ಮಕ್ಕಳ ಕಥೆಗಳು - ಸಂಚಿಕೆ : 15, ರಚನೆ : ಸಾತ್ವಿಕ್ ಗಣೇಶ್, ಪ್ರಥಮ ಪಿಯುಸಿ
Monday, July 28, 2025
Edit
ಮಕ್ಕಳ ಕಥೆಗಳು - ಸಂಚಿಕೆ : 15
ರಚನೆ : ಸಾತ್ವಿಕ್ ಗಣೇಶ್
ಪ್ರಥಮ ಪಿಯುಸಿ
ಎಕ್ಸೆಲ್ ಪದವಿಪೂರ್ವ ಕಾಲೇಜು
ಗುರುವಾಯನಕೆರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಾಲಕ್ಕೆ ತಕ್ಕಂತೆ ಸರಿಯಾಗಿ ಕೆಲವು ಪಕ್ಷಿಗಳು ವಲಸೆ ಹೋಗಲು ಆರಂಭಿಸುತ್ತದೆ. ಒಂದು ಹಕ್ಕಿಗಳ ಹಿಂಡು ಒಂದು ಕಡೆಯಿಂದ ಇನ್ನೊಂದು ಕಡೆ ವಲಸೆ ಹೋಗುವ ಮಾರ್ಗದಲ್ಲಿ ಅವರಿಗೆ ಸುಂದರವಾದ ಹಸಿರಿನಿಂದ ಕಂಗೊಳಿಸುವ ಅಡವಿಯು ಕಾಣಸಿಗುತ್ತದೆ.
ಅವುಗಳು ಅಲ್ಲಿಯೇ ಕೆಲವು ದಿನ ಉಳಿದು ಕೊಳ್ಳಲು ನಿರ್ಧಾರ ಮಾಡಿದವು. ಅಲ್ಲಿ ಪ್ರಾಣಿ - ಪಕ್ಷಿಗಳು, ಹಾವುಗಳು ಇದ್ದವು. ಅವುಗಳು ಹೊಸ ಹಕ್ಕಿಗಳ ಆಗಮನದಿಂದ ತುಂಬಾ ಸಂತೋಷಪಟ್ಟವು.
ವಲಸೆ ಬಂದವುಗಳು ಇಲ್ಲಿರುವ ಹಣ್ಣುಗಳನ್ನು ತಿಂದು ಸಂತೋಷ ಪಟ್ಟರು. ಕಾಡಿನಲ್ಲಿ ಒಂದು ತುಂಟ ಹಾವೊಂದು ಇತ್ತು. ಮರಿ ಹಾವಿನ ತುಂಟತನ ಅದರ ಆಟ ನೋಡಿ ಆನಂದಿಸಿದವು. ಅಲ್ಲಿ ಕೆಲವು ದಿನಗಳನ್ನು ಕಳೆದವು. ಅಲ್ಲಿ ಮರಿ ಆನೆಯೊಂದಿಗೆ ಅವುಗಳು ಸ್ನೇಹ ಸಂಬಂಧವನ್ನು ಬೆಳೆಸಿದರು. ವಲಸೆ ಹಕ್ಕಿಗಳು ಅಲ್ಲಿಂದ ಹೊರಟು ಬರುವಾಗ ಅಲ್ಲಿರುವ ಪ್ರಾಣಿ ಪಕ್ಷಿಗಳು ಬಹಳ ಬೇಸರಗೊಂಡವು.
