ಜಗಲಿ ಕಟ್ಟೆ : ಸಂಚಿಕೆ - 75
Sunday, September 7, 2025
Edit
ಜಗಲಿ ಕಟ್ಟೆ : ಸಂಚಿಕೆ - 75
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ತುಂಬಾ ದಿನಗಳ ನಂತರ ಜಗಲಿ ಕಟ್ಟೆಯಲ್ಲಿ ನಾವೆಲ್ಲ ಸೇರಿಕೊಳ್ಳುತ್ತಿದ್ದೇವೆ... ಈ ನಡುವೆ ತುಂಬಾ ಹಬ್ಬಗಳು ನಡೆದು ಹೋಯಿತು. ಅಬ್ಬರದ ಮಳೆಯ ಕಾರಣಕ್ಕೆ ಹಲವು ರಜೆಗಳು ಸಿಕ್ಕಿತು. ಶಾಲೆಗಳಲ್ಲಿ ಈಗ ಪಾಠ - ಪರೀಕ್ಷೆ ನಡೆಸುವ ತರಾತುರಿಯಲ್ಲಿದ್ದೇವೆ. ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರಗಳನ್ನು ಬರಿಯುವ ಓದುವ ತುಂಬಾ ಒತ್ತಡ. ಶೈಕ್ಷಣಿಕ ಸಾಲಿನ ಅರ್ಧ ವರ್ಷವೇ ಮುಗಿಯುತ್ತಾ ಬಂತು. ದಿನಗಳು ಎಷ್ಟೊಂದು ವೇಗವಾಗಿ ನಡೆಯುತ್ತಿದೆಯಲ್ಲವೇ..?
ಈ ಬಾರಿ ಮಕ್ಕಳ ಜಗಲಿಯಲ್ಲಿ ವಿಶ್ವ ಪರಿಸರ ದಿನ, ಸ್ವಾತಂತ್ರ್ಯೋತ್ಸವ, ಗಣೇಶನ ಹಬ್ಬ ಹೀಗೆ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಟಾಸ್ಕ್ ಗಳನ್ನು ಕೊಟ್ಟಿರಲಿಲ್ಲ. ಬೇರೆ ಬೇರೆ ಒತ್ತಡದ ಕಾರ್ಯಕ್ರಮಗಳಿದ್ದುದರಿಂದ ಇದು ಸಾಧ್ಯವಾಗಿರಲಿಲ್ಲ. ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ಜಗಲಿಯ ಪೋಷಕರು ಸಿಕ್ಕಿ ಫೋಟೋ ಎಲ್ಲಾ ಕ್ಲಿಕ್ಕಿಸಿಕೊಂಡರು. "ಈಗ ನಿಮ್ಮ ಮನೆ ಮಕ್ಕಳು ಜಗಲಿಗೆ ಬರೆಯದೆ ತುಂಬಾ ಸಮಯಗಳಾಯ್ತಲ್ಲ" ಎಂದಾಗ.. ಯಾವುದೇ ಟಾಸ್ಕ್ ಗಳು ನೀಡದೇ ಇರುವ ಕುರಿತು ತಿಳಿಸಿದರು. ಈ ಕಾರಣದಿಂದ ಶಿಕ್ಷಕರ ದಿನಾಚರಣೆಯ ವಿಶೇಷವಾಗಿ "ನನ್ನ ಪ್ರೀತಿಯ ಟೀಚರ್" ಕುರಿತಾಗಿ ಒಂದೇ ದಿನದ ಅವಕಾಶ ನೀಡಿ ಬರಹಗಳನ್ನು ಆಹ್ವಾನಿಸಲಾಗಿತ್ತು. ಕೇವಲ ಒಂದೇ ಒಂದು ದಿನದಲ್ಲಿ ಹಲವಾರು ಬರಹಗಳು ಬಂದಿತ್ತು. ಅವನ್ನು ಸಂಚಿಕೆಗಳ ರೂಪದಲ್ಲಿ ಪ್ರಕಟಿಸಿದ್ದೇವೆ... ಸಣ್ಣ ಅವಧಿಯಲ್ಲಿ ದೊಡ್ಡಮಟ್ಟದ ಸ್ಪಂದನೆ ನೀಡಿದ ಜಗಲಿಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಜಗಲಿಯ ಹಿತೈಷಿಗಳಿಗೆ (ಹಿರಿಯರಿಗೆ) ವಂದನೆಗಳು.
ಮಕ್ಕಳ ಜಗಲಿಯ ಶ್ರೀರಾಮ ಮೂರ್ತಿ ಸರ್ ಪ್ರತಿ ವಾರ ಕೂಡ ಜಗಲಿಯ ಪಕ್ಷಿ ನೋಟವನ್ನು ನೀಡುತ್ತಿದ್ದಾರೆ. ವಾರದಲ್ಲಿ ಬರುವ ಯಾವುದೇ ಬರಹಗಳನ್ನು ಬಿಡದೆ ಓದಿ ಪ್ರತಿಕ್ರಿಯೆ ರೂಪದಲ್ಲಿ ಜಗಲಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಕೂಡ ಸ್ಪೂರ್ತಿದಾಯಕ ಮಾತುಗಳನ್ನು ನೀಡುತ್ತಿದ್ದಾರೆ. ಇದು ಜಗಲಿಯ ಜೀವಂತಿಕೆಗೆ ಕಾರಣವಾಗಿದೆ.
ನವೆಂಬರ್ 14 - 2025 ಕ್ಕೆ ಮಕ್ಕಳ ಜಗಲಿಯ ಐದನೇ ವರ್ಷದ ಹುಟ್ಟುಹಬ್ಬ. ಐದು ವರ್ಷಗಳು ಸಂದಿರುವ ವೇಗ ಕಂಡರೆ ನಿಜವಾಗಲೂ ಹೆಮ್ಮೆ ಅನಿಸುವುದು. ಜನ ಶಿಕ್ಷಣ ಟ್ರಸ್ಟ್ ನ ಸ್ಥಳಾವಕಾಶದಲ್ಲಿ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಇವರ ಉಪಸ್ಥಿತಿಯ ಜೊತೆ ಜಗಲಿಯ ಕುಟುಂಬವೆಲ್ಲ ಒಟ್ಟು ಸೇರಿ ಆರಂಭ ಮಾಡಿದ ಮಕ್ಕಳ ಜಗಲಿ ಇಂದು ಎಲ್ಲರ ಮನ- ಮನೆಗಳಿಗೆ ತಲುಪಿರುವುದು ಜಗಲಿಯ ಬಳಗದ ಹಾಗೂ ನಿಮ್ಮೆಲ್ಲರ ಪ್ರೀತಿಯ ಸಹಕಾರದಿಂದ.
