ಮಕ್ಕಳ ಕವನಗಳು : ಸಂಚಿಕೆ - 62, ಕವನ ರಚನೆ : ಬಾಲಕೃಷ್ಣ.ಬಿ, ಪ್ರಥಮ ಪಿಯುಸಿ
Saturday, November 1, 2025
Edit
ಮಕ್ಕಳ ಕವನಗಳು : ಸಂಚಿಕೆ - 62
ಕವನ ರಚನೆ : ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪರಿಸರ ಪರಿಸರ
ನೀನೇ ಅಚ್ಚ ಹಸಿರಿನ ಸಡಗರ
ಉಸಿರು ಉಸಿರು ಗಾಳಿ ನೀನು
ನನ್ನ ಉಸಿರಿನ ಹಸಿರು ನೀನು
ಹಸಿವು ಹಸಿವು ಅನ್ನದಿಂದಲೇ ತಾನೆ ಹಸಿವು
ಸುಂದರ ಸುಂದರ ಪ್ರಕೃತಿ ನೀ ಮನೋಹರ
ಸೊಗಸಾಗಿ ಸೊಗಸಾಗಿ ಕಾಣುವುದು
ಅಮೋಘ ಪ್ರಕೃತಿಯ ಸೌಂದರ್ಯ
ಬೊಗಸೆ ತುಂಬಾ ಬೊಗಸೆ ತುಂಬಾ
ಆಸೆ ಇರುವುದು ಅಂತೂ ಸಹಜ
ಆಸೆ ದುಃಖಕ್ಕೆ ಮೂಲವಾಗುವುದು
ಅಂತೂ ನಿಜ....!!
....................................... ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಸುಂದರವಾದ ಜಲಪಾತ
ಎಷ್ಟು ಅಮೋಘವಾಗಿದೆ ಆ ಪ್ರಪಾತ
ಸುಂದರವಾದ ಪರಿಸರದ ಮಧ್ಯದಲ್ಲಿ ಕಾಣುತ್ತಿರುವುದು ಆ ಪ್ರಪಾತ
ಎಷ್ಟೊಂದು ನೀರನ್ನು
ಒಟ್ಟಾಗಿ ಸೇರಿಸಬಹುದು ಆ ಜಲಪಾತ
ಒಗ್ಗಟ್ಟನ್ನು ತಿಳಿಸುವುದು ಆ ಪ್ರಪಾತ
ಸೌಂದರ್ಯತೆಯ ಚೆಲುವನ್ನು
ಕೊಡುವುದು ಪರಿಸರಕ್ಕೆ
ಆ ಜಲಪಾತ...
....................................... ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ನಾ ನಿಸ್ವಾರ್ಥಿಯಾಗಿರುವೆ
ಒಂಟಿತನದಿಂದ ಬೇಸತ್ತು ಹೋಗಿರುವೆ
ಹಲವಾರು ಕಷ್ಟವನ್ನು ಎದುರಿಸಿದ ವ್ಯಕ್ತಿಯಾಗಿರುವೆ
ನಿನ್ನ ಸೋಲನ್ನು ಸ್ವೀಕರಿಸಿ
ಗೆಲುವಿನತ್ತ ನೀ ಸಾಗಿರುವೆ
ಹೇ ಮನುಜ ನೀ ಅದ್ಭುತ ವ್ಯಕ್ತಿಯಾಗಿರು
ಸಂಕಷ್ಟಗಳ ಏರುಪೇರುಗಳನ್ನು ದಾಟಿ
ದುಃಖದ ಭಾವನೆಗಳನ್ನು ನೀ ಮೆಟ್ಟಿ
ಯಶಸ್ಸಿನತ್ತ ನೀ ಕಾಲಿಡುವೆ
ಕೊನೆಗೆ ನಿನ್ನ ಯಶಸ್ಸನ್ನು ಕಂಡು
ನೀ ಖುಷಿಯಾಗಿರುವೆ
ಹೇ ಮನುಜ ನೀ ಅದ್ಭುತ ವ್ಯಕ್ತಿಯಾಗಿರು
ನಿನ್ನವರು ನಿನ್ನ ಜೊತೆ ಇಲ್ಲವೆಂದು
ಅತ್ತು ನೀ ಕೂರಬೇಡ
ಯಶಸ್ಸಿನ ಸೇತುವೆಯಿಂದ
ನೀ ದೂರವಿರಬೇಡ
ನಿನ್ನವರು ನಿನ್ನ ಜೊತೆ ಇಲ್ಲವೆಂದು
ದುಃಖಿಸದೆ ಇರು
ನಿನ್ನ ಉಜ್ವಲ ಭವಿಷ್ಯಕ್ಕಾಗಿ ನೀನು
ಕಷ್ಟವನ್ನು ಪಡುತ್ತಿರು
ಹೇ ಮನುಜ ನೀ ಅದ್ಭುತ ವ್ಯಕ್ತಿಯಾಗಿರು
....................................... ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಪ್ರಕೃತಿಮಾತೆಯ ಮಡಿಲಲ್ಲಿ
ನಿತ್ಯ ಪ್ರಾಣಿ ಪಕ್ಷಿಗಳ ಹಾರಾಟ
ಸೊಗಸಾಗಿ ಕಾಣುತ್ತಿಹುದು ಅವುಗಳ ಚೀರಾಟ
ಪ್ರಕೃತಿಯ ಸೌಂದರ್ಯಕ್ಕೆ
ಮನಸೋತ ಪ್ರೇಕ್ಷಕ ನಾನು
ಆ ಪ್ರಕೃತಿಯ ವೈಯಾರದ
ಸುಮಧುರ ಕ್ಷಣಗಳನ್ನು
ಕಂಡಿರುವೆಯಾ ನೀನು...?
....................................... ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಕನ್ನಡವಂ ಅರಿತು
ಕನ್ನಡವಂ ಕಲಿಸಿ
ಕನ್ನಡ ನಾಡಿನ ಪರಿಪೂರ್ಣ
ಜಗದೊಳ್ ನಾ ಪುಟ್ಟಿರ್ದು
ಎನ್ನ ಹೆಮ್ಮೆ
ಅದೋ!!! ಗಂಧದಗುಡಿ
ಇದೋ!!! ಚಂದದ ಗುಡಿ
ನಮ್ಮ ಕರ್ನಾಟಕ ರಾಜ್ಯದ
ಅಂದದ ಮಂದಿ
ಕರುನಾಡ ರಾಜ್ಯದ
ಹೆಮ್ಮೆಯ ಮಣ್ಣಿನ ಮಂದಿ.....
............................................. ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************