-->
ಮಕ್ಕಳ ಕವನಗಳು : ಸಂಚಿಕೆ - 58 : ಕವನ ರಚನೆ : ಬಾಲಕೃಷ್ಣ. ಬಿ , ಪ್ರಥಮ ಪಿಯುಸಿ

ಮಕ್ಕಳ ಕವನಗಳು : ಸಂಚಿಕೆ - 58 : ಕವನ ರಚನೆ : ಬಾಲಕೃಷ್ಣ. ಬಿ , ಪ್ರಥಮ ಪಿಯುಸಿ

ಮಕ್ಕಳ ಕವನಗಳು : ಸಂಚಿಕೆ - 58
ಕವನ ರಚನೆ : ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ 
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

        
ಅದೊಂದು ಭಾರತೀಯ ಹೋರಾಟವನ್ನ
ನೋಡಿರುವಿರ...?? ಕೇಳಿರುವಿರ !!....

ಅದೊಂದು ಅಹಿಂಸೆಯ ಹೊರಟವಾಗಿತ್ತಂತೆ
ಹಲವಾರು ಹೋರಾಟಗಾರರು 
ಅದರಲ್ಲಿ ಇದ್ದರಂತೆ 
ಶಾಂತಿ ಧರ್ಮ ದಿಂದ ಹೋರಾಡಿದರಂತೆ 
ಅವರೇ ನಮ್ಮ ಭಾರತ ಮಾತೆಯ ಪುತ್ರರಂತೆ ||೧||

ಅದೊಂದು ಭಾರತೀಯ ಹೋರಾಟವನ್ನ
ನೋಡಿರುವಿರ...?? ಕೇಳಿರುವಿರ !!....

ಬ್ರಿಟಿಷರು ನಮ್ಮ ದೇಶಕ್ಕೆ ಬಂದರಂತೆ 
ನಮ್ಮನ್ನೆಲ್ಲಾ ಅವರು ಆಳ್ವಿಕೆ ಮಾಡಿದರಂತೆ 
ಕೆಂಪು ಪರಂಗಿಯ ಬಂದೂಕುನ್ನು ತಂದರಂತೆ
ಬ್ರಿಟಿಷ್ ವಿಮುಕ್ತವನ್ನಾಗಿ ಮಾಡಲು 
ನಮ್ಮ ಹೋರಾಟಗಾರರು 
ಹೋರಾಡಿ ಮಡಿದರಂತೆ ||೨||

ಅದೊಂದು ಭಾರತೀಯ ಹೋರಾಟವನ್ನ
ನೋಡಿರುವಿರ...?? ಕೇಳಿರುವಿರ !!....

ತನ್ನ ಮಾತೃ ಭೂಮಿಗೋಸ್ಕರ
ರಕ್ತಗಳ ಜಡಿಮಳೆಯನ್ನೇ ಸುರಿಸಿದರಂತೆ 
ಅವರೊಂದಿಗೆ ಶಾಂತಿ ಧರ್ಮ ಅಹಿಂಸೆಯಿಂದ
ಮಹಾತ್ಮ ಗಾಂಧೀಜಿಯವರು ಹೋರಾಡಿದರಂತೆ
ಅವರ ಹೋರಾಟವನ್ನು ಕಂಡು
ಎಲ್ಲರೂ ತನ್ನ ಮನವನ್ನೇ ಮರೆತರಂತೆ 
ಕೊನೆಗೆ!!1947 ಆಗಸ್ಟ್ 15 ರಂದು 
ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು 
ಎಲ್ಲಾ ಹೋರಾಟಗಾರರು ಹೋರಾಡಿ 
ರಕ್ತವನ್ನು ಸುರಿಸಿ ವೀರ ಮರಣವನ್ನಪ್ಪಿ
ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು 
ತಂದು ಕೊಟ್ಟರಂತೆ ||೩||

ಅದೊಂದು ಭಾರತೀಯ ಹೋರಾಟವನ್ನ
ನೋಡಿರುವಿರ...?? ಕೇಳಿರುವಿರ !!....
........................................ ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ 
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************