ಈಗಾಗಲೇ ಜ್ಞಾನೇಶ್ ಸರ್ ಅವರ "ಜೀವನ ಸಂಭ್ರಮ" 200 ಸಂಚಿಕೆಗಳನ್ನು ದಾಟಿ ಸಾಗುತ್ತಿದೆ. ಜೊತೆಗೆ ಇವರ ಲೇಖನಗಳು ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿರುವುದು ಸಂತಸ ತಂದಿದೆ. ರಮೇಶ್ ಬಾಯಾರ್ ಸರ್ ಅವರ "ಸ್ಫೂರ್ತಿಯ ಮಾತುಗಳು", ವಾಣಿ ಪೆರಿಯೋಡಿ ಅವರ "ಪ್ರೀತಿಯ ಪುಸ್ತಕ", ರಮೇಶ ನಾಯ್ಕ ಉಪ್ಪುಂದರವರ "ಪದದಂಗಳ", ಇನ್ನೇನು ಸಂಚಿಕೆಗಳು 200 ರ ಗಡಿಯಲ್ಲಿ ಇವೆ. ವಿಜಯ ಶೆಟ್ಟಿ ಸಾಲೆತ್ತೂರು ಇವರ "ನಿಷ್ಪಾಪಿ ಸಸ್ಯಗಳು" ನೂರರ ಗಡಿ ದಾಟಿ ಸಂಚಿಕೆಗಳು ಬೆಳೆಯುತ್ತಿದೆ. ನಿವೃತ್ತ ಪ್ರಾಚಾರ್ಯರಾದ ದಿವಾಕರ ಶೆಟ್ಟಿ ಇವರ "ಮಕ್ಕಳಿಗಾಗಿ ವಿಜ್ಞಾನ" ನೂರರ ಕಂತು ತುಂಬುವ ಭರದಲ್ಲಿದೆ. ಈಗಾಗಲೇ ಗೋಪಾಲಕೃಷ್ಣ ನೇರಳಕಟ್ಟೆಯವರ "ಬದಲಾಗೋಣವೇ ಪ್ಲೀಸ್" ನೂರು ಸಂಚಿಕೆ ಪೂರ್ಣಗೊಂಡಿತ್ತು. ಅರವಿಂದ ಕುಡ್ಲ ಇವರ ಹಕ್ಕಿಕತೆ ನೂರೈವತ್ತು ಸಂಚಿಕೆ ಪೂರ್ಣಗೊಂಡಿತ್ತು. ರಮೇಶ್ ನಾಯ್ಕ ಉಪ್ಪುಂದರವರ ಪಯಣ ಸಂಚಿಕೆಗಳು 50ರ ಗಡಿ ದಾಟಿ ಮುಂದುವರಿಯುತ್ತಿದೆ. ತೇಜಸ್ವಿ ಅಂಬೆಕಲ್ಲು ಇವರ "ಅಕ್ಕನ ಪತ್ರ" ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿ ಆದಿ ಸ್ವರೂಪ ಇವರ "ಆದಿಯ ಪತ್ರ" 50 ಸಂಚಿಕೆಗಳನ್ನು ಪೂರ್ಣಗೊಳಿಸಿತ್ತು. ಜಗಲಿಯ ಗುರುರಾಜ್ ಇಟಗಿಯವರ "ಓ ಮುದ್ದು ಮನಸೇ.." ಲೇಖನಗಳು ಮುಂದುವರಿಯುತ್ತಿದ್ದು ಈಗಾಗಲೇ ಪುಸ್ತಕ ರೂಪದಲ್ಲಿ ತೆರೆಕಂಡಿದೆ. ಈ ನಡುವೆ ಶಿಕ್ಷಕರ ಸ್ಕೂಲ್ ಡೈರಿ ಮೂಲಕ ರಮ್ಯಾ ಆರ್ ಭಟ್, ಶ್ರೀಮತಿ ಸುಪ್ರಿಯ, ಇನ್ನೂ ಅನೇಕರು ಬೇರೆ ಬೇರೆ ಲೇಖನಗಳ ಮೂಲಕ ಬಿಡುವಿರುವಾಗ ಬರೆಯುತ್ತಾ ಮಕ್ಕಳ ಜಗಲಿಯಲ್ಲಿ ತೊಡಗಿಸಿಕೊಂಡ ವಿದ್ಯಾ ಕಾರ್ಕಳ, ಮಹೇಶ್ ಕುಮಾರ್ ವಿ ಕರ್ಕೇರ, ಹರಿಣಾಕ್ಷಿ ಕಕ್ಯಪದವು, ಚಿತ್ರಾಶ್ರೀ ಕೆ ಎಸ್, ಪ್ರೇಮನಾಥ ಮರ್ಣೆ, ಲೋಕೇಶ್ ಸರ್ಕುಡೇಲು, ತುಳಸಿ ಕೈರಂಗಳ, ಶ್ರೀಮತಿ ಸುರೇಖಾ ಹಾಗೂ ಇನ್ನೂ ಅನೇಕರನ್ನು ಸ್ಮರಿಸಲೇಬೇಕು. ಜಗಲಿಯ ಮೂಲಕ ಬರಹದ ಹವ್ಯಾಸವನ್ನು ಹೆಚ್ಚಿಸಿಕೊಂಡ ಕವಿತಾ ಶ್ರೀನಿವಾಸ ದೈಪಲ, ವಿದ್ಯಾಗಣೇಶ್ ಚಾಮೆತ್ತಮೂಲೆ, ಶುಭ ತಾಳಿತ್ತನೂಜಿ, ಪ್ರತಿಮಾ ತುಂಬೆ ಪ್ರತಿಯೊಬ್ಬರೂ ಕೂಡ ಜಗಲಿಯ ಬೆಳವಣಿಗೆಯಲ್ಲಿ ಸಾಕ್ಷಿಗಳಾಗಿದ್ದಾರೆ.
ಇವೆಲ್ಲ ಮಕ್ಕಳ ಜಗಲಿಯ ಮೂಲಕ ಐದು ವರ್ಷಗಳಲ್ಲಿ ನಡೆದು ಹೋದ ಪ್ರಗತಿಯ ಸಂಕೇತಗಳು. ಈ ನಡುವೆ ಸಾವಿರಾರು ಮಕ್ಕಳು ಚಿತ್ರ ಬರೆದು, ಕವನ , ಕತೆ, ಲೇಖನಗಳನ್ನು ಬರೆದು ಪುಸ್ತಕ ರೂಪದಲ್ಲಿ ಹೊರತಂದಿರುವುದು ಅಭಿಮಾನ ಮೂಡಿಸುವ ಸಾಧನೆಗಳು. "ಕೊರೋನಾ" ಸಂದಿಗ್ಧತೆಯ ಕಾಲವು ಊರಿಗೆ ಮಾರಿಯಾದರೂ ಮಕ್ಕಳ ಜಗಲಿಯಂತಹ ಸೃಜನಶೀಲ ವೇದಿಕೆಗಳನ್ನು ಸೃಷ್ಟಿಸಲು ಒಂದು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************
ಕಳೆದ ಸಂಚಿಕೆಯ ಜಗಲಿಕಟ್ಟೆ - 74 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಕೆಲವು ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ನಮಸ್ತೇ,
ಕರ್ಮ ಸ್ವರೂಪದ ವಿವಿಧ ಮಜಲುಗಳನ್ನು ಅದ್ಭುತವಾಗಿ ವ್ಯಾಖ್ಯಾನಿಸಿದ್ದಾರೆ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು. ಧನ್ಯವಾದಗಳು ಸರ್...
ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಹೆಸರನ್ನು ಶಾಶ್ವತವಾಗಿಡೋಣ ಎನ್ನುವ ಉತ್ತಮ ಸಂದೇಶವನ್ನು ನೀಡಿದ ಲೇಖನಕ್ಕಾಗಿ ಧನ್ಯವಾದಗಳು ರಮೇಶ್ ಸರ್...
ಅಗತ್ಯವಿದ್ದಾಗ ಮಾತ್ರ ಹಸಿರು ಬಣ್ಣ ಬೆಳಕಿನ ಏರು ಪೇರು ಆದಾಗ ನೀಲಿ ಅಥವಾ ಹಳದಿ ಬಣ್ಣದ ಮೂಲಕ ಶಕ್ತಿ ಉತ್ಪಾದನೆಯ ರಹಸ್ಯ ತಿಳಿದುಕೊಂಡಂತಾಯಿತು. ಸಸ್ಯಗಳು ಹಸಿರನ್ನು ಪೂರ್ತಿ ಉಪಯೋಗಿಸಿದರೆ... ಮುಂದಿನ ವಾರಕ್ಕೆ ಕಾಯಬೇಕು. ವಿಜ್ಞಾನ ರಹಸ್ಯಗಳನ್ನು ಉಣಬಡಿಸುತ್ತಿರುವ ತಮಗೆ ಧನ್ಯವಾದಗಳು ಸರ್....
ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರವಾಗ ನಮಗೆಲ್ಲರಿಗೂ ಸೀಗೆ ಪುಡಿಯೇ ಸ್ನಾನಕ್ಕೆ ನೈಸರ್ಗಿಕ ಸಾಬೂನು. ಈಗ ಈ ಮರವೇ ಕಾಣೆ. ಅಳಿವಿನಂಚಿನಲ್ಲಿರುವ ಸೀಗೆ ಕಾಯಿ ಗಿಡದ ಸಂಪೂರ್ಣ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಮೇಡಂ.
ಪ್ರಾಥಮಿಕ ಶಾಲಾ ಹಂತದ ಪ್ರಥಮ ತರಗತಿಯಲ್ಲೇ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವ ಕುರಿತಾಗಿ ನಮ್ಮೂರ ಶಾಲಾ ಸುದ್ದಿ ಸಂಚಿಕೆಯಲ್ಲಿ ವಿಣಾದೇವೀಶ್ ರವರು ಚೆನ್ನಾಗಿ ವಿವರಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಜರಮಡಗು ಜಲಪಾತದ ಕುರಿತಾದ ಅಗತ್ಯ ಮಾಹಿತಿ ಸಿಕ್ಕಂತಾಯಿತು. ಧನ್ಯವಾದಗಳು ರಮೇಶ್ ಸರ್.....
ಶಿಕ್ಷಕರು ಹೇಳುವ ಪ್ರತಿಯೊಂದು ಮಾತು ಕೂಡ ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರುತ್ತೆ ಎನ್ನುವುದನ್ನು ತಮ್ಮ ಅನುಭವದ ಬುತ್ತಿಯಲ್ಲಿ ಸೊಗಸಾಗಿ ತಿಳಿಸಿದ್ದಾರೆ ರಮ್ಯಾ ಮೇಡಂ ರವರು ಶಿಕ್ಷಕರ ಡೈರಿ ಸಂಚಿಕೆಯಲ್ಲಿ.
ಈ ವಾರದ ಪುಸ್ತಕ ಪರಿಚಯದಲ್ಲಿ ವಿಶೇಷವಾಗಿ ಜೆ.ಪಿ ರಾಜರತ್ನಂ ರವರ ಕವನ ಸಂಕಲನದ ಪರಿಚಯ ಪಾಪು ಮತ್ತು ಪೀಪಿ ಸೊಗಸಾಗಿ ಮೂಡಿ ಯಬಂದಿದೆ ವಾಣಿಯಕ್ಕ.
ಕ್ಲಿಷ್ಟಕರ ಪದದಂಗಳ ಸಂಚಿಕೆಯನ್ನು ಮುನ್ನಡೆಸುತ್ತಿರುವ ರಮೇಶ್ ಸರ್ ರವರಿಗೆ ಧನ್ಯವಾದಗಳು.
ಈ ವಾರ ಜಗಲಿಯಲ್ಲಿ ಪ್ರಕಟವಾದ ಬಾಲಕೃಷ್ಣ, ಮಂದಾರ, ಶ್ರಾವ್ಯ, ಅಭಿಜ್ಞಾ, ಸುನಿಧಿ ಹಾಗೂ ಮನಸ್ವಿಯವರ ಕವನಗಳು ಮನೋಜ್ಞವಾಗಿದ್ದುವು. ಜೊತೆಗೆ ಸಮೃದ್ಧಿಯವರು ರಚಿಸಿದ ಚಿತ್ರಗಳು ಸೊಗಸಾಗಿದ್ದುವು. ಮಕ್ಕಳೆಲ್ಲರಿಗೂ ಪ್ರೀತಿಪೂರ್ವಕ ಅಭಿನಂದನೆಗಳು.
ರಜೆಯ ಓದು ಸಂಚಿಕೆಯಲ್ಲಿ ಅಶ್ವಿನ್ ರಾವ್ ರವರು ಎರಡು ಪ್ರಮುಖ ಹಾಗೂ ಪುಸಿದ್ಧ ಆಂಗ್ಲ ಕಾದಂಬರಿಗಳ ಕುರಿತಾಗಿ ಸೊಗಸಾಗಿ ವಿಶ್ಲೇಷಿಸಿದ್ದಾರೆ ಧನ್ಯವಾದಗಳು ಸರ್.
ಕೊನೆಯದಾಗಿ ಜಗಲಿಯ ಬಳಗದ ಎಲ್ಲರಿಗೂ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ನಮಸ್ತೇ,
ಕರ್ಮ ಹಾಗೂ ಯೋಗದಲ್ಲಿರುವ ವಿವಿಧ ಅಂಶಗಳನ್ನು ಸುಂದರವಾಗಿ ತಮ್ಮ ಸಂಚಿಕೆಯಲ್ಲಿ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ವಿವರಿಸಿದ್ದಾರೆ ಧನ್ಯವಾದಗಳು ಸರ್.
ನಮ್ಮಲ್ಲಿರುವ ಸಂಶಯವೇ ನಮ್ಮ ವಿನಾಶಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಸೊಗಸಾಗಿ ಪ್ರಸ್ತುತಪಡಿಸಿದ್ದೀರಿ.. ಧನ್ಯವಾದಗಳು ರಮೇಶ್ ಸರ್ ರವರಿಗೆ.
