-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 200

ಸ್ಫೂರ್ತಿಯ ಮಾತುಗಳು : ಸಂಚಿಕೆ - 200

ಸ್ಫೂರ್ತಿಯ ಮಾತುಗಳು : ಸಂಚಿಕೆ - 200
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                     
               
       (ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ದೇವರ ಪೂಜೆಗೆ ಧಾರಣೆ ಮಾಡುವ ವಸ್ತ್ರ , ಎಲ್ಲ ಧಾರ್ಮಿಕ ವಿಧಿಗಳಿಗೆ ತೊಡುವ, ದಾನ ಕೊಡುವ ಉಡುಪು ವಸ್ತ್ರಾದಿಗಳು ಹತ್ತಿಯದಾಗಿರ ಬೇಕೆಂಬುದು ಸಂಪ್ರದಾಯ. 

ಹತ್ತಿಯ ಬೆಳೆಯು ಕೋಟ್ಯಾಂತರ ಕುಟುಂಬಗಳಿಗೆ ಜೀವನಾಧಾರ. ಚೀನಾ ಹತ್ತಿಯ ಬೆಳೆಯಲ್ಲಿ ಅಗ್ರಸ್ಥಾನಿ. ಭಾರತ ದ್ವಿತೀಯ ಸ್ಥಾನಿ. ದತ್ತಾಂಶಗಳ ಪ್ರಕಾರ ಕಳೆದ ಸಾಲಿನಲ್ಲಿ ಚೀನಾ 5.60 ಮಿಲಿಯನ್‌ ಮೆಟ್ರಿಕ್‌ ಟನ್‌ ಹತ್ತಿಯನ್ನು ಉತ್ಪಾದಿಸಿದರೆ, ಭಾರತ 5.50 ಮಿಲಿಯ ಮೆಟ್ರಿಕ್‌ ಟನ್‌ ಹತ್ತಿಯನ್ನು ಉತ್ಪಾದಿಸಿದೆ. ತಾವೇ ಬೆಳೆಸಿದ ಹತ್ತಿಯನ್ನು ಸ್ಥಳೀಯವಾಗಿಯೂ ಅತ್ಯಧಿಕವಾಗಿ ಬಳಸುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಮತ್ತು ಭಾರತವೇ ಅಗ್ರಗಣ್ಯ ಸ್ಥಾನದಲ್ಲಿವೆ. ಚೀನಾ ಅತಿ ಹೆಚ್ಚು 2.40 ಮಿ.ಮೆ.ಟ, ಭಾರತ ಅತಿ ಕಡಿಮೆ 0.20 ಮಿ.ಮೆ.ಟ. ಹತ್ತಿಯನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಬಟ್ಟೆಗಳನ್ನು ತಯಾರಿಸಲು ಇದು ಪ್ರಮುಖವಾಗಿ ಉಪಯೋಗಕ್ಕೆ ಬರುತ್ತದೆ. ವುಲನ್ ಬಟ್ಟೆ ಮಾತ್ರವಲ್ಲ, ಡೆನಿಮ್ ಬಟ್ಟೆಗಳು, ಜೀನ್ಸ್ ಬಟ್ಟೆಗಳನ್ನೂ ತಯಾರಿಸಬಹುದು. ಪಾಲಿಯಸ್ಟರ್ ಬಟ್ಟೆಗಳನ್ನೂ ಹತ್ತಿಯಿಂದಲೇ ಮಾಡಲಾಗುತ್ತದೆ.
ಗಾಸಿಪಿಯಮ್ ಹಿರ್ಸುಟಮ್ ಎಂದೂ ಕರೆಯಲ್ಪಡುವ ಹತ್ತಿ ಮರವು, ನಾವೆಲ್ಲರೂ ತಿಳಿದಿರುವ ಮತ್ತು ಪ್ರೀತಿಸುವ ಹತ್ತಿಯಂತಹ ವಸ್ತುವನ್ನು ಉತ್ಪಾದಿಸುತ್ತದೆ. ಇದು ಮ್ಯಾಲೋ ಕುಟುಂಬಕ್ಕೆ ಸೇರಿದ ಪೊದೆಸಸ್ಯವಾಗಿದ್ದು, ಇದು ಹಾಲಿಹಾಕ್ ಮತ್ತು ದಾಸವಾಳದಂತೆಯೇ ಇರುತ್ತದೆ. ಈ ಮರವು ಮಧ್ಯಪ್ರಾಚ್ಯಕ್ಕೆ ಸ್ಥಳೀಯವಾಗಿದೆ. ಆದರೆ ಗ್ರಹದ ಎಲ್ಲಾ ಮೂಲೆಗಳಿಗೆ ಹರಡಿದೆ. ಆದಾಗ್ಯೂ ಅವುಗಳ ನೈಸರ್ಗಿಕ ಆವಾಸಸ್ಥಾನಗಳು ಉಪೋಷ್ಣವಲಯದ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಸುಮಾರು 50 ಜಾತಿಗಳಿವೆ. ಹತ್ತಿಯು ಭೂಮಿಯ ಮೇಲಿನ ಅತ್ಯಂತ ಬಹುಮುಖ ವಸ್ತುಗಳಲ್ಲಿ ಒಂದಾಗಿದೆ ಮತ್ತು ಇದನ್ನು ವ್ಯಾಪಕ ಶ್ರೇಣಿಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಬಟ್ಟೆ ಮತ್ತು ಹಾಸಿಗೆಯಿಂದ ಟವೆಲ್‌ಗಳವರೆಗೆ ಮತ್ತು ಕೆಲವು ಆಹಾರ ಪದಾರ್ಥಗಳವರೆಗೆ.

