ಜಗಲಿ ಕಟ್ಟೆ : ಸಂಚಿಕೆ - 77
Saturday, January 24, 2026
Edit
ಜಗಲಿ ಕಟ್ಟೆ : ಸಂಚಿಕೆ - 77
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಎಲ್ಲರಿಗೂ ನಮಸ್ಕಾರ... ಹಲವು ವಾರಗಳ ಬಳಿಕ ಮತ್ತೆ ನಾವು ಜಗಲಿಕಟ್ಟೆಯಲ್ಲಿ ಸೇರ್ಕೊಂಡಿದ್ದೇವೆ. ಶ್ರೀರಾಮ ಮೂರ್ತಿಯವರು ಪ್ರತಿ ವಾರದ ಸಂಚಿಕೆಗಳ ಕುರಿತಾಗಿ ತಮ್ಮ ಅನಿಸಿಕೆಯನ್ನು ಬರೆದು ಕಳಿಸಿ ಕೊಡ್ತಾ ಇದ್ದಾರೆ. ಬರೆಯುವವರಿಗೆ ಇದೊಂದು ಟಾನಿಕ್ ಇದ್ದ ಹಾಗೆ. ಸ್ಪೂರ್ತಿಯೂ ಹೌದು. ಶಿಕ್ಷಕರಾಗಿ ನಿವೃತ್ತಿಗೊಂಡಿರುವ ಶ್ರೀರಾಮ ಮೂರ್ತಿಯವರು ಪ್ರತಿಯೊಬ್ಬರಿಗೂ ಪ್ರೇರಣಶಕ್ತಿಯಾಗಿದ್ದಾರೆ. "ಯಾರು ಸ್ಫೂರ್ತಿಯಾಗುತ್ತಾರೆ ಆತನೇ ನಿಜವಾದ ಶಿಕ್ಷಕ" ಅನ್ನುವ ಮಾತಿಗೆ ಸೂಕ್ತವಾದ ವ್ಯಕ್ತಿಗಳಲ್ಲಿ ಇವರೂ ಒಂದು ಎಂದರೆ ತಪ್ಪಾಗಲಾರದು.
ಹೌದು ಶಿಕ್ಷಕ ಕಲಿಸುವುದಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ತಾನು ಮಾಡುವ ಕೆಲಸ ಕಾರ್ಯಗಳಿಂದ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು. ತನ್ನ ಕ್ರಿಯಾಶೀಲತೆ ಸೃಜನಶೀಲತೆಯ ಗುಣಗಳು ಮತ್ತೊಬ್ಬರಿಗೆ ಮಾದರಿಯಾಗಬೇಕು. ನಮ್ಮ ಜೀವನದಲ್ಲಿ ಅದೆಷ್ಟೋ ಗುರುಗಳನ್ನು ಕಾಣುತ್ತೇವೆ. ಆದರೆ ಕೆಲವರ ನಡೆಗಳು ನಮ್ಮಲ್ಲಿ ತುಂಬಾ ಬದಲಾವಣೆ ತಂದಿರುತ್ತದೆ. ನಮ್ಮ ವ್ಯಕ್ತಿತ್ವದ ಚಿತ್ರಣವನ್ನೇ ಬದಲಾಯಿಸಿರುತ್ತದೆ.
ನನ್ನ ಗುರುಗಳಿಗೊಂದು ನಮನ :
ಚಿತ್ರಕಲೆಯನ್ನು ಮುಖ್ಯ ಭಾಗವಾಗಿರಿಸಿ ಬೆಳೆದುಕೊಂಡು ಬಂದಿರುವ ನನಗೆ ಜಲವರ್ಣದಲ್ಲಿ ಕಲಾಕೃತಿಗಳನ್ನು ರಚಿಸುವುದೆಂದರೆ ತುಂಬಾ ಅಚ್ಚುಮೆಚ್ಚು. ಇಂತಹ ಜಲವರ್ಣದ ಕಲಾಕೃತಿಗಳಿಗೆ ನನಗೆ ಚೈತನ್ಯ ತುಂಬಿದವರು ಮಹಾನ್ ಚಿತ್ರ ಕಲಾವಿದ ಸೈಯದ್ ಆಸಿಫ್ ಅಲಿ. ಮಂಗಳೂರಿನ ಮಹಾಲಸಾ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ನನಗೆ ಗುರುಗಳಾಗಿ ಸಿಕ್ಕಿದ ಇವರು ಶಿಕ್ಷಣದ ವಿಧಾನವನ್ನು ವಿಭಿನ್ನ ರೀತಿಯಲ್ಲಿ ತೋರಿಸಿಕೊಟ್ಟರು. ತರಗತಿ ಕೋಣೆಯಿಂದ ಹೊರಬಂದು ಪ್ರಕೃತಿಯ ಮಡಿಲಲ್ಲಿ ಜಲ ವರ್ಣದ ಪಾಠ ಮಾಡಿದರು. ಆ ಮೂಲಕ ಹೊಸ ಶಿಕ್ಷಣ ಶೈಲಿಯಿಂದ ನಮ್ಮನ್ನೆಲ್ಲ ಹೊರ ಜಗತ್ತಿಗೆ ತೆರೆದಿಟ್ಟರು. ನನ್ನಂತಹ ಸಾವಿರಾರು ಚಿತ್ರ ಕಲಾವಿದರೊಳಗಿನ ಕಲಾವಿದನನ್ನು ಬೆಳೆಸಿ ಪೋಷಿಸಿದರು. ಇವರ ಮಾರ್ಗದರ್ಶನದಲ್ಲಿ ಹಂಪಿಯಲ್ಲಿ ಹತ್ತು ದಿನಗಳ ಕಾಲ ಎರಡು ಬಾರಿ ಚಿತ್ರದುರ್ಗ, ಧರ್ಮಸ್ಥಳ ಹೀಗೆ ನಾನಾ ಭಾಗದಲ್ಲಿ ಜಲವರ್ಣದ ಶಿಬಿರದಲ್ಲಿ ಭಾಗವಹಿಸಿದ್ದೆ. ಹೀಗೆ ಹೊರಸಂಚಾರ ಮಾಡಿ ಚಿತ್ರರಚಿಸುವುದೆಂದರೆ ನಮ್ಮಲ್ಲಿ ಹೊಸ ಚೈತನ್ಯವನ್ನೇ ಮೂಡಿಸುತ್ತಿತ್ತು. ಬೆಳೆಯುವ ಸಾಧ್ಯತೆಗಳನ್ನು ಇಮ್ಮಡಿಗೊಳಿಸುತ್ತಿತ್ತು. ಗೊತ್ತಿಲ್ಲದೆಯೇ ಶಿಕ್ಷಣದ ಹೊಸ ದಿಕ್ಕನ್ನು ನಮ್ಮಲ್ಲಿ ಅಳವಡಿಸಿತ್ತು.
