ಮಕ್ಕಳ ಕವನಗಳು : ಸಂಚಿಕೆ - 56 : ಕವನ ರಚನೆ : ಶ್ರೇಯ ಶೆಟ್ಟಿ, ಪ್ರಥಮ ಪಿಯುಸಿ
Wednesday, September 3, 2025
Edit
ಮಕ್ಕಳ ಕವನಗಳು : ಸಂಚಿಕೆ - 56
ಕವನ ರಚನೆ : ಶ್ರೇಯ ಶೆಟ್ಟಿ
ಪ್ರಥಮ ಪಿಯುಸಿ
ರಾಮಕುಂಜ ಪದವಿಪೂರ್ವ ಕಾಲೇಜು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನಿನ್ನ ಭಾವನೆಯ ಜೊತೆಗಾರರಾರು?
ನನಗಿರುವ ಆಸೆಯ ಅಲ್ಪವೂ ನಿನಗಿಲ್ಲವೇ?
ಗೆಳೆಯರಿಲ್ಲವೇ, ಜೊತೆಗಾರರಿಲ್ಲವೇ?
ಯಾಕೆ ಒಬ್ಬಂಟಿಯಾಗಿರುವೆ, ಅಲ್ಲಿ?
ನೀ ಅಲ್ಲಿ ಮೌನಿಯಾದೆ,
ನಾನಿಲ್ಲಿ ಮೌನಿಯಾದೆ?
ಇಬ್ಬರ ಕಾರಣ ಬೇರೆ, ಮನಸ್ಥಿತಿಯೂ ಬೇರೆ,
ಆದರೆ ಮೌನ ಒಂದೇ ಆಗಿದೆ.
ಆ ಬಾನಿನ ಮೋಡವು ಕರಗುತ್ತದೆ,
ಆದರೆ ಎದೆಯ ಭಾರ ಕರಗದು.
ಅದು ನನ್ನ ಭಾರವಾಗಲಿ, ನಿನ್ನ ಭಾರವಾಗಲಿ.
............................................. ಶ್ರೇಯ ಶೆಟ್ಟಿ
ಪ್ರಥಮ ಪಿಯುಸಿ
ರಾಮಕುಂಜ ಪದವಿಪೂರ್ವ ಕಾಲೇಜು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಜ್ಞಾನವೇ ಅದರ ದೀಪ.
ಅನ್ಯ ಪ್ರಕಾಶ ನಗಣ್ಯ
ಅನುಭವವೇ ಇಲ್ಲಿ ಗುರು.
ತಪ್ಪುಗಳು ಮಾರ್ಗದ ಕಲ್ಲು,
ನೋವುಗಳೇ ನುಡಿದ ಪಾಠ.
ಮೌನವೇ ಮಾತಿನ ನೆರಳು,
ನಾನು ತಾನೇ ದೋಣಿ,
ನಾನು ತಾನೇ ನದೀದಾರಿ.
ಅಂಧಕಾರವನು ನಾನೇ ಭೇದಿಸಿದೆ,
ಅದರೊಳಗೆ ಬೆಳಕು ಕಂಡೆ.
ಪ್ರತಿ ಕ್ಷಣವೂ ಶಿಕ್ಷೆ ಅಲ್ಲ,
ಅದು ನನ್ನ ರೂಪಾಂತರದ ಕಾಲ
ಬದುಕು ತಪ್ಪು ತೀಡುವ ಪಾಠಶಾಲೆ
ನನ್ನೊಳಗಿನ ದೀಪವೇ ನನಗೆ ದಾರಿ.
ಹೊರ ಬೆಳಕು ಇಲ್ಲದಿದ್ದರೂ ಚೆನ್ನ,
ಆಳವಾದ ಒಳನೋಟವೇ ಸಾಕು!
............................................. ಶ್ರೇಯ ಶೆಟ್ಟಿ
ಪ್ರಥಮ ಪಿಯುಸಿ
ರಾಮಕುಂಜ ಪದವಿಪೂರ್ವ ಕಾಲೇಜು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಸತ್ಯದ ಬೆಳಕು ಕಂಡುಕೊಂಡೆ.
ಅವನ ಸೌಂದರ್ಯವು ಕಣ್ಣೆದುರು ಹೊಳೆದಾಗ,
ನನ್ನ ಅಸ್ತಿತ್ವವನ್ನೇ ಮರೆತು ಹೋದೆ.
ಅವನು ಎಂದೂ ನನ್ನನ್ನು ತಳ್ಳಿಹಾಕಲಿಲ್ಲ,
ಬದಲಾಗಿ ತನ್ನ ಶಿರದ ಮೇಲೆ ಸ್ಥಾನವಿತ್ತ
ಅವನ ಸ್ಪರ್ಶದಿಂದ ಪಾವನಳಾದೆ.
ಅವನ ರೂಪದಲ್ಲೇ ನನ್ನನ್ನು ಪೂಜಿಸಿದರು,
ನಾನು ಸುಂದರಿಯಾದರೂ
ಅವನು ಗೌರವವಿತ್ತ.
ಪೂಜ್ಯವಾದ ನನ್ನೀ ರೂಪ,
ಅವನ ಭಾವದಿಂದ ಪಾವಿತ್ರ್ಯವಾಯಿತು
ಆ ಭಾವವೇ ನನ್ನ ನೋವಿಗೆ ಶಾಂತಿ ನೀಡಿತು
ಅವನಲ್ಲೇ ನನ್ನ ಅರ್ಥವಿದೆ,
ಅವನ ಶಿರವೇ ನನ್ನ ನಿವಾಸವಾಗಿದೆ
ಪ್ರಥಮ ಪಿಯುಸಿ
ರಾಮಕುಂಜ ಪದವಿಪೂರ್ವ ಕಾಲೇಜು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************