ಪಯಣ : ಸಂಚಿಕೆ - 69 (ಬನ್ನಿ ಪ್ರವಾಸ ಹೋಗೋಣ)
Sunday, November 16, 2025
Edit
ಪಯಣ : ಸಂಚಿಕೆ - 69 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ ಪ್ರಮುಖವಾದ ಸಂತ ಫಿಲೋಮಿನಾ ಚರ್ಚ್" ಗೆ ಪಯಣ ಮಾಡೋಣ.
ಸಂತ ಫಿಲೋಮಿನಾ ಚರ್ಚ್ ಮೈಸೂರಿಗೆ ಭೂಷಣ. ನಿಯೋಗಾಥಿಕ್ ಶೈಲಿಯ ಈ ಚರ್ಚ್ ಮೈಸೂರು ಕ್ರೈಸ್ತ ಡಯೋಸಿಸ್‌ನ ಸಂತ ಫಿಲೋಮಿನಾ ಅವರ ಸ್ಮರಣೆಯಲ್ಲಿ ನಿರ್ಮಿಸಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಶಂಕುಸ್ಥಾಪನೆ ನೆರವೇರಿಸಿದ್ದರು. ಎಲ್ಲ ಕಟ್ಟಡಗಳಿಗೆ 1 ಅಡಿಪಾಯವಾದರೆ, ಇದಕ್ಕಿರುವುದು ಎರಡು. ಫಾದರ್ ಕಾಶೆಟ್ ಎಂಬುವರು ಮೈಸೂರು ಮಹಾರಾಜ ಬಳಿ ಬಂದು ಈಸ್ಟ್ ಇಂಡೀಸ್‌ನ ರಿಲಿಕ್ ಮೈಸೂರಿಗೆ ಬಂದಿದ್ದು, ಇಲ್ಲಿ ಕೆಥಡ್ರಲ್ ನಿರ್ಮಿಸಬೇಕು ಎಂಬ ಸಂದೇಶ ಕೊಟ್ಟರಂತೆ. ಅದರ ಗೌರವಾರ್ಥ ನಿರ್ಮಾಣವಾಗಿದ್ದು, ಈ ಚರ್ಚ್, ಫ್ರಾನ್ಸ್‌ನ ಡೇಲಿ ಎಂಬುವರು ವಿನ್ಯಾಸ ಮಾಡಿದ್ದಾರೆ. ಚರ್ಚ್‌ನ ಜೋಡಿ ಗೋಪುರಗಳು ಬರೋಬ್ಬರಿ 175 ಅಡಿ ಎತ್ತರವಿದೆ. ಚರ್ಚ್‌ನ ಮುಖ್ಯ ಸಭಾಂಗಣದಲ್ಲಿ 800 ಮಂದಿ ಕುಳಿತು ಪ್ರಾರ್ಥಿಸಬಹುದು.
ಮೈಸೂರಿನ ಅಶೋಕ ರಸ್ತೆಯಲ್ಲಿ ಸಂತ ಜೋಸೆಫರ ಚರ್ಚು 1840 ರಲ್ಲಿ ನಿರ್ಮಾಣವಾಗಿತ್ತು. ಅದೇ ಸ್ಥಳದಲ್ಲಿ ಪುನರ್ ನಿರ್ಮಾಣವಾದ ಗ್ರೀಕ್ ಲಕ್ಷಣಗಳನ್ನು ಹೊಂದಿರುವ ಚರ್ಚಿಗೆ ಸಂತ ಜೋಸೆಫ್ ಮತ್ತು ಸಂತ ಫಿಲೋಮಿನ ಚರ್ಚ್ ಎಂದು ಹೆಸರಿಸಲಾಯಿತು.
ಎರಡು ಮೊನಚಾದ ಮಿನಾರುಗಳು ಈ ಕಟ್ಟಡದ ಬಹುಮುಖ್ಯ ಆಕರ್ಷಣೆ. ರೋಮನ್ ಕ್ಯಾಥೋಲಿಕರಿಗೆ ಪವಿತ್ರವಾದ ಈ ಚರ್ಚಿನಲ್ಲಿರುವ ಗಾಜು ಚಿತ್ರಗಳು ಸುಂದರ ಹಾಗೂ ಗಮನಾರ್ಹ.
ಬನ್ನಿ ಒಮ್ಮೆ ಪ್ರವಾಸಕ್ಕೆ....
[ಮುಂದುವರಿಯುವುದು...]
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************