ಸೈಯದ್ ಸರ್ ಅವರು ಬಿಡಿಸುತ್ತಿದ್ದ ಜಲವರ್ಣ ಕಲಾಕೃತಿಗಳಿಗೆ ಸಾಟಿಯೇ ಇಲ್ಲ. ಅವರೊಬ್ಬ ಅಂತರಾಷ್ಟ್ರೀಯ ಕಲಾವಿದ. ಪ್ರಕೃತಿ ಚಿತ್ರಣಗಳು, ಭಾವಚಿತ್ರಗಳು, ಅಮೂರ್ತ ಚಿತ್ರಗಳು ಹೀಗೆ ನಾನಾ ಪ್ರಕಾರಗಳಲ್ಲಿ ಜಲವರ್ಣ, ಅಕ್ರ್ಯಾಲಿಕ್ , ತೈಲವರ್ಣ ಮಾಧ್ಯಮಗಳಲ್ಲಿ ಇವರದ್ದು ಎತ್ತಿದ ಕೈ. ರೇಖಾ ವಿನ್ಯಾಸ, ಬಣ್ಣಗಳ ಸಂಯೋಜನೆ, ಬ್ರಶ್ ಸ್ಟ್ರೋಕ್ ಗಳು, ತಂತ್ರಗಾರಿಕೆ ಎಲ್ಲವೂ ಅದ್ಭುತ. ಇವೆಲ್ಲವನ್ನೂ ನೋಡಿಯೇ ಕಲಿತ ನಾವು ಅವರ ದಾರಿಯಲ್ಲಿ ಸಾಗಲು ಹೆಚ್ಚು ಪ್ರೇರಣೆ ನೀಡಿತು.
ಇವರ ಪ್ರಭಾವ ಹೇಗಿತ್ತೆಂದರೆ... ಕಾಲೇಜಿನ ರಜಾದಿನಗಳನ್ನು ವ್ಯರ್ಥಗೊಳಿಸದೆ ಲ್ಯಾಂಡ್ಸ್ಕೇಪ್ ಚಿತ್ರ ಮಾಡುವುದಕ್ಕಾಗಿ ನಾವೇ ಸ್ವತ: ಗೆಳೆಯರ ಗುಂಪು ಮಾಡಿ ಹೊರ ಹೋಗುತ್ತಿದ್ದೆವು. ನಮ್ಮ ಸುತ್ತಮುತ್ತಲಿನ ಪರಿಸರ, ಸಮುದ್ರ ತೀರ ಸುಂದರ ಸ್ಥಳಗಳನ್ನು ಆಯ್ಕೆ ಮಾಡಿ ಚಿತ್ರ ಮಾಡುತ್ತಿದ್ದೆವು. ನಿತ್ಯ ಪೆನ್ಸಿಲ್ ಸ್ಕೆಚ್ ಮಾಡುವುದಕ್ಕೋಸ್ಕರ ಮಂಗಳೂರಿನ ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಹೀಗೆ ಜನಜಂಗುಳಿ ಇರುವ ಪ್ರದೇಶಕ್ಕೆ ಹೋಗಿ ಚಿತ್ರ ಮಾಡುತ್ತಿದ್ದೆವು.
ಮೊನ್ನೆ ಮೊನ್ನೆ ನಮ್ಮ ಗುರುಗಳನ್ನು ಕಳೆದುಕೊಂಡ ವಾರ್ತೆ ತಿಳಿಯಿತು. ನಮ್ಮಲ್ಲಿ ಕಲಿಯುವ ಬೆಳೆಯುವ ಹೊಸ ದಿಕ್ಕನ್ನು ತೋರಿಸಿದ ಗುರುಗಳು ಸಯ್ಯದ್ ಆಸಿಫ್ ಅಲಿ ಅಸ್ತಂಗತರಾದ ಸುದ್ದಿ ತಿಳಿದು ಒಂದು ಬಾರಿ ಸ್ತಬ್ದರಾದೆವು. ಅಮೂಲ್ಯ ರತ್ನವನ್ನು ಕಳಕೊಂಡ ಭಾವ. ಇವರಂತಹ ಮಾರ್ಗದರ್ಶಕರನ್ನು ಇನ್ನೆಲ್ಲಿ ಹುಡುಕಲಿ ಎನ್ನುವಂತಹ ದುಃಖ ಬಹಳ ಕಾಡಿತು.
ದುಃಖವನ್ನು ಮರೆಯುವ, ಗುರುಗಳನ್ನು ಮರೆಯದೆ ನೆನೆಯುವ ಕಾರ್ಯ ನಿರಂತರವಾಗಬೇಕಾದರೆ ಅವರ ದಾರಿಯನ್ನು ಅನುಸರಿಸಬೇಕಾಗಿದೆ... ಈ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನಿಡುವ ಭರವಸೆ ನಮ್ಮಲ್ಲಿ ಮೂಡಿಸಿದೆ.
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************
ಕಳೆದ ಸಂಚಿಕೆಯ ಜಗಲಿಕಟ್ಟೆ - 76 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಕೆಲವು ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ನಮಸ್ತೇ... ನಮ್ಮ ಜೀವನಕ್ಕೆ ಯಾವುದು ಯೋಗ್ಯ ಅಥವಾ ಮಹತ್ವವಾದದ್ದೋ ಅಂತಹ ಕಾರ್ಯ ಮಾಡುವುದರಿಂದ ನಾವು ಶ್ರೇಷ್ಟರಾಗುತ್ತೇವೆ. ಶ್ರೇಷ್ಟರಾಗುವುದು ಹೇಗೆ ಎನ್ನುವ ಕುರಿತಾಗಿ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ ಸುಂದರ ಲೇಖನ. ಧನ್ಯವಾದಗಳು ಸರ್.
ಶೂನ್ಯ ಎಂಬುದು ಸೋಲಲ್ಲ. ಅದು ಗೆಲುವಿನ ಸೋಪಾನ. 'ಶೂನ್ಯ' ರಮೇಶ್ ಬಾಯಾರ್ ರವರಿಂದ ಅರ್ಥಗರ್ಭಿತ ಲೇಖನ. ಧನ್ಯವಾದಗಳು ಸರ್.
ಶಾಲಾ ಮಕ್ಕಳಿಗೊಂದು ಪತ್ರ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಅಂಬಿಕಾ ಮೇಡಂರವರ ಮಕ್ಕಳಿಗೆ ಬರೆದಿರುವ ಪತ್ರ ಖಂಡಿತವಾಗಿಯೂ ಮಕ್ಕಳಲ್ಲಿ ಪ್ರೇರಣೆ ನೀಡುವಂತಿದೆ. ಸೊಗಸಾದ ಪತ್ರಕ್ಕಾಗಿ ಧನ್ಯವಾದಗಳು ಮೇಡಂ.
ದೀಪಾವಳಿಗೆ ಪಟಾಕಿ, ಜಾತ್ರೆಯಲ್ಲಿ ಸಿಡಿಮದ್ದುಗಳ ಪ್ರದರ್ಶನ. ಸಾಮಾನ್ಯ ಇಂತಹ ಪಟಾಕಿ ಹಾಗೂ ಸಿಡಿಮದ್ದುಗಳ ರಚನೆ ಹಾಗೂ ಕಾರ್ಯ ವಿಧಾನಗಳನ್ನು ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್...
ಕಾಡುಬಸಳೆ ಕುರಿತಾದ ವಿವರವಾದ ಮಾಹಿತಿ ಸಿಕ್ಕಿತು. ಇಂದಿನ ಕಾಲಘಟ್ಟದಲ್ಲಿ ಇಂತಹ ಅನೇಕ ಸಸ್ಯಗಳು ಅಳಿವಿನಂಚಿಗೆ ತಲುಪಿರುವುದು ಖೇದಕರ. ಉತ್ತಮ ಲೇಖನ ವಿಜಯಾ ಮೇಡಂರವರಿಂದ.
