-->
ಮಕ್ಕಳ ಕವನಗಳು : ಸಂಚಿಕೆ - 59 : ಕವನ ರಚನೆ : ಯಶಸ್ವಿನಿ, ಪ್ರಥಮ ಪಿಯುಸಿ

ಮಕ್ಕಳ ಕವನಗಳು : ಸಂಚಿಕೆ - 59 : ಕವನ ರಚನೆ : ಯಶಸ್ವಿನಿ, ಪ್ರಥಮ ಪಿಯುಸಿ

ಮಕ್ಕಳ ಕವನಗಳು : ಸಂಚಿಕೆ - 59
ಕವನ ರಚನೆ : ಯಶಸ್ವಿನಿ
ಪ್ರಥಮ ಪಿಯುಸಿ
ಸರಕಾರಿ ಪದವಿಪೂರ್ವ ಕಾಲೇಜು ಕೊಕ್ರಾಡಿ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
      

ಮಂಗನಿಂದ ಮಾನವ ಎನ್ನುತ್ತದೆ ವಿಜ್ಞಾನ...
ಮಾನವನನ್ನು ಮಂಗನೆಂದರೆ 
ಅದುವೇ ಅಜ್ಞಾನ...
ವಿಜ್ಞಾನವನ್ನು ಅರಿತು ಕಲಿಯಲು 
ಬೇಕು ವಿಧಾನ 
ಆದರೆ...
ಅದನ್ನು ಕಲಿತು ಅರಿತರೆ 
ಜಗಕ್ಕೆ ಇದು ಸಮಾಧಾನ, ವರದಾನ..
ಉಸಿರಾಡಲು ಬೇಕು ಗಾಳಿಯೇ ಮೂಲ 
ಸೂರ್ಯನ ಬೆಳಕಿನ ಶಕ್ತಿಯು ಅತ್ಯಮೂಲ್ಯ
ವಿಜ್ಞಾನಿಗಳಿಗೆ ಸಂಶೋಧನೆಗಳೇ 
ವಿಜ್ಞಾನಕ್ಕೊಂದು ಸವಾಲು 
ಇದರಲ್ಲಿ ನಾವೆಲ್ಲ ಕಾವಲು 
ಹೀಗೆ ವಿಜ್ಞಾನಿಗಳಿಗೆ ಅವರ ಪರಿಶ್ರಮಕ್ಕೆ 
ಸಿಗುತ್ತೆ ತಕ್ಕ ಫಲ...
ಈ ವಿಜ್ಞಾನವನ್ನು ಅರಿತರೆ ಇದರಲ್ಲಿದೆ 
ಹಲವಾರು ಶಾಸ್ತ್ರಗಳು ಅವುಗಳಲ್ಲಿ..
ಜೀವಶಾಸ್ತ್ರ ಎಂದರೆ 
ಜೀವ ವೈವಿಧ್ಯಗಳ ಅಧ್ಯಯನ 
ಭೌತಶಾಸ್ತ್ರ ಎಂದರೆ 
ಅಂದಿನ ಇಂದಿನ ಮುಂದಿನ ಪುರಾಣ 
ರಾಸಾಯನಿಕ ಶಾಸ್ತ್ರ ಎಂದರೆ 
ಕೆಮಿಕಲ್ಸ್ ಗಳ ಮಿಲನ
ಇದಕ್ಕೆಲ್ಲ ಮುಖ್ಯ ಮೂಲ 
ಕೇಂದ್ರ ಬಿಂದುವೇ ವಿಜ್ಞಾನ....
................................................ ಯಶಸ್ವಿನಿ
ಪ್ರಥಮ ಪಿಯುಸಿ
ಸರಕಾರಿ ಪದವಿಪೂರ್ವ ಕಾಲೇಜು ಕೊಕ್ರಾಡಿ 
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*****************************************



