ಪ್ರೀತಿಯ ಪುಸ್ತಕ : ಸಂಚಿಕೆ - 174
Saturday, August 2, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 174
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಇರುವೆಯನ್ನು ಅಂದರೆ ಇರುವೆ ಸಾಲನ್ನು ಯಾವತ್ತಾದರೂ ಹಿಂಬಾಲಿಸಿದ್ದೀರಾ? ತುಂಬಾ ಮಕ್ಕಳು ಇದನ್ನು ನೋಡುತ್ತಾ ಕೂರುತ್ತಾರೆ. ಇರುವೆಗಳ ಸಾಲನ್ನು ತಪ್ಪಿಸಲೂ ನೋಡುತ್ತಾರೆ. ಇರಲಿ ಈ ಪುಸ್ತಕದಲ್ಲಿ ಇರುವೆ ಸಾಲಿನಲ್ಲಿ ಹೋಗುತ್ತಿರುವ ಒಂದು ಇರುವೆ ತನ್ನ ಬಗ್ಗೆ ಏನೇನೋ ಹೇಳುತ್ತಾ ಇದೆ. ಅವರ ಬದುಕಿನ ಪರಿಚಯ ಕೊಡುತ್ತಾ ಇದೆ. “ನಾವು ಇತರ ಪ್ರಾಣಿಗಳಂತೆ ಶಬ್ದ ಮಾಡುವುದಿಲ್ಲ , ನಮ್ಮದು ವಾಸನೆಗಳ ಭಾಷೆ.” ಊಟವೂ ವಾಸನೆಯಿಂದ ಗೊತ್ತಾಗುತ್ತದೆ. ಅಪಾಯವೂ ವಾಸನೆಯಿಂದ ಗೊತ್ತಾಗುತ್ತದೆ. ಸದಾ ಚುರುಕು ಚುರುಕಾಗಿ ಇರುವ ಈ ಇರುವೆಗಳು ಮಹಾ ಕೆಲಸಗಾರರು. ಅಷ್ಟೇ ಅಲ್ಲ ನೂರಾರು ಇರುವೆಗಳು ಜೊತೆಜೊತೆಗೆ ಸಂತೋಷದಿಂದ ಇರುತ್ತವಂತೆ. ಪುಸ್ತಕವನ್ನೂ ನೋಡಿ, ಸಾಲು ಸಾಲು ಇರುವೆಗಳ ಹಿಂದೆ ಹೋಗಿಯೂ ನೋಡಿ.
ಲೇಖಕರು : ಕಂಚನ್ ಬ್ಯಾನರ್ಜಿ
ಚಿತ್ರಗಳು: ದೀಪಾ ಬಲ್ಸಾವರ್
ಅನುವಾದ: ಉದಯ ಕುಮಾರ್
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.60/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಪ್ರಥಮ್ ಪ್ರಕಾರ ಇದು 1ನೇ ಹಂತದ ಪುಸ್ತಕ. ಈಗ ತಾನೇ ಓದಲು ಆರಂಭಿಸಿರುವ/ಜೋರಾಗಿ ಓದಲು, ಕತೆಗಳನ್ನು ಕೇಳಲು ಹಾಗೂ ಓದುವುದನ್ನು ಪ್ರಾರಂಭಿಸಲು ಕಾತರರಾಗಿರುವ ಸಣ್ಣ ಮಕ್ಕಳಿಗಾಗಿ..
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************