ಮೈಸೂರಿನ ಪ್ರಸಿದ್ಧ ಆರ್ಟ್ ಗ್ಯಾಲರಿಯಾದ ಜಗಮೋಹನ್ ಆರ್ಟ್ ಗ್ಯಾಲರಿಯ ಕುರಿತಾದ ಮಾಹಿತಿ ರಮೇಶ್ ರವರ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
ಈಜುಗಾರ್ತಿಯ ಕುರಿತಾದ ಗೆದ್ದೇ ಬಿಟ್ಟೆ ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
ರಮೇಶ್ ಸರ್ ರವರ ಪದದಂಗಳ ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ.
ಧನ್ವಿತಾ ಕಾರಂತ ಹಾಗೂ ಅನೀಶಾರವರ ದೀಪಾವಳಿ ಕುರಿತಾದ ಕವನಗಳು ಮತ್ತು ಲೇಖನ ಸೊಗಸಾಗಿದ್ದುವು. ಅಭಿನಂದನೆಗಳು ಮಕ್ಕಳಿಗೆ.
ಮಕ್ಕಳ ನೈಜ ಮನೋ ಇಂಗಿತದ ಅರಿವಿನ ಕುರಿತಾದ ಅನುಭವದ ಬರಹ ರಮ್ಯಾ ಮೇಡಂದವರಿಂದ ಚೆನ್ನಾಗಿ ಮೂಡಿ ಬಂದಿದೆ.
ಕೊನೆಯದಾಗಿ ಎಲ್ಲರಿಗೂ ವಂದನೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ನಮಸ್ತೇ... ಸಂತೋಷದ ಸಮಯದಲ್ಲಿ ಯಾವಾಗ ಯಾವ ಹಾರ್ಮೋನ್ ಗಳು ಬಿಡುಗಡೆಯಾಗುತ್ತವೆ ಜೊತೆಗೆ ಸಂತೋಷವಾಗಿರಲು ಏನು ಮಾಡಬೇಕು ಎನ್ನುವುದರ ಕುರಿತಾಗಿ ಸುಂದರ ಲೇಖನ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರಿಂದ.
ಮನುಷ್ಯನಲ್ಲಿರಬೇಕಾದ ನಾಲ್ಕು ಗುಣಗಳಾದ ರಾಗ, ಯೋಗ, ದಾಕ್ಷ್ಯ ಮತ್ತು ನಯಗಳು ಮನುಷ್ಯನಿಗೆ ಮೋಕ್ಷ ಸಾಧನೆಗೆ ಹೇಗೆ ಕಾರಣವಾಗುತ್ತವೆ ಎನ್ನುವುದನ್ನು ಸೊಗಸಾಗಿ ನಿರೂಪಿಸಿದ ರಮೆಶ್ ಬಾಯಾರ್ ಸರ್ ರವರಿಗೆ ಧನ್ಯವಾದಗಳು.
ಸಾಬೂನು ಸ್ವಚ್ಚಗೊಳಿಸುವ ಪ್ರಕ್ರಿಯೆಯನ್ನು ಇನ್ನಷ್ಟು ವಿಸ್ತಾರವಾಗಿ ಪ್ರಸ್ತುತಪಡಿಸಿದ ವಿಧಾನ ತುಂಬಾ ಸೊಗಸಾಗಿದೆ. ಧನ್ಯವಾದಗಳು ಸರ್....
ನಮ್ಮ ಸುತ್ತಮುತ್ತಲು ಬಹುತೇಕ ಸಸ್ಯಗಳ ಪರಿಚಯವಿಲ್ಲದ ನಮಗೆ ತಮ್ಮ ಸಂಚಿಕೆಯ ಮೂಲಕ ಪರಿಚಯವಾಗುತ್ತಿರುವುದು ತುಂಬಾ ಸಂತಸದ ವಿಷಯ. ಈ ವಾರ ಮುಳ್ಳು ಗೋರಂಟಿಯ ಪರಿಚಯ ಸೂಗಸಾಗಿ ಮೂಡಿ ಬಂದಿದೆ.
ಕುವೆಂಪುರವರ ಕಾವ್ಯ ರಚನೆಗೆ ಪ್ರೇರಣೆಯಾದ ಮೈಸೂರಿನ ಕುಕ್ಕರೆ ಹಳ್ಳಿ ಕೆರೆಯ ಕುರಿತಾದ ಮಾಹಿತಿ ಸುಂದರ ದೃಶ್ಯಗಳೊಂದಿಗೆ ಪಯಣ ಸಂಚಿಕೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ.
ಪುಟ್ಟ ಮಕ್ಕಳಿಗಾಗಿ ಇರುವ ಬೆಕ್ಕನ್ನು ಹುಡುಕುವ ಕತೆಯನ್ನು ಒಳಗೊಂಡ ಎಲ್ಲಿ ಆ ಬೆಕ್ಕು - ಪುಸ್ತಕದ ಪರಿಚಯ ಸೊಗಸಾಗಿತ್ತು. ಧನ್ಯವಾದಗಳು ವಾಣಿಯಕ್ಕ.
ಈ ವಾರದ ಜಗಲಿಯಲ್ಲಿ ಸೃಷ್ಟಿ ಹಾಗೂ ಬಾಲಕೃಷ್ಣ ರವರ ಕವನಗಳು ಸೊಗಸಾಗಿ ಮೂಡಿ ಬಂದಿವೆ. ಅಭಿನಂದನೆಗಳು ಸೃಷ್ಟಿ ಮತ್ತು ಬಾಲಕೃಷ್ಣರವರಿಗೆ.
ಅಶ್ವಿನ್ ರಾವ್ ರವರ ರಜೆಯ ಓದು ಸಂಚಿಕೆಯಲ್ಲಿ ಅಮೇಲಿಯ ಬೆಡೇಲಿಯಾ ವೇರ್ ದ ರೆಡ್ ಫರ್ನ್ ಗ್ರೋಸ್ ಪುಸ್ತಕಗಳ ಜೊತೆಗೆ ದ ಗಿವಿಂಗ್ ಟ್ರೀ ಮತ್ತು ಎ ರಿಂಕಲ್ ಇನ್ ಟೈಮ್ ಎನ್ನುವ ಅದ್ಭುತ ಪುಸ್ತಕಗಳ ಪರಿಚಯ ಸೊಗಸಾಗಿತ್ತು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ನಮಸ್ತೇ.. ಮನಸ್ಸು ನಮ್ಮ ಸಂಪತ್ತು ಹೇಗೆ ಎನ್ನುವ ಕುರಿತಾಗಿ ವಿವರಣಾತ್ಮಕ ಸುಂದರ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ.
ಸಾಧಿಸುವ ಛಲವಿದ್ದಾಗ ನಮ್ಮ ಗುರಿ ತಲುಪಲು ಸಾಧ್ಯ. ಮನಸ್ಸಿದ್ದರೆ ಮಾರ್ಗವಿದೆ ಎನ್ನುವ ಆಶಯದ ರಮೇಶ್ ಸರ್ ರವರ ಲೇಖನ ಸೊಗಸಾಗಿತ್ತು.
