ದೀಪಾವಳಿ ಹಬ್ಬ... ಬರಹ : ಅನಿಶಾ 8ನೇ ತರಗತಿ
Friday, October 24, 2025
Edit
ಮಕ್ಕಳ ಲೇಖನ : ದೀಪಾವಳಿ ಹಬ್ಬ...
ಬರಹ : ಅನಿಶಾ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ದೀಪಾವಳಿ ಹಬ್ಬವು ಬೆಳಕಿನ ಹಬ್ಬವಾಗಿದೆ. ದೀಪಗಳನ್ನು ಬೆಳಗುವ ಹಬ್ಬವಾಗಿದೆ.
ದೀಪಗಳನ್ನು ಹಚ್ಚುವಾಗ ನಮಗೆ ಕತ್ತಲೆಯೂ ದೂರವಾಗುತ್ತದೆ. ತಮ್ಮ ಮನೆಗಳನ್ನು ಗುಡಿಸಿ ಒರೆಸಿ ಸ್ವಚ್ಛಗೊಳಿಸಿ ದೀಪಗಳನ್ನು ಬತ್ತಿಗಳು ಮತ್ತು ರಂಗೋಲಿಗಳಿಂದ ಅಲಂಕರಿಸುತ್ತೇವೆ.
ಆ ದಿನ ಕೊಬ್ಬರಿ ಎಣ್ಣೆ ಹಚ್ಚಿ ಸ್ನಾನ ಮಾಡುತ್ತೇವೆ. ಹೊಸ ಬಟ್ಟೆಗಳನ್ನು ಧರಿಸುತ್ತೇವೆ. ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ಹಾಗೂ ಪಕ್ಕದ ಮನೆಯವರಿಗೆ ಸಿಹಿ ತಿಂಡಿಗಳನ್ನು ಕೊಡುತ್ತೇವೆ. ರಾತ್ರಿ ಪಟಾಕಿಗಳನ್ನು ಸಿಡಿಸುತ್ತೇವೆ.
ಗಣಪತಿ ಮತ್ತು ಲಕ್ಷ್ಮಿ ದೇವರನ್ನು ಪೂಜಿಸುವುದು ಹಬ್ಬದ ಒಂದು ಭಾಗವಾಗಿದೆ. ಈ ಹಬ್ಬ ನಮ್ಮ ಭಾರತ ದೇಶದ ಅತ್ಯಂತ ಪ್ರಮುಖ ಮತ್ತು ಸಂತೋಷವಾದ ಹಬ್ಬವಾಗಿದೆ. ಈ ಹಬ್ಬವು ಹಿಂದುಗಳು ಸಿಕ್ಕರು ಬೌದ್ಧರು ಮತ್ತು ಜೈನರು ಆಚರಿಸುತ್ತಾರೆ.
ಹಿಂದೂ ಧರ್ಮದಲ್ಲಿ ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪವಾಳಿಯನ್ನು ಕೆಲವರು ಆಚರಿಸುತ್ತಾರೆ. ಅಮಾವಾಸ್ಯೆಯ ಹಿಂದಿನ ದಿನ ನರಕ ಚತುರ್ದಶಿ ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪವಾಳಿಯಲ್ಲಿ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ಆದುದರಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ನಿಮಗೆಲ್ಲರಿಗೂ ಇನ್ನೊಮ್ಮೆ ದೀಪಾವಳಿ ಹಬ್ಬದ ಶುಭಾಶಯಗಳು.
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************