ಮಕ್ಕಳ ಕವನಗಳು : ಸಂಚಿಕೆ - 63, ಕವನ ರಚನೆ : ವಿನಯ್ ಕುಮಾರ್, 10ನೇ ತರಗತಿ
Wednesday, December 10, 2025
Edit
ಮಕ್ಕಳ ಕವನಗಳು : ಸಂಚಿಕೆ - 63
ಕವನ ರಚನೆ : ವಿನಯ್ ಕುಮಾರ್
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ
ದೊಡ್ಡಬಳ್ಳಾಪುರ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಪಶ್ಚಿಮದಲ್ಲಿ ಮುಳುಗುವ ನೇಸರ
ಚಿಲಿಪಿಲಿ ಹಕ್ಕಿಗಳ ಕಲರವ
ಕಲ್ಪಿಸುವುದು ನಿಶ್ಯಬ್ದದ ವಾತವರಣವ
ಕೋಗಿಲೆ ಧ್ವನಿ ಇಂಪು
ಮುಸ್ಸಂಜೆ ಬಲು ತಂಪು
ದ್ಯಾನಕ್ಕೆ ಸರಿಯಾದ ಸಮಯ
ಸಂಧ್ಯಾವಂದನೆಗೆ ಸೂಕ್ತ ಕಾಲ
ಮೆಲ್ಲನೆ ಬೀಸುವ ತಂಗಾಳಿಗೆ
ಮೖಯೊಡ್ಡುತ ನಿಂತಿರುವೆ
ಮುಸ್ಸಂಜೆಯ ಅನುಭವಿಸುತ
ನೇಸರನ ಚೆಂದದಿ
ಮುಳುಗುವ ಚಿತ್ರಣ
ನನ್ನಲ್ಲಿ ಮೂಡಿಸಿತು
ಸುಂದರ ಭಾವನೆಯನ್ನ
ಇದು ಬರೀ ಸಂಜೆಯಲ್ಲ
ಇದು ನೆಮ್ಮದಿಯ ಸಮಯ
ಇದು ಮೌನದ ಗೋಧೂಳಿ ಸಮಯ
ಇದು ಮೂಡಿಸಿತು ನೖಜ ಚಿತ್ರಣವ
.................................... ವಿನಯ್ ಕುಮಾರ್
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ
ದೊಡ್ಡಬಳ್ಳಾಪುರ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
*****************************************
ಇದಕ್ಕೆ ಉದಾಹರಣೆ
ಕನ್ನಡದ ಎರಡನೇ ರಾಷ್ಟ್ರಕವಿ
ಕತೆ ಕವನ ನಾಟಕ ಕಾದಂಬರಿ
ನಿಸ್ಸೀಮರಿವರು ಬರೆಯುವುದರಲ್ಲಿ
ಇವರ ಊರು ಕುಪ್ಪಳ್ಳಿ
ಇದು ಮಲೆನಾಡಿನ ಒಂದು ಹಳ್ಳಿ
ಅದುವೇ ಕುಪ್ಪಳ್ಳಿ ಅದುವೇ ಕುಪ್ಪಳ್ಳಿ
ಇಡೀ ದೇಶಕ್ಕೆ ಹಬ್ಬಿದ ಸಾಧನೆಯ ಬಳ್ಳಿ
ಎಲ್ಲಿಯ ಪಾಂಚಜನ್ಯ ಎಲ್ಲಿಯ ಪಕ್ಷಿಕಾಶಿ
ಹೀಗೆ ಪುಸ್ತಕಗಳು ಬರೆದಿರುವರು ರಾಶಿ ರಾಶಿ
ಇವರ ಹಸ್ತದಿಂದ ಮೂಡಿದೆ
ಶ್ರೀ ರಾಮಾಯಣ ದರ್ಶನಂ ಕೃತಿ
ಜ್ಞಾನಪೀಠ ಇವರ ಕೀರ್ತಿ
.................................... ವಿನಯ್ ಕುಮಾರ್
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ
ದೊಡ್ಡಬಳ್ಳಾಪುರ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
*****************************************
ನಿನ್ನ ಭವಿಷ್ಯದ ಹೆಜ್ಜೆ
ಓದಲು ಕುಳಿತರೆ ಬರೀ ಲಜ್ಜೆ
ಓದಿದರೆ ಬದಲಾಗುವೆ ನೀನು
