ಮಕ್ಕಳ ಕವನಗಳು : ಸಂಚಿಕೆ - 61, ಕವನ ರಚನೆ : ಸೃಷ್ಟಿ ಸುಭಾಷ್ ಚವ್ಹಾಣ, 5ನೇ ತರಗತಿ
Friday, October 31, 2025
Edit
ಮಕ್ಕಳ ಕವನಗಳು : ಸಂಚಿಕೆ - 61
ಕವನ ರಚನೆ : ಸೃಷ್ಟಿ ಸುಭಾಷ್ ಚವ್ಹಾಣ
5ನೇ ತರಗತಿ
ಸ.ಹಿ.ಪ್ರಾ. ಶಾಲೆ, ಆನಂದ ನಗರ
ಹುಬ್ಬಳ್ಳಿ ಶಹರ, ಧಾರವಾಡ ಜಿಲ್ಲೆ
ಜೀವ ಶಕ್ತಿಯು ನನ್ನ ಕನ್ನಡ
ಪರಭಾಷೆ ಕಲಿಯಲು ಆಧಾರ
ಮಾತೃ ಭಾಷೆ ನನ್ನ ಕನ್ನಡ
ನನ್ನ ಮನದ ಆಸೆ ಫಲಿಸುವ
ಬಲವು ನೆಚ್ಚಿನ ನನ್ನ ಕನ್ನಡ
ಭಾವಕೆ ಜೀವ ತುಂಬುವ ವರವು
ನಿತ್ಯ ನೂತನ ನನ್ನ ಕನ್ನಡ
ದುಡಿಮೆ ಬೆಲೆಯನು ತಿಳಿಸಿದ
ಮಹಾಮನೆ ಮಮತೆ ಮಹಾ ಕನ್ನಡ
ಬಯಕೆ ಭಾವನೆ ವಿಚಾರ ಹಂಚಿಕೊಳ್ಳುವ
ಸಾಧನವು ಕರುಳಿನ ನುಡಿ ಕನ್ನಡ
ಅಮ್ಮನೆದೆ ಹಾಲಿನ ಧಾರೆಯಲಿ
ಚಿಮ್ಮಿದ ಸುಧೆಯಿದು ಕನ್ನಡ
ಅಪ್ಪನ ಲಾಲನೆ ಪಾಲನೆಯಲಿ
ಮೂಡಿದ ಸೊಗಸಿನ ಕನ್ನಡ
ವರಕವಿ ನಾಡಲಿ ರಸ ಋಷಿ ಬೀಡಲಿ
ಸರಿಗಮ ಪದನಿಸ ಸವಿ ಕನ್ನಡ
ಶಾಸನಗಳ ಬಿತ್ತಿ ದೇಗುಲ ತೊಟ್ಟಿಲಲಿ
ಬೆಳೆದು ಬಂದ ಸುಂದರ ಕನ್ನಡ
5ನೇ ತರಗತಿ
ಸ.ಹಿ.ಪ್ರಾ. ಶಾಲೆ, ಆನಂದ ನಗರ
ಹುಬ್ಬಳ್ಳಿ ಶಹರ, ಧಾರವಾಡ ಜಿಲ್ಲೆ
*****************************************