-->
ಪ್ರೀತಿಯ ಪುಸ್ತಕ : ಸಂಚಿಕೆ - 182

ಪ್ರೀತಿಯ ಪುಸ್ತಕ : ಸಂಚಿಕೆ - 182

ಪ್ರೀತಿಯ ಪುಸ್ತಕ
ಸಂಚಿಕೆ - 182
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                    
        
                             ನನ್ನ ಗೋಪಾಲ
ಪ್ರೀತಿಯ ಮಕ್ಕಳೇ... ಕುವೆಂಪು ಅವರ ಬರೆದ ಒಂದು ಸುಂದರವಾದ ನಾಟಕ ಇದು. ಗೋಪಾಲ ಮತ್ತು ಅವನ ತಾಯಿ ಕಾಡಿನ ಅಂಚಿನ ಮನೆಯಲ್ಲಿ ವಾಸವಾಗಿರುತ್ತಾರೆ. ಬಡ ಕುಟುಂಬ. ಗೋಪಾಲನ ತಾಯಿ ಶ್ರೀಕೃಷ್ಣನ ಭಕ್ತೆ. ಗೋಪಾಲ ಕಾಡು ದಾರಿಯಲ್ಲೇ ಶಾಲೆಗೆ ಹೋಗಬೇಕು. ಅವನಿಗೆ ಭಯವಾಗುತ್ತಿರುತ್ತದೆ. ತುಂಬಾ ಭಯವಾದರೆ ‘ಬನದ ಗೋಪಾಲನನ್ನು‘ ಕರೆಯುವಂತೆ ಅಮ್ಮ ಮಗನಿಗೆ ಹೇಳುತ್ತಾಳೆ. ಮುಗ್ಧನಾದ ಪುಟ್ಟ ಗೋಪಾಲನಿಗೆ ಈ ವಿಷಯ ತುಂಬಾ ಧೈರ್ಯ ಕೊಡುತ್ತದೆ. ಅವನಿಗೆ ಭಯ ಆದಾಗಲೆಲ್ಲಾ ಬನದ ಗೋಪಾಲನನ್ನು ಕರೆಯುತ್ತಾನೆ. ಬನದ ಗೋಪಾಲನು, ಗೋಪಾಲನ ಪ್ರೀತಿಯ ಅಣ್ಣನಾಗುತ್ತಾನೆ. ಪುಟ್ಟ ಹುಡುಗ ಮತ್ತು ದೇವರ ಸಂಬಂಧ ಇಲ್ಲಿ ಹೇಗೆ ಮುಂದುವರಿಯುತ್ತದೆ, ಓದಿ ನೋಡಿ. ಈ ನಾಟಕವನ್ನು ನೀವೂ ಮಾಡಬಹುದು. ಕುವೆಂಪು ಅವರು 1930ರಲ್ಲಿ ಇದನ್ನು ಬರೆದಿದ್ದಾರೆ, ಇಂದಿನವರೆಗೂ ಮತ್ತೆ ಮತ್ತೆ ಮುದ್ರಣವಾಗುತ್ತಿದೆ. ಮುಗ್ಧ ಪ್ರೀತಿಯ ಕಥೆ ಖುಶಿ ಕೊಡುತ್ತದೆ. 

ಲೇಖಕರು : ಕುವೆಂಪು
ಪ್ರಕಾಶಕರು: ಉದಯರವಿ ಪ್ರಕಾಶನ 
ಬೆಲೆ: ರೂ.35/-

ಇದು 10+ ವರುಷದ ಮಕ್ಕಳಿಗಾಗಿ ಇದೆ. ಚಿಕ್ಕವರಿಗೂ ಇನ್ನೂ ಸ್ವಲ್ಪ ದೊಡ್ಡವರಿಗೂ ಇಷ್ಟವಾಗಬಹುದು. 

ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಉದಯರವಿ ಪ್ರಕಾಶನ, ಮೈಸೂರು – 0821 2511707 (ಈ ಪುಸ್ತಕ ಸಾಧಾರಣ ಎಲ್ಲಾ ಪುಸ್ತಕ ಮಳಿಗೆಯಲ್ಲಿ ಸಿಗುತ್ತದೆ)
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 

Ads on article

Advertise in articles 1

advertising articles 2

Advertise under the article