ಓದದಿದ್ದರೆ ಹಾಳಾಗುವೆ ನೀನು
ದುರ್ಜನರ ಸಂಗವ ಬಿಟ್ಟು
ಓದಿ ನೋಡು ನನ್ನ ಒಮ್ಮೆ
ಆಗ ಬರುವರು ಸಜ್ಜನರು
ಭೇಟಿ ಮಾಡಲೊಮ್ಮೆ
ನಾನು ಬರೀ ಪದಗಳಿಂದ ತುಂಬಿಲ್ಲ ಮನರಂಜನೆಯಿಂದ ತುಂಬಿರುವುದರಿಂದ
ಸಂಶಯವಿಲ್ಲ ಕತೆ ಕವನ ಕಾದಂಬರಿ
ಓದಿದರೆ ನೀವು ಬುದ್ಧಿವಂತರಾಗುವಿರಿ
.................................... ವಿನಯ್ ಕುಮಾರ್
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ
ದೊಡ್ಡಬಳ್ಳಾಪುರ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
*****************************************
ಗಾಳಿ ಮಳೆ ಇದರ ವರ
ಕಡಿದರೆ ಗಾಳಿ ಮಳೆಗೆ
ಬರುವುದು ಬರ
ಮರ ಕಡಿಯುವುದನ್ನ ತಡೆಯಲು
ಜೋಡಿಸಿ ನಿಮ್ಮಯ ಕರ
ಬೆಳಸಿ ನೀವು ಗಿಡ ಮರ
ಆಗ ಉಳಿಯುವುದು ಪರಿಸರ
ಪರಿಸರವೆಲ್ಲದಿದ್ದರೆ ನಾವಿಲ್ಲ
ತಿಳಿದ ಜನಗಳು ಮರವನ್ನು ಕಡಿಯುತ್ತಿದ್ದಾರಲ್ಲ..!
ಅವರು ಅಜ್ಞಾನಿಗಳಲ್ಲ
ಆದರೂ ಮಾಡುವರಲ್ಲ..!!
ಪರಿಸರ ಉಳಿಸಲು ಕೈಜೋಡಿಸೋಣ
ಮರ ಕಡಿಯುವುದನ್ನು ತಡೆಯೋಣ
ಜನರಲ್ಲಿ ಅರಿವು ಮೂಡಿಸೋಣ
ಮುಂದಿನ ಪೀಳಿಗೆಗೆ
ಪರಿಸರವ ಉಳಿಸೋಣ
.................................... ವಿನಯ್ ಕುಮಾರ್
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ
ದೊಡ್ಡಬಳ್ಳಾಪುರ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
*****************************************
ಜೋಗ ಜಲಪಾತವನ್ನ ಜೀವನ್ದಾಗ
ಇದು ಜಿಗಿಯುವುದು
292 ಮೀಟರ್ ಎತ್ತರದಾಗ
ಇದು ಶರಾವತಿ ನದಿಯ ಒಂದು ಭಾಗ
ಇದಿರುವುದು ಕರ್ನಾಟಕದ
ಶಿವಮೊಗ್ಗ ಜಿಲ್ಲೆಯಾಗ
ಕಣ್ತುಂಬಿಕೊಳ್ಳಲು ಬರುವರು
ದೇಶ ವಿದೇಶಿ ಪ್ರವಾಸಿಗರು
ಹಾಗೆ ವನ ನಿಸರ್ಗ ಸವಿವರು
ಕವಿಗಳು ಇದನ್ನು ವರ್ಣಿಸುವರು
ಗೇರುಸೊಪ್ಪೆ ಇದರ ಇನ್ನೊಂದು ಹೆಸರು
ಇದು ಹರಿಯುವುದು ಮೌನದಲ್ಲಿ
ಮಲೆನಾಡ ನಿತ್ಯ ಹರಿದ್ವರ್ಣ ಕಾಡು ಜಾಗದಲ್ಲಿ
ಹೋಗಿ ಸೇರುವುದು ಅರಬ್ಬಿ ಸಮುದ್ರದಲ್ಲಿ
ಸುಂದರ ಭಾವನೆ ಮೂಡಿಸಿದೆ ನನ್ನಲ್ಲಿ
.................................... ವಿನಯ್ ಕುಮಾರ್
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ
ದೊಡ್ಡಬಳ್ಳಾಪುರ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
*****************************************
ವರುಷವ ತಂದಿದೆ
ಎಲ್ಲರ ಮನೆಯ ಬಾಗಲಲ್ಲೂ
ಮಾವಿನ ತೋರಣ
ಮಾವಿನ ಒಬ್ಬಟ್ಟು ಹೋಳಿಗೆಯಲ್ಲಿ ಊರಣ
ಹೊರಗಡೆ ಹೊಸ ಬಟ್ಟೆ ಧರಿಸಿದ ಮಕ್ಕಳ ಆಟ
ಒಳಗಡೆ ಒಬ್ಬಟ್ಟಿನ ಊಟ
ಯುಗಾದಿಗೆ ಬೇವು ಬೆಲ್ಲ ತಿನ್ನುವ ಚಟ
ಇದರಲ್ಲಡಗಿದೆ ಜೀವನದ ಪಾಠ
ಸುಮ್ಮನೆ ಬಂದಿಲ್ಲ ಈ ಯುಗಾದಿ
ಶುರು ಮಾಡಿದೆ ಹೊಸ ವರುಷವ ಹರುಷದಿ ಪೂರ್ವಜರು ಆಚರಿಸುತ್ತಿರುವರು ಅನಾದಿ
ಎಲ್ಲರೂ ಈ ಹಬ್ಬವ ಆಚರಿಸುವರು ಸಂತಸದಿ
ಎಲ್ಲೆಡೆ ಆಚರಿಸುವರು ಭಾರತದಲಿ
ಇದು ಬರುವುದು ಚೈತ್ರ ಮಾಸದ ಬೇಸಿಗೆಯಲಿ
ಪ್ರತಿಯೊಂದು ಗಿಡವು ಕಾಣುವುದು
ಹೊಸ ಚಿಗುರಿನಲಿ
ಎಲ್ಲರೂ ಆಚರಿಸುವರು ಪ್ರತಿ ವರುಷದಲಿ...
.................................... ವಿನಯ್ ಕುಮಾರ್
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ
ದೊಡ್ಡಬಳ್ಳಾಪುರ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
*****************************************
ಅದರ ಸುತ್ತಲೂ ಮುಳ್ಳಿತ್ತು
ಅದರ ಮೇಲೆ ಇಬ್ಬನಿ ಇತ್ತು
ನೋಡಲು ತುಂಬಾ ಸುಂದರವಾಗಿತ್ತು
ಮುಂಜಾನೆಯ ಬೆಳಕಿಗೆ ಹೂವಿನ ಮೇಲಿನ
ಇಬ್ಬನಿಯು ಹೊಳೆಯುತ್ತಿತ್ತು
ಅದರ ಆಯಸ್ಸು ಒಂದು ದಿನ ಎಂದು ಗೊತ್ತಿತ್ತು
ಅದರ ಸೌಂದರ್ಯ ನೋಡಲು
ನನ್ನ ಕಣ್ಣು ಸಾಲದಾಗಿತ್ತು
ಅದನ್ನು ಮತ್ತೆ ಮತ್ತೆ ನೋಡುವ
ಆಸೆ ನನ್ನದಾಗಿತ್ತು
ಅದು ಯಾರಿಗೂ ತಪ್ಪು ಮಾಡಿಲ್ಲಾ
ಎಂದು ಗೊತ್ತಿತ್ತು
ಅದು ಇಂದು ಬಾಡುವುದು
ತುಂಬಾ ದುಃಖ ತರಿಸಿತ್ತು
ಹೂ ಕೀಳುವ ಮನಸ್ಸು ನನ್ನದಾಗಿತ್ತು
ಕೇಳಲು ಹೋಗಿ ಮುಳ್ಳು ಚುಚ್ಚಿತು
ನನಗೆ ಒಂದು ಯೋಚನೆ ಬಂತು
ಇಷ್ಟೊಂದು ಮುಳ್ಳುಗಳ ನಡುವೆ
ಈ ಹೂವು ಸುಂದರವಾಗಿ ಹೇಗಿತ್ತು
ಹೂವಿನ ಮೇಲೆ ಇಬ್ಬನಿಯು ಬಿದ್ದಿತ್ತು
ಅದು ಅರಳುವುದಕ್ಕೆ ಕಾರಣವಾಗಿತ್ತು
ನಾಳೆ ಬಾಡುವೆನೆಂಬ ಕೊರಗಿಗೆ
ಕಣ್ಣೀರಿನ ಸಾಕ್ಷಿಯಾಗಿತ್ತು
ಹೂವಿನ ಮೇಲೆ ಒಂದು ಚಿಟ್ಟೆ ಕುಳಿತಿತ್ತು
ಹಿಡಿಯಲು ಹೋದಾಗ ಚಂಗನೆ ನೆಗೆದಿತ್ತು
ಜಾರಿ ಬಿದ್ದಾಗ ಬಣ್ಣದ ಚಿಟ್ಟೆ
ಹಾರುವುದು ಗೋಚರಿಸಿತ್ತು
ಹೂವಿನ ಮೇಲೆ ಚಿಟ್ಟೆ ಕೂರುವ ಚಿತ್ರಣವು
ಕ್ಯಾಮರದಲ್ಲಿ ಸೆರೆಯಾಗಿತ್ತು..!