ಭತ್ತದ ಕುರಿತಾಗಿ ಬತ್ತದ ಲೇಖನ. ತುಂಬಾನೆ ಸೊಗಸಾದ ವಿವರಣೆಯೊಂದಿಗೆ ಉಪಯುಕ್ತವಾದ ಲೇಖನಕ್ಕಾಗಿ ಧನ್ಯವಾದಗಳು ವಿಜಯಾ ಶೆಟ್ಟಿ ಮೇಡಂ.
ಮೈಸೂರಿನ ಚಿಟ್ಟೆ ಪಾರ್ಕ್ ಹಾಗೂ ಕಾರಂಜಿಕೆರೆ ಕುರಿತಾದ ವಿವರವಾದ ಮಾಹಿತಿ ತಮ್ಮ ಪಯಣ ಸಂಚಿಕೆಯಲ್ಲಿ ಸೊಗಸಾಗಿತ್ತು ರಮೇಶ್ ಸರ್....
ಪ್ರಾಮಾಣಿಕ ಅಧಿಕಾರಿಯ ಕುರಿತಾದ ಉಪ್ಪಿನ ನೀರಿಕ್ಷಕ ಪುಸ್ತಕದ ಪರಿಚಯಕ್ಕಾಗಿ ಧನ್ಯವಾದಗಳು ವಾಣಿಮೇಡಂ.
ಪುಟ್ಟ ಮಕ್ಕಳ ಸುಂದರ ಚಿತ್ರಗಳು ಈ ಸಲದ ಚಿತ್ರ ಸಂಚಿಕೆಯಲ್ಲಿ ಪ್ರಕಟಗೊಂಡಿವೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು.
ರಮೇಶ್ ಉಪ್ಪುಂದರವರ ಪದಗಳ ಜೋಡಿಸುವ ಆಟದ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ.
ಎಲ್ಲರಿಗೂ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ಎಲ್ಲರಿಗೂ ನಮಸ್ಕಾರಗಳು... ನಮ್ಮಲ್ಲಿರುವ ಅರಿಷಡ್ವೈರಿಗಳನ್ನು ಸರಿಯಾದ ರೀತಿಯಲ್ಲಿ ಬಳಸಲು ತಿಳಿದರೆ ಜೀವನ ಸುಂದರ. ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ ಸುಂದರ ಲೇಖನ.
ಪರಿಶುದ್ಧತೆಯಿಂದ ಮಾಡುವ ಎಲ್ಲಾ ಕಾರ್ಯಗಳೂ ಪೂಜೆ ಎನಿಸಲ್ಪಡುತ್ತವೆ. ಪೂಜೆಯ ಗೂಢಾರ್ಥವನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ ರಮೇಶ್ ಸರ್ ರವರು. ಧನ್ಯವಾದಗಳು ಸರ್....
ಕೋಶಪೊರೆಯ ರಚನೆ ಹೇಗೆ? ಎನ್ನುವುದರ ಕುರಿತಾಗಿ ಬಹಳ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದೀರಿ. ಧನ್ಯವಾದಗಳು ಸರ್..
ಸುಂದರ ಹೂವಿನ ಸಸ್ಯವನ್ನು ನೆಟ್ಟು ಬೆಳಸಿ ಪರಿಚಯಿಸಿದ್ದೀರಿ. ದಾಸವಾಳ ಗುಂಪಿಗೆ ಸೇರಿದ ಸಸ್ಯವೆಂದು ತಿಳಿದಿತ್ತಾದರೂ ಇದರ ವೈಜ್ಞಾನಿಕ ಹೆಸರು ತಿಳಿದಿರಲಿಲ್ಲ. ಅಸಟೊಸೆಲ್ಲಾ ಸಸ್ಯದ ಪರಿಚಯ ಸೊಗಸಾಗಿತ್ತು ವಿಜಯಾ ಶೆಟ್ಟಿ ಮೇಡಂ.
ಹಾಡುವ ಹುಡುಗಿಯೊಬ್ಬಳ ಕುರಿತಾದ ಬಾಹ್ಯಾಕಾಶದಲ್ಲೊಂದು ಹಾಡು ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿ ಮೇಡಂ. ಧನ್ಯವಾದಗಳು.
ರಮೇಶ್ ಸರ್ ರವರ ಈ ವಾರದ ಪಯಣ ಸಂಚಿಕೆಯಲ್ಲಿ ಮೈಸೂರಿನ ಪ್ರಸಿದ್ಧ ಯಾತ್ರಾಸ್ಥಳ ಸೈಂಟ್ ಫಿಲೋಮಿನಾ ಚರ್ಚ್ ನ ಕುರಿತಾದ ಮಾಹಿತಿ ಸೊಗಸಾಗಿ ಮೂಡಿಬಂದಿದೆ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ಎಲ್ಲರಿಗೂ ನಮಸ್ಕಾರಗಳು... ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಬೇಡಿರಿ ಹುಚ್ಚಪ್ಪಗಳಿರಾ... ಎಂದು ದಾಸವರೇಣ್ಯರು ಹಾಡಿದಂತೆ - ಮಾನವನ ಜೀವನ ಎಷ್ಟು ಶ್ರೇಷ್ಠತೆಯಿಂದ ಕೂಡಿದೆ ಎಂಬುದನ್ನು ಬುದ್ದನ ಕತೆಯ ಮೂಲಕ ಬಹಳ ಸೊಗಸಾಗಿ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ತಿಳಿಸಿದ್ದಾರೆ. ಧನ್ಯವಾದಗಳು ಸರ್...
ಶ್ರೇಷ್ಠತೆಯನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಲು ಇರಬೇಕಾದ ಅರ್ಹತೆಗಳ ಕುರಿತಾದ ಸುಂದರ ಲೇಖನ ರಮೇಶ್ ಸರ್ ರವರಿಂದ.
ದೇಹದಲ್ಲಿ ಶಕ್ತಿ ಬಿಡುಗಡೆ ಮಾಡುವ ಉಸಿರಾಟ ಪ್ರಕ್ರಿಯೆಯ ಮೊದಲ ಹಂತದ ಲೇಖನ ಚುಟುಕಾಗಿ ಸೊಗಸಾಗಿತ್ತು ದಿವಾಕರ ಶೆಟ್ಟಿ ಸರ್ ಧನ್ಯವಾದಗಳು.
ನಾಡಹಬ್ಬ ದಸರಾಕ್ಕೆ ಕಾರಣವಾದ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಕುರಿತಾಗಿ ಮಾಹಿತಿಯನ್ನು ಒಳಗೊಂಡ ಪಯಣ ಸಂಚಿಕೆ ತುಂಬಾ ಸೊಗಸಾಗಿತ್ತು ಸರ್.....
ತಮ್ಮ ಜಮೀನನ್ನು ಫಲವತ್ತಾಗಿಸುವ ವಿಧಾನದ ಕುರಿತಾಗಿರುವ ಲೀಲಾಳ ಚಮತ್ಕಾರ ಎನ್ನುವ ಪುಸ್ತಕದ ಪರಿಚಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಚಿತ್ರ ಸಂಚಿಕೆಯಲ್ಲಿ ಲಕ್ಷ್ಯ ಅವರ ಚಿತ್ರಗಳು ಸೊಗಸಾಗಿವೆ. ಅಭಿನಂದನೆಗಳು ಲಕ್ಷ್ಯಾ.
