ಪ್ರೀತಿಯ ಪುಸ್ತಕ : ಸಂಚಿಕೆ - 187
Saturday, November 1, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 187
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಇದು ನಿಮ್ಮ ಮನೆಯ ಕತೆಯ ಹಾಗೆಯೇ ಇದೆ. ನಿಮಗೆ ನಿಮ್ಮ ಸಾಕುಪ್ರಾಣಿಗಳ ಮೇಲೆ ಪ್ರೀತಿ ಹುಟ್ಟಿದ್ದರೆ, ಇಂತಹ ಅದೆಷ್ಟೋ ಕಥೆಗಳು ನಿಮ್ಮ ಹತ್ತಿರದಲ್ಲೇ ನಡೆಯುತ್ತಿರುತ್ತದೆ. ಇಲ್ಲಿ ಪುಟ್ಟ ಮಿನ್ನಿ ಅವಳ ಬೆಕ್ಕು ಪೂನಿಯನ್ನು ಹುಡುಕಾಡುವ ಕಥೆ ಇದೆ. ಪುಟ ತುಂಬಾ ಚಿತ್ರವಿದೆ. ಪ್ರತಿಯೊಂದು ಪುಟದಲ್ಲೂ ಪೂನಿ ಓದುವ ನಮಗೆ ಕಾಣುತ್ತಿರುತ್ತದೆ, ಆದರೆ ಮಿನ್ನಿಗೆ ಕಾಣಿಸುವುದಿಲ್ಲ. ಅಮ್ಮನ ಹತ್ತಿರ ಕೇಳುತ್ತಾಳೆ; ಕೂಗಿ ಕೂಗಿ ಕರೆಯುತ್ತಾಳೆ; ಗಿಣಿಯಮ್ಮನ ಕೇಳುತ್ತಾಳೆ; ಶ್ರೀಮತಿ ಕೊಡೆಯ ಹತ್ತಿರ ಕೇಳುತ್ತಾಳೆ; ಶಾಲೆಗೆ ಹೋಗುವ ಹುಡುಗಿಯರ ಹತ್ತಿರ ಕೇಳುತ್ತಾಳೆ. ಟೀಚರ್ ಹತ್ತಿರ ಕೇಳುತ್ತಾಳೆ.. ಹೀಗೇ ಎಲ್ಲರ ಬಳಿಯೂ ಪೂನಿಯ ಒಂದೊಂದು ಗುರುತು ಹೇಳುತ್ತಾ ಹುಡುಕುತ್ತಾಳೆ. ಅವಳ ಜೊತೆ ನೀವೂ ಉ ಹುಡುಕಿ, ಅವಳಿಗೆ ಸಹಾಯ ಮಾಡಿ. ಸಿಕ್ಕರೆ ಅದೆಷ್ಟು ಸಂತೋಷವಾಗಬಹುದು.
ಲೇಖಕರು : ಮಂಜುಳಾ ಪದ್ಮನಾಭನ್
ಚಿತ್ರಗಳು: ಮಂಜುಳಾ ಪದ್ಮನಾಭನ್
ಅನುವಾದ: ಅಶ್ವಿನಿ ಭಟ್
ಪ್ರಕಾಶಕರು:ತುಲಿಕಾ
ಬೆಲೆ: ರೂ.135/-
ಇದು 2+ ವರುಷದ ಮಕ್ಕಳಿಗಾಗಿ ಇದೆ. ಇನ್ನೂ ಸ್ವಲ್ಪ ದೊಡ್ಡವರಿಗೂ ಇಷ್ಟವಾಗಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com email: tulikabooks@vsnl.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************