-->
ಮಕ್ಕಳ ಕವನಗಳು : ಸಂಚಿಕೆ - 52

ಮಕ್ಕಳ ಕವನಗಳು : ಸಂಚಿಕೆ - 52

ಮಕ್ಕಳ ಕವನಗಳು : ಸಂಚಿಕೆ - 52
ಜಗಲಿಯ ಮಕ್ಕಳ ಸ್ವರಚಿತ ಕವನಗಳು

ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಮಂದಾರ ಬಿ ಸುವರ್ಣ, ಪ್ರಥಮ ಪಿಯುಸಿ
◾ ಶ್ರಾವ್ಯ ಜಿ. ಎಸ್, 9ನೇ ತರಗತಿ
◾ ಅಭಿಜ್ಞಾ ಎಸ್ ಪಿ, 8ನೇ ತರಗತಿ
◾ ಸುನಿಧಿ, 7ನೇ ತರಗತಿ
◾ ಮನಸ್ವಿ. ಜಿ , 9ನೇ ತರಗತಿ

ಪ್ರಕೃತಿಯೊಂದು ಸುಂದರ ಸೃಷ್ಟಿ
ಆಗಿದೆ ಇಂದು ಸುಮಗಳ ವೃಷ್ಟಿ
ಈ ಧರೆಯ ಮೇಲಿನ ವಿಸ್ಮಯ
ನಾನಾದೆ ನಿನ್ನಲಿ ತನ್ಮಯ

ಪ್ರತಿದಿನ ಸೂರ್ಯನ ದಿನಚರಿ 
ಮೂಡಿಸುವುದೆಮಗೆ ಅಚ್ಚರಿ
ಮೂಡುವನು ಪೂರ್ವದಿ 
ಮುಳುಗುವನು ಪಶ್ಚಿಮದಿ

ನೀಡುವೆ ನೀನು ಜೀವನ ಪಾಠವ
ಸುಂದರ ಬದುಕಿಗೆ ತೋರುವೆ ದಾರಿಯ
ಸೋತೆನು ನಿನ್ನಯ ಶಿಸ್ತಿನ ಜೀವನಕೆ
ಜೀವವ ನೀಡಿದೆ ನನ್ನಯ ಕವನಕೆ
................................. ಮಂದಾರ ಬಿ ಸುವರ್ಣ 
ಪ್ರಥಮ ಪಿಯುಸಿ
ಜ್ಞಾನ ಸುಧಾ ಪದವಿ ಪೂರ್ವ ಕಾಲೇಜು
ಉಡುಪಿ, ಉಡುಪಿ ಜಿಲ್ಲೆ
****************************************
       
ನನ್ನ ಬಾಲ್ಯದ ಸವಿ ನೆನಪುಗಳು 
ಮರೆಯಲಾಗದ ಆ ಕ್ಷಣಗಳು 
        
ಚಿಕ್ಕ ಪುಟ್ಟ ಹೆಜ್ಜೆ ಇಡುತ್ತಾ 
ಶುರುವಾದವು ನನ್ನ ದಿನಗಳು 
ಎದ್ದು ಬಿದ್ದು ಕಲಿತ ಪಾಠ 
ನಗು ತರುವಂತಹ ನನ್ನ ತುಂಟಾಟ 

ಅಮ್ಮನ ಕೈ ತುತ್ತನ್ನು ತಿನ್ನುತ 
ಅಪ್ಪನ ಹೆಗಲ ಮೇಲೆ ಕೂರುತ 
ಚಂದಮಾಮನ ನೋಡುತ 
ಸಂತಸ ಪಟ್ಟೆನು ಆ ದಿನ 

ಮಣ್ಣಿನ ಜೊತೆಗಿನ ನನ್ನ ಆಟ 
ನನ್ನಯ ಪಾಲಿಗೆ ಅದೇ ಊಟ
 ಬೆತ್ತವ ಹಿಡಿದು ಅಮ್ಮನ ನೋಟ 
ಅಮ್ಮನ ಜೊತೆಗೆ ನನ್ನಯ ಓಟ 