ರಾಜ್ಯಗಳಲ್ಲಿ ಪ್ರಮುಖ ಬೆಳೆ
ದೇಶದ 10 ರಾಜ್ಯಗಳಿಂದ ಹತ್ತಿ ಉತ್ಪಾದನೆಯಾಗುತ್ತಿದ್ದು, ಇವುಗಳನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಉತ್ತರ ವಲಯದಲ್ಲಿ ಪಂಜಾಬ್‌, ಹರಿಯಾಣ, ರಾಜಸ್ಥಾನಗಳಿವೆ. ಮಧ್ಯ ವಲಯದಲ್ಲಿ ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ದಕ್ಷಿಣ ವಲಯದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿವೆ. ಕಳೆದ ವರ್ಷ ಉತ್ತರ ವಲಯದಲ್ಲಿ 47.60 ಲಕ್ಷ ಬೇಲ್ಸ್‌, ಮಧ್ಯ ವಲಯದಲ್ಲಿ 189.06 ಲಕ್ಷ ಬೇಲ್ಸ್‌ ಹಾಗೂ ದಕ್ಷಿಣ ವಲಯದಲ್ಲಿ 81.30 ಲಕ್ಷ ಬೇಲ್ಸ್‌ ಹತ್ತಿಯ ಉತ್ಪಾದನೆ ಮಾಡಲಾಗಿದೆ.


ಕರ್ನಾಟಕದಲ್ಲಿ ಉತ್ಪಾದನೆ ಇಳಿಕೆ....
ರಾಜ್ಯದಲ್ಲಿ ಕಳೆದ ವರ್ಷಗಳಲ್ಲಿ 9.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 25.68 ಲಕ್ಷ ಬೇಲ್ಸ್‌ ಹತ್ತಿ ಉತ್ಪಾದನೆ ಮಾಡಲಾಗಿದೆ. ಅದೇ ಹತ್ತಿ ಬೆಳೆಯುವ ಪ್ರದೇಶ 7.39 ಲಕ್ಷ ಹೆಕ್ಟೇರ್‌ಗಳಿಗೆ ಇಳಿಕೆಯಾಗಿದ್ದು, ಉತ್ಪಾದನೆ ಸಹ 20.47 ಲಕ್ಷ ಬೇಲ್ಸ್‌ಗೆ ಕಡಿಮೆಯಾಗಿದೆ.                            

