ಪ್ರೀತಿಯ ಪುಸ್ತಕ : ಸಂಚಿಕೆ - 183
Saturday, October 4, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 183
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಸಾಣೆ ಹಿಡಯುವ ಸಲೀಮನ ಕತೆ ಚೆನ್ನಾಗಿದೆ. ನಿಮ್ಮ ಊರಿನಲ್ಲಿ ನೀವೂ ಸಾಣೆ ಹಿಡಿಯಲು ಬರುವವರನ್ನು ನೋಡಿರಬಹುದು. ಕತ್ತಿ, ಕತ್ತರಿ, ಚಾಕು ಸಾಣೆ ಹಿಡಿದು ಕೊಡುತ್ತಾರಲ್ಲಾ..ಸಲೀಮನೂ ಹಾಗೆ, ರೋಮ್..ರೋಮ್..ರೋಮ್್ ಚುರ್ರ್ ಚುರ್ರ್..ಅಂತ ಸದ್ದು ಮಾಡುತ್ತಾ ಸಾಣೆ ಹಿಡಿಯುತ್ತಾನೆ. ಆದರೆ ಅವನಿಗೆ ಸಾಣೆ ಹಿಡಿಯುವ ಕೆಲಸದಲ್ಲಿ ಸಿಗುವ ಹಣ ಒಂದು ಒಳ್ಳೆಯ ಊಟಕ್ಕೂ ಸಾಕಾಗುವುದಿಲ್ಲ. ಈದ್ ಹಬ್ಬವೂ ಸಮೀಪಿಸುತ್ತಿದೆ. ಏನು ಮಾಡುವುದು? ಅದೃಷ್ಟ ಪರೀಕ್ಷೆ ಮಾಡಲು ನಿರ್ಧಾರ ಮಾಡುತ್ತಾನೆ. ಕಾಡಿನ ಮತ್ತೊಂದು ಬದಿಗೆ ಹೊರಡುತ್ತಾನೆ. ಕಾಡು ದಾಟುವಾಗ ಭಯ ಆಗುತ್ತದೆ. ಆದರೆ ಕತೆ ಇಲ್ಲಿಂದ ತಮಾಷೆಯಾಗಿ ಬೆಳೆಯುತ್ತದೆ. ಏನು ಗೊತ್ತಾ? ಸಿಂಹ ಒಂದು ಅವನನ್ನು ಹಿಂಬಾಲಿಸುತ್ತದೆ, ಮುದಿ ಸಿಂಹ.. ಅದರ ಹಲ್ಲು.. ಬೆರಳು ಮೊಂಡಾಗಿರುತ್ತದೆ.. ಸಲೀಮನ ಬಳಿ ತನ್ನ ಹಲ್ಲು ಬೆರಳುಗಳಿಗೆ ಸಾಣೆ ಹಿಡಿದು ಚೂಪು ಮಾಡುವಂತೆ ಕೇಳಿಕೊಳ್ಳುತ್ತದೆ..ಸಲೀಮ ಏನು ಮಾಡಿರಬಹುದು? ಆಮೇಲೆ ಏನು ಆಗಿರಬಹುದು..ಚಂದ ಚಂದದ ಚಿತ್ರ ನೋಡುತ್ತಾ ಪುಸ್ತಕ ಓದಿ.
ಲೇಖಕರು : ಆರ್. ಅಮರೇಂದ್ರನ್
ಚಿತ್ರಗಳು: ಅಶೋಕ್ ರಾಜಗೋಪಾಲನ್
ಅನುವಾದ: ಜಯಶ್ರೀ ಕಾಸರವಳ್ಳಿ
ಪ್ರಕಾಶಕರು:ತುಲಿಕಾ
ಬೆಲೆ: ರೂ.175/-
ಇದು 4+ ವರುಷದ ಮಕ್ಕಳಿಗಾಗಿ ಇದೆ. ಚಿಕ್ಕವರಿಗೂ ಇನ್ನೂ ಸ್ವಲ್ಪ ದೊಡ್ಡವರಿಗೂ ಇಷ್ಟವಾಗಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com email: tulikabooks@vsnl.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************