ಸಸ್ಯಗಳು ಹಸಿರು ಬಣ್ಣವನ್ನು ಪ್ರತಿಫಲಿಸಿ ಹಸಿರಾಗಿ ಕಾಣುವ ಕಾರಣವನ್ನು ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದೀರಿ ಸರ್.. ಧನ್ಯವಾದಗಳು.
ಹಾಲೆ ಮರದ ಪೌರಾಣಿಕ ಹಿನ್ನಲೆ ಹಾಗೂ ಅದರ ಔಷಧೀಯ ಗುಣ ಮುಂತಾದ ವಿಷಯಗಳ ಕುರಿತು ಸಕಾಲಿಕ ಲೇಖನ. ಮರಗಳ ಉಳಿವು ನಮ್ಮೆಲ್ಲರ ಉಳಿವೂ ಹೌದು. ಗಿಡಮರಗಳ ಉಳಿವಿನ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ನಿಮಗೆ ನನ್ನ ಹೃತ್ಸೂರ್ವಕ ವಂದನೆಗಳು ಮೇಡಂ.
ತರಗತಿಯಲ್ಲಿರುವಾಗಲೇ ತಾನು ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆನ್ನುವ ಕನಸನ್ನು ಹೊತ್ತ ತಮ್ಮದೇ ವಿದ್ಯಾರ್ಥಿಯ ಕನಸು ನನಸಾದ ಕುರಿತಾದ ಜನಾರ್ಧನ ಸರ್ ರವರ ಲೇಖನ ಮನಸ್ಸಿಗೆ ತುಂಬಾ ಮುದ ನೀಡಿತು.
ಸುಂದರ ಛಾಯಾಚಿತ್ರಗಳೊಂದಿಗೆ ಸುಳ್ಯ ತಾಲೂಕಿನ ದೇವರ ಗುಂಡಿ ಜಲಪಾತದ ಮಾಹಿತಿ ರಮೇಶ್ ರವರ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
ವಿಶೇಷವಾಗಿ ಮಕ್ಕಳಿಗಾಗಿಯೇ ಇರುವ ಪುಸ್ತಕ ಚಿಕ್ಕ ಕುಂಭಕರ್ಣದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
ಎಂದೂ ಮನೆಗೆಲಸ ಮಾಡದ ಹುಡುಗ ಟೀಚರ್ ಹೇಳಿದ ಚಾಲೆಂಜ್ ಸ್ವೀಕರಿಸಿ ಹೋಮ್ ವರ್ಕ್ ಮಾಡಿ ಶಿಕ್ಷಕಿಯ ಮಾತನ್ನು ಉಳಿಸಿಕೊಟ್ಟ ಅನುಭವದ ಲೇಖನ ಸುಪ್ರಿಯಾ ಮೇಡಂ ರವರಿಂದ ಉತ್ತಮವಾಗಿ ಮೂಡಿ ಬಂದಿದೆ.
ನಾಯಕತ್ವದ ಗುಣ ಹೇಗಿರಬೇಕು ಹಾಗೂ ನಾಯಕನಾಗಿ ದೇಶ ಸೇವೆಗೈಯುವ ಕುರಿತಾದ ಮಹತ್ವಾಕಾಂಕ್ಷಿ ಲೇಖನ ಧನ್ಯ ರವರಿಂದ ಉತ್ತಮವಾಗಿತ್ತು. ಅನೀಶರವರ ಕವನಗಳ ಗೊಂಚಲುಗಳು ಸೊಗಸಾಗಿದ್ದುವು. ನವ್ಯರವರ ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು.
ಈ ವಾರ ಚಾರ್ಲಿ ಚಾಕಲೇಟ್ ಪ್ಯಾಕ್ಟರಿ, ಲಿಟಲ್ ಉಮೆನ್, ಪೀಟರ್ ಪಾನ್ ಹಾಗೂ ಸಿಕ್ರೆಟ್ ಗಾರ್ಡನ್ ಎನ್ನುವ ನಾಲ್ಕು ಆಂಗ್ಲ ಕಾದಂಬರಿಗಳ ಪರಿಚಯ ಅಶ್ವಿನ್ ರಾವ್ ರವರಿಂದ ಚೆನ್ನಾಗಿ ಮೂಡಿ ಬಂದಿದೆ.
ಪದದಂಗಳ ಸಂಚಿಕೆ ಚೆನ್ನಾಗಿ ಮಾಡಿಬರುತ್ತಿದೆ. ಧನ್ಯವಾದಗಳು ರಮೇಶ್ ಸರ್.
ಕೊನೆಯದಾಗಿ ಎಲ್ಲರಿಗೂ ಮನದಾಳದ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ಮಾನ್ಯ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರ ಜೀವನ ಸಂಭ್ರಮ ಸಂಚಿಕೆಗೆ 200 ರ ಸಂಭ್ರಮ. ನಿಜಕ್ಕೂ ತುಂಬಾ ಖುಷಿ ಪಡುವ ವಿಚಾರ. ತಮ್ಮ ದೈನಂದಿನ ಬಿಡುವಿಲ್ಲದ ಕೆಲಸಗಳ ನಡುವೆ ಮಕ್ಕಳ ಜಗಲಿಯ ಎಲ್ಲರಿಗೂ ನಿರಂತರ ಹೊಸ ಹೊಸ ವಿಷಯಗಳನ್ನು ಉಣ ಬಡಿಸಿ ಜಗಲಿಯ ಕಳೆಯನ್ನು ಹೆಚ್ಚಿಸಿದ್ದೀರಿ. ನಿಮ್ಮ ಬರಹ ನಿರಂತರವಾಗಿ ನಮಗೆಲ್ಲರಿಗೂ ಈ ಮೂಲಕ ದೊರಕಲಿ ಎನ್ನುವ ಆಶಯದೊಂದಿಗೆ ಹೃತ್ಪೂರ್ವಕ ವಂದನೆಗಳೊಂದಿಗೆ ಅಭಿನಂದನೆಗಳು ಸರ್. ಪ್ರಸ್ತುತ ಸಂಚಿಕೆಯಲ್ಲಿ ಮಾನವ ಅತಿ ಮೋಹದಿಂದ ಹೇಗೆ ಅಧಪತನಕ್ಕೆ ಜಾರುತ್ತಾನೆ ಎನ್ನುವುದನ್ನು ಸುಂದರವಾದ ಕಥೆಯ ಮೂಲಕ ಪ್ರಸ್ತುತ ಪಡಿಸಿದ್ದೀರಿ. ಉತ್ತಮ ಸಂಚಿಕೆ. ಧನ್ಯವಾದಗಳು ಸರ್....
ಪರಸ್ಪರ ಕನೆಕ್ಟ್ ಆಗದಿದ್ದರೆ ಯಾವ ಕಾಯ೯ ಸಾಧನೆಯೂ ಆಗಲಾರದು. ಪರಸ್ಪರ ಹೀಗೆ ಜೋಡಣೆಯಾಗಲು (ಕನೆಕ್ಟ್ ಆಗಲು) ನಮ್ಮಲ್ಲಿರುವ ಅಹಂನ್ನು ತ್ಯಜಿಸಲೇಬೇಕು. ಉದಾಹರಣೆ ಸಹಿತ ಸುಂದರ ಲೇಖನ ರಮೇಶ್ ಬಾಯಾರ್ ರವರಿಂದ.
