ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 109
Wednesday, December 17, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 109
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಮೊನ್ನೆ ನಾವು ಅರ್ಧಾಯುಷ್ಯದ ಬಗ್ಗೆ ಮಾತನಾಡುತ್ತಿದ್ದೆವು. ಅರ್ಧಾಯುಷ್ಯವನ್ನು ಮೊದಲು ಸಾಮಾನ್ಯವಾಗಿ ಮೊದಲು ವಿಕಿರಣಶೀಲ ವಸ್ತುಗಳಿಗೆ ಬಳಸುತ್ತಿದ್ದರು. ಮೇರಿ ಕ್ಯೂರಿ ತನ್ನ ಗಂಡ ಪಿಯರ್ ಕ್ಯೂರಿಯವರೊಂದಿಗೆ 1898 ರಲ್ಲಿ ಕಂಡುಹಿಡಿದ ರೇಡಿಯಂ ಮೊದಲ ವಿಕಿರಣಶೀಲ ಮೂಲವಸ್ತು ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಹೆನ್ರಿ ಬೆಕೆರಲ್ 1896 ರಲ್ಲಿ ಯುರೇನಿಯಂ ವಿಕಿರಣಶೀಲತೆಯನ್ನು ಹೊಂದಿದೆ ಎಂದು ಹೇಳಿದ್ದರು. ಆದರೂ 1898 ರಲ್ಲಿ ಗುರುತಿಸಲ್ಪಟ್ಟ ರೇಡಿಯಂ ಅನ್ನೇ ಮೊದಲ ವಿಕಿರಣ ಪಟು ಮೂಲವಸದತು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಯುರೇನಿಯಂ ಅನ್ನು ಹೆನ್ರಿ ಬೆಕೆರಲ್ ಕಂಡು ಹಿಡಿಯಲಿಲ್ಲ ಅದನ್ನು ಕಂಡುಹಿಡಿದದ್ದು ಕ್ಲಾಪ್ರೋಥ್ 1789 ರಲ್ಲಿ. ಮತ್ತು ರೇಡಿಯಂ ಯುರೇನಿಯಂ ಎಷ್ಟೋ ಪಟ್ಟು ಪ್ರಬಲವಾದ ವಿಕಿರಣ ಪಟುತ್ವವನ್ನು ಹೊಂದಿದೆ. ರೇಡಿಯಂನ ಅರ್ಧಾಯುಷ್ಯ 1600 (1620) ವರ್ಷಗಳು. ಈ ಅವಧಿಯಲ್ಲಿ 226 ರೇಡಿಯಂ 222 ರೆಡಾನ್ ಆಗ ನಂತರ ಸೀಸವಾಗಿ ಬದಲಾಗುತ್ತದೆ. ಅದೇ 238 ರೇಡಿಯಂ ನ ಅರ್ಧಾಯುಷ್ಯ 4.47 ರಿಂದ 4.5 ಬಿಲಿಯನ್ ವರ್ಷಗಳು. ಅದೇ 235 ಯುರೇನಿಯಂ ನ ಅರ್ಧಾಯುಷ್ಯ ಹೆಚ್ಚು ಕಡಿಮೆ 704 ಮಿಲಿಯನ್ ವರ್ಷಗಳು. ಇಲ್ಲಿ ಒಂದು ಗ್ರಾಂ ವಿಕಿರಣಶೀಲ ವಸ್ತು ಅರ್ಧಾಯುಷ್ಯ ಮುಗಿಯವಾಗ ಅರ್ಧ ಗ್ರಾಂ ಗೆ ಇಳಿಯುತ್ತದೆ. ಈಗ ಈ ಅರ್ಧಾಯುಷ್ಯ ಎಂಬ ಪದವನ್ನು ಕೆಲವು ರಾಸಾಯನಿಕಗಳಿಗೆ ಮತ್ತು ಕೀಟನಾಶಕಗಳಿಗೂ ಬಳಸಲಾಗುತ್ತದೆ.
