ತರಕ್ಕೆ ತಲೆ ಎತ್ತಿ ನಿಂತ ಶಿಲೆಯಂತೆ ಕಾಣುವ ಜಾಗವಿದು. ಬಿಳಿ ಕಲ್ಲುಗಳೇ ಇಲ್ಲಿ ಹೆಚ್ಚು. ಹಾಗೆ ಬಿಳಿಗಿರಿ. ನಿಂತ ನಿಲುವಿನ ಐದಡಿ ಎತ್ತರದ ರಂಗನಾಥ ಪ್ರತಿಮೆ ಇಲ್ಲಿನ ಪ್ರಧಾನ ದೇವರು. ನವರಂಗ, ಮುಖ ಮಂಟಪದಿಂದ ಕೂಡಿದ ಈ ದೇವಳ ದ್ರಾವಿಡ ಶೈಲಿಯಲ್ಲಿದೆ. ಬ್ರಹ್ಮರ್ಷಿ ವಸಿಷ್ಠ ಪ್ರತಿಷ್ಠಾಪಿತ ಮೂರ್ತಿ ಎಂಬ ನಂಬಿಕೆ. ಲಕ್ಷ್ಮಿ ಇಲ್ಲಿ ರಂಗನಾಯಕಿ. ಜತೆಗೆ ಹನುಮಂತ, ಮಹಾಮುನಿ, ರಾಮಾನುಜಾಚಾರ್ಯ, ವೇದಾಂತಾಚಾರ್ಯರ ಪ್ರಭಾವ ಕಾಣಬಹುದಾಗಿದೆ. 

"ಬಿಳಿಗಿರಿ ರಂಗನ ಬೆಟ್ಟವು ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಸುಂದರ ಪರ್ವತ ಪ್ರದೇಶವಾಗಿದೆ. ಇದನ್ನು ಸಂಕ್ಷಿಪ್ತವಾಗಿ ಬಿ.ಆರ್. ಹಿಲ್ಸ್ ಎಂದು ಕರೆಯುತ್ತಾರೆ. ಪ್ರಾಕೃತಿಕ ಸೌಂದರ್ಯದೊಂದಿಗೆ ಧಾರ್ಮಿಕ ನೆಲೆಯ ಅದ್ಭುತ ತಾಣವಾಗಿದೆ" 

'ಪ್ರವಾಸ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕ. ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಬೆಳೆಸುತ್ತದೆ. ಪ್ರವಾಸ ಜೀವನದ ಏಕತಾನತೆ ಮುರಿಯುತ್ತದೆ'

ಬನ್ನಿ ಒಮ್ಮೆ... ಮೈಸೂರಿಗೆ... ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************



Ads on article

Advertise in articles 1

advertising articles 2

Advertise under the article