ಲೋಕಾಭಿರಾಮ ಹರಟೆಯೊಂದಿಗೆ ಜೀವವಿಕಾಸದ ಮೊದಲ ಹಂತದ ಸುಂದರ ಅರ್ಥವತ್ತಾದ ವಿಶ್ಲೇಷಣೆ ದಿವಾಕರ ಸರ್ ರವರಿಂದ. ಧನ್ಯವಾದಗಳು ಸರ್.
ಪರಾವಲಂಬಿ ಸಸ್ಯವಾದ ಕಸ್ಕೂಟ (ಆಕಾಶಬಳ್ಳಿ) ಯ ಕುರಿತಾದ ಉತ್ತಮ ಮಾಹಿತಿ ವಿಜಯಾ ಮೇಡಂ ರವರ ಈ ವಾರದ ಸಂಚಿಕೆಯಲ್ಲಿ.
ರಮೇಶ್ ಸರ್ ರವರಿಂದ ಕಳಸದ ಅಂಬಾ ತೀರ್ಥ ಜಲಪಾತ ಕುರಿತಾದ ಮಾಹಿತಿ ಪಯಣ ಸಂಚಿಕೆಯಲ್ಲಿ ಛಾಯಾ ಚಿತ್ರಗಳೊಂದಿಗೆ ಸೊಗಸಾಗಿ ಮೂಡಿ ಬಂದಿದೆ.
ಮಕ್ಕಳಿಗಾಗಿ ಇರುವ ಇರುವೆಯ ಕುರಿತಾಗಿರುವ ಸುಂದರ ಪುಸ್ತಕ 'ಚುರುಕಾದ ಇರುವೆಗಳು' ಪರಿಚಯ ಉತ್ತಮವಾಗಿತ್ತು ವಾಣಿಯಕ್ಕ.
ಈ ವಾರ ಭುವಿ ಹಾಗೂ ಮನ್ವಿತಾರವರ ಚಿತ್ರ ಸಂಚಿಕೆಗಳಲ್ಲಿ ಚಿತ್ರಗಳು ಸೊಗಸಾಗಿ ಮೂಡಿ ಬಂದಿವೆ. ಮಣಿಕಂಠ ಕುಲಾಲ್ ರವರ ಕವನಗಳು ಕೂಡ ಸೊಗಸಾಗಿವೆ. ಮಕ್ಕಳಿಗೆ ಅಭಿನಂದನೆಗಳು.
ಅಶ್ವಿನ್ ರಾವ್ ರವರ ರಜೆಯ ಓದು ಸಂಚಿಕೆಯಲ್ಲಿ 101 ಡಾಲ್ಮೆಷಿಯನ್ಸ್, ದ ವಿಂಡ್ ವಿಲ್ಲೋಸ್, ದ ಹೋಬಿಟ್ ಮತ್ತು ಚಾಲೋಟಿಸ್ ವೆಬ್ ಎನ್ನುವ ಆ ಪುಸ್ತಕಗಳ ಪರಿಚಯ ಉತ್ತಮವಾಗಿ ಮೂಡಿ ಬಂದಿದೆ.
ಪದಗಳನ್ನು ಜೋಡಿಸುವ ಮತ್ತು ಹೊಸ ಪದಗಳ ಹುಡುಕಾಟಕ್ಕೆ ಕಾರಣವಾದ ಪದದಂಗಳ ಚೆನ್ನಾಗಿ ಮೂಡಿ ಬರುತ್ತಿದೆ. ಧನ್ಯವಾದಗಳು ರಮೇಶ್ ಸರ್....
ಕೊನೆಯದಾಗಿ ಎಲ್ಲರಿಗೂ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ಸಂಗ್ರಹ ಮಾಡಿದ್ದನ್ನು ಅನುಭವಿಸದೆ ಹಾಗೇ ಕೂಡಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಜೀವನದಲ್ಲಿ ಏನನ್ನು ಸಂಗ್ರಹಿಸಿದ್ದೇವೋ ಅದನ್ನು ಅನುಭವಿಸಿದಾಗ ಅದರ ಪ್ರಯೋಜನ ಸಿಗುವುದು ಎನ್ನುವುದನ್ನು ಸೊಗಸಾಗಿ ಉದಾಹರಣೆಗಳೊಂದಿಗೆ ಪ್ರಸ್ತುತ ಪಡಿಸಿದ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಗೆ ಧನ್ಯವಾದಗಳು.
ಕನೆಕ್ಟ್ ಆಗುವುದು ಹೇಗೆ ಎನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ತಿಳಿಸಿದರೆ ಈ ವಾರ ಕನೆಕ್ಟ್ ಆಗುವುದರಿಂದ ಆಗುವ ಪ್ರಯೋಜನಗಳ ಕುರಿತು ಬೆಳಕು ಚೆಲ್ಲಿದ್ದಾರೆ ರಮೇಶ್ ಸರ್ ತಮ್ಮ ಲೇಖನದಲ್ಲಿ. ಧನ್ಯವಾದಗಳು ಸರ್.
ಜೀವಕೋಶ ಎಲ್ಲಾ ಜೀವಿಗಳ ಮೂಲ ಘಟಕ. ಜೀವಕೋಶಗಳಿಂದ ಜೀವಿಗಳು. ಹಾಗಾದರೆ ಜೀವಕೋಶದ ಉಗಮ ಹೇಗೆ ಮುಂದಿನ ವಾರಕ್ಕೆ ಕಾಯಬೇಕು. ಉತ್ತಮ ಸಂಚಿಕೆ. ಧನ್ಯವಾದಗಳು ಸರ್.
ಬಿದಿರಿನ ಕುರಿತಾಗಿ ನಮಗೆ ಗೊತ್ತಿರಲಾರದ ಅನೇಕ ಉಪಯುಕ್ತ ಮಾಹಿತಿಯನ್ನು ಈ ಸಲದ ಸಂಚಿಕೆಯಲ್ಲಿ ನೀಡಿದ್ದೀರಿ. ಉಪಯುಕ್ತ ಸಂಗ್ರಹಯೋಗ್ಯ ಸಂಚಿಕೆಗಾಗಿ ಧನ್ಯವಾದಗಳು ಮಯಾ ಮೇಡಂ.
ಹೊನ್ನಾಳಿಯ ಸುತ್ತಮುತ್ತಲಿರುವ ಹಲವು ಪ್ರೇಕ್ಷಣೀಯ ಸ್ಥಳಗಳ ಕುರಿತಾದ ಮಾಹಿತಿಯ ಈ ವಾರದ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
ವಾಣಿಯಕ್ಕನವರಿಂದ 'ಏನಿದು ವಾಸನೆ' ಕುತೂಹಲ ಮೂಡಿಸುವ ಪುಸ್ತಕದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.