ಬೇಸಾಯದಲ್ಲಿ ಕೀಟ ನಾಶಕ ಮತ್ತು ಕಳೆನಾಶಕಗಳಿಗೂ ಅರ್ಧಾಯುಷ್ಯ ಇದೆ. ಇವು ಅಲ್ಲಿಯೇ ಉಳಿಯುವುದಿಲ್ಲ. ಅವುಗಳ ಪ್ರಭಾವ ದಿನೇ ದಿನೇ ಕಡಿಮೆಯಾಗಿ ಒಂದೊಮ್ಮೆ ೦ ಆಗಿ ಬಿಡುತ್ತದೆ. ಒಂದು ನಿಯಮ ಎಂದರೆ ನೀವು ಸರಿಯಾದ ಪ್ರಮಾಣದಲ್ಲಿ (dose) ಬಳಸಬೇಕು. ಇವುಗಳಲ್ಲಿ ಎರಡು ವಿಧ. ಸಸ್ಯಾಂತರ್ಗತ ವಿಷಗಳು (systemic poison) ಸಸ್ಯದ ಒಳಗೆ ಹೀರಲ್ಪಡುತ್ತವೆ. ಇವುಗಳ ಆಯಷ್ಯ 21 ದಿನಗಳು. ಈ ಅವಧಿಯಲ್ಲಿ ಸಸ್ಯ ರಸವನ್ನು ಹೀರುವ ಕೀಟಗಳು ಸಾಯುತ್ತವೆ. ಇನ್ನೊಂದು ಸ್ಪರ್ಶ ವಿಷಗಳು (contact poison). ಇವುಗಳು ಸಸ್ಯದ ಮೇಲ್ಭಾಗದಲ್ಲಿ ಅಂಟಿಕೊಂಡಿದ್ದು ಸಂಪರ್ಕಕ್ಕೆ ಬರುವ ಕೀಟಗಳನ್ನು ಸಾಯಿಸುತ್ತವೆ. ಇವುಗಳ ಅರ್ಧಾಯುಷ್ಯ ಕಡಿಮೆ 3 ರಿಂದ 5 ದಿನಗಳು. ನೀವು ಸಸ್ಯಾಂತರ್ಗತ ವಿಷ ಬಳಸಿದ ತರಕಾರಿಗಳನ್ನು 21 ದಿನಗಳ ಒಳಗೆ ಕೊಯ್ಲು ಮಾಡಿ ಬಳಸಿದಿರಿ ಎಂದಿಟ್ಟುಕೊಳ್ಳೋಣ. ಆಗ ಅದರಲ್ಲಿ ಉಳಿದಿರುವ ಕೀಟ ನಾಶಕಗಳು ನಿಮ್ಮ ದೇಹವನ್ನು ಪ್ರವೇಶಿಸಿ ಅಲ್ಲಿ ಸಂಚಯಗೊಳ್ಳುತ್ತವೆ. ಮತ್ತು ಪ್ರತೀ ಬಾರಿ ಇದು ಹೆಚ್ಚುತ್ತಾ ಹೋಗುತ್ತದೆ. ಇಂತಹ ಕೀಟಗಳನ್ನು ಮೀನು ತಿನ್ನುತ್ತವೆ ಆಗ ಅವುಗಳ ದೇಹಕ್ಕೆ ವಿಷ ಸೇರುತ್ತದೆ. ಇಂತಹ ವಿಷ ಸೇರಿರುವ ಅನೇಕ ಹುಲ್ಲನ್ನು ಕೀಟಗಳು ತಿನ್ನುತ್ತವೆ. ಅಂದರೆ ವಿಷ ಕೀಟಗಳಿಗೆ ವರ್ಗಾವಣೆಯಾಯಿತು. ಈ ವಿಷ ತಿಂದ ಅನೇಕ ಕೀಟಗಳನ್ನು ಮೀನುಗಳು ತಿಂದಾಗ ಅವುಗಳಿಗೆ ಈ ವಿಷದ ವರ್ಗಾವಣೆಯಾಗುತ್ತದೆ. ಆದರೆ ಮೀನಿನಲ್ಲಿ ವಿಷದ ಪ್ರಮಾಣ ಏರಿಕೆಯಾಗುತ್ತದೆ. ಈ ಮೀನುಗಳನ್ನು ನಾವು ತಿನ್ನುತ್ತೇವೆ. ಅಂದರೆ ಮೀನಿನ ದೇಹದಲ್ಲಿರುವ ವಿಷಕ್ಕಿಂತ ನಮ್ಮ ದೇಹದಲ್ಲಿ ಎಷ್ಟೋ ಪಟ್ಟು ಹೆಚ್ಚು ವಿಷ ಸೇರಿಕೊಳ್ಳುತ್ತದೆ. ಹೀಗೆ ಪ್ರತಿ ಹಂತದಲ್ಲಿ ವಿಷದ ಪ್ರಮಾಣ ಏರಿಕೆಯಾಗುತ್ತದೆ. ಇದನ್ನು ನಾವು ಜೈವಿಕ ವರ್ಧನೆ (biological magnification) ಎನ್ನುವುದು. ಅಪಾಯವಾಗುವುದು ಹಾಗೆ. ಇಲ್ಲಿ ತೊಂದರೆ ಇರುವುದು ಕೀಟನಾಶಕದಿಂದ ಅಲ್ಲ ಕೀಟನಾಶಕದ ಅಸಮರ್ಪಕ ಬಳಕೆಯಿಂದ. ನೀವು ಭತ್ತದ ಬೆಳೆಗೆ ಪ್ರಾರಂಭದಲ್ಲಿ ಸಸ್ಯಾಂತರ್ಗತ ಕೀಟನಾಶಕಗಳನ್ನು ಬಳಸಬಹುದು. ಆದರೆ ಬೆಂಡೆ ಗಿಡಕ್ಕೆ? ಬೆಂಡೆ ಗಿಡ ಹೂ ಅರಳಿದ 7 ದಿನಗಳ ಒಳಗೆ ಕೊಯ್ಲಿಗೆ ಬರುತ್ತವೆ. ಇಲ್ಲಿ ನೀವು ಅಧಿಕ ಅರ್ಧಾಯುಷ್ಯದ ಸಸ್ಯಾಂತರ್ಗತ ಕೀಟನಾಶಕಗಳನ್ನು ಬಳಸಿದರೆ 7 ದಿನಗಳ ಒಳಗೆ ಕಾಯಿಗಳನ್ನು ಕೊಯ್ದರೆ ಅದರ ವಿಷ ಉಳಿದಿರುತ್ತದೆ. ಅದು ನಿಮ್ಮ ದೇಹ ಸೇರುತ್ತದೆ. ಬೆಂಡೆ ಗಿಡಕ್ಕೆ ನೀವು ಬಳಸಬೇಕಾಗಿರುವುದು 3 ದಿನ ಅರ್ಧಾಯುಷ್ಯ ಉಳ್ಳ ಸಂಪರ್ಕ ಕೀಟನಾಶಕಗಳನ್ನು. ಆದ್ದರಿಂದ ನೀವು ಕೀಟನಾಶಕಗಳನ್ನು ತರಲು ಹೋದಾಗ ಅವರಿಗೆ ನೀವು ಯಾವ ಬೆಳೆಗೆ ಯಾವ ಕೀಟಕ್ಕೆ ಬಳಸುತ್ತೀರಿ ಎಂದು ಎಂಬುದನ್ನು ವ್ಯಾಪಾರಿಗೆ ಸ್ಪಷ್ಟವಾಗಿ ತಿಳಿಸಬೇಕು.
ಅಪಾಯವಾಗುತ್ತಿರುವುದು ಕೀಟ ನಾಶಕಗಳಿಂದಲ್ಲ ಬದಲಾಗಿ ಅವುಗಳ ಅಸಮರ್ಪಕ ಬಳಕೆಯಿಂದ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************