ಪ್ರೀತಿಯ ಪುಸ್ತಕ : ಸಂಚಿಕೆ - 193
Friday, December 12, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 193
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೀಬ್ರೂ ಭಾಷೆಯಲ್ಲಿ ಈ ಪುಸ್ತಕ ಮೊದಲಿಗೆ ಪ್ರಕಟವಾಗಿತ್ತು. ಅಮ್ಮಂದಿರು ಅಜ್ಜಿಯಂದಿರು ಹೆಣಿಗೆ ಕೆಲಸ ಮಾಡುವುದು ನೀವು ನೋಡಿರಬಹುದು. ಅಬ್ಬಾ.. ಈ ಅಜ್ಜಿ ಹೆಣೆಯುವ ಬಗೆ ನೋಡಿದರೆ ನೀವು ಅಚ್ಚರಿ ಪಡುತ್ತೀರಿ. ಆ ಪರಿ ಎಲ್ಲವನ್ನೂ ಹೆಣೆದುಬಿಡುತ್ತಾಳೆ ಈ ಅಜ್ಜಿ. ಅಜ್ಜಿಯ ಹೆಣಿಗೆಯ ಕಥೆ ಅವಳ ಹೆಣಿಗೆಯಂತೆಯೇ ಲಯಬದ್ಧವಾಗಿ ಓದಲು ಸೊಗಸಾಗಿದೆ. ಅಜ್ಜಿ ಪುಟ್ಟ ಪಟ್ಟಣಕ್ಕೆ ಒಂದು ಚೀಲ, ಊರುಗೋಲು ಜೊತೆಗೆ ಎರಡು ಹೆಣಿಗೆ ಕಡ್ಡಿ, ಉಣ್ಣೆ ನೂಲಿನ ಉಂಡೆಯ ಹಿಡಿದು ಬಂದಿರುತ್ತಾಳೆ. ಅಯ್ಯೋ ನಡೆದು ನಡೆದೂ ಕಾಲು ಊದಿತಲ್ಲಾ, ಹೆಣೆದಳು ಒಂದು ಜೊತೆ ಪಾದರಕ್ಷೆ. ಆಮೇಲೆ
“ಕಡ್ಡಿಯ ಕಟ ಕಟ ಹೆಣೆದಳು ಮುದುಕಿ,
ದೀಪದ ಕಂಬ, ಗೋಡೆ, ಕಿಟಕಿ,
ದೂಲ, ಕಂಬ, ಮಾಡು, ಗೋಡೆ,
ಹೆಣೆದೇ ಬಿಟ್ಟಳು ಮನೆಯನು ನೋಡಿ”
ಹೀಗೆ ಶುರು ಮಾಡುವ ಅಜ್ಜಿ ಒಂದು ಲೋಕವನ್ನೇ ಹೆಣೆದುಬಿಡುತ್ತಾಳೆ. ಹೆಣಿಗೆಯಂತಹಾ ಚಿತ್ರಗಳೂ ಪುಸ್ತಕದ ಅಂದವನ್ನು ಹೆಚ್ಚಿಸಿವೆ.
ಲೇಖಕರು : ಯೂರಿ ಓರ್ಲೆವ್
ಅನುವಾದ: ಈಶ್ವರಚಂದ್ರ
ಚಿತ್ರಗಳು: ಓರ್ ಐಟನ್
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ
ಬೆಲೆ: ರೂ.65/-
ಇದು 6-7 ತರಗತಿಯ ಮಕ್ಕಳು ಓದುವಂತಿದೆ. ಇತರ ಚಿಕ್ಕ.. ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ www.nbtindia.gov.in
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************