ರಮೇಶ್ ಉಪ್ಪುಂದರವರ ಪದಗಳ ಚೋಡಿಸುವ ಆಟದ ಪದದಂಗಳ ಸಂಚಿಕೆ ಚೆನ್ನಾಗಿತ್ತು.
ಜಗಲಿಯ ಎಲ್ಲರಿಗೂ ಮನದಾಳದ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಎಲ್ಲರಿಗೂ ನಮಸ್ಕಾರಗಳು,
ನಮ್ಮ ಮನದಲ್ಲಿ ಮೂಡುವ ವಿವಿಧ ಕಾಮನೆಗಳನ್ನು ನಿಯಂತ್ರಿಸಲು ಸಂಯಮ ಹೇಗೆ ಸಹಾಯಕ ಎನ್ನುವುದನ್ನು ವಿವರಣಾತ್ಮಕವಾಗಿ ತಮ್ಮ ಸಂಚಿಕೆಯಲ್ಲಿ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಸೊಗಸಾಗಿ ತಿಳಿಸಿದ್ದಾರೆ.
ನಮ್ಮಲ್ಲಿ ಹೊಟ್ಟೆಕಿಚ್ಚಿನಂತಿರುವ ಪರರಿಗೆ ಕೇಡನ್ನು ಬಗೆಯುವ ಕಿಚ್ಚು ಬಾರದಿರಲಿ ಎನ್ನುವ ಸದಾಶಯವನ್ನು ಹೊಂದಿರುವ ಉತ್ತಮ ಲೇಖನ ರಮೇಶ್ ಬಾಯಾರ್ ರವರಿಂದ.
ಜೀವಕೋಶಗಳು ವಂಶಾಭಿವೃದ್ಧಿಯನ್ನು ನಡೆಸಲು ಕಾರಣವಾದ ಅಂಶವನ್ನು ಹಾಗೂ ಜೀವಕೋಶಗಳ ವಿಧಗಳನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದೀರಿ ಧನ್ಯವಾದಗಳು ಸರ್....
ಬಹುಪಯೋಗಿ ಹಾಗೂ ವಾಣಿಜ್ಯ ಬೆಳೆಯಾಗಿ ಬೆಳೆಯುವ ಕತ್ತಾಳೆ ಗಿಡದ ಪರಿಚಯ ಸೊಗಸಾಗಿ ಮೂಡಿ ಬಂದಿದೆ ಮೇಡಂ.
ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ ಪ್ರಮುಖ ಸ್ಥಳಗಳ ಕುರಿತಾದ ವಿವರಣಾತ್ಮಕ ಮಾಹಿತಿ ರಮೇಶ್ ರವರಿಂದ ತಮ್ಮ ಪಯಣ ಸಂಚಿಕೆಯಲ್ಲಿ ಉತ್ತಮವಾಗಿತ್ತು.
ಕಸದಿಂದ ರಸವನ್ನು ಹೇಗೆ ತೆಗೆಯಬಹುದು ಎನ್ನುವುದನ್ನು ತಿಳಿಸುವ ಚೆಂದದ ಪುಸ್ತಕ ಕಂಡಲ್ಲಿ ಕಲೆ ಪುಸ್ತಕದ ಪರಿಚಯ ಚೆನ್ನಾಗಿತ್ತು. ಧನ್ಯವಾದಗಳುವಾಣಿಯಕ್ಕ.
ಮಕ್ಕಳಲ್ಲಿ ನಾವೇ ಬುದ್ಧಿವಂತರು ಎಂದು ತೋರಿಸಿಕೊಂಡಾಗ ಆದ ಪಜೀತಿಯನ್ನು ಬಹಳ ಸುಂದರವಾಗಿ ರಮ್ಯಾ ಮೇಡಂರವರು ಹಂಚಿಕೊಂಡಿದ್ದಾರೆ.
ವಿಕ್ರಮ ಬೇತಾಳದ ಕಥೆಯ ವಿಶ್ಲೇಷಣೆಯೊಂದಿಗೆ ಅನಿ ಆಫ್ ಗ್ರೀನ್ ಗ್ರೇಬಲ್ಸ್ ಮತ್ತು ಲಾರ್ಡ್ಸ್ ಆಫ್ ದಿ ಪ್ಲೈಸ್ ಪುಸ್ತಕಗಳ ಪರಿಚಯ ರಜೆಯ ಓದು ಸಂಚಿಕೆಯಲ್ಲಿ ಅಶ್ವಿನ್ ರಾವ್ ರವರಿಂದ ಚೆನ್ನಾಗಿ ಮೂಡಿ ಬಂದಿದೆ.
ರಮೇಶ್ ರವರ ಪದದಂಗಳ ಸಂಚಿಕೆ ಚೆನ್ನಾಗಿತ್ತು.
ಕೊನೆಯದಾಗಿ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ಎಲ್ಲರಿಗೂ ನಮಸ್ಕಾರಗಳು,
ಸುಂದರವಾದ ಕಥೆಗಳ ಮೂಲಕ ಸಿರಿವಂತಿಕೆ ಅಂದರೇನು ಎನ್ನುವುದನ್ನು ಅರ್ಥವತ್ತಾಗಿ ತಿಳಿಸಿದ್ದಾರೆ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರು. ಧನ್ಯವಾದಗಳು ಸರ್...
ಶ್ರೀಕೃಷ್ಣ ಜನ್ಮಾಷ್ಟಮಿಯ ಕುರಿತಾದ ವಿಟ್ಲಪಿಂಡಿ ಲೇಖನ ತುಂಬಾ ಖುಷಿ ನೀಡಿತು ಧನ್ಯವಾದಗಳು ರಮೇಶ್ ಸರ್....
ವೈಜ್ಞಾನಿಕ ಸಂಚಿಕೆಯಲ್ಲಿ ದಿವಾಕರ ಸರ್ ರವರು ಜೀವಕೋಶದ ರಚನೆಯನ್ನು ವಿವರವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದಾರೆ. ಧನ್ಯವಾದಗಳು ಸರ್..
ಗಸಗಸೆ ಸಸ್ಯದ ರೋಚಕ ಕಥೆಯು ಅದರ ಮೌಲ್ಯ ಹಾಗೂ ಉಪಯುಕ್ತತೆ ಜೊತೆಗೆ ಬೆಳೆಯಲು ಪರವಾನಿಗೆ ಪಡೆಯಬೇಕಾದ ಅನಿವಾರ್ಯತೆಯನ್ನು ವಿಜಯ ಮೇಡಂರವರು ತಮ್ಮ ಈ ವಾರದ ಸಂಚಿಕೆಯಲ್ಲಿ ಸೊಗಸಾಗಿ ನೀಡಿದ್ದಾರೆ. ಧನ್ಯವಾದಗಳು ಮೇಡಂ.