ರಮೇಶ್ ರವರ ಪದದಂಗಳ ಸಂಚಿಕೆ ಸೊಗಸಾಗಿ ಮುಂದುವರಿಯುತ್ತಿದೆ.
ಕೊನೆಯದಾಗಿ ಜಗಲಿಯ ಎಲ್ಲರಿಗೂ ಆತ್ಮೀಯ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ನಮಸ್ತೇ... ಶ್ರೇಷ್ಠ ತತ್ವಜ್ಞಾನಿ ಸಾಕ್ರೆಟಿಸ್ ನ ಸುಂದರವಾದ ಕಥೆಯೊಂದಿಗೆ ಆದರ್ಶ ದಂಪತಿಗಳು ಹೇಗಿರಬೇಕು ಅನ್ನೋದನ್ನು ಬಹಳ ಸುಂದರವಾಗಿ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ವಿಶ್ಲೇಷಿಸಿದ್ದಾರೆ. ಧನ್ಯವಾದಗಳು ಸರ್.
ಚಿತ್ತವು ವಿತ್ತದ ಕಡೆಗೆ ವಾಲಿದಾಗ ಆಗುವ ಅವಾಂತರಗಳ ಕುರಿತಾಗಿ ಬಹಳ ಬಹಳ ಸೊಗಸಾಗಿ ನಿರೂಪಿಸಿದ ರಮೇಶ್ ಬಾಯರ್ ಸರ್ ಅವರಿಗೆ ಧನ್ಯವಾದಗಳು.
ರಕ್ತವು ಆಮ್ಲಜನಕ ಸಾಗಿಸಲು ಕಬ್ಬಿಣದಿಂದ ಕೂಡಿದ ಹಿಮೋಗ್ಲೋಬಿನ್ ಬೇಕು. ಈ ಹಿಮೋಗ್ಲೋಬಿನ್ ಸಹಾಯದಿಂದ ಕೋಶಗಳಿಗೆ ಆಮ್ಲಜನಕದ ಹಾಗೂ ಕಾರ್ಬನ್ ಡೈ ಆಕ್ಸೈಡ್ ನ ವಿನಿಮಯ ಹೇಗೆ ಆಗುತ್ತದೆ ಎಂಬುದನ್ನು ಬಹಳ ಸರಳವಾಗಿ ವಿವರಿಸಿದ್ದಾರೆ ದಿವಾಕರ್ ಸರ್ ರವರು.
ಬಾಳೆ ಗಿಡ ಎಲ್ಲರಿಗೂ ಚಿರಪರಿಚಿತವಾದರೂ ಬಾಳೆ ಗಿಡದ ಸಮಗ್ರ ಪರಿಚಯ ನಮ್ಮ ಸಂಚಿಕೆಯ ಮೂಲಕ ಸಿಕ್ಕಿದ ಹಾಗಾಯಿತು. ಉಪಯುಕ್ತ ಸಂಚಿಕೆ. ಧನ್ಯವಾದಗಳು ವಿಜಯಾ ಶೆಟ್ಟಿ ಮೇಡಂ.
ಮೈಸೂರು ಜಿಲ್ಲೆಯ ಕೆ ಆರ್ ನಗರದ ಚುಂಚನಕಟ್ಟೆ ಜಲಪಾತದ ಕುರಿತಾಗಿ ವಿವರವಾದ ಮಾಹಿತಿಯನ್ನು ರಮೇಶ್ ರವರು ತಮ್ಮ ಪಯಣ ಸಂಚಿಕೆಯಲ್ಲಿ ನೀಡಿರುತ್ತಾರೆ.
ಶಾಲೆ ಇಲ್ಲದ ಗ್ರಾಮದಲ್ಲಿ ಶಾಲೆ ಸ್ಥಾಪಿಸುವ ಕುರಿತಾದ ಕನಸು ನನಸಾದ ಮರಳಿ ಶಾಲೆಗೆ ಎನ್ನುವ ಪುಸ್ತಕದ ಪರಿಚಯ ಸೊಗಸಾಗಿತ್ತು ವಾಣಿ ಮೇಡಂ.
ಪದಗಳ ಹುಡುಕಾಟದ ಪದದಂಗಳ ಸಂಚಿಕೆ ಚೆನ್ನಾಗಿತ್ತು. ಧನ್ಯವಾದಗಳು ಸರ್.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ನಮಸ್ತೇ,
ಗಳಿಸಿದ ಸಂಪತ್ತನ್ನು ಒಳ್ಳೆಯ ಕಾರ್ಯಕ್ಕಾಗಿ ವಿನಿಯೋಗಿಸಬೇಕೇ ಹೊರತು ಅದನ್ನು ಕೂಡಿಡುವುದಕ್ಕೆ ಅಲ್ಲ ಎನ್ನುವುದನ್ನು ಬಹಳ ಸೊಗಸಾಗಿ ತಿಳಿಸಿದ್ದೀರಿ ಸರ್.. ಧನ್ಯವಾದಗಳು.
ಬಾಗುವುದಕ್ಕೆ ಹೆಚ್ಚು ಬೆಲೆ ಬೀಗುವುದಕ್ಕಲ್ಲ.... ನಮಸ್ಕಾರದ ಮಹತ್ವವನ್ನು ಬಹಳ ಸುಂದರವಾಗಿ ವಿವರಿಸಿದ್ದೀರಿ ಸರ್....
ದಿವಾಕರ್ ಸರ್ ರವರ ಈ ವಾರದ ವೈಜ್ಞಾನಿಕ ಸಂಚಿಕೆ ತುಂಬಾ ಕುತೂಹಲಕಾರಿಯಾಗಿತ್ತು. ನನ್ನಲ್ಲಿ ಮೂಡಿದ ಪ್ರಶ್ನೆಗೆ ಮುಂದಿನ ವಾರ ಉತ್ತರ ಸಿಗಬಹುದೇನೊ?. . . .
ಈ ವಾರ ನಾನು ಸುತ್ತ ಮುತ್ತ ಕೆಲವು ಕಡೆ ನೋಡಿದರೂ ಹೆಸರು ಗೊತ್ತಿರದ ಸಸ್ಯದ ಮಾಹಿತಿ ಸಿಕ್ಕಹಾಗಾಯಿತು. ತಮ್ಮ ಸಂಚಿಕೆಯಿಂದ ಹೊಸ ಗಿಡಗಳ ಪರಿಚಯವಾಗುತ್ತಿದೆ. ಧನ್ಯವಾದಗಳು ಮೇಡಂ ಕದ್ವದೆಂಗಿ ಸಸ್ಯದ ಪರಿಚಯಕ್ಕಾಗಿ..
ಧನುಷ್ಕೋಡಿ ಹಾಗೂ ಸೀತಾಮಡುವಿನ ವಿವರವಾದ ಮಾಹಿತಿ ಇಂದಿನ ರಮೇಶ್ ಸರ್ ರವ ರಪಯಣ ಸಂಚಿಕೆಯಲ್ಲಿ ಚೆನ್ನಾಗಿ ಮೂಡಿಬಂದಿದೆ.
