-->
ನೀಲಿಕುದುರೆಯನ್ನು ಹುಡುಕುತ್ತಾ ಸಾಗಿದಾಗ..

ನೀಲಿಕುದುರೆಯನ್ನು ಹುಡುಕುತ್ತಾ ಸಾಗಿದಾಗ..

ಲೇಖನ : ನೀಲಿಕುದುರೆಯನ್ನು ಹುಡುಕುತ್ತಾ ಸಾಗಿದಾಗ..
ಬಿ.ವಿ ಕಾರಂತ ಪುಣ್ಯಸ್ಮರಣೆ ದಿನ ಸೆಪ್ಟೆಂಬರ್ -1 : ವಿಶೇಷ ಲೇಖನ 
ಬರಹ : ಶ್ರೀನಿಧಿ ಪಾತೂರು
ಪಾತೂರು ಅಂಚೆ
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
Mob : +91 91136 58352
   

ಆಗ ನಾನು ಮಂಚಿ-ಕೊಳ್ನಾಡು ಪ್ರೌಢ ಶಾಲೆಯ ಎಂಟನೇಯ ತರಗತಿಯ ವಿದ್ಯಾರ್ಥಿ. “ನಾಟಕಕ್ಕೆ ಸೇರಲು ಆಸಕ್ತಿ ಇರುವವರು ಕೈ ಎತ್ತಿ” ಎಂದಾಗ ನಾನು ಸೇರಿಕೊಂಡೆ. ಆದರೆ ಆ ನಾಟಕದ ಅನುಭವ ನನ್ನ ಬದುಕಿನಲ್ಲಿ ಅಷ್ಟೊಂದು ಪರಿಣಾಮ ಬೀರುತ್ತದೆ ಎಂದು ಭಾವಿಸಿರಲಿಲ್ಲ.

ಅದು ಬಿ.ವಿ ಕಾರಂತರ “ನೀಲಿ ಕುದುರೆ” ಎಂಬ ನಾಟಕವಾಗಿತ್ತು. ನೀನಾಸಂ ಕಲಾವಿದರಾದ ಮೋಹನ್‌ ಶೇಣಿ ಹಾಗೂ ಬಿಂದು ರಕ್ಷಿದಿ ನಮಗೆ ತರಬೇತಿ ನೀಡಿದವರು. ಕಲಾ ಶಿಕ್ಷಕರಾದ ತಾರನಾಥ ಕೈರಂಗಳ್‌ ಅವರ ನಿರಂತರ ಮಾರ್ಗದರ್ಶನ, ಅಂದಿನ ಮುಖ್ಯ ಶಿಕ್ಷಕರಾದ ಶ್ರೀರಾಮ ಮೂರ್ತಿ, ನಮ್ಮ ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳ ಪ್ರೋತ್ಸಾಹದಿಂದ ಹಲವಾರು ಕಡೆ ನಮ್ಮ ನಾಟಕವನ್ನು ಪ್ರದರ್ಶಿಸುವ ಅವಕಾಶ ದೊರೆಯಿತು. 

ಕಾರಂತರ ಹುಟ್ಟೂರಿನಲ್ಲಿ ಅವರ ಕಥಾ ಪಾತ್ರವನ್ನು ಅಭಿನಯಿಸಲು ನನಗೆ ಸಾಧ್ಯವಾಗಿರುವುದು ದೊಡ್ಡ ಭಾಗ್ಯ. ಮುಡಿಪು ಜನಶಿಕ್ಷಣದಲ್ಲಿ ನಡೆದ ಪ್ರದರ್ಶನವನ್ನು ಜಿಲ್ಲಾಧಿಕಾರಿ ಭರತ್ ಲಾಲ್ ಮೀನಾ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

“ನೀಲಿ ಕುದುರೆ” ಕೇವಲ ಒಂದು ಕುದುರೆಯಲ್ಲ ಅದೊಂದು ಕನಸಿನ ಕುದುರೆ. ಮಕ್ಕಳು ಭಯವನ್ನು ಬಿಟ್ಟು ತಮ್ಮ ಕನಸುಗಳನ್ನು ಹಿಂಬಾಲಿಸಬೇಕು ಎಂಬುದು ಕಾರಂತರ ಆಸೆಯಾಗಿತ್ತು. ಮೂಲತಃ ಪೋರ್ಚುಗೀಸ್‌ ಭಾಷೆಯಲ್ಲಿ ಲೇಖಕಿ ಮಾರಿಯಾ ಕ್ಲಾರ ಮಾಷಡೋ ಅವರು ರಚಿಸಿರುವ ಈ ನಾಟಕವನ್ನು ಕಾರಂತರು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಕೆಲವೊಂದು ವಿಚಾರಗಳು ಹೀಗೆ... ದೇಶ, ಭಾಷೆ, ಗಡಿ ಹಾಗೂ ಸಮಯಕ್ಕೆ ಸೀಮಿತವಾಗದೆ ಎಂದಿಗೂ ಎಲ್ಲರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ಅಂದು ನಾಟಕದಲ್ಲಿ ನನ್ನ ಕನಸಿನ ಕುದುರೆಯನ್ನು ಹುಡುಕುತ್ತಾ ಹೋದ ಹಾಗೆ ಇಂದು ನನ್ನ ಕನಸಿನ ಹಿಂದೆ ಹೋಗಿ ಕನಸನ್ನು ನನಸು ಮಾಡಲು ನಾನು ನಡೆಸುವ ಪ್ರಯತ್ನಕ್ಕೆ ಈ ನಾಟಕ ಪ್ರೇರಣೆ ನೀಡುತ್ತಿದೆ. ಹಾಗೆಯೇ ಕಾರಂತರು ಇಂದಿಗೂ ನನ್ನ ಕನಸಿನ ಭಾಗವಾಗಿದ್ದಾರೆ.
..................................... ಶ್ರೀನಿಧಿ ಪಾತೂರು
ಪಾತೂರು ಅಂಚೆ
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
Mob : +91 91136 58352
*****************************************


Ads on article

Advertise in articles 1

advertising articles 2

Advertise under the article