ಕಾರ್ಮೋಡ ಕರಗಿ 
ಹನಿ ಹನಿ ಯಾಗಿ 
ಮಳೆಯು ಸುರಿಯುತ್ತಿದೆ ....
ಹಕ್ಕಿಗಳ ಚಿಲಿಪಿಲಿ ಗಾನವು 
ಕೇಳುತ್ತಿದೆ ಸಂಜೆಯ ವೇಳೆಗೆ......
ತುಸು ದೂರದಲ್ಲಿ ಕೇಳತೊಡಗಿತು 
ಗುಡುಗಿನ ಆರ್ಭಟವು
ಆ ಶಬ್ಧವ ಕೇಳಿ ಘಲ್ಲೆನಿಸಿತು 
ಈ ಎನ್ನ ಮನವು
ಯಾವುದೇ ಪರಿವೆ ಇಲ್ಲದೆ
ಕಗ್ಗತ್ತಲಿನ ಸಮಯದಲ್ಲಿ 
ಬಾನಿನಲ್ಲಿ ಕಂಡಿತು
ಚಂದ ಮಾಮನ ಬೆಳದಿಂಗಳು 
ಅಮ್ಮ ಅದನ್ನ ತೋರಿಸಿ 
ಊಟವನ್ನ ಮಾಡಿಸಿದಳು 
ಆ ಹಸುಗೂಸಿಗೆ...
ಉಂಡುಮುಗಿಸಿ ಮಲಗಿಸಿದಳು 
ಆ ಮಗುವು ತೊಟ್ಟಿಲಲಿ 
ಆನಂದದ ನಿದ್ರೆಯನು ನಿದ್ರಿಸಿತು
ಆ ಪುಟ್ಟ ಕಂದಮ್ಮವು 
ಅಮ್ಮನ ಜೋಗುಳದ ಹಾಡಿನಲಿ....
........................................ ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ 
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************


        

ಅಮ್ಮಾ ಅಮ್ಮಾ ಬಾ ಅಮ್ಮ 
ತಿಂಡಿ ತಿನಿಸು ಕೊಡಿಸಮ್ಮ 
ಆಟವ ಆಡಿಸಿ, ಊಟವ ಮಾಡಿಸಿ
ನನ್ನನ್ನು ಮಲಗಿಸಮ್ಮ 
ಅಮ್ಮಾ ಅಮ್ಮಾ ನೀ ಬಾರಮ್ಮ ||೧||
ಅಮ್ಮಾ ಅಮ್ಮಾ ಬಾ ಅಮ್ಮ
ಹೇಳುವೆ ನಾ ಈ ದಿನದ ಕಥೆಯಮ್ಮ
ಶಾಲೆಗೆ ಕಳಿಸಿದೆ ನೀನಮ್ಮ
ಶಾಲೆಯಲ್ಲಿ ಏನಾಯ್ತೆಂದು 
ನಿನಗೆ ಗೊತ್ತೇನಮ್ಮಾ
ಅಮ್ಮ ಅಮ್ಮ ನೀ ಬಾರಮ್ಮ||೨||
ಅಮ್ಮಾ ಅಮ್ಮಾ ಬಾ ಅಮ್ಮ 
ಶಾಲೆಯಲ್ಲಿ ಪಾಠವ ಇಂದು 
ನಾ ಕೇಳಿದೆಯಮ್ಮ 
ಮನೆಗೆಲಸವನ್ನು ಇಂದು ನೀಡಿದರಮ್ಮ 
ಪರೀಕ್ಷೆಯ ದಿನ ಯಾವಾಗ 
ಎಂದು ತಿಳಿಸಿದರಮ್ಮ 
ಇವೆಲ್ಲ ನಿನಗೆ ನಾ 
ಹೇಳಬೇಕೆಂದು ಬಯಸುವೆ ಅಮ್ಮ 
ಅಮ್ಮ ಅಮ್ಮ ಬಾರಮ್ಮ|| ೩
ಅಮ್ಮಾ ಅಮ್ಮಾ ಬಾ ಅಮ್ಮ
ರಾತ್ರಿಯ ವೇಳೆಯೂ ಆಯ್ತಮ್ಮ 
ಕೊಂಚ ಭಯ ಎನಗೆ 
ಉಂಟಾಗುತ್ತಿದೆ ಅಮ್ಮ
ನೀ ನನ್ನ ಬಿಟ್ಟು ಹೋಗದಿರಮ್ಮ 
ನಿದ್ದೆಯೂ ಬರುವುದು ತುಸು ಹೊತ್ತಿನಲ್ಲಿ 
ಅಲ್ಲಿಯವರೆಗೂ ಜೋಗುಳವನ್ನು 
ನೀ ಹಾಡಮ್ಮ 
ಅಮ್ಮ ಅಮ್ಮ ಬಾರಮ್ಮ||೪||            
........................................ ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ 
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************