ಮಕ್ಕಳಿಗಾಗಿಯೇ ಇರುವ ಪುಟ್ಟ ಪುಟ್ಟಿ ಕಥೆಗಳು ಎನ್ನುವ ಸುಂದರ ಪುಸ್ತಕದ ಪರಿಚಯ ಸೊಗಸಾಗಿತ್ತು ವಾಣಿಯಕ್ಕ.
ನಾನೂ ಟೀಚರ್ ಆಗುವೆ ಎನ್ನುವ ಮುಗ್ಧ ಮನಸ್ಸಿನ ಮಗುವಿಗೆ ಟೀಚರ್ ಕೆಲಸ ಯಾಕೆ ಇಷ್ಟ ಎನ್ನುವ ಕಾರಣ ತಿಳಿದ ಅನುಭವದ ಮಾತುಗಳು ರಮ್ಯ ಮೇಡಂ ರವರಿಂದ ಉತ್ತಮವಾಗಿದ್ದುವು.
ಈ ವಾರದ ಜಗಲಿಯಲ್ಲಿ ಪ್ರಕಟವಾದ ಚಿತ್ರಗಳಲ್ಲಿ ಕೃಪಾ ಹಾಗೂ ಪ್ರೇರಣಾರವರ ಚಿತ್ರಗಳು ಸೊಗಸಾಗಿದ್ದುವು. ಶಶಾಂಕರ ಕಥೆಗಳೂ ಉತ್ತಮವಾಗಿದ್ದುವು. ಕೃಪಾ, ಪೇರಣಾ ಹಾಗೂ ಶಶಾಂಕ್ ರಿಗೆ ಅಭಿನಂದನೆಗಳು.
ರಮೇಶ್ ಸರ್ ರವರ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬರುತ್ತಿದೆ. ಧನ್ಯವಾದಗಳು ಸರ್..
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ಎಲ್ಲರಿಗೂ ನಮಸ್ಕಾರಗಳು... ಜೀವಿಸಲು ಅಥವಾ ಬದುಕಲು ಬೇಕಾಗುವ ವಸ್ತುವೇ ಅನ್ನ ಎಂಬ ಸತ್ಯವನ್ನು ಸವಿವರವಾಗಿ ವ್ಯಾಸ ಮಹರ್ಷಿಯ ವ್ಯಾಖ್ಯಾನದ ಮೂಲಕ ಸೊಗಸಾಗಿ ವಿವರಿಸಿದ್ದಾರೆ ಶಿಕ್ಷಣಾಧಿಕಾರಿ ಯವರಾದ ಶ್ರೀ ಜ್ಞಾನೇಶ್ ಸರ್ ರವರು.
ಜೀವನದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದಾಗ ಧನ್ಯತೆ ಗಳಿಸುತ್ತೇವೆ. ಧನ್ಯತೆಯಿಂದ ಮಾನ್ಯತೆಯನ್ನು ಪಡೆಯುತ್ತೇವೆ. ಧನ್ಯತೆ ಹಾಗೂ ಮಾನ್ಯತೆ ಗಳಿಸುವ ಕುರಿತಾದ ಮನಮುಟ್ಟುವ ಲೇಖನ ರಮೇಶ್ ಬಾಯಾರ್ ಸರ್ ರವರಿಂದ ಧನ್ಯವಾದಗಳು ಸರ್....
ಕಾರ್ಬಾಕ್ಸಿ ಹಿಮೋಗ್ಲೋಬಿನ್ ನ ಪರಿಣಾಮಗಳು ಹಾಗೂ ಅರ್ಧಾಯುಷ್ಯದ ಕುರಿತಾದ ಸೊಗಸಾದ ವಿವರಣೆ ಧನ್ಯವಾದಗಳು ಸರ್....
ಅಲಂಕಾರಿಕ ಪುಷ್ಪವಾಗಿ ಬಳಸಲ್ಪಡುವ ಚೆಂಡುಹೂವಿನ ಮಾಹಿತಿಯನ್ನೊಳಗೊಂಡ ಈ ವಾರದ ತಮ್ಮ ಸಂಚಿಕೆ ಉತ್ತಮವಾಗಿ ಮೂಡಿ ಬಂದಿದೆ ಮೇಡಂ.
ಶ್ವೇತಾ ರವರಿಂದ ಹಣದ ವ್ಯವಹಾರದ ಕುರಿತಾಗಿರುವ ನಿಗೂಢ ನಾಣ್ಯ ಪುಸ್ತಕದ ವಿಶ್ಲೇಷಣೆ ನಾ ಓದಿದ ಪುಸ್ತಕ ಸಂಚಿಕೆಯಲ್ಲಿ ಸೊಗಸಾಗಿತ್ತು.
ಈ ವಾರದ ಪಯಣ ಸಂಚಿಕೆಯಲ್ಲಿ ಸುತ್ತೂರು ಮಠದ ಇತಿಹಾಸದ ಕುರಿತಾಗಿ ವಿವರವಾದ ಮಾಹಿತಿ ಲಭ್ಯವಾಯಿತು. ಧನ್ಯವಾದಗಳು ರಮೇಶ್ ಸರ್...
ಅಜ್ಜಿಯ ಹೆಣಿಗೆಯ ಕುರಿತಾಗಿ ವಿವರವಾದ ಮಾಹಿತಿ ನೀಡುವ ಹೆಣೆದಳಾ ಅಜ್ಜಿ ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
ಮಗುವೊಂದು ಅಮ್ಮನಿಗೆ ನೀಡುವ ಗೌರವದ ಕುರಿತಾಗಿ ಅನುಭವದ ಮಾತುಗಳು ಶಿಕ್ಷಕರ ಡೈರಿಯಲ್ಲಿ ಸುಪ್ರಿಯಾ ಮೇಡಂರವರಿಂದ ಸೊಗಸಾಗಿ ಮೂಡಿ ಬಂದಿದೆ.
ಈ ವಾರದಲ್ಲಿ ಪ್ರಕಟಗೊಂಡ ವಿನಯ್ ಕುಮಾರ್ ರವರ ಕವನಗಳು ಚೆನ್ನಾಗಿದ್ದುವು ಅಭಿನಂದನೆಗಳು ವಿನಯ್ ಗೆ .
ರಮೇಶ್ ರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ.
ಎಲ್ಲರಿಗೂ ಧನ್ಯವಾದಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ನಮಸ್ತೇ... ಶ್ರದ್ಧೆ ಇದ್ದಲ್ಲಿ ಎಲ್ಲವೂ ಸಾಧ್ಯ... ಶ್ರದ್ಧೆಯ ಕುರಿತಾದ ವಿವರವಾದ ಲೇಖನ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರಿಂದ. ಧನ್ಯವಾದಗಳು ಸರ್....
ಮಾತು ಹೇಗಿರಬೇಕು? ಹಿತವಾಗಿದ್ದಾಗ ಸಿಹಿ ಅತಿಯಾದಾಗ ಕಹಿ. ಮಾತಿನ ಕುರಿತಾಗಿ ಅದರಲ್ಲೂ ಮಾತೆಯರ ಮಾತಿನ ಕುರಿತಾಗಿ ಉತ್ತಮ ಲೇಖನ ರಮೇಶ್ ಸರ್ ರವರಿಂದ.
