ಅಂಚೆ ಕಾರ್ಡಿನಲ್ಲಿ ಡಾ.ಕೋಟ ಶಿವರಾಮ ಕಾರಂತರ ಚಿತ್ರ ರಚನಾ ಸ್ಪರ್ಧೆ
Wednesday, September 24, 2025
Edit
ಅಂಚೆ ಕಾರ್ಡಿನಲ್ಲಿ ಡಾ.ಕೋಟ ಶಿವರಾಮ ಕಾರಂತರ ಚಿತ್ರ ರಚನಾ ಸ್ಪರ್ಧೆ
ಕಲ್ಕೂರ ಪ್ರತಿಷ್ಠಾನ, ರಿ. ಮಂಗಳೂರು ಇದರ ಆಶ್ರಯದಲ್ಲಿ 2025, ಅಕ್ಟೋಬರ್, 10ರಂದು ಹಿರಿಯ ಸಾಹಿತಿ ಡಾ.ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವ - ಹುಟ್ಟುಹಬ್ಬದ ಸಮಾರಂಭವು ಜರಗಲಿದ್ದು , ಇದರ ಸಲುವಾಗಿ ಅಂಚೆ ಕಾರ್ಡಿನಲ್ಲಿ ಕಾರಂತರ ಚಿತ್ರ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯ ಮಟ್ಟದ ಸ್ಪರ್ಧೆ :
ಎಸ್.ಎಸ್.ಎಲ್.ಸಿ ವರೆಗಿನ ವಿಭಾಗ ಮತ್ತು ಮುಕ್ತ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಪೆನ್ಸಿಲ್ ನಿಂದ ' ಕಪ್ಪು-ಬಿಳುಪು' ಚಿತ್ರಗಳನ್ನು ಮಾತ್ರ ರಚಿಸಬೇಕು. ಇದು ರಾಜ್ಯ ಮಟ್ಟದ ಸ್ಪರ್ಧೆಯಾಗಿದ್ದು ವಿಜೇತರಿಗೆ ಬಹುಮಾನವನ್ನು 2025 ಅಕ್ಟೋಬರ್ 10ರಂದು ಮಂಗಳೂರಿನಲ್ಲಿ ಜರಗಲಿರುವ ಸಮಾರಂಭದಲ್ಲಿ ವಿತರಿಸಲಾಗುವುದು.
ಕೊನೆಯ ದಿನಾಂಕ :
2025, ಅಕ್ಟೋಬರ್ 6ರೊಳಗಾಗಿ ಅಂಚೆ ಕಾರ್ಡ್ ಗಳನ್ನು ಸ್ವ-ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ...
ವಿಳಾಸ :
ಜಾನ್ ಚಂದ್ರನ್ (ಸಂಚಾಲಕರು)
ಅಂಚೆ ಕಾರ್ಡ್ ನಲ್ಲಿ ಚಿತ್ರ ರಚನಾ ಸ್ಪರ್ಧಾ ವಿಭಾಗ
ಕಲ್ಕೂರ ಪ್ರತಿಷ್ಠಾನ
ಶ್ರೀ ಕೃಷ್ಣ ಸಂಕೀರ್ಣ
ಮಹಾತ್ಮ ಗಾಂಧಿ ರಸ್ತೆ,
ಕೊಡಿಯಾಲ್ ಬೈಲ್, ಮಂಗಳೂರು
ಈ ವಿಳಾಸಕ್ಕೆ ತಲಪುವಂತೆ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.