ಪೌರಾಣಿಕ ಹಿನ್ನಲೆಯೊಂದಿಗೆ ತುರುವೇಕೆರೆ ತಾಲೂಕಿನ ಸಂಪಿಗೆ ಎಂಬ ಊರಿನ ಪರಿಚಯ ರಮೇಶ್ ಸರ್ ರವರ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
ಕಿಟಗಳ ಮಹತ್ವವನ್ನು ತಿಳಿಸುವ ಕುರಿತಾದ ರೋಸ್ ರಾಕಿಯ ಕೀಟದ ಬೇಟೆ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
1ನೇ ತರಗತಿಯ ವಿದ್ಯಾರ್ಥಿಗಳಿಗೆ ಕಥೆ ಹೇಳಿದ ಕುರಿತಾದ ಅನುಭವವನ್ನು ಶಿಕ್ಷಕರ ಡೈರಿಯಲ್ಲಿ ಸುಪ್ರಿಯಾ ಮೇಡಂವರು ಸೊಗಸಾಗಿ ಹಂಚಿಕೊಂಡಿದ್ದಾರೆ.
ರಮೇಶ್ ರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿಬಂದಿದೆ.
ಜಗಲಿಯ ಎಲ್ಲರಿಗೂ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ಸಂತೋಷದ ಬದುಕು ಶ್ರೀಮಂತಿಕೆಯ ಬದುಕಿಗಿಂತ ಸುಂದರ ಎನ್ನುವುದನ್ನು ಬಹಳ ಅರ್ಥವತ್ತಾಗಿ ವಿವರವಾಗಿ ತಮ್ಮ ಸಂಚಿಕೆಯಲ್ಲಿ ತಿಳಿಸಿದ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರಿಗೆ ಧನ್ಯವಾದಗಳು.
ಉತ್ತಮ ನಡತೆ, ಸಹಕಾರ, ಪರೋಪಕಾರ ಇವೆಲ್ಲವೂ ನಮ್ಮಲ್ಲಿನ ಪುಣ್ಯದ ಠೇವಣಿಗೆ ಕಾರಣ. ಶ್ರೀಮಂತಿಕೆಯ ಠೇವಣಿಗಿಂತ ಪುಣ್ಯದ ಠೇವಣಿಗೆ ಹೆಚ್ಚು ಒತ್ತು ನೀಡಬೇಕೆನ್ನುವ ಸದಾಶಯದ ಲೇಖನಕ್ಕಾಗಿ ಧನ್ಯವಾದಗಳು ರಮೇಶ್ ಸರ್....
ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಕುರಿತಾಗಿ ಚುಟುಕಾದ ಹಾಗೂ ಅರ್ಥಗರ್ಭಿತವಾದ ಲೇಖನ ಗಣಪತಿಯ ಸೊಂಡಿಲ ಜೋಡಣೆಯ ವಿಷಯದೊಂದಿಗೆ ತುಂಬಾ ಚೆನ್ನಾಗಿತ್ತು. ಧನ್ಯವಾದಗಳು ಸರ್....
ನಮ್ಮ ಸುತ್ತ ಮುತ್ತ ನೋಡಿದರೂ ಪರಿಚಯವಿರದ ಸಸ್ಯದ ಪರಿಚಯ ಮಾಡಿದ್ದೀರಿ ಅಗ್ರದ ಬೇರಿನ ಮಹತ್ವದ ಅರಿವು ಮೂಡಿತು. ಧನ್ಯವಾದಗಳು ಮೇಡಂ.
ಎಷ್ಟೇ ಜೋರಾದ ಮಳೆ ಬಂದರೂ ಹಿಂದಿನ ಕಾಲದಲ್ಲಿ ರಜೆ ಕೊಡದೆಯೂ ಶಾಲೆಗೆ ಹೋದ ಅನುಭವದ ಜೊತೆಗೆ ಪ್ರಸ್ತುತ ಮಳೆಯ ಕಾರಣದಿಂದ ರಜೆ ಕೊಟ್ಟಾಗ ಆಗುವ ಅನನುಕೂಲತೆಗಳ ಬಗ್ಗೆ ಬಹಳ ಸುಂದರವಾಗಿ ತಮ್ಮ ಅನಿಸಿಕೆಗಳನ್ನು ಶುಭ ಮೇಡಂರವರು ಹಂಚಿಕೊಂಡಿದ್ದಾರೆ. ಲೇಖನ ತುಂಬಾ ಇಷ್ಟವಾಯಿತು.
ಪಯಣ ಸಂಚಿಕೆಯಲ್ಲಿ ಈ ವಾರ ಮಂಡ್ಯ ಜಿಲ್ಲೆಯ ಹರವು ಎಂಬಲ್ಲಿನ ರಾಮಚಂದ್ರ ದೇವಾಲಯದ ಕುರಿತಾದ ಮಾಹಿತಿಯನ್ನು ಒಳಗೊಂಡ ಲೇಖನ ಸೊಗಸಾಗಿತ್ತು ರಮೇಶ್ ಸರ್...
ಚಿತ್ರಗಳಿಂದಲೇ ಕಥೆ ಕಟ್ಟಬಹುದಾದ ಭಾನು ಮನೆಗೆ ಹೋದಾಗ ಪುಸ್ತಕದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ವಾಣಿಯಕ್ಕ.
ಗಣಪನ ಕುರಿತಾದ ಅಮೂಲ್ಯರವರ ಕವನ ಸೊಗಸಾಗಿದೆ. ಚಿತ್ರ ಸಂಚಿಕೆಯಲ್ಲಿ ಐಶ್ವರ್ಯ ಸುರೇಶ್, ಸಾತ್ವಿಕ್ ಗಣೇಶ್, ತೇಜಸ್ವಿನಿ, ನಿನಾದ ಕೈರಂಗಳ, ರಾಜಶ್ರೀ, ನಿಧಿ ಕೈರುಗಳ, ವಿಕಾಸ್, ಶಮಂತ್, ಭವಿಷ್ ಹಾಗೂ ಸುಹಾನಿಯವರ ಚಿತ್ರಗಳು ಸೊಗಸಾಗಿ ಮೂಡಿಬಂದಿವೆ ಕವನ ಹಾಗೂ ಚಿತ್ರ ರಚಿಸಿದ ಮಕ್ಕಳೆಲ್ಲರಿಗೂ ಅಭಿನಂದನೆಗಳು.
ಪದಗಳ ಜೋಡಣೆಗೆ ಪೂರಕವಾಗಿರುವ ಪದದಂಗಳ ಸಂಚಿಕೆ ಚೆನ್ನಾಗಿ ಮುಂದುವರಿಯುತ್ತಿದೆ. ಧನ್ಯವಾದಗಳು ರಮೇಶ್ ಸರ್....
ಕೊನೆಯದಾಗಿ ಎಲ್ಲರಿಗೂ ಮನದಾಳದ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ಈ ವಾರ ರಜೆಯ ಓದು ಮೊದಲ ಲೇಖನವಾಗಿ ಮೂಡಿಬಂದಿದ್ದು ಆಂಗ್ಲ ಕಾದಂಬರಿ ಮಾಟಗಾತಿ ಹಾಗೂ ಮತ್ತೆರಡು ಕಾದಂಬರಿಗಳ ಪರಿಚಯ ಅಶ್ವಿನ್ ರಾವ್ ರವರಿಂದ ಚೆನ್ನಾಗಿತ್ತು.