ಅಲ್ಲಿಂದ ಹೊರಟು ಮುಂದೆ ಹೋಗುವಾಗ ಬೇಟೆಗಾರನ ಬಲೆಯಲ್ಲಿ ಸಿಕ್ಕಿಹಾಕಿಕೊಂಡವು. ಅದೇ ದಾರಿಯಲ್ಲಿ ಮರಿ ಆನೆಯು ತನ್ನ ಗೆಳೆಯನೊಂದಿಗೆ ಆಟ ಆಡಲು ಹೊರಟಿತು. ಅದಕ್ಕೆ "ಯಾರಾದರೂ ಸಹಾಯ ಮಾಡಿಯೆಂಬ" ಕೂಗು ಕೇಳಿಸಿತು. ಇನ್ನೇನು ಬೇಟೆಗಾರನು ಬಂದು ಹಿಡಿಯುವಷ್ಟರಲ್ಲಿ ಆನೆಯು ಬಂದು ಹಕ್ಕಿಗಳನ್ನು ರಕ್ಷಣೆ ಮಾಡಿತು. ಆನೆಯನ್ನು ನೋಡಿದ ಬೇಟೆಗಾರನು ಓಡಿ ಹೋದನು. ಅವರ ಸಂಗಡ ಕೆಲವೇ ದಿನ ಇದ್ದರೂ ಸಹ ಅವರ ಸ್ನೇಹವನ್ನು ನೋಡಿ ಹಕ್ಕಿಗಳು ಸಂತೋಷ ಪಟ್ಟವು. ತಮ್ಮ ಪ್ರಾಣವನ್ನು ಕಾಪಾಡಿದ ಮರಿ ಆನೆಗೆ ಕೃತಜ್ಞತೆ ಸಲ್ಲಿಸಿದ ಹಕ್ಕಿಗಳು ತಮ್ಮ ಪ್ರಯಾಣವನ್ನು ಮುಂದುವರಿಸಿದವು.
...................................... ಸಾತ್ವಿಕ್ ಗಣೇಶ್
ಪ್ರಥಮ ಪಿಯುಸಿ
ಎಕ್ಸೆಲ್ ಪದವಿಪೂರ್ವ ಕಾಲೇಜು
ಗುರುವಾಯನಕೆರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಹಲವಾರು ವರ್ಷಗಳ ಹಿಂದೆ ಬಂಡಿಪುರವೆಂಬ ಎಂಬ ಊರಿತ್ತು. ಅಲ್ಲಿ ಒಂದು ಚೇಳಿನ ಸಂಸಾರವಿತ್ತು. ಮರಿ ಚೇಳಿನ ಹೆಸರು ಪಾರು ಎಂದಾಗಿತ್ತು. ತನ್ನ ಸ್ವಂತ ಕೆಲಸವನ್ನು ಮಾಡದೇ ಸೋಮಾರಿಯಾಗಿತ್ತು ಪಾರು. ಸೋಮಾರಿ ಮಗನಾದ ಪಾರುಗೆ ಆಹಾರ ತರುವುದು ಅಮ್ಮ ಚೇಳಿನ ಕೆಲಸವಾಗಿತ್ತು. ಪಾರು ಸೋಮಾರಿ ಮಾತ್ರವಲ್ಲದೇ ಅಹಂಕಾರಿ ಆಗಿತ್ತು. ತನ್ನ ಎದುರಿಗೆ ಯಾರೇ ಬಂದರೂ ತನ್ನ ಮೊನಚಾದ ಕೈಗಳಿಂದ ಅವರನ್ನು ನೋಯಿಸಿ ಕಳುಹಿಸುತ್ತಿತ್ತು. ಅಮ್ಮ ಪಾರುವಿಗೆ ಎಷ್ಟು ಬುದ್ಧಿ ಹೇಳಿದರೂ ಲೆಕ್ಕಿಸುತ್ತಿರಲಿಲ್ಲ, "ಅಮ್ಮಾ ನೀನು ಸುಮ್ಮನಿರಮ್ಮ ನಾನು ನನ್ನ ಕೈಗಳಿಂದ ಒಮ್ಮೆ ನೋಯಿಸಿದರೆ ಅವರ ಅವರಾರು ಮತ್ತೆ ಈ ಕಡೆ ತಲೆ ಹಾಕಲಾರವು"ಎನ್ನುತ್ತಿತ್ತು.
