ಪ್ರೀತಿಯ ಪುಸ್ತಕ : ಸಂಚಿಕೆ - 179
Saturday, September 6, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 179
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಬಸವ ಮತ್ತು ಅವನ ತಾಯಿ ಅರಣ್ಯದ ಪಕ್ಕ ಗುಡಿಸಲಿನಲ್ಲಿ ವಾಸವಾಗಿರುತ್ತಾರೆ. ಬಸವ ದಿನಾ ಕಾಡಿಗೆ ಸೌದೆ ತರಲು ಹೋಗುತ್ತಿರುತ್ತಾನೆ. ಒಂದು ಸಾರಿ ಅವನು ಹೋಗುವಾಗ ‘ಕಾಪಾಡಿ, ಕಾಪಾಡಿ’ ಅನ್ನುವ ಧ್ವನಿ ಕೇಳಿಸುತ್ತದೆ. ಹುಡುಕಿ ನೋಡಿದರೆ ಚಿಟ್ಟೆಯೊಂದು ಜೇಡರ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ವಿಲವಿಲನೆ ಒದ್ದಾಡುತ್ತಿದೆ. ಬಸವ ಸಮಾಧಾನದಿಂದ ಚಿಟ್ಟೆಯನ್ನು ಬಿಡಿಸುತ್ತಾನೆ. ಚಿಟ್ಟೆಗೆ ಖುಶಿಯಾಗುತ್ತದೆ. ಮುಂದೆ ಸಹಾಯ ಮಾಡುವುದಾಗಿ ಹೇಳುತ್ತದೆ. ಹಾಗೆಯೇ ಇನ್ನೊಂದು ದಿನ ಏರೋಪ್ಲೇನೆ ಹುಳಕ್ಕೆ ಬಸವ ಸಹಾಯ ಮಾಡುತ್ತಾನೆ. ಮುಂದೆ ಒಂದು ದಿನ ಬಸವ ಕಾಡಿಗೆ ಹೋದಾಗ ಒಂದು ಕಡೆ ರಾಶಿ ರಾಶಿ ಸೌದೆ ಬಿದ್ದಿರುವುದು ಕಾಣಿಸುತ್ತದೆ. ಅವನ್ನೆಲ್ಲಾ ಎತ್ತಿಕೊಂಡು ಹೊರಡುವಷ್ಟರಲ್ಲಿ ಕತ್ತಲಾಗಿ ಬಿಡುತ್ತದೆ. ಪಾಪ! ಬಸವನಿಗೆ ದಾರಿಯೇ ಕಾಣಿಸುವುದಿಲ್ಲ. ಏನು ಮಾಡುವುದು? “ಕಾಪಾಡಿ, ಕಾಪಾಡಿ” ಅಂತ ಕೂಗುತ್ತಾನೆ. ಚಿಟ್ಟೆ ಮತ್ತು ಏರೋಪ್ಲೇನ್ ಹುಳ ಬಂದೇ ಬಿಡುತ್ತವೆ. ಬಸವನಿಗೆ ಬೆಳಕಿನ ವ್ಯವಸ್ಥೆ ಮಾಡುತ್ತವೆ. ಹೇಗೆ ಮಾಡುತ್ತವೆ? ಸ್ವಲ್ಪ ಯೋಚಿಸಿದರೆ ನಿಮ್ಮ ತಲೆಯಲ್ಲಿ ಮಿಂಚಬಹುದು.
ಲೇಖಕರು : ರಾಧಿಕಾ ಚಡ್ಡಾ
ಚಿತ್ರಗಳು: ಭಕ್ತಿ ಘಾಟಕ್
ಅನುವಾದ: ಜಯಶ್ರೀ ಕಾಸರವಳ್ಳಿ
ಪ್ರಕಾಶಕರು: ತುಲಿಕಾ
ಬೆಲೆ: ರೂ.100/-
ಇದು 4+ ವಯಸ್ಸಿನವರಿಗಾಗಿ ಇದೆ. ಇನ್ನೂ ದೊಡ್ಡ ಮತ್ತು ಚಿಕ್ಕ ಮಕ್ಕಳು ಇಷ್ಟಪಡುವ ಹಾಗೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com email: tulikabooks@vsnl.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
******************************************