ಉಪಗುಪ್ತನ ಮೂಲಕ ಚಕ್ರವರ್ತಿ ಅಶೋಕನ ಮನ ಪರಿವರ್ತನೆ ಆದ ಕುರಿತು ಸುಂದರ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ರವರಿಂದ.
ನೆಚ್ಚಿನ ಶಿಷ್ಯ ಶ್ರೀನಿಧಿ ಪಾತೂರ್ ರವರ ನೀಲಿಕುದುರೆ ನಾಟಕದ ಕುರಿತಾದ ಅನುಭವದ ಮಾತುಗಳು ಸೊಗಸಾಗಿದ್ದುವು.
ಅವ್ಯಯ ಪದದ ಗೂಡಾರ್ಥದ ಜೊತೆಗೆ ಜ್ಞಾನವು ಅವ್ಯಯವಾದ ಕಾರಣ ಜ್ಞಾನ ಸಂಪಾದನೆಯತ್ತ ಗಮನ ಕೊಡೋಣ ಎನ್ನುವ ಆಶಯದ ಲೇಖನ ಚೆನ್ನಾಗಿತ್ತು ರಮೇಶ್ ಸರ್....
ಮೊಹೆಂಜದಾರೋ, ಹರಪ್ಪ ನಾಗರೀಕತೆ ಅಳಿದ ರೀತಿಯನ್ನು ಉದಾಹರಿಸಿ ಅರಣ್ಯನಾಶದ ಪರಿಣಾಮವನ್ನು ಬಹಳ ಸುಂದರವಾಗಿ ತೆರೆದಿಟ್ಟಿದ್ದೀರಿ ದಿವಾಕರ ಶೆಟ್ಟಿ ಸರ್....
ಯಾರೆಲ್ಲ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಬಹುದು ಎನ್ನುವುದನ್ನು ಸರಳವಾಗಿ ತಿಳಿಸಿ ನೇತ್ರದಾನದ ಕುರಿತು ವಿವರವಾದ ಮಾಹಿತಿ ಒದಗಿಸುವುದರ ಜೊತೆಗೆ ತಮ್ಮ ಕುಟುಂಬದ ಎಲ್ಲಾ ಸದಸ್ಯರು ನೇತ್ರದಾನದ ವಾಗ್ದಾನದ ಮಹತ್ತರ ಜವಾಬ್ದಾರಿಯನ್ನು ತಿಳಿಸಿದ ಕವಿತಾ ಶ್ರೀನಿವಾಸರವರಿಗೆ ಧನ್ಯವಾದಗಳು.
ಕೃಷಿಕರ ಬಾಳು ಬೆಳಗಿಸುವ ಕರಿಮೆಣಸಿನ ಗಿಡದ ಪರಿಚಯದ ಜೊತೆ ಜೊತೆಗೆ ಪಠ್ಯ ವಿಷಯದೊಂದಿಗೆ ಕೃಷಿ ಕಾಯಕವೂ ಇರಲಿ ಎನ್ನುವ ಕಳಕಳಿಯ ಈ ವಾರದ ಲೇಖನ ತುಂಬಾ ಮುದ ನೀಡಿತು ಮೇಡಂ.
ಅಡುಗೆ ಮನೆಯೇ ತಾಯಿಯ ಪಾಠಶಾಲೆ, ತಾಯಿಯ ಅಡುಗೆಯಲ್ಲಿ ವಿಜ್ಞಾನ ಪಾಠದ ಹಲವು ಅಂಶಗಳನ್ನು ಕಲಿತ ವಿಧಾನ ಎಲ್ಲರಿಗೂ ಪ್ರೇರಣಾದಾಯಿ. ಅಲ್ಲದೆ ಎಲ್ಲರಿಗೂ ತಾಯಿಯೇ ಮೊದಲ ಗುರು. ಶಿಕ್ಷಕ ದಿನಾಚರಣೆ ಪ್ರಯುಕ್ತ ಸುಂದರ ಲೇಖನ. ಧನ್ಯವಾದಗಳು ಸರ್...
ಶಿಕ್ಷಕರ ದಿನಾಚರಣೆಯ ಅಂಗವಾಗಿ ತಮ್ಮ ನೆಚ್ಚಿನ ಶಿಕ್ಷಕರ ಕುರಿತ ಅನಿಸಿಕೆಗಳನ್ನು ವ್ಯಕ್ತಪಡಿಸಿದ ಎಲ್ಲಾ ಶಿಕ್ಷಕರಿಗೆ, ವಿದ್ಯಾಥಿಗಳಿಗೆ, ಹಿರಿಯರಿಗೆ ಹಾಗೂ ಕಿರಿಯರಿಗೆ ವಂದನೆಗಳೊಂದಿಗೆ ಅಭಿನಂದನೆಗಳು.
ಆಂದ್ರ ಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರ ಹಾಗೂ ಪ್ರವಾಸಿ ತಾಣವಾದ ಮಂತ್ರಾಲಯದ ಕುರಿತಾದ ಮಾಹಿತಿ ರಮೇಶ್ ಸರ್ ರವರ ಪಯಣ ಸಂಚಿಕೆಯಲ್ಲಿ ಉತ್ತಮವಾಗಿತ್ತು.
ಮಕ್ಕಳಿಗಾಗಿ ಇರುವ ಕುತೂಹಲಕಾರಿ ಪುಸ್ತಕ ಬಸವ ಮತ್ತು ಬೆಂಕಿಯ ಚುಕ್ಕಿ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
ಶ್ರೇಯರವರ ಕವನಗಳು ಸೊಗಸಾಗಿವೆ. ಅಭಿನಂದನೆಗಳು ಶ್ರೇಯಾರವರಿಗೆ .
ಪದಗಳನ್ನು ಹುಡುಕಿ ಜೋಡಿಸುವ ಪದದಂಗಳ ಸಂಚಿಕೆ ಚೆನ್ನಾಗಿತ್ತು ರಮೇಶ್ ಸರ್....
ಅಶ್ವಿನ್ ರಾವ್ ರವರ ರಜೆಯ ಓದು ಸಂಚಿಕೆಯಲ್ಲಿ ಪ್ರಸಿದ್ಧ ಕೃತಿ ಹ್ಯಾರಿ ಪೋಟರ್ ಪುಸ್ತಕದ ಕುರಿತು ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಧನ್ಯವಾದಗಳು ಸರ್...
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮಕ್ಕಳ ಕವನಗಳಲ್ಲಿ ಎಲ್ಲಾ ಕವನಗಳು ಚೆನ್ನಾಗಿ ಮೂಡಿ ಬಂದಿವೆ. ಮಕ್ಕಳಿಗೆಲ್ಲರಿಗೂ ಅಭಿನಂದನೆಗಳು. ನಮಸ್ತೇ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
*****************************************