ಹಾವೇರಿ: ಮಳೆಯಿಂದ ಹೆಚ್ಚಿದ ತೇವಾಂಶ; ಕಂದು ಬಣ್ಣಕ್ಕೆ ಹತ್ತಿ, ಇಳುವರಿಯಲ್ಲಿ ಭಾರಿ ಹೊಡೆತ
ಬೇಲ್ಸ್‌ ಎಂದರೇನು?

ಯಾವುದೇ ಪದಾರ್ಥಗಳ ಖರೀದಿಗೂ ಅದರದ್ದೇ ಅಳತೆ ಮಾಪನ ಇರುತ್ತದೆ. ಅದೇ ರೀತಿ, ಹತ್ತಿ ವ್ಯವಹಾರದಲ್ಲಿ ಬೇಲ್ಸ್‌ ಬಳಸಲಾಗುತ್ತದೆ. ಭಾರತದಲ್ಲಿ170 ಕೆಜಿ ಹತ್ತಿಗೆ ಒಂದು ಬೇಲ್‌ ಎನ್ನಲಾಗುತ್ತದೆ. ಅಮೆರಿಕದಲ್ಲಿ 226.8 ಕೆಜಿಗೆ ಒಂದು ಬೇಲ್‌ ಎಂದು ಪರಿಗಣಿಸಲಾಗುತ್ತದೆ.

ಹವಾಮಾನ ವೈಪರೀತ್ಯದಿಂದಾಗಿ ಈ ವರ್ಷ ರಾಜ್ಯದಲ್ಲಿ ಹತ್ತಿ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. 20 ವರ್ಷಗಳ ಹಿಂದೆ ಬಿ.ಟಿ. ಹತ್ತಿ ಬೀಜ ನೀಡಿದ್ದಾಗ ಎಕರೆಗೆ 12 ಕ್ವಿಂಟಾಲ್‌ವರೆಗೆ ಇಳುವರಿ ಬರುತ್ತಿತ್ತು. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಇದರ ಪ್ರಮಾಣ 4-5 ಕ್ವಿಂಟಾಲ್‌ಗೆ ಕುಸಿದಿದೆ. ಹುಳುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತಿರುವುದರಿಂದ ಯಾವುದೇ ಔಷಧವೂ ಕೆಲಸ ಮಾಡುತ್ತಿಲ್ಲ. ಎಕರೆಗೆ ಕನಿಷ್ಠ 25 ಸಾವಿರ ರೂ. ಖರ್ಚಾಗುತ್ತದೆ. ಆದರೆ, ಮಾರಾಟ ಮಾಡಿದ ಬಳಿಕ ರೈತರಿಗೆ ಸಿಗುವುದು ಬರೀ 20 ಸಾವಿರ ಮಾತ್ರ. ಹೀಗಾಗಿ, ಹತ್ತಿ ಬೆಳೆಗಾರರು ಬೇರೆ ಬೆಳೆಯುತ್ತ ವಾಲುತ್ತಿದ್ದಾರೆ