.................................... ವಿನಯ್ ಕುಮಾರ್
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ
ದೊಡ್ಡಬಳ್ಳಾಪುರ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
*****************************************
ಎಲ್ಲೂ ನಿಲ್ಲದೆ ಮುನ್ನುಗ್ಗುವುದು
ರೈತರಿಗೆ ಸಹಾಯ ಮಾಡುವುದು
ಪ್ರಾಣಿ ಪಕ್ಷಿಗಳು ಉಳಿಯಲು
ಕಾರಣವಾಗಿರುವುದು
ಸೂರ್ಯೋದಯ ಸೂರ್ಯಾಸ್ತದ
ಸುಂದರವಾಗಿ ಚಿತ್ರಿಸುವುದು
ಕಾಡುಗಳ ಬೆಳೆಸುವುದು
ಪರಿಸರ ಉಳಿಸುವುದು
ಜನರಿಗೆ ಕುಡಿಯುವ
ನೀರನ್ನು ಒದಗಿಸುವುದು
ಈ ನದಿ ಕವಿಗಳಿಗೆ ಕಲ್ಪನೆಯಾಗುವುದು ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸುವುದು
ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಿಕೊಡುವುದು
.................................... ವಿನಯ್ ಕುಮಾರ್
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ
ದೊಡ್ಡಬಳ್ಳಾಪುರ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
*****************************************
ಸೂರ್ಯಾಸ್ತದ ನೋಟ
ಕಡಲ ತೀರದಲ್ಲಿ ಆಡುವ ಮಕ್ಕಳ ಆಟ
ನೋಡಿದವರಿಗೆ ಸೂರ್ಯಾಸ್ತದ ಉಣಬಡಿಸುವುದು ಸಂತೋಷದ ಊಟ
ಬಾಲ್ಯದ ನೆನಪಿನ ಜೀವನದ ಪಾಠ
ಇಲ್ಲಿಲ್ಲ ಯಾವುದೇ ಕಾಟ
ನೋಡುವವರಿಗೆ ಮಾಡುವುದು ಮಾಟ
ನೋಡಿದರೆ ಈ ಮಕ್ಕಳನ್ನ
ಮರಳಿ ತರಿಸುವುದು ಬಾಲ್ಯದ ದಿನಗಳನ್ನ
ಬಾಲ್ಯದ ದಿನಗಳು ಎಷ್ಟು ಚೆನ್ನ
ಬಾಲ್ಯದ ದಿನಗಳು ಕೊಟ್ಟರೂ ಬಾರದು ಚಿನ್ನ
ಮತ್ತೆ ಬಾಲ್ಯದ ದಿನಗಳು ಬರಲಿ
ಎಂಬುವ ಆಸೆಯನ್ನ
ಪ್ರಶ್ನೆ ಹಾಕಿಕೊಂಡೆ ನಾನೆ ನನ್ನ
ನೀರಲ್ಲಿ ಈಜಿದ್ದು
ಮರವನ್ನು ಏರಿದ್ದು
ಗಾಳಿಯನ್ನು ತಿರುಗಿಸಿದ್ದು
ಕಬ್ಬಡ್ಡಿ ಆಡಿದ್ದು
ಶಾಲೆಯಿಂದ ತಪ್ಪಿಸಿಕೊಂಡು ಓಡಿದ್ದು
ಬಾಲ್ಯದಲ್ಲಿ ಅನುಭವಿಸಿರುವೆ
ಇನ್ನೂ ಎಷ್ಟೊಂದು...!!
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ
ದೊಡ್ಡಬಳ್ಳಾಪುರ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
*****************************************