-->
ಪ್ರೀತಿಯ ಪುಸ್ತಕ : ಸಂಚಿಕೆ - 202

ಪ್ರೀತಿಯ ಪುಸ್ತಕ : ಸಂಚಿಕೆ - 202

ಪ್ರೀತಿಯ ಪುಸ್ತಕ
ಸಂಚಿಕೆ - 202
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                          ನನ್ನ ಭಾವ 
ಪ್ರೀತಿಯ ಮಕ್ಕಳೇ, ಇದೊಂದು ತಮಾಷೆಯ ವಿಚಾರ ಇರುವ ಪುಸ್ತಕ. ನಮಗೆ ನಮ್ಮ ನೆಂಟರಲ್ಲಿ, ಬಂಧು ಬಳಗದವರಲ್ಲಿ ಕೆಲವೊಮ್ಮೆ ಅವರ ವಿಶೇಷ ಗುಣಗಳು ತಮಾಷೆ ಎನಿಸುತ್ತವೆ. ಕೆಲವೊಮ್ಮೆ ಸ್ವಲ್ಪ ಕಿರಿಕಿರಿಯೂ ಆಗುತ್ತದೆ. ನೆಂಟರಾದ ಕಾರಣ ಅವರ ಎದುರು ಏನೂ ಹೇಳದೆ ಹಿಂದಿನಿಂದ ತಮಾಷೆ ಮಾಡಬಹುದು ಅಥವಾ ಸ್ವಲ್ಪ ಬೈದುಕೊಳ್ಳಬಹುದು. ಹಾಗೆಯೇ ಇಲ್ಲಿ ಒಬ್ಬರು ತಮ್ಮ ಭಾವನ ಜೊತೆಗಿನ ತಮ್ಮ ಅನುಭವ ಹೇಳಿಕೊಳ್ಳುತ್ತಾರೆ. ಅವರಿಗೆ ಕಿರಿಕಿರಿ.. ಓದುವ ನಮಗೆ ಮಜಾ ಅನಿಸುತ್ತದೆ. ಇಂತಹವನ್ನು ನೀವೂ ಬರೆಯಬಹುದು. ಇರಲಿ, ಇವರಿಗೊಬ್ಬ ಭಾವನಂತೆ, ಅವರ ಮೇಲೆ ಇವರಿಗೆ ಖಂಡಿತಾ ದ್ವೇಷ ಇಲ್ಲವಂತೆ. ಅವನು ಚುರುಕೂ ಹೌದು, ಬುದ್ಧಿವಂತನೂ ಹೌದು. ಆದರೆ ಒಂದು ಕೆಟ್ಟ ಅಭ್ಯಾಸ ಎಂದರೆ ಯಾವ ಯಾವುದೋ ಪ್ರಶ್ನೆ ಕೇಳುವುದು. ಚಿಕ್ಕಪುಟ್ಟ ಅನಗತ್ಯ ಪ್ರಶ್ನೆ ಕೇಳುವುದು. ಗೊತ್ತಿದ್ದರೂ.. ಇದು ನಿಮ್ಮ ಮನೆಯಾ? ಊಟ ಮಾಡಿದಿರಾ? ಕಾರು ನಿಂತಿರುವುದು ಕಂಡರೂ , ಕಾರು ನಿಂತಿದೆಯಾ? ಅಂತ ಕೇಳುವುದು. ಈ ಮಹಾಶಯರಿಗೆ ಕಿರಿಕಿರಿಯಾಗಿ ಏನೇನೋ ಉತ್ತರ ಕೊಡುವುದು. ಮಜಾ ಇದೆ. 

ಲೇಖಕರು : ಪಡುಕೋಣೆ ರಮಾನಂದ ರಾವ್
ರೂಪಾಂತರ: ಕೃಷ್ಣಮೂರ್ತಿ ಹನೂರು
ಚಿತ್ರಗಳು: ರಂಜನ್ ಸರ್ಕಾರ್
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್ ಇಂಡಿಯಾ
ಬೆಲೆ: ರೂ.10/- 

ಇದು 6-7 ತರಗತಿಯ ಮಕ್ಕಳು ಓದುವಂತಿದೆ. ಇತರ ಚಿಕ್ಕ ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು. 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ www.nbtindia.gov.in
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 



Ads on article

Advertise in articles 1

advertising articles 2

Advertise under the article