-->
ಪ್ರೀತಿಯ ಪುಸ್ತಕ : ಸಂಚಿಕೆ - 189

ಪ್ರೀತಿಯ ಪುಸ್ತಕ : ಸಂಚಿಕೆ - 189

ಪ್ರೀತಿಯ ಪುಸ್ತಕ
ಸಂಚಿಕೆ - 189
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
    

                 ಬಾಹ್ಯಾಕಾಶದಲ್ಲಿ ಒಂದು ಹಾಡು
                       ಕೇಸರ ಬಾಯಿ ಕೇರ್ಕರ್ 
ಪ್ರೀತಿಯ ಮಕ್ಕಳೇ.. ಇದು ಒಂದು ವಿಶೇಷವಾದ ಕಥೆ. ಪುಟ್ಟ ಕೇಸರ ಳಿಗೆ ಹಾಡುವುದು ಬಹಳ ಅಚ್ಚುಮೆಚ್ಚು. ಯಾರು ಕೇಳಿಸಿಕೊಳ್ಳುವುದೂ ಅವಳಿಗೆ ಮುಖ್ಯವಾಗಿರಲಿಲ್ಲ. ಹಕ್ಕಿ, ಮರ, ಚಂದ್ರ, ಸೂರ್ಯ, ನಕ್ಷತ್ರಗಳಿಗಾಗಿ ಹಾಡುತ್ತಿದ್ದಳು. ಇಂತಹ ಹುಡುಗಿಯ ಹಾಡು ಬಾಹ್ಯಾಕಾಶದಲ್ಲಿ ಹೇಗೆ ಪಸರಿಸಿತು ಎಂಬುದು ವಿಸ್ಮಯವೇ ಸರಿ. 1970ರ ದಶಕದಲ್ಲಿ ಅಮೇರಿಕಾ (ನಾಸಾ) ಬಾಹ್ಯಾಕಾಶ ಪರಿಣಿತರು ಮತ್ತು ವಿಜ್ಞಾನಿಗಳು ನಕ್ಷತ್ರಗಳ ನಡುವೆ ಇರುವ ಸ್ಥಳಕ್ಕೆ ಗಗನ ನೌಕೆಯೊಂದು ಕಳುಹಿಸಲು ಯೋಜಿಸಿದರು. ಈ ನೌಕೆಗೆ ವೋಯೇಜರ್ ಎಂದು ಹೆಸರಿಟ್ಟರು. ವೋಯೇಜರ್ ಅಲ್ಲಿ ಹೋದಾಗ ಅನ್ಯಲೋಕದ ಜೀವಿ ಸಂಧಿಸಿದರೆ ಅವರಿಗೊಂದು ಕೊಡುಗೆ ಕೊಡಬೇಕು ಅಂತ ವಿಜ್ಞಾನಿಗಳಿಗೆ ಅನಿಸಿತು. ದೃಶ್ಯ ಮತ್ತು ಶಬ್ದಗಳಿರುವ ಗೋಲ್ಡನ್ ರೆಕಾರ್ಡ್ ಕೊಡುವ ನಿರ್ಧಾರ ಮಾಡಿದರು. ಈ ತಂಡ ಹಗಲು ಇರುಳು ಎಂಬಂತೆ, ತಿಂಗಳುಗಳ ಕೆಲಸ ಮಾಡಿ ಸಿದ್ದಪಡಿಸಿದ ರೆಕಾರ್ಡಿನಲ್ಲಿ ಕೇಸರಳ ಹಾಡು ಸೇರಿಸಿಕೊಂಡರು.. ಅಚ್ಚರಿ ಅನಿಸುವುದಿಲ್ಲವೇ? ಅವಳ ಹಾಡನ್ನು ಅಲ್ಲಿ ಯಾರ್ಯಾರು ಕೇಳಿರಬಹುದು ಅಲ್ಲವೇ? 

ಲೇಖಕರು : ನೇಹಾ ಸಿಂಗ್
ಚಿತ್ರಗಳು: ಶುಭಶ್ರೀ ಮಾಥೂರ್ 
ಅನುವಾದ: ಕೇಶವ ಮಳಗಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.85/-

ಪ್ರಥಮ್ ಪ್ರಕಾರ ಇದು 4ನೇ ಹಂತದ ಪುಸ್ತಕ. ಸುಲಭವಾಗಿ ಓದುವ ಸಾಮರ್ಥ್ಯವಿರುವ ಮಕ್ಕಳಿಗಾಗಿ; ವಿಶ್ವಾಸದಿಂದ ಓದಬಲ್ಲಂತಹ ದೊಡ್ಡ ಮಕ್ಕಳಿಗಾಗಿ..

ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 

Ads on article

Advertise in articles 1

advertising articles 2

Advertise under the article