ಬಡವರ ಪಾಲಿನ ಆಧಾರ
ಹತ್ತಿಯನ್ನೇ ನಂಬಿಕೊಂಡು ಹಲವು ಉದ್ಯಮಗಳು ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಸುಮಾರು 80 ದೇಶಗಳಲ್ಲಿ 10 ಕೋಟಿ ಕುಟುಂಬಗಳು ಇದರ ನೇರ ಪ್ರಯೋಜನ ಪಡೆಯುತ್ತಿವೆ. ಭಾರತದ ಆರ್ಥಿಕತೆಯನ್ನು ಸಬಲಗೊಳಿಸುವಲ್ಲಿಯೂ ಹತ್ತಿಯ ಪಾತ್ರ ಬೃಹತ್. ದೇಶದಲ್ಲಿ ಸುಮಾರು 5 ಕೋಟಿ ಜನ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹತ್ತಿಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಅಮೇರಿಕಾದ ಲೆವಿ ಸ್ಟ್ರಾಸ್‌ ಕಂಪೆನಿಯು ಹತ್ತಿಯ ಬ್ರಾಂಡ್‌ ಬಟ್ಟೆಗಳನ್ನು ಉತ್ಪಾದನೆ ಮಾಡುತ್ತಾರೆ. ನೋಟುಗಳ ಬಾಳಿಕೆಯಲ್ಲಿ ಹತ್ತಿಯ ಪಾತ್ರವೇ ಹೆಚ್ಚು. 

ಅಂದಾಜಿನ ಪ್ರಕಾರ, ಒಂದು ಟನ್‌ ಹತ್ತಿಯು ಸರಾಸರಿ ಐದು ಜನರಿಗೆ ಉದ್ಯೋಗ ಒದಗಿಸುತ್ತಿದೆ. ವಿಶ್ವದ ಒಟ್ಟು ಹತ್ತಿ ಉತ್ಪಾದನೆಯ ಶೇ.80ರಷ್ಟನ್ನು ಉಡುಪುಗಳಿಗೆ ಬಳಸಿದರೆ, ಇನ್ನುಳಿದ ಶೇ. 15ರಷ್ಟು ಗೃಹಪಯೋಗಿ ಹಾಗೂ ಶೇ.5ರಷ್ಟು ಇತರ ಕಾರಣಗಳಿಗೆ ಬಳಸಲಾಗುತ್ತಿದೆ. ವಿಶ್ವದ ಕೃಷಿಯಲ್ಲಿ ಹತ್ತಿಯ ಪಾಲು ಶೇ.3ರಷ್ಟು. ಜವಳಿ ಉದ್ಯಮಗಳಿಗಷ್ಟೇ ಅಲ್ಲದೇ ಹತ್ತಿ ಬೀಜದಿಂದ ಅಡುಗೆ ಎಣ್ಣೆ, ಸೌಂದರ್ಯವರ್ಧಕ, ಸಾಬೂನು, ಪಶು ಆಹಾರ, ಸಾವಯವ ಗೊಬ್ಬರ ಪಡೆಯುತ್ತಿದ್ದೇವೆ. 

ಹತ್ತಿಯ ಎಣ್ಣೆ ಮತ್ತು ಬತ್ತಿಗಳು ದೀಪವಾಗಿ ಬೆಳಕಿಗೆ ಕಾರಣವಾಗುತ್ತವೆ. ಜಗತ್ತಿಗೆ ಜ್ಯೋತಿ ನೀಡಿದ ಸಾರ್ಥಕತೆಯೊಂದಿಗೆ ತಮ್ಮನ್ನು ತಾವೇ ದಹಿಸಿ ಮಾನವನಿಗೂ ಪರರಿಗೆ ಬೆಳಕಾಗಲು ನಿನ್ನನ್ನು ದಹಿಸಿಕೋ ಎಂಬ ಗೀತಾ ಸಂದೇಶವನ್ನು ಹತ್ತಿಯು ಸಾರುತ್ತಿದೆ. ಹತ್ತಿಯ ಉತ್ಪನ್ನದಲ್ಲಿ ನಿರುಪಯುಕ್ತವಾದುದೇನೂ ಇಲ್ಲ. ಮಾನವನಿಗೆ, “ಉಪಯುಕ್ತನೇ ಆಗಿರು” ಎಂಬ ಆದರ್ಶದ ಪಾಠವನ್ನು ಹತ್ತಿಯು ಕಲಿಸುತ್ತದೆ.