ಕೀಟನಾಶಕಗಳ ಅರ್ಧಾಯುಷ್ಯದಿಂದ ಗಿಡಗಳಿಗೆ ಯಾವ ಕೀಟಟನಾಶಕಗಳನ್ನು ಬಳಸಬೇಕೆನ್ನುವುದರ ಮಾಹಿತಿ ತಮ್ಮ ಸಂಚಿಕೆಯಿಂದ ದೊರೆಯಿತು. ಧನ್ಯವಾದಗಳು ಸರ್.....
ಹುಳಿ ಸೊಪ್ಪು ಅಥವಾ ಪುಳಿಯಾರ್ಲೆಯ ಪರಿಚಯ ಸೊಗಸಾಗಿತ್ತು. ಅಂಗಳದಲ್ಲೆಲ್ಲಾ ಹರಡಿಕೊಂಡಿರುವ ಈ ಸಸ್ಯವನ್ನು ಕಳೆಗಿಡವೆಂದು ಪರಿಗಣಿಸುವವರೇ ಹೆಚ್ಚಲ್ಲವೆ?
ಅಭಯಾರಣ್ಯದ ತಾಣವೆನಿಸಿದ ವನ್ಯ ಮೃಗಗಳ ಆವಾಸ ಸ್ಥಾನವಾಗಿರುವ ಕಬಿನಿ ಉದ್ಯಾನವನದ ಕುರಿತಾಗಿ ವಿವರವಾದ ಮಾಹಿತಿ ಈ ವಾರದ ಪಯಣ ಸಂಚಿಕೆಯಲ್ಲಿ .
ವಿಶೇಷ ಚೇತನ ಮಕ್ಕಳ ಕುರಿತಾದ ನನಗೆ ಅರ್ಥವಾಗಲಿಲ್ಲ ಎನ್ನುವ ಪುಸ್ತಕದ ಪರಿಚಯಕ್ಕಾಗಿ ಧನ್ಯವಾದಗಳು ವಾಣಿಯಕ್ಕ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ಎಲ್ಲರಿಗೂ ನಮಸ್ಕಾರಗಳು.. ಯಾವುದೇ ಕೆಲಸದ ಬಗ್ಗೆ ಮನದಲ್ಲಿ ವಿಶ್ವಾಸ ಮೂಡಿದಾಗ ಅವರ ಕುರಿತಾದ ಶೃದ್ಧೆ ಹೆಚ್ಚಾಗುತ್ತದೆ. ವಿಶ್ವಾಸದಿಂದ ಕೆಲಸ ಸಾಧಿಸಲಾಗುತ್ತದೆ. ಸುಂದರ ಉದಾಹರಣೆಗಳೊಂದಿಗೆ ಶ್ರದ್ಧೆಯ ಕುರಿತಾದ ಮುಂದುವರಿದ ಉತ್ತಮ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ರವರಿಂದ. ಧನ್ಯವಾದಗಳು ಸರ್...
ಸಾಧ್ಯವಾದರೆ ಇತರರಿಗೆ ಸಹಾಯ ಮಾಡೋಣ - ಗಾಯವೆಂದಿಗೂ ಮಾಡದಿರೋಣ. ಸಹಾಯ ಮತ್ತು ಗಾಯ ಇವೆರಡರ ನಡುವಿನ ಗೂಢಾರ್ಥವನ್ನು ಬಹಳ ಸೊಗಸಾಗಿ ವಿವರಿಸಿದ್ದೀರಿ ಸರ್.....
COHB ಯ ಅರ್ಧಾಯುಷ್ಯದಿಂದ ಹಾಗೂ ಆಕ್ಸಿಜನ್ ಪ್ರಮಾಣ ಜಾಸ್ತಿಯಾಗುವುದರಿಂದ COHB ಯು ಹಿಮೋಗ್ಲೋಬಿನ್ ನಿಂದ ಕಳಚುವುದರೊಂದಿಗೆ ಆಕ್ಸಿ ಹಿಮೋಗ್ಲೋಬಿನ್ ಆಗುವುದು. ನಾನು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಂತಾಯಿತು. ಧನ್ಯವಾದಗಳು ಸರ್...
ಎಲ್ಲರಿಗೂ ಮತ್ತೊಮ್ಮೆ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************
ನಮಸ್ತೇ... ಏಕಲವ್ಯನ ಕಥೆಯ ಮೂಲಕ ಹೊಟ್ಟೆ ಕಿಚ್ಚು ಅಥವಾ ಮತ್ಸರದ ಕುರಿತಾಗಿ ವಿವರವಾದ ಸಂದರ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ.
ಒಗ್ಗಟ್ಟಿನಲ್ಲಿ ಬಲವಿದೆ, ಸಂಘಟನೆಯಲ್ಲಿ ಶಕ್ತಿ ಇದೆ ಎಂಬುದನ್ನು ಬಹಳ ಸ್ವಾರಸ್ಯಕರ ಕಥೆಯ ಮೂಲಕ ನಿರೂಪಿಸಿದ್ದೀರಿ. ಧನ್ಯವಾದಗಳು ರಮೇಶ್ ಸರ್.....
ಕಾರ್ಬನ್ ಮೊನೊಕ್ಸೈಡ್ ಅತಿಯಾದಾಗ ಅದು ಸಾವಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದ ಬಗೆ ಸೊಗಸಾಗಿತ್ತು.
ಎಲ್ಲರಿಗೂ ಚಿರಪರಿಚಿತವಾದ ಸಸ್ಯ ಗೇರು ಮರದ ಅದರ ಬಹುಪಯೋಗಿ ಗುಣ ಭಾರತದಲ್ಲಿ ಅದರ ಬೆಳೆ ಹಾಗೂ ರಪ್ತು ಮುಂತಾದ ವಿಚಾರಗಳ ಕುರಿತು ಉಪಯುಕ್ತ ಲೇಖನ ವಿಜಯಾ ಮೇಡಂ ರವರಿಂದ. ಧನ್ಯವಾದಗಳು ಮೇಡಂ.
ಪುಸಿದ್ಧ ಕ್ಷೇತ್ರ ತಲಕಾಡಿನ ಐತಿಹಾಸಿಕ ಮಾಹಿತಿಯನ್ನು ರಮೇಶರವರು ತಮ್ಮ ಪಯಣ ಸಂಚಿಕೆಯಲ್ಲಿ ಸೊಗಸಾಗಿ ತಿಳಿಸಿದ್ದಾರೆ.
ಶಾಲೆಗೆ ಹೋಗಲು ಕಷ್ಟ ಪಡಬೇಕಾದ ಊರಿನಲ್ಲಿ ಶಾಲೆಯನ್ನು ತೆರೆದ ಕುರಿತಾದ ಪುಸ್ತಕದ ಪರಿಚಯ ವಾಣಿಯಕ್ಕ ನವರಿಂದ ಚೆನ್ನಾಗಿ ಮೂಡಿ ಬಂದಿದೆ.
ದ್ವಿಶತಕದ ಅಂಚಿನಲ್ಲಿರುವ ಕ್ಲಿಷ್ಟಕರವಾದ ಪದದಂಗಳ ಸಂಚಿಕೆ ಉತ್ತಮವಾಗಿತ್ತು.