ನನ್ನಯ ಬಾಲ್ಯದ ಸವಿ ನೆನಪುಗಳು 
ಹಿಂದಕೆ ಬಾರದ ಆ ದಿನಗಳು 
.......................................... ಶ್ರಾವ್ಯ ಜಿ. ಎಸ್
9ನೇ ತರಗತಿ
ಸ.ಪ.ಪೂ.ಕಾಲೇಜು ಕೊಂಬೆಟ್ಟು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
                      
ನೆನಪಿದೆಯೆ ಹಿಂದಿನ ಕಾಲದ 
ಆ ಚಟುವಟಿಕೆ
ಆಡುತ್ತಿದ್ದರು ಕುಂಟೆಬಿಲ್ಲೆ 
ಮರಕೋತಿ ಆಟ                        
ಆ ಮನೆಯ ಆಟ 
ಅದರಲ್ಲೊಂದು ಊಟದ ಕೂಟ
ತಂದೆ ತಾಯಿಗೆ ಕೊಡುತ್ತಿದ್ದರು ಕಾಟ 
ಬೆತ್ತ ಹಿಡಿದು ಬಂದರೆ 
ದೂರಕ್ಕೆ ಒಂದು ಓಟ                              
ಶಾಲೆಯಲ್ಲಿ ಕೇಳುತ್ತಿದ್ದರು ಪಾಠ         
ಮನೆಗೆ ಬಂದು ಆಡುತ್ತಿದ್ದರು 
ಟೀಚರ್ ಟೀಚರ್ ಆಟ                 
ದೊಡ್ಡ ಮರದಲ್ಲೊಂದು ಜೋಕಾಲಿ 
ರಾತ್ರಿ ಅಮ್ಮ ಅಥವಾ ಅಜ್ಜಿ 
ಹೇಳುತ್ತಿದ್ದರು ಜೋ ಜೋ ಲಾಲಿ
.................................... ಅಭಿಜ್ಞಾ ಎಸ್ ಪಿ
8ನೇ ತರಗತಿ "ಅಮೋಘ" 
ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************

ಗಗನ ದೇವಿಯ ಹಣೆಗೆ
ತಿಲಕ ಚಂದ್ರಮನು
ಹುಣ್ಣಿಮೆಗೆ ಬೆಳಕ ನೀಡುವನು
ಅಮಾವಾಸ್ಯೆಗೆ ಮಾಯವಾಗುವನು
ಇರುಳಲ್ಲಿ ಕಣ್ಣಿಗೆ 
ತಂಪ ನೀಡುವನು ಚಂದ್ರಮನು
.............................................. ಸುನಿಧಿ 
7ನೇ ತರಗತಿ 
ಶ್ರೀ ಭಾರತೀ ಆಂಗ್ಲ ಮಾಧ್ಯಮ 
ಪ್ರೌಢಶಾಲೆ, ಉರುವಾಲು 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************

ಪ್ರಕೃತಿ ದೇವಿಯ ಮಡಿಲಲ್ಲಿ 
ಕೂತೆವು ನಾವೆಲ್ಲ
ಏಕೆ ಮಲಿನ ಮಾಡುವಿರಿ 
ಅವಳ ಸೊಬಗೆಲ್ಲ 
ಮರಗಿಡಗಳೇ ಅವಳ ಆಭರಣ 
ನಾಶ ಮಾಡಿದರೆ 
ಉಳಿಯಲಾರೆವು ನಾವೆಲ್ಲ
.............................................. ಸುನಿಧಿ 
7ನೇ ತರಗತಿ 
ಶ್ರೀ ಭಾರತೀ ಆಂಗ್ಲ ಮಾಧ್ಯಮ 
ಪ್ರೌಢಶಾಲೆ, ಉರುವಾಲು 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************