ಹತ್ತಿಯನ್ನು ದಿನಾ ಬಳಸದ ಜನರೇ ಇಲ್ಲ. ಅಂತೆಯೇ ಹತ್ತಿಯಿರದ ಆರೋಗ್ಯ ಸೇವೆ ಕಲ್ಪನಾತೀತ. ವೈದ್ಯಕೀಯ ಕ್ಷೇತ್ರದ ಅಸ್ಮಿತೆಯಲ್ಲಿ ಹತ್ತಿಯ ಪಾತ್ರ ಅಗಾಧ. ಸಣ್ಣ ಸೂಜಿ ಚುಚ್ಚುವುದಿದ್ದರೂ ವೈದ್ಯರಿಗೆ ಮತ್ತು ಶುಶ್ರೂಷಕರಿಗೆ ಹತ್ತಿಯೇ ಜೊತೆಗಾರ. ಎಂತಹ ಭೀಷಣ ಗಾಯವನ್ನು ಸ್ವಚ್ಛಗೊಳಿಸುವುದಾದರೂ ಹತ್ತಿ ಬೇಕೇ ಬೇಕು. ರಕ್ತಸ್ರಾವ ತಡೆಪಟ್ಟಿ, ಗಾಯ ಮುರಿತಗಳಿಗೆ ಕಟ್ಟು ಪಟ್ಟಿ ಹಾಕಲು ಹತ್ತಿ ಮತ್ತು ಹತ್ತಿಯ ವಸ್ತ್ರ ಬೇಕೇ ಬೇಕು. ವೈದ್ಯಕೀಯ ಕ್ಷೇತ್ರಕ್ಕೆ ಹತ್ತಿಯ ನಂಟು ಅವಿಚ್ಛೇದಿತ.

ಜನನದಿಂದ ಮರಣದವರೆಗೂ ಹತ್ತಿಯ ಸ್ಪರ್ಶ ನಮ್ಮ ಜೊತೆಗೇ ಇರುತ್ತದೆ.ಬಟ್ಟೆಯಲ್ಲಿ, ಹಾಸಿಗೆಯಲ್ಲಿ, ಧ್ವಜ ದಲ್ಲೂ ಸಹ.* ಹತ್ತಿ ಎಂದರೆ ಶುದ್ಧತೆ, ಸೌಮ್ಯತೆ, ಮತ್ತು ಸಹಜತೆ, ಇದು ಪ್ರಕೃತಿಯ, ಮಮತೆಯ ಬಟ್ಟೆ. ಮನುಷ್ಯನ ದೇಹವನ್ನೂ, ಮನಸ್ಸನ್ನೂ ತಂಪಾಗಿಡುತ್ತದೆ. ಹತ್ತಿ ಬಟ್ಟೆ ಮನುಷ್ಯನ ವಿನಮೃತೆಯ ಸಂಕೇತವಾಗಿದೆ. ಅದು ಮೃದುವಾಗಿಯೇ ಪ್ರಭಾವ ಬೀರುತ್ತದೆ. ಮಣ್ಣಿನ ಮಡಿಲಲ್ಲಿ ಬೆಳೆಯುವ ಈ ಬೆಳೆ ಬಟ್ಟೆಯಷ್ಟೇ ಅಲ್ಲ, ಬದುಕಿನ ನಾಡಿಯಾಗಿದೆ. ರೈತನ ಬೆವರು, ಭೂಮಿಯ ಬಿಸಿಲು, ಮಳೆಯಹನಿಗಳು, ಇವೆಲ್ಲ ಸೇರಿ ಹತ್ತಿಯ ಹಾದಿಯನ್ನು ರೂಪಿಸುತ್ತದೆ. ಜೀವನದಲ್ಲಿ ನಾನಾ ರೀತಿಯಲ್ಲಿ ಪ್ರಯೋಜನವಾಗುವ ಹತ್ತಿಗೆ ನಾವು ಬೆನ್ನೆಲುಬಾಗೋಣ..
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************


Ads on article

Advertise in articles 1

advertising articles 2

Advertise under the article