                

ಶಿಶು ಒಂದು ಕೂಗುತಿಹುದು 
ಅಲ್ಲಿ ಒಂಟಿ ಯಾಗಿಬಿಟ್ಟು 
ಹೋದವರು ಯಾರಲ್ಲಿ 
ಯಾರೂ ತಿಳಿಯದೇ ಹೋದರೆ 
ಆ ಹಸುಗೂಸಿನ ಕೂಗನ್ನು!!!!?

ಅತ್ತು ಅತ್ತು ಹಸಿವಿನಿಂದ ಕೂಡಿತ್ತು 
ಆ ಸಣ್ಣ ಮಗುವೊಂದು 
ಆ ಮಗುವಿನ ಸ್ಥಿತಿ ಕಂಡು 
ಯೋಚಿಸದೆ ತಾಯಿ ಹೃದಯ 
ಯಾರು ತಿಳಿಯದೇ ಹೋದರೆ 
ಆ ಮಗುವಿನ ಹಸಿವನ್ನು..!!!?

ಬೀದಿ ಬದಿಯಲ್ಲಿ ಬಾಳೆ ಎಲೆಯಲ್ಲಿ 
ಪುಟ್ಟದೊಂದು ಶಿಶುವ ಬಿಟ್ಟು ಹೋದರು
ಹೇಗೆ ಆ ಮನಸು ಬಂದೀತು ಅವರಿಗೆ 
ಯಾರೂ ತಿಳಿಯದೆ ಹೋದರೆ 
ಆ ಪುಟ್ಟ ಮಗುವಿನ ರೋಧನೆಯನ್ನ...!!?

ಅಜ್ಜರೊಬ್ಬರು ಶಿಶುವ ಬಳಿ ಬರುತಿಹರು 
ಅತ್ತ ಮಗುವನ್ನು ಕಂಡು ಎದೆಗೊತ್ತಿಕೊಂಡು 
ಮಗುವಿನಾ ಹಸಿವನ್ನು ನೀಗಿಸಲು 
ಮನೆಗೆ ಹೊರಟು ಬಿಟ್ಟರವರು 
ಕೊನೆಗೆ ವೃದ್ಧರ ಮನದಲಿ ಮೂಡಿತು 
ಯಾರು ತಿಳಿಯದೇ ಹೋದರೆ 
ಮುಗ್ಧ ಮಗುವಿನ ಮನವನ್ನ!!?
........................................ ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ 
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************



         

ಹಕ್ಕಿಯೊಂದು ಕೂಗುತಿಹುದು
ಗೂಡಿನ ಅಂಚಿನಲಿ 
ಮರಿಗಳು ಕಾಣುತ್ತಿಹುದು 
ಹಕ್ಕಿಯ ಜೊತೆಯಲ್ಲಿ 
ಊಟಕ್ಕೆ ಏನು ತರುವುದು ಮರಿಗಳಿಗೆ  
ಎಂದು ಯೋಚಿಸುತ್ತಿಹುದು 
ಆದರೆ ಊಟವೇ ಸಿಗಲಿಲ್ಲ ಎಂದು 
ಅದು ದುಃಖಿಸುತ್ತಿರುವುದು 
ಬಡಪಾಯಿ ಹಕ್ಕಿಯೊಂದರ ಸ್ಥಿತಿ 
ಬಹಳ ಕಷ್ಟದಲಿ 
ಮರಗಳಿಲ್ಲ ಹಣ್ಣುಗಳಿಲ್ಲ
ಕಾಡು ಕಡಿದ ಮಾನವನ
ದುಃಖದ ರೋದನೆಯಲ್ಲಿ
........................................ ಬಾಲಕೃಷ್ಣ.ಬಿ
ಪ್ರಥಮ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ 
ಕಾಲೇಜು ಸುಬ್ರಹ್ಮಣ್ಯ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************




Ads on article

Advertise in articles 1

advertising articles 2

Advertise under the article