ಹೀಗೆ ಮುಂದೆ ಒಂದು ದಿನ ದಾರಿ ತಪ್ಪಿದ ಬೆಕ್ಕೊಂದು ಅಲ್ಲಿಗೆ ಬಂತು. ಗೆಳೆಯರೊಡನೆ ಇದ್ದ ಪಾರು, "ನೋಡಿ ಎಲ್ಲಿಗೋ ಹೊರಟ ಬೆಕ್ಕು ಇಲ್ಲಿಗೆ ಬಂದಿದೆ. ಅದಕ್ಕೊಂದು ಪಾಠ ಕಲಿಸುವೆ" ಎಂದು ಹೊರಟಿತು. ಇದನ್ನು ನೋಡಿದ ಅಮ್ಮನಿಗೆ ವಿಪರೀತ ದುಃಖವಾಯಿತು. ನೋಡು ಪಾರು ಬೇರೆಯವರಿಗೆ ತೊಂದರೆ ಕೊಡುವುದು ಒಳ್ಳೆಯದಲ್ಲ. ಅದರಿಂದ ನಮಗೆ ತೊಂದರೆಯೇ ಹೊರತು ಬೇರೆ ಪ್ರಯೋಜನವಿಲ್ಲಾ. ಖಂಡಿತಾ ಅದು ನಿನ್ನ ಸುಮ್ಮನೇ ಬಿಡಲಾರದು ಎಂದಿತು.. ಇದನ್ನು ಕೇಳಿದ ಅಹಂಕಾರಿಯಾದ ಪಾರು ನನಗಿಂತ ಶಕ್ತಿವಂತರನ್ನು ಇದುವರೆಗೂ ನೋಡಿಲ್ಲ. ಇನ್ನೂ ನೋಡಲಾರೆನು ಎಂದು ಹೊರಟಿತು. ನೇರವಾಗಿ ಬೆಕ್ಕಿನ ಎದುರಿಗೆ ಹೋಗಿ ನಿಂತಿತು. ಇದನ್ನು ಕಂಡ ಬೆಕ್ಕಿನ ಸಂತೋಷ ಹೇಳತೀರದು. ಆಹಾರ ತಾನಾಗಿಯೇ ಕಾಲ ಬಳಿ ಬಂದುದಕ್ಕೆ ಸಂತೋಷ ಪಟ್ಟಿತು. ಇದರ ಅರಿವಿಲ್ಲದ ಪಾರು ಅದರ ಬಳಿ ಬಂದು ತನ್ನ ಆಹಂಕಾರದ ಕೆಲಸ ಸುರು ಮಾಡಿತು. ಬೆಕ್ಕಿಗೆ ಬಂದ ಸಿಟ್ಟಿನಿಂದ ಅದನ್ನು ಕಚ್ಬಿ ತಿನ್ನಲು ಹೊರಟಿತು. ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಪಾರುನ ಅಮ್ಮ ಮತ್ತು ಗೆಳೆಯರು ಓಡಿಬಂದರು. ಅವರು ಬರುವಷ್ಟರಲ್ಲಿ ಪಾರುವಿನ ಕೈಯನ್ನು ಬೆಕ್ಕು ಕಚ್ಚಿ ತುಂಡು ಮಾಡಿಯಾಗಿತ್ತು. ಇವರನ್ನು ಕಂಡ ಬೆಕ್ಕು ಓಡಿ ಹೋಯಿತು. ಆದರೆ ಅವುಗಳು ಏನು ಮಾಡುವಂತಿರಲಿಲ್ಲ. ಇವರು ಬರುವಷ್ಟರಲ್ಲಿ ಕೈತುಂಡಾಗಿ ಹೋಗಿತ್ತು. ದೊಡ್ಡವರ ಮಾತು ಕೇಳದಿರುವುದಕ್ಕೆ ತನ್ನ ಅಹಂಕಾರಕ್ಕೆ ಸಿಕ್ಕ ಫಲ ಎಂದು ಅವುಗಳ ಜೊತೆ ಬೇಸರದಿಂದ ಹೊರಟು ಹೋಯಿತು.
ಪ್ರಥಮ ಪಿಯುಸಿ
ಎಕ್ಸೆಲ್ ಪದವಿಪೂರ್ವ ಕಾಲೇಜು
ಗುರುವಾಯನಕೆರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************