ಹನಿ ಹನಿಯಿಂದ ಬಂದ ನಿನ್ನೀ ಆರ್ಭಟ 
ನಿಂತು ಹೋಗದು ಮುಗಿಯುವ ತವಕ
ನಿನ್ನೀ ಆಗಮನಕ್ಕೆ ಕಾಯುವೆವು 
ಕೊನೆಯ ತನಕ
ನೀನೊಮ್ಮೆ ಧರೆಗಿಳಿದು ಬಂದಾಗ 
ಆಗುವ ಆನಂದ 
ನಿನ್ನೀ ಹನಿಗಳು ಇಳೆಯನ್ನು ಸ್ಪರ್ಶಿಸಿದಾಗ 
ಆಗುವುದು ಪರಮಾನಂದ 
ಈ... ಮೊದಲ ಮಳೆಯಲ್ಲಿ ನೆನೆದ ನೆನಪು
ಮರೆಯದೆ ಹೋಗದು 
ಈ ಸವಿ ಸವಿ ಸಾವಿರ ನೆನಪುಗಳಾಗಿ
ನಿನ್ನೀ ಆಗಮನ ಹೀಗೆಯೇ ಮರುಕಳಿಸಲಿ...
ಪ್ರತಿ ವರ್ಷವು ಆಗಮಿಸಲಿ...
ಇಳೆಯೆಲ್ಲಾ ಸಂಭ್ರಮಿಸಲಿ...
ಚಿಗುರೊಡೆದ ಸಸಿಗಳು ನಲಿಯಲಿ...
ಪಕ್ಷಿಗಳು ಎನ್ನಲಿ ಚಿಲಿಪಿಲಿ...
ಓ ಮಳೆಯೇ ಹೀಗೆಯೆ ಹರಸುತ್ತಿರುವೆ ನಿನ್ನಲಿ...
................................................ ಯಶಸ್ವಿನಿ
ಪ್ರಥಮ ಪಿಯುಸಿ
ಸರಕಾರಿ ಪದವಿಪೂರ್ವ ಕಾಲೇಜು ಕೊಕ್ರಾಡಿ 
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*****************************************



ಶಾಲೆಯೊಂದು ಮಂದಿರ 
ಕೂಡಿ ಕಲಿವ ಮಂದಿರ 
ಓದಿ ತಿಳಿಯಲು ಸುಂದರ 
ಅಜ್ಞಾನದಿಂದ ಸುಜ್ಞಾನಕ್ಕೆ 
ದಾರಿ ತೋರುವ ಶ್ರೇಷ್ಠ ಮಂದಿರ 
ಶ್ರದ್ದೆ ಭಕ್ತಿ ಗೌರವಕ್ಕೆ ಸಾಟಿ ಇಲ್ಲ
ಮೇಲು ಕೀಳೆಂಬ ಕೀಳರಿಮೆ ಇಲ್ಲ, 
ಜೊತೆಗೂಡಿ ಗುರಿ ತೋರುವಂತೆ,
ಶ್ರೇಷ್ಠತೆಯ ಹಾದಿಯಲ್ಲಿ 
ಮುನ್ನಡೆಯುವ ಮಂದಿರ
ಗುರಿಯನ್ನು ತೋರುವ ಗುರುಗಳ 
ಮಾರ್ಗದರ್ಶನದಲ್ಲಿ ಎಚ್ಚೆತ್ತು 
ಬದುಕು ಕಟ್ಟುವ ಮಂದಿರ 
ಇದುವೇ ನಮ್ಮ ಜ್ಞಾನದ ಹಂಗನ್ನು 
ನೀಗಿಸುವ ವಿದ್ಯಾದೇಗುಲ.....
................................................ ಯಶಸ್ವಿನಿ
ಪ್ರಥಮ ಪಿಯುಸಿ
ಸರಕಾರಿ ಪದವಿಪೂರ್ವ ಕಾಲೇಜು ಕೊಕ್ರಾಡಿ 
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*****************************************



ಈಗಿನ ಕಾಲದಲ್ಲಿ ಏನುಂಟು ಏನಿಲ್ಲ 
ಹಣ ಉಂಟು ನೆಮ್ಮದಿಲ್ಲ 
ಊಟ ಉಂಟು ಹಸಿವಿಲ್ಲ 
ಹಾಸಿಗೆ ಉಂಟು ನಿದ್ದೆಯಿಲ್ಲ 
ನೀರುಂಟು ದಾಹವಿಲ್ಲ
ಜ್ಞಾನ ಉಂಟು ಅರಿವಿಲ್ಲ 
ತಿಳುವಳಿಕೆಯುಂಟು 
ಉಪಯೋಗಿಸಲು ತಿಳಿದಿಲ್ಲ 
ಎಲ್ಲವೂ ಉಂಟು 
ಆದರೆ ನಮಗೆ ಏನೂ ಇಲ್ಲ  
ಎನ್ನುವುದನ್ನು ತೊರೆದು 
ಎಲ್ಲವೂ ಉಂಟು ಎಂಬ ವೈಜ್ಞಾನಿಕ
ಮನೋಭಾವವನ್ನು ಬೆಳೆಸೋಣ..
ಸುಖಮಯವಾಗಿ ಜೀವಿಸೋಣ...
................................................ ಯಶಸ್ವಿನಿ
ಪ್ರಥಮ ಪಿಯುಸಿ
ಸರಕಾರಿ ಪದವಿಪೂರ್ವ ಕಾಲೇಜು ಕೊಕ್ರಾಡಿ 
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*****************************************



