ನಾನು ಓದಿದ ಪುಸ್ತಕ : ಸಂಚಿಕೆ - 07
Wednesday, October 8, 2025
Edit
ನಾನು ಓದಿದ ಪುಸ್ತಕ : ಸಂಚಿಕೆ - 07
ಪುಸ್ತಕದ ಹೆಸರು: ಓ ಮನಸೇ ತುಸು ನಿಧಾನಿಸು
ಓದು ಮತ್ತು ಬರಹ : ಸುಪ್ರಿಯ
ಸಹ ಶಿಕ್ಷಕಿ
ದಿಗಂಬರ ಜೈನ ಆಂಗ್ಲಮಾಧ್ಯಮ ಶಾಲೆ
ಮೂಡಬಿದಿರೆ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ.
Mob : +91 94820 45181
ಸುಮಾರು 5 ವರ್ಷಗಳ ಹಿಂದೆ "ಥ್ಯಾಂಕ್ಯೂ ಟೀಚರ್" ಎಂಬ ಪುಸ್ತಕವನ್ನು ಓದಿದ ನಾನು, ಅಲ್ಲಿಂದ ಇಲ್ಲಿಯವರೆಗೆ ವಿರೂಪಾಕ್ಷ ದೇವರ ಮನೆಯವರ ಎಲ್ಲಾ ಪುಸ್ತಕಗಳನ್ನು ಬಹಳ ಆಸ್ಥೆ ಯಿಂದ ಓದಿದ್ದೇನೆ. ನನ್ನ ನೆಚ್ಚಿನ ಬರಹಗಾರರಲ್ಲಿ ವಿರೂಪಾಕ್ಷ ದೇವರ ಮನೆಯವರೂ ಒಬ್ಬರು. ಅವರ ಪುಸ್ತಕಗಳು ಕೇವಲ ಆ ದಿನದ ಓದಿಗೆ ಮಾತ್ರ ಸೀಮಿತವಾಗುವುದಿಲ್ಲ. ನನ್ನ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನುದ್ದಕ್ಕೂ ಅನೇಕ ಬಾರಿ ದೇವರ ಮನೆಯವರ ಬರಹಗಳು ನನಗೆ ದಾರಿದೀಪವಾಗಿವೆ.
ಇತ್ತೀಚಿಗೆ ದೇವರ ಮನೆಯವರ ಹತ್ತನೇ ಪುಸ್ತಕ "ಓ ಮನಸೇ ತುಸು ನಿಧಾನಿಸು" ಬಿಡುಗಡೆಯಾಯಿತು. ಪುಸ್ತಕ ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಪುಸ್ತಕ ನನ್ನ ಕೈಯಲ್ಲಿತ್ತು. ನಮ್ಮ ನಿತ್ಯ ಜೀವನದ ಒತ್ತಡ, ಜಂಜಾಟಗಳು, ಕೋಪ, ದ್ವೇಷ, ಹತಾಶೆ, ನೋವು, ಸೋಲು, ಒಂಟಿತನ, ನಿರಾಸೆ, ಏಕತಾನತೆ ಇವೆಲ್ಲವುಗಳಿಂದ ಹೊರಬರಲು ಸಹಾಯವಾಗುವ ದಾರಿದೀಪವಾಗಿ ಈ ಪುಸ್ತಕ ಮೂಡಿಬಂದಿದೆ.
ಪುಸ್ತಕದ ಮುನ್ನುಡಿಯಿಂದ ಬೆನ್ನುಡಿಯವರೆಗಿನ ಪ್ರತಿ ಮಾತುಗಳು, ಪ್ರತಿ ಶಬ್ದಗಳು ನಮಲ್ಲಿ ಹೊಸ ಚೈತನ್ಯವನ್ನು ಉಂಟುಮಾಡುತ್ತದೆ. ಇಲ್ಲಿ ನೀಡಿರುವ ಕೆಲವೊಂದು ಉದಾಹರಣೆಗಳು ನಮ್ಮ ಜೀವನದಲ್ಲಿ ಅಥವಾ ನಮ್ಮ ಆಪ್ತರ ಜೀವನದಲ್ಲಿ ನಡೆದಿರಬಹುದಾದ ಘಟನೆಗಳಿಗೆ ಹತ್ತಿರದ ಸಂಬಂಧವನ್ನು ಕಲ್ಪಿಸುತ್ತದೆ, ಹಾಗಾಗಿ ಇಲ್ಲಿ ನೀಡಿರುವ ಸಲಹೆಗಳು ನಮಗೆ ಇಷ್ಟವಾಗುವುದರ ಜೊತೆಗೆ ನಮ್ಮ ಬದುಕಿನಲ್ಲಿನ ಸಮಸ್ಯೆಗಳಿಗೆ ಪರಿಹಾರೋಪಾಯವನ್ನು ಕೂಡ ಸೂಚಿಸುತ್ತದೆ. ಸಂಬಂಧಗಳು ಜೀವಂತವಾಗಿರಲು ಸರಳ ಸೂತ್ರಗಳು, ಪುಟ್ಟ ಕಥೆಗಳ ಮೂಲಕ ಬದುಕಿನ ಸಮಸ್ಯೆಗಳನ್ನು ಹಾಗೂ ಅವುಗಳಿಗೆ ಕಂಡುಕೊಳ್ಳುವ ಪರಿಹಾರಗಳನ್ನು ಅತ್ಯಂತ ಸೊಗಸಾಗಿ ಬರಹದ ರೂಪಕ್ಕೆ ಇಳಿಸಿರುವುದು ಲೇಖಕರ ಬರವಣಿಗೆಯ ಕೌಶಲ್ಯದ ಬಗ್ಗೆ ಗೌರವ ಮೂಡುತ್ತದೆ. ಅಲ್ಲಲ್ಲಿ ಕೆಲವೊಂದು ಪುಟಗಳಲ್ಲಿ ದಪ್ಪ ಅಕ್ಷರಗಳಲ್ಲಿ ಬರೆದಿರುವ ಪ್ರೇರಣದಾಯಕ ಮಾತುಗಳು ನಮ್ಮಲ್ಲಿ ಹೊಸದೊಂದು ಚೈತನ್ಯವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ನಮ್ಮನ್ನು ನಾವು ಇರುವ ಹಾಗೆಯೇ ಒಪ್ಪಿಕೊಂಡು ನಮ್ಮ ಬದುಕನ್ನು ಸುಂದರವಾಗಿಸಲು ಬಯಸುವ ಪ್ರತಿಯೊಬ್ಬರು ಓದಲೇಬೇಕಾದ ಪುಸ್ತಕ ಇದಾಗಿದೆ.
ಸಹ ಶಿಕ್ಷಕಿ
ದಿಗಂಬರ ಜೈನ ಆಂಗ್ಲಮಾಧ್ಯಮ ಶಾಲೆ
ಮೂಡಬಿದಿರೆ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ.
Mob : +91 94820 45181
******************************************