ಮಳೆ ಬಂದಿತು ಹೊಳೆ ತುಂಬಿತು 
ಊರೆಲ್ಲಾ ಹಸಿರಾಯ್ತು 
ಭದ್ರ, ಕಾಳಿ, ತುಂಗೆ 
ಸರಸ್ವತಿ ದೇವಗಂಗೆ 
ಉಕ್ಕಿ ಹರಿಯುತಿದೆ ನೋಡು 
ಸಾಗರದಲಿ ಅಲೆಗಳ ತಾಂಡವಕೆ 
ಸಿಡಿಲು ಮಿಂಚಿನ ಹಾಡು
.............................................. ಸುನಿಧಿ 
7ನೇ ತರಗತಿ 
ಶ್ರೀ ಭಾರತೀ ಆಂಗ್ಲ ಮಾಧ್ಯಮ 
ಪ್ರೌಢಶಾಲೆ, ಉರುವಾಲು 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************

ಕಾಡುಗಳಲ್ಲಿ ಇರುತ್ತದೆ ಮರ
ಕುತ್ತಿಗೆಗೆ ಹಾಕುತ್ತೇವೆ ಸರ
ದೇವರು ಕೊಡುವರು ವರ
ಮರಗಳಲ್ಲಿ ಹಣ್ಣುಗಳು ವಿವಿಧ ತರ 
.............................................. ಮನಸ್ವಿ. ಜಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************

ಎಲ್ಲೋ ಬಿದ್ದ ಬೀಜ ನಾನು 
ನನ್ನ ತಂದು ನೆಟ್ಟರು
ನನ್ನ ಪ್ರೀತಿಯಿಂದ ಬೆಳೆಸಿದರು 
ನಾನು ಮರವಾಗಿ ಬಿಟ್ಟೆ 
ನನ್ನ ಹಣ್ಣುಗಳನ್ನು ಕೀಳಲು 
ಸಾಧ್ಯವಿಲ್ಲ ಎಂದು 
ಆದರೆ ನನ್ನ ಕಡಿದೇ ಬಿಟ್ಟರು 
ನನ್ನ ಹಣ ಕೊಟ್ಟು ಮಾರಿದರು 
ನಾನು ಸತ್ತೇ ಹೋದೆನು..!!
.............................................. ಮನಸ್ವಿ. ಜಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************

ಮಕರ ಮಂಜಿನಂತೆ ಕರಗುವಳು 
ಸತ್ಯದಿದಾರಿಯ ಹುಡುಕುವಳು 
ಪ್ರೀತಿ ಮಮತೆಯ ಸಾಗರದವಳು 
ಮಾತೃ ಸ್ವರೂಪಿ ಹೆಣ್ಣು ಹೃದಯದವಳು 
ಅಮ್ಮ ಎಂದು ಬದಲಾಗದ 
ಪ್ರೀತಿಯ ಕೊಡುವವಳು
.............................................. ಮನಸ್ವಿ. ಜಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************

ಸ್ನೇಹದಿಂದ ಕರೆಯುವ 
ಮನಸ್ಸು ನಮ್ಮದು 
ಪ್ರೀತಿಯಿಂದ ಬರುವ 
ಮನಸ್ಸು ನಿಮ್ಮದು 
ನೀವು ಬಂದಾಗ 
ಸಿಗುವ ಆನಂದ 
ನಮ್ಮೆಲ್ಲರದ್ದು
.............................................. ಮನಸ್ವಿ. ಜಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************

ನಮ್ಮ ಜೊತೆ ಇದೆ ದೊಡ್ಡ ಪರಿಸರ 
ಇದರಿಂದಲೇ ನಮಗೆ ಇಲ್ಲ ಬೇಸರ 
ಗಿಡ ಮರ ಪ್ರಾಣಿ ಪಕ್ಷಿಗಳ ಆಗರ 
ಇದುವೇ ನಮ್ಮ ಬದುಕಿನ ಆಧಾರ 
ವಾಯು ಜಲ ಬೆಂಕಿ ಬಾನು ಮಣ್ಣು 
ಈ ಪಂಚಭೂತಗಳೇ ನಮ್ಮೆಲ್ಲರ ಕಣ್ಣು 
ಮರವನ್ನು ಹಾಳು ಮಾಡುತ್ತಿದ್ದಾನೆ ಈ ನರ 
ಪರಿಸರಕ್ಕೆ ಬರುವುದು ಬೇಡ ಈ ಬರ
.............................................. ಮನಸ್ವಿ. ಜಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************

Ads on article

Advertise in articles 1

advertising articles 2

Advertise under the article