ಶಿಕ್ಷಕರ ದಿನಾಚರಣೆ -2025 : ಮಕ್ಕಳ ಕವನಗಳು : ಸಂಚಿಕೆ - 57
Sunday, September 7, 2025
Edit
ಶಿಕ್ಷಕರ ದಿನಾಚರಣೆ -2025 : ಮಕ್ಕಳ ಕವನಗಳು : ಸಂಚಿಕೆ - 57
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಜಾಹ್ನವಿ ಹೆಚ್, 4ನೇ ತರಗತಿ
◾ ಬಾಲಕೃಷ್ಣ ಬಿ, ಪ್ರಥಮ ಪಿಯುಸಿ
◾ ಮಣಿಕಂಠ ಎಸ್ ಎಂ ಕುಲಾಲ್, 9ನೇ ತರಗತಿ
ಪ್ರೀತಿಯ ಗುರುಗಳಿಗೆ ಪ್ರೀತಿಯ ಕೃತಜ್ಞತೆಗಳು
ನನ್ನ ಜೀವನದ ದಾರಿ ದೀಪ ಗುರುಗಳು |
ಗುರುಗಳು ನನ್ನ ತಂದೆ ತಾಯಿಗೆ ಸಮಾನರು |
ಗುರುಗಳು ನಾವು ಪೂಜಿಸುವ ದೇವರಿಗೆ ಸಮಾನರು |
ನನ್ನ ಪ್ರೀತಿಯ ಗುರುಗಳು |
ನನ್ನ ಜೀವನದ ದಾರಿ ದೀಪ ಗುರುಗಳು |
ಶಿಲ್ಪಿ ಶಿಲೆಯನ್ನು ಕೆತ್ತಿ ಮೂರ್ತಿ ಮಾಡುವರು |
ಗುರುಗಳು ಶಿಷ್ಯನನ್ನು ಉತ್ತಮ ಪ್ರಜೆ ಮಾಡುವರು ||
ನನ್ನ ಪ್ರೀತಿಯ ಗುರುಗಳು
ನನ್ನ ಜೀವನದ ದಾರಿದೀಪ ಗುರುಗಳು |
ನನ್ನ ಗುರುಗಳು ಮಕ್ಕಳಿಗೆ ಸ್ಪೂರ್ತಿಯಾಗುವರು |
ಮಕ್ಕಳ ಕೀರ್ತಿಗೆ ಹಂಬಲಿಸುವರು ||
ನನ್ನ ಪ್ರೀತಿಯ ಗುರುಗಳು
ನನ್ನ ಜೀವನದ ದಾರಿದೀಪ ಗುರುಗಳು |
ಗುರಿ ಮುಟ್ಟಲು ಇರಬೇಕು ಗುರುಗಳು |
ಶಿಷ್ಯರ ಭವಿಷ್ಯಕ್ಕೆ ಇರಬೇಕು ಗುರುಗಳು ||
ನನ್ನ ಪ್ರೀತಿಯ ಗುರುಗಳು |
ನನ್ನ ಜೀವನದ ದಾರಿ ದೀಪ ಗುರುಗಳು |
4ನೇ ತರಗತಿ
ಸ.ಹಿ. ಪ್ರಾಥಮಿಕ ಶಾಲೆ ಪೆರ್ಮುಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಜ್ಞಾನಕ್ಕೆ ಕೊಂಡೊಯ್ಯುವವರು
ಗುರುಗಳು
ಮಗುವಿನ ಮೊದಲ ಗುರು
ತಾಯಿಯಾದರೆ
ಮಗುವನ್ನು ಕೆತ್ತಿ ಶಿಲೆಯಾಗಿ
ರೂಪಿಸುವವರು ಗುರುಗಳು ||೧||
ಅಕ್ಷರಗಳನ್ನು ಕಲಿಸಿ,
ಮೌಲ್ಯಗಳನ್ನು ಬೆಳೆಸಿ
ಅಜ್ಞಾನದ ಕಣ್ಣಿಗೆ
ಜ್ಞಾನವನ್ನು ತುಂಬಿಸುವವರು
ಗುರುಗಳು
ವಿದ್ಯೆಯನ್ನು ಕಲ್ಪಿಸಿ ತಪ್ಪುಗಳನ್ನು ತಿದ್ದಿಸಿ
ಹೊಡೆದು-ಬಡಿದು ಮುದ್ದಾಡಿದವರು
ಗುರುಗಳು ||೨||
ಸ್ವಾರ್ಥದ ಜಗತ್ತಿನಲ್ಲಿ
ನಿಸ್ವಾರ್ಥದಿಂದ ಸೇವೆ
ಸಲ್ಲಿಸುವವರು ಗುರುಗಳು
ತಂದೆಯ ಪ್ರೀತಿ ನೀಡಿ