ಜಗಲಿಯ ಎಲ್ಲರಿಗೂ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************
ನಮಸ್ತೇ... ಅಪಾಯ ಬಂದಾಗ ಉಪಾಯದಿಂದ ವ್ಯವಹರಿಸಿದರೆ ಯಾವುದೇ ಕಷ್ಟಗಳನ್ನು ಎದುರಿಸಬಹುದು. ಕಥೆಯೊಂದರ ಮೂಲಕ ಕಷ್ಟ ಬಂದಾಗ ಸರಿಯಾಗಿ ನಿರ್ಧಾರದ ಮೂಲಕ ಅದನ್ನು ಹೇಗೆ ಪರಿಹರಿಸಬಹುದು ಎನ್ನುವುದನ್ನು ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಬಹಳ ಸುಂದರವಾಗಿ ತಿಳಿಸಿದ್ದಾರೆ.
ಸಮಸ್ಯೆ ನಮ್ಮಲ್ಲೇ ಬಚ್ಚಿಟ್ಟುಕೊಂಡಾಗ ಪರಿಹಾರ ಸಿಗದೆ ಸಮಸ್ಯೆಯಾಗೇ ಉಳಿದು ಆರೋಗ್ಯಕ್ಕೆ ಮಾರಕವಾಗಬಹುದು. ಸಮಸ್ಯೆಗಳನ್ನು ಇತರರೂಡನೆ ಹಂಚಿಕೊಂಡಾಗ ಪರಿಹಾರ ಸಿಗಲೂಬಹುದು. ಉತ್ತಮ ಲೇಖನ ರಮೇಶ್ ಸರ್ ರವರಿಂದ.
ವಾರದ ವೈಜ್ಞಾನಿಕ ಲೇಖನದಲ್ಲಿ ದಿವಾಕರ ಸರ್ ರವರು ನಿದ್ದೆಯಲ್ಲಿ ಕನಸು ಬೀಳಲು ಕಾರಣವಾದ ಅಂಶದ ಕುರಿತಾಗಿ ಸೊಗಸಾಗಿ ವಿವರಿಸಿದ್ದಾರೆ.
ಹೊಸದಾದ ಗಿಡವೊಂದರ ಪರಿಚಯ ಸುಂದರವಾದ ಸಂಭಾಷಣಾ ಶೈಲಿಯಲ್ಲಿ. ಪಾಂಡವರ ಬತ್ತಿ ಗಿಡದ ಪರಿಚಯ ತುಂಬಾ ಸೊಗಸಾಗಿ ಮೂಡಿ ಬಂದಿದೆ ವಿಜಯಾ ಶೆಟ್ಟಿ ಮೇಡಂ.
ತಲಕಾಡಿನ ಕುರಿತಾಗಿ ಇನ್ನಷ್ಟು ಮಾಹಿತಿಗಳು ರಮೇಶ್ ಸರ್ ರವರ ಈ ವಾರದ ಪಯಣ ಸಂಚಿಕೆಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ.
ಒಗಟುಗಳ ಕುರಿತಾದ ಇನ್ನೂ ಹೇಳು ನೋಡೋಣ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
ರಮೇಶ್ ಉಪ್ಪುಂದ ರವರ ಪದದಂಗಳ ಸಂಚಿಕೆಗೆ 200 ರ ಸಂಭ್ರಮ. ಕ್ಲಿಷ್ಟಕರವಾದ ಸಂಚಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದೀರಿ ಅಭಿನಂದನೆಗಳು ಸರ್....
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************
ಎಲ್ಲರಿಗೂ ನಮಸ್ಕಾರಗಳು.. ಪ್ರಪಂಚದಲ್ಲಿರುವ ಎಲ್ಲವೂ ಕೂಡ ಎಂದಿಗೂ ಶಾಶ್ವತವಲ್ಲ ಎನ್ನುವುದನ್ನು ಉದಾರಣೆಗಳ ಸಹಿತ ಬಹಳ ಸುಂದರವಾಗಿ ನಿರೂಪಿಸಿದ್ದಾರೆ ಶಿಕ್ಷಣಾಧಿಕಾರಿ ಯವರಾದ ಶ್ರೀ ಜ್ಞಾನೇಶ್ ಸರ್ ರವರು.
ನಿಜವಾಗಿಯೂ ಹತ್ತಿ ಎಂಬ ಬಿಳಿ ಮುತ್ತಿನ ಕರಾಮತ್ತಿನ ಕುರಿತಾದ ಸೊಗಸಾದ ಲೇಖನ ರಮೇಶ್ ಬಾಯಾರ್ ಸರ್ ರವರಿಂದ.
ಬಹುಪಯೋಗಿ ಸಸ್ಯ ಶುಂಠಿಯ ಕುರಿತಾಗಿ ವಿವರವಾದ ಮಾಹಿತಿ ಈ ವಾರದ ಸಂಚಿಕೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ.
ಪ್ರಕೃತಿ ಸೌಂದರ್ಯದ ಬೀಡಾಗಿ ಆಧ್ಯಾತ್ಮ ತಾಣವಾಗಿರುವ ಲಕ್ಷ್ಮಣ ತೀರ್ಥದ ಕುರಿತಾದ ವಿವರ ಈ ವಾರದ ಪಯಣ ಸಂಚಿಕೆಯಲ್ಲಿ ಬಹಳ ಸೊಗಸಾಗಿತ್ತು.
ನಗುವಿನಿಂದ ದೇಹಕ್ಕೆ ಚೈತನ್ಯ ತುಂಬುತ್ತದೆ. ಹಾಸ್ಯಲೇಖನಗಳನ್ನು ಒಳಗೊಂಡ ನಾಕೊಂದ್ಲ ನಾಕು ಪುಸ್ತಕದ ವಿಶ್ಲೇಷಣೆ ಶ್ವೇತಾ ಮೇಡಂರವರಿಂದ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು ಮೇಡಂ.
ಮಕ್ಕಳು ಮತ್ತು ಪೋಷಕರು ಹಾಗೂ ಶಿಕ್ಷಕರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಮಕ್ಕಳ ಮನೆ ಭೇಟಿಯ ಕುರಿತಾದ ಅನುಭವದ ಮಾತುಗಳು ಉತ್ತಮವಾಗಿದ್ದುವು - ಇದು ನನ್ನ ಸ್ವ ಅನುಭನವೂ ಹೌದು. ಯಾಕೆಂದರೆ ಪ್ರತಿ ಬಾರಿ ಭಾನುವಾರದಂದು ನಾನೂ ಕೂಡ ಮಕ್ಕಳ ಮನೆಗೆ ಭೇಟಿ ನೀಡಿದ್ದೇನೆ.
ವಾಣಿಯಕ್ಕನವರಿಂದ ಗಾಳಿಪಟ ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.
ಈ ವಾರದ ಪದದಂಗಳ ಸ್ವಲ್ಪ ಸುಲಭ ಅಂತ ಅನಿಸಿತು. ಪದದಂಗಳ ಸಂಚಿಕೆ ನಿರಂತರ ಮುಂದುವರಿಸುತ್ತಿರುವ ನಿಮಗೆ ಧನ್ಯವಾದಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
*****************************************