ಪ್ರೀತಿಯ ಪುಸ್ತಕ : ಸಂಚಿಕೆ - 198
Saturday, January 24, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 198
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ, ಕಿರಣಗೆ ಲಂಗ ಇಷ್ಟವಿಲ್ಲ. ಶರಟು ಚಡ್ಡಿ ಹಾಕಿಕೊಳ್ಳುವುದು ಆರಾಮ ಅನಿಸುತ್ತದೆ. ನನ್ನ ಬಟ್ಟೆ ನನ್ನ ಇಷ್ಟ ಅಂತ ಹೇಳುತ್ತಾಳೆ. ಆದರೆ ಅಮ್ಮನಿಗೆ ಕಿರಿಕಿರಿಯಾಗುತ್ತದೆ. ಆರಿಫ್ ಕಿರಣಳ ಗೆಳೆಯ. ಅವನಿಗೆ ನೈಲ್ ಪಾಲಿಶ್ ಇಷ್ಟ.. ಹಾಕಿಕೊಂಡಾಗ ಮಾತ್ರ ಶಾಲೆಯಲ್ಲಿ , ಇವನು ಹುಡ್ಗಿ ಆಗಿಬಿಟ್ಟ ಅಂತ ಎಲ್ಲರೂ ತಮಾಷೆ ಮಾಡುತ್ತಾರೆ. ಆರಿಫ್ ಕವನ ಬರೀತಾ ಇದ್ದ. ಹುಡುಗ ಹುಡುಗಿ ಅಂತ ಯಾಕೆ ಈ ರೀತಿ ಮಾಡುತ್ತಾರೆ ? ನಿಮಗೂ ಇದು ಅನುಭವ ಆಗಿರಬಹುದು... ಅದಕ್ಕಾಗಿ ಈ ಪುಸ್ತಕದಲ್ಲಿ ಹೆಣ್ಣು ಎಂದರೇನು ಮತ್ತು ಗಂಡು ಅಂದರೇನು; ಅವರ ನಡುವೆ ನಿಜವಾಗಿಯೂ ಇರುವ ವ್ಯತ್ಯಾಸವೇನು ಎಂಬ ವಿವರಣೆಯನ್ನು ಕೊಟ್ಟಿದ್ದಾರೆ. ಮಕ್ಕಳ ಅನೇಕ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಬಹುದು. ಅವರ ನೆಚ್ಚಿನ ತಾರಾ ಮಿಸ್, ಕಿರಣ, ಆರಿಫ್, ಮಂಜು, ಕಿರಣಳ ಅಮ್ಮ ಅಪ್ಪ, ಹೇರ್ ಕಟಿಂಗ್ ಅಂಕಲ್ ಜೊತೆಗೆ ಒಂದು ನೀರುಗುದುರೆ – ಎಲ್ಲರೂ ಸೇರಿ ಲಿಂಗತ್ವ ಅಂದರೆ ಏನು, ಹುಡುಗ ಹುಡುಗಿ ಅಂದ ತಕ್ಷಣ ಹೀಗೆಯೇ ಇರಬೇಕು ಬಾರದು ಅನ್ನುವ ಕಟ್ಟುಪಾಡುಗಳು ಬೇಕೇ – ಎಂಬ ವಿಚಾರವನ್ನು ತಿಳಿಸಿಕೊಡುತ್ತಾರೆ.
ಲೇಖಕರು : ರಶ್ಮಿ ರವಿಕುಮಾರ್
ಚಿತ್ರಗಳು: ಶ್ರೀನಿವಾಸ ಮೂರ್ತಿ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ: ರೂ.50/-
ಇದು ಹದಿಹರೆಯದ ಮಕ್ಕಳಿಗೆ ಸೂಕ್ತವಾದ ಪುಸ್ತಕ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪಬ್ಲಿಕೇಶನ್ಸ್, navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************