ತಾಯಿಯ ಮಮತೆ ತೋರಿ
ನಮ್ಮನ್ನು ನಗು ಮುಖದಿಂದ
ನೋಡಿಕೊಳ್ಳುವವರು ಗುರುಗಳು ||೩||
ಹಲವಾರು ದುಃಖಗಳನ್ನೂ
ಮಡುಗಟ್ಟಿದರು ಸದಾ ನಗುತ್ತಾ
ಇರುವವರು ಎನ್ನ ಪ್ರಿಯ ಗುರುಗಳು
ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ
ಕಾಲ ಕಳೆದು ಮಮತೆಯ
ಪ್ರೀತಿಯನ್ನು ನೀಡುವವರು
ಆ ಎನ್ನ ಹೆಮ್ಮೆಯ ಗುರುಗಳು||೪||
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ
ಕಾಲೇಜು, ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಮಹಾಭಾರತ ರಾಮಾಯಣ
ಕಥೆ ಹೇಳಿ ಸಂಸ್ಕಾರ ಕಲಿಸಿದ
ನನ್ನಮ್ಮ ನಾ ಕಂಡ
ನನ್ನ ಮೊದಲ ಗುರು
ಆಟ ಆಡಿ ಸೋತಾಗ
ಗೆಲ್ಲುವ ಭರವಸೆ ನೀಡಿ
ಬೆನ್ನು ತಟ್ಟಿ ಧೈರ್ಯ ತುಂಬಿ
ಬದುಕಿನ ಪಾಠ ಹೇಳಿದ
ನನ್ನಪ್ಪ ನಾ ಕಂಡ ನನ್ನ ಗುರು
ಶಿಕ್ಷಣದ ಮೌಲ್ಯ ತಿಳಿಸಿ
ಸರಿ ತಪ್ಪು ತಿದ್ದಿಸಿ
ಗುರಿ ತಲುಪುವ ತನಕ
ಬೆನ್ನಿಂದೆ ಕಾಯುವ ದೇವರು ರೂಪ
ಜ್ಞಾನಜೋತಿ ಬೆಳಗಿದ ದಿವ್ಯ ರೂಪ
ನಾ ಕಂಡ ನನ್ನ ಗುರುಗಳು
ಗುರು ಹಿರಿಯರಾಗಿ
ವಿದ್ಯಾ ವಿನಯ ಸಂಸ್ಕೃತಿ
ಸಂಸ್ಕಾರ ಕಲಿಸುವ
ಪ್ರತಿಯೊಬ್ಬ ನಾ ಕಂಡ ಗುರುವಿಗೆ
ಸಾಷ್ಟಾಂಗ ನಮನ
.....................ಮಣಿಕಂಠ ಎಸ್ ಎಂ ಕುಲಾಲ್
9ನೇ ತರಗತಿ
ಹೋಲಿ ರೆಡಿ ಮಾಡಿ ಸ್ಕೂಲ್
ಹೊಸನಗರ, ಶಿವಮೊಗ್ಗ
****************************************
ನಿತ್ಯ ಹಚ್ಚ ಹಸುರಿನ
ಉದ್ಯಾನದಂತಿರುವ ದಿವ್ಯ ದೇವಾಲಯ
ಜ್ಞಾನಗಂಗೆಯಂತೆ ಶಾರದೆಯ ವಿದ್ಯಾಲಯ
ಈ ಹೋಲಿ ರೆಡಿಮರ್ ಶಾಲೆಯ ಅಂಗಳ
ಶಿಸ್ತೆ ಜೀವನದ ಜೀವಾಳ
ಛಲವೆ ಸಾಧನೆಯ ಮೂಲ
ಧೈರ್ಯ ತುಂಬಿ ಹರಸುವ ಶಿಕ್ಷಕರ ಬೆಂಬಲ
ಪ್ರೋತ್ಸಾಹ ನೀಡಿ ಗುರಿ ತಲುಪುವ ಹಂಬಲ
ನನ್ನ ಶಿಕ್ಷಕ ವೃಂದದವರ ಯಶಸ್ಸಿನ ಫಲ
ವಿದ್ಯೆಗೆ ವಿನಯ ಸಂಸ್ಕಾರದ ಬಲ
ನಮ್ಮ ಸಾಧನೆಗೆ ಶಿಕ್ಷಕರೇ ದೇವರ ರೂಪ
ಶಿಲೆಯ ಶಿಲ್ಪವನಾಗಿಸಿದ ದಿವ್ಯ ಚೇತನ
9ನೇ ತರಗತಿ
ಹೋಲಿ ರೆಡಿ ಮಾಡಿ ಸ್ಕೂಲ್
ಹೊಸನಗರ, ಶಿವಮೊಗ್ಗ
****************************************