ಸೂರ್ಯನಿಂದ ಚುಂಬಿಸಲ್ಪಟ್ಟ, 
ಈ ವಸುಂದರೆಯ ಮರಳಿನಲ್ಲಿ, 
ನಾಲ್ವರು ಹುಡುಗರು ಹರುಷದಿಂದ
ಸ್ನೇಹ ಬಂಧವೆಂಬ ಕಡಲಿನಲ್ಲಿ..
ಪುಟ್ಟ ಪಾದಗಳ ಕೆಳಗೆ 
ಮರಳಿನ ಕಣಗಳು 
ಬಿಸಿಲ ದನಿಯೂ ಮೊಗದಲ್ಲಿ ಸಿಡಿಯುತ್ತಿದೆ ,
ಮೋಜಿನಾಟವು ಮರಳನ್ನು 
ನಲಿವಿನೊಂದಿಗೆ ಅಗೆಯುತ್ತಾ, 
ಸೂರ್ಯನ ಬೆಳಕು ಪ್ರಕಾಶಮಾನವಾಗಿಸುತ್ತ
ಮೊಗದಲ್ಲಿ ಬೀರಿದ ಮುಗುಳ್ನಗೆ 
ಇಳೆಯಾದ್ಯಂತ ಪಸರಿಸಿ ಪ್ರತಿದ್ವನಿಸುತ್ತಿದೆ...!

ಅದ್ಭುತ ರಂಗಿನ ಟ್ರಕ್ ಗಳನ್ನು 
ಹಿಡಿದು ತರಣಿಯ ಕಿರಣಕ್ಕೆ 
ಕನಸುಗಳನ್ನು ಅಗೆಯುವುದು 
ಆಹಾ!! ವದನದಲ್ಲಿ ವಿನೋದವಾಗಿ 
ಉಲ್ಲಾಸದ ಕಾಗುಣಿತಗಳನ್ನು ಹೆಣೆಯುತ್ತಿದೆ.
ವರ್ಣಿಸುವವರಿಗೆ ಹಂದರವಾಗಿ 
ಮೇಲ್ನೋಟಕ್ಕೆ ಲೋಚನವನ್ನೇ ಸೆಳೆಯುತ್ತಿದೆ...!
ಆ ಪುಟ್ಟ ಕೈಗಳು ಮರಳಿನ 
ಕಥನವನ್ನು ರೂಪಿಸುತ್ತಿದೆ
ಕಲ್ಪನೆಗೂ ಮೀರಿದ ಚಮತ್ಕಾರಗಳು 
ಮರಳಿನಲ್ಲಿ ತೋಡಿದ ಪಥವು,
ಈ ತೆರೆದ ಜಾಗದಲ್ಲಿ ಪ್ರತಿನಿಧಿಸುತ್ತಿದೆ.. 
ನೆನಪೆಂಬ ಕಲ್ಪನೆಯಲ್ಲಿ ಹುಚ್ಚು ಹುಚ್ಚಾಗಿ ಕಣ್ಣುಗಳು ಮುಕ್ತ ವಾಗಿ ಚಲಿಸುತ್ತಿದೆ....
ಕಳೆದು ಹೋದ ಮಧುರವಾದ ನೆನಪಿನ 
ಕ್ಷಣಗಳು ಮತ್ತೆ ಬಾರದು ಆದರೆ.... ಮರಳೊಂದಿಗೆ ಪುಟಾಣಿಗಳ ಆಟದಲ್ಲಿ ಮರುಕಳಿಸಿತು ಈ ಕವನದಲೀ....
................................................ ಯಶಸ್ವಿನಿ
ಪ್ರಥಮ ಪಿಯುಸಿ
ಸರಕಾರಿ ಪದವಿಪೂರ್ವ ಕಾಲೇಜು ಕೊಕ್ರಾಡಿ 
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*****************************************





Ads on article

Advertise in articles 